2 ಲಕ್ಷದ ಸೀರೆಯುಟ್ಟು 2ನೇ ಮದುವೆಯಾದ ಚೈತ್ರಾ; ಮದುವೆಗೆ ಬಂದವರು ಯಾರ್ಯಾರು?
ಚೈತ್ರಾ ವಾಸುದೇವನ್ ಇದೀಗ ತಮ್ಮ ಹೊಸ ಬದುಕನ್ನ ಶುರು ಮಾಡಿದ್ದಾರೆ. ಎರಡನೇ ಬಾರಿಗೆ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಆರಂಭದಿಂದಾನೂ ಚಿತ್ರರಂಗದಿಂದಲ್ಲಿ ಮದುವೆಗಳ ಸಂಭ್ರಮ ಜೋರಾಗಿದೆ. ಹಲವು ಸೆಲೆಬ್ರೆಟಿಗಳು ಈ ವರ್ಷಾರಂಭದಲ್ಲಿಯೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ನಿರೂಪಕಿ ಚೈತ್ರಾ ವಾಸುದೇವನ್ ಕೂಡ ಅದ್ದೂರಿಯಾಗಿ ಮದುವೆಯಾಗಿದ್ದಾರೆ.
ಚೈತ್ರಾ ವಾಸುದೇವನ್ ಅದ್ಭುತ ನಿರೂಪಕಿ. ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಯಾಗಿ ಹೋಗಿದ್ದರು. ಈ ಮೊದಲೇ ಮದುವೆಯಾಗಿದ್ದ ಚೈತ್ರಾ ವಾಸುದೇವನ್ ಆ ಸಂಬಂಧದಿಂದ ಬೇಸತ್ತು, ಡಿವೋರ್ಸ್ ಕೊಟ್ಟಿದ್ದರು. ಇದೀಗ ಜಗದೀಪ್ ಎಂಬುವವರ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ನಿನ್ನೆಯಿಂದ ಮದುವೆ ಕಾರ್ಯಕ್ರಮಗಳು ನಡೆದಿದ್ದು, ಇಂದು ಮೂರು ಗಂಟಾಕಿ, ಗಂಡ ಹೆಂಡತಿಯಾಗಿದ್ದಾರೆ. ಮದುವೆಗೆ ಯಾರೆಲ್ಲಾ ಬಂದು ಹರಸಿದರು ಎಂಬ ಮಾಹಿತಿ ಇಲ್ಲಿದೆ.

ರಾಣಿಯಂತೆ ಮಿಂಚಿದ ಚೈತ್ರಾ
ನಿರೂಪಕಿ ಚೈತ್ರಾ ವಾಸುದೇವನ್ ತಮ್ಮದೇ ಆದ ಇವೆಂಟ್ ಕಂಪನಿಯನ್ನು ಹೊಂದಿದ್ದಾರೆ. ಆ ಮೂಲಕ ಸಾಕಷ್ಟು ಜನರಿಗೆ ಕೆಲಸವನ್ನು ಕೊಟ್ಟಿರುವ ಬಿಸಿನೆಸ್ ವುಮೆನ್. ಹಲವು ಸೆಲೆಬ್ರೆಟಿಗಳ ಮದುವೆ ಇವೆಂಟ್ ಅನ್ನು ಇವರೇ ಮಾಡಿದ್ದಾರೆ. ಇದೀಗ ಚೈತ್ರಾ ಅವರದ್ದೇ ಮದುವೆಯಾಗಿರೋ ಕಾತಣ, ವಿಶೇಷವಾಗಿ ಅಲಂಕಾರಗೊಂಡಿದ್ದರು. ಕೇಸರಿ ಕಲರ್ ಮಿಶ್ರಿತ, ಗೋಲ್ಡನ್ ಬಾರ್ಡರ್ ಇರುವ ಸೀರೆಯನ್ನು ಧರಿಸಿ, ಅದಕ್ಕೆ ತಕ್ಕ ಹಾಗೇ ಮ್ಯಾಚ್ ಆಗುವ ವೈಟ್ ಅಂಡ್ ಗ್ರೀನ್ ಸ್ಟೋನ್ ಒಡವೆಗಳನ್ನು ಧರಿಸಿದ್ದರು. ಆದರೆ ವಿಶೇಷವೆಂದರೆ ಚೈತ್ರಾ ವಾಸುದೇವನ್ ಧರಿಸಿದ್ದ ಸೀರೆಯ ಬೆಲೆ 2 ಲಕ್ಷ ರೂಪಾಯಿ ಆಗಿದೆ.
