ಬರಿಗೈನಲ್ಲಿ ಬೆಂಗಳೂರಿಗೆ ಬಂದಿದ್ದ ಅನುಶ್ರೀ ತಮ್ಮನನ್ನು ನೆನೆದು ಕಣ್ಣೀರು ಹಾಕಿದರು!

By Naveen

Recommended Video

ವೇದಿಕೆ ಮೇಲೆ ಅನುಶ್ರೀ ಕಣ್ಣೀರು ಹಾಕಿದ್ದು ಯಾಕೆ..? | Filmibeat Kannada

ಅನುಶ್ರೀ ಇಂದು ಕನ್ನಡದ ಬಹು ಬೇಡಿಕೆಯ ನಿರೂಪಕಿ ಆಗಿದ್ದಾರೆ. ಫೀ ಮೇಲ್ ಅಂಕರ್ ಅಂದರೆ ಮೊದಲು ನೆನಪಾಗುವುದು ಅನುಶ್ರೀ. ಇಂದು ಸ್ಟಾರ್ ಗಳ ಮಟ್ಟಿಗೆ ಹೆಸರು ಮಾಡಿರುವ ಅನುಶ್ರೀ ಒಂದು ಕಾಲದಲ್ಲಿ ಬರಿ ಕೈ ನಲ್ಲಿ ಬೆಂಗಳೂರಿಗೆ ಬಂದಿದ್ದರು.

ಎಲ್ಲ ಕಷ್ಟಗಳ ನಂತರ ಅನುಶ್ರೀ ಈಗ ಖುಷಿ ಖುಷಿಯಾಗಿ ಇದ್ದಾರೆ. ಆದರೂ ತಾವು ಕಳೆದ ದಿನಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಕಷ್ಟದ ದಿನದಲ್ಲಿ ಅವರ ತಮ್ಮ ಮಾಡಿದ ಸಹಾಯವನ್ನು ನೆನಪು ಮಾಡಿಕೊಂಡು ಭಾವುಕರಾಗಿದ್ದಾರೆ.

ಅನುಶ್ರೀ ಅವರಿಗೆ ಅಭಿ ಎಂಬ ಸಹೋದರ ಇದ್ದಾರೆ. ಸಹೋದರ ಎನ್ನುವುದಕ್ಕಿಂತ ಅನುಶ್ರೀಗೆ ಅವರೊಬ್ಬ ಸ್ನೇಹಿತನ ರೀತಿ ಇದ್ದಾರಂತೆ. ನಿಮ್ಮ ಬೆಸ್ಟ್ ಯಾರು? ಎಂದರೆ ಅನುಶ್ರೀ ನನ್ನ ತಮ್ಮ ಎಂದು ಹೇಳುತ್ತಾರೆ.

ಅಂದಹಾಗೆ, ಬರೀ ಅನುಶ್ರೀ ಮಾತ್ರವಲ್ಲ ನಟಿ ರಕ್ಷಿತಾ, ಅರ್ಜುನ್ ಜನ್ಯ ಹಾಗೂ ವಿಜಯ ರಾಘವೇಂದ್ರ ಸಹ ತಮ್ಮ ಸ್ನೇಹಿತರುಗಳ ಬಗ್ಗೆ ಮಾತಾಡಿದ್ದಾರೆ. ಸ್ನೇಹದ ಮಹತ್ವವನ್ನು ತಿಳಿಸಿದ್ದಾರೆ. ಮುಂದೆ ಓದಿ...

'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಕಾರ್ಯಕ್ರಮ

'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಕಾರ್ಯಕ್ರಮ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಕಾರ್ಯಕ್ರಮದಲ್ಲಿ ಸೂರಜ್ ಹಾಗೂ ಶ್ರಾವ್ಯ ಜೋಡಿ ಸ್ನೇಹದ ಮಹತ್ವವನ್ನು ಹಾಡಿನ ಮೂಲಕ ಹೇಳಿದ್ದಾರೆ. 'ಜಾಲಿಡೇಸ್' ಸಿನಿಮಾದ 'ರಕ್ತ ಸಂಬಂಧಗಳ ಮೀರಿದ ಬಂದವಿದು..' ಎಂಬ ಹಾಡಿಗೆ ಹೆಜ್ಜೆ ಹಾಕಿದ ಅವರು ಹಾಡಿನ ಮಧ್ಯೆ ಅನುಶ್ರೀ, ರಕ್ಷಿತಾ, ಅರ್ಜುನ್ ಜನ್ಯ ಹಾಗೂ ವಿಜಯ ರಾಘವೇಂದ್ರ ಅವರ ಸ್ನೇಹಿತರ ಫೋಟೋಗಳನ್ನು ತೋರಿಸಿದ್ದರು.

ತಮ್ಮನನ್ನು ನೆನೆದು ಅನುಶ್ರೀ ಕಣ್ಣೀರು

ತಮ್ಮನನ್ನು ನೆನೆದು ಅನುಶ್ರೀ ಕಣ್ಣೀರು

ಕಾರ್ಯಕ್ರಮದಲ್ಲಿ ತಮ್ಮನನ್ನು ನೆನೆದು ಕಣ್ಣೀರು ಹಾಕಿದ ಅನುಶ್ರೀ ''ಇವನು ನನ್ನ ತಮ್ಮ. ನನಗೆ ಇವನು ಫ್ರೆಂಡ್. ಇವನು ನನ್ನ ಕನಸು. ನಾನು ಬಹಳ ಚಿಕ್ಕ ವಯಸ್ಸಿನಲ್ಲಿ ನಾನು ಬೆಂಗಳೂರಿಗೆ ಬಂದೆ. ಊರಿನಿಂದ ಕೆ ಎಸ್ ಆರ್ ಟಿ ಸಿ ಬಸ್ ಹತ್ತಿ ಒಬ್ಬಳೆ ಇಲ್ಲಿಗೆ ಬಂದೆ. ಆಗ ನನ್ನ ತಮ್ಮ ತುಂಬ ಚಿಕ್ಕವಯಸ್ಸಿನಲ್ಲಿ ಇದ್ದ. ನಮ್ಮ ತಂದೆ ಇರಲಿಲ್ಲ. 13 ವರ್ಷ ನಮ್ಮ ತಾಯಿಯನ್ನು ಒಂದು ಚೂರು ನೋವಾಗದಂತೆ ನೋಡಿಕೊಂಡಿದ್ದಾನೆ. ಜೀವನದಲ್ಲಿ ನನಗೆ ಏನೇನು ಮಾಡೋಕ್ಕೆ ಆಗಲಿಲ್ಲ ಎಲ್ಲವನ್ನು ಅವನ್ನು ಮಾಡಿದ್ದಾನೆ. ಒಳ್ಳೆಯ ಮಾರ್ಕ್ ತೆಗೆದುಕೊಂಡು ತನ್ನ ಕಾಲು ಮೇಲೆ ತಾನು ನಿಂತಿದ್ದಾನೆ.''

ರಕ್ಷಿತಾ ಅವರ ಬೆಸ್ಟ್ ಫ್ರೆಂಡ್ ಪ್ರಶಾಂತಿ

ರಕ್ಷಿತಾ ಅವರ ಬೆಸ್ಟ್ ಫ್ರೆಂಡ್ ಪ್ರಶಾಂತಿ

ಹಾಡಿನ ನಂತರ ಭಾವುಕರಾದ ಮೂರು ತೀರ್ಪುಗಾರರು ತಮ್ಮ ಬೆಸ್ಟ್ ಫ್ರೆಂಡ್ ಗಳ ಬಗ್ಗೆ ಮಾತನಾಡಿದರು. ಮೊದಲು ಮಾತು ಶುರು ಮಾಡಿದ ರಕ್ಷಿತಾ ''ನನ್ನ ಜೀವನದಲ್ಲಿ ನನಗೆ ಯಾರು ಬಯ್ಯುವುದಿಲ್ಲ. ಆದರೆ, ಪ್ರಶಾಂತಿ ಒಬ್ಬಳೆ ನಾನು ತಪ್ಪು ಮಾಡಿದಾಗ ಬೈದು ಬುದ್ದಿ ಹೇಳುತ್ತಾಳೆ. ನನ್ನನ್ನು ತಿದ್ದುತ್ತಾಳೆ. ನಾನು ಬೇರೆ ಯಾರ ಬಗ್ಗೆ ಮಾತನಾಡುವಾಗಲು ಭಾವುಕಳಾಗಲ್ಲ. ಆದರೆ, ಪ್ರಶಾಂತಿ ಬಗ್ಗೆ ಮಾತನಾಡುವಾಗ ಕಣ್ಣೀರು ಬರುತ್ತದೆ.'' ಎಂದರು ರಕ್ಷಿತಾ