ಮದುವೆಯಲ್ಲಿ ಧ್ರುವ ಸರ್ಜಾ ಭಾಗಿ
ಇನ್ನು ಚೈತ್ರಾ ವಾಸುದೇವನ್ ಮದುವೆಗೆ ಹಲವು ಸೆಲೆಬ್ರೆಟಿಗಳು ಬಂದು ವಿಶ್ ಮಾಡಿದ್ದಾರೆ. ಅದರಲ್ಲಿ ಧ್ರುವ ಸರ್ಜಾ ಕೂಡ ಮದುವೆಗೆ ಆಗಮಿಸಿ, ವಧು ವರರಿಗೆ ಶುಭಕೋರಿದ್ದಾರೆ. ಹಾಗೇ ಅನುಪ್ರಭಾಕರ್ ಕೂಡ ಮದುವೆಗೆ ಆಗಮಿಸಿ, ನವದಂಪತಿಗೆ ಶುಭಾಶಯ ತಿಳಿಸಿದ್ದಾರೆ. ಚೈತ್ರಾ ತಮ್ಮ ಪತಿಗೆ ಸೆಲೆಬ್ರೆಟಿಗಳನ್ನ ಪರಿಚಯ ಮಾಡಿಕೊಟ್ಟಿದ್ದಾರೆ.
ಯಾರೆಲ್ಲಾ ಭಾಗಿಯಾಗಿದ್ರು..?
ಇನ್ನು ಚೈತ್ರಾ ಮದುವೆಗೆ ಕಿರುತೆರೆ ಕಲಾವಿದರು ಹಾಗೂ ಬೆಳ್ಳಿತೆರೆ ಕಲಾವಿದರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ತನಿಷಾ ಕುಪ್ಪಂಡ, ಅರವಿಂದ್ ಕೆಪಿ, ಸುಕೃತ, ಕಾವ್ಯಾ ಶೆಟ್ಟಿ, ಐಶ್ವರ್ಯಾ ಸಿಂಧೋಗಿ, ಕಾರುಣ್ಯ ರಾಮ್, ಕಾವ್ಯಾ ಶಾಸ್ತ್ರಿ, ಸಂಜನಾ ಗಲ್ರಾನಿ, ಅಮೂಲ್ಯ ದಂಪತಿ, ಸೋನಲ್, ನಿಶ್ವಿಕಾ, ಶ್ರೀಮುರುಳಿ, ಮಾಳವಿಕ ಅವಿನಾಶ್, ಶೃತಿ, ಸಂಸದ ಯದುವೀರ್ ಸೇರಿದಂತೆ ಹಲವಾರು ಮಂದಿ ಚೈತ್ರಾ ವಾಸುದೇವನ್ ದಂಪತಿಗೆ ಹರಸಿದ್ದಾರೆ.
ಅದ್ದೂರಿ ಮದುವೆಯ ಝಲಕ್
ಮದುವೆಯ ವಿಡಿಯೋವೊಂದನ್ನು ಚೈತ್ರಾ ಹಂಚಿಕೊಂಡಿದ್ದು, ಅದರಲ್ಲಿ ಅದ್ದೂರಿತನ ಎದ್ದು ಕಾಣಿಸುತ್ತಿದೆ. ಚೈತ್ರಾ ಅವರನ್ನ ಮದುವೆ ಮಂಟಪಕ್ಕೆಕರೆತರಲು ಹೂಗಳಿಂದ ಅಲಂಗಾರಗೊಂಡ ಮಂಟಪದ ಜೊತೆಗೆ, ನೃತ್ಯ ಮಾಡುತ್ತಾ ಕರೆತಂದಿದ್ದಾರೆ. ತಾಳಿ ಕಟ್ಟುವಾಗಲಂತೂ ಇಬ್ಬರೂ ಖುಷಿ ಖುಷಿಯಾಗಿದ್ದಾರೆ. ಹಾಗೇ ತಾಳಿ ಕಟ್ಟಿದ ಬಳಿಕ ನಡೆದ ಫೋಟೋಶೂಟ್ ಕೂಡ ಅದ್ದೂರಿಯಾಗಿದೆ. ವೈಭವದಿಂದ ಚೈತ್ರಾ ಹಾಗೂ ಜಗದೀಪ್ ಅವರ ವಿವಾಹ ನೆರವೇರಿದೆ. ಮದುವೆ ನಂತರ ಕುಟುಂಬಸ್ಥರಲ್ಲಿ ಒಂದು ಭಾವನಾತ್ಮಕ ಸನ್ನಿವೇಶವೂ ನಿರ್ಮಾಣವಾಗಿದ್ದು, ವಿಡಿಯೋಗಳು, ಫೋಟೋಗಳು ವೈರಲ್ ಆಗುತ್ತಿವೆ. ಎರಡನೇ ಮದುವೆಯಲ್ಲಿ ಚೈತ್ರಾ ಸಿಕ್ಕಾಪಟ್ಟೆ ಅದ್ದೂರಿತನದಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿತ್ರರಂಗದ ಗಣ್ಯರು, ಆಪ್ತರು ಹರಸಿ, ಹಾರೈಸಿದ್ದಾರೆ.


Click it and Unblock the Notifications