ಕಷ್ಟ, ಸುಖ ಎಲ್ಲವನ್ನು ಹಂಚಿಕೊಳ್ಳುತ್ತಾಳೆ

ಕಷ್ಟ, ಸುಖ ಎಲ್ಲವನ್ನು ಹಂಚಿಕೊಳ್ಳುತ್ತಾಳೆ

''ಕಳೆದ ಐದು ವರ್ಷದಿಂದ ಆಕೆ ನನ್ನ ಫ್ರೆಂಡ್ ಆಗಿದ್ದಾಳೆ. ಅಲ್ಲಿಂದ ನನ್ನ ಕಷ್ಟ, ಸುಖ ಎಲ್ಲವನ್ನು ಆಕೆ ಹಂಚಿಕೊಳ್ಳುತ್ತಿದ್ದಾಳೆ. ಇಂತಹ ಒಳ್ಳೆಯ ಸ್ನೇಹಿತೆಯನ್ನು ಪರಿಚಯ ಮಾಡಿದ್ದ ರಾಘವೇಂದ್ರ ಹುಣಸೂರ್ ಗೆ ಧನ್ಯವಾದ. ನನ್ನ ಜೀವನದ ಒಂದು ಭಾಗ ಆಗಿರುವುದಕ್ಕೆ ಪ್ರಶಾಂತಿಗೆ ಥ್ಯಾಂಕ್ಯು.'' ಎಂದು ಸ್ನೇಹಿತೆಗೆ ಧನ್ಯವಾದ ಹೇಳಿದರು.

ಅರ್ಜುನ್ ಜನ್ಯ ಅವರ ಆಪ್ತ ಸ್ನೇಹಿತ ಪ್ರಕಾಶ್

ಅರ್ಜುನ್ ಜನ್ಯ ಅವರ ಆಪ್ತ ಸ್ನೇಹಿತ ಪ್ರಕಾಶ್

''28 ವರ್ಷದಿಂದ ನಮ್ಮ ಸ್ನೇಹ ಇದೆ. ನನ್ನ ಬಗೆ ಅವನಿಗೆ ಎಲ್ಲ ಗೊತ್ತು. ನಮ್ಮ ತಂದೆ ತೀರಿಕೊಂಡ ಸಮಯದ ನಂತರ ನಾವು ನಕ್ಕಿದ್ದೇವೆ ಅಂದರೆ ಅದು ಇವನಿಂದ. ಈಗಲೂ ಅಷ್ಟೇ ಯಾವಗ ಸಿಕ್ಕರು ಆತನ ಜೊತೆ ಇರುವಾಗ ಮಗು ಆಗುತ್ತೇನೆ. ಆತ ನನಗೆ ಫ್ರೆಂಡ್, ಬ್ರದರ್ ಎನ್ನುವುದಕ್ಕಿಂತ ಹೆಚ್ಚಾಗಿ ಅವನು ನನಗೆ ಸಿಕ್ಕ ದೇವರ ಪ್ರಸಾದ.'' ಎಂದು ಆಪ್ತ ಸ್ನೇಹಿತನನ್ನು ವರ್ಣಿಸಿದರು ಅರ್ಜುನ್ ಜನ್ಯ.

ವಿಜಯ್ ರಾಘವೇಂದ್ರ ಇರುವ ಒಳ್ಳೆಯ ಸ್ನೇಹಿತ ಶರತ್

ವಿಜಯ್ ರಾಘವೇಂದ್ರ ಇರುವ ಒಳ್ಳೆಯ ಸ್ನೇಹಿತ ಶರತ್

''ಶರತ್ ಅಂತ. ನನ್ನ ಸ್ಕೂಲ್ ಫ್ರೆಂಡ್. ನಾನು ಎರಡು ತಿಂಗಳು ಸ್ಕೂಲ್ ಗೆ ರಜಾ ಹಾಕಿದ್ದಾಗ ನನ್ನ ನೋಟ್ಸ್ ಬರೆದುಕೊಟ್ಟು ನನಗೆ ಬುದ್ದಿ ಹೇಳುತ್ತಿದ್ದ. ನಾವು ಒಂದು - ಎರಡು ವರ್ಷ ಮಾತನಾಡದೆ ಇದ್ದರೂ ಮತ್ತೆ ಸಿಕ್ಕಾಗ ಅಷ್ಟೆ ಆಪ್ತತೆಯಿಂದ ಮಾತಾಡುತ್ತೇವೆ.'' - ಎಂದು ತಮ್ಮ ಸ್ನೇಹಿತನ ಬಗ್ಗೆ ವಿಜಯ ರಾಘವೇಂದ್ರ ಹೇಳಿಕೊಂಡರು.

More from Filmibeat

English summary
Kannada tv anchor Anushree spoke about her brother.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X