"ವಿಚ್ಛೇದನ ನನ್ನ ಕಾನ್ಫಿಡೆನ್ಸ್ ಅನ್ನು ಕುಗ್ಗಿಸಿತ್ತು" ಎಂದ ಚೈತ್ರಾ ವಾಸುದೇವನ್; ಜಗ್ಗೇಶ್ ಕೊಟ್ಟ ಸಲಹೆ ಏನು?
ಕಳೆದ ಹತ್ತು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಿರೂಪಣೆ ಸೇರಿದಂತೆ ಬಿಗ್ ಬಾಸ್ ನಲ್ಲಿಯೂ ಭಾಗವಹಿಸಿದ್ದಾರೆ. ಹೌದು, ನಟಿ ಚೈತ್ರಾ ವಾಸುದೇವ್ ಅವರು ಬಿಗ್ ಬಾಸ್ ಸೀಸನ್ ಏಳರಲ್ಲಿ ಸ್ಪರ್ಧಿಯಾಗಿದ್ದರು. ಅಷ್ಟೇ ಅಲ್ಲದೆ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿರುವ ಇವರು ಇತ್ತೀಚೆಗೆ ಭಾಗವಹಿಸಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ನಲ್ಲಿ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.
ಎಲ್ಲವೂ ಚೆನ್ನಾಗಿದೆ ಎಂದೆನಿಸುವ ನಿರೂಪಕಿ ಚೈತ್ರಾ ವಾಸುದೇವನವರ ಜೀವನದಲ್ಲಿ ಒಂದಷ್ಟು ದುರ್ಘಟನೆಗಳು ನಡೆದಿದೆಯಂತೆ. ಇಂಜಿನಿಯರಿಂಗ್ ಪದವಿ ಮುಗಿದ ನಂತರ ಮದುವೆಯಾದ ನಿರೂಪಕಿ ಚೈತ್ರಾ ವಾಸುದೇವನವರ ವೈವಾಹಿಕ ಜೀವನದಲ್ಲಿ ಒಂದಷ್ಟು ಸಮಸ್ಯೆಗಳು ಎದುರಾಗಿದ್ದವಂತೆ.

ನಾನು ಕಳೆದ ಹತ್ತು ವರ್ಷಗಳಿಂದ ನಿರೂಪಕಿಯಾಗಿ ಆಗಿ ಕೆಲಸ ಮಾಡುತ್ತಿದ್ದೇನೆ. ವಿಜೆಯಾಗಿ ದುಡಿಯುವುದು ನನ್ನ ನೆಚ್ಚಿನ ಹವ್ಯಾಸವು ಹೌದು. ಇಂಜಿನಿಯರಿಂಗ್ ಪದವಿ ಮುಗಿದ ನಂತರ ಮನೆಯಲ್ಲಿ ಮದುವೆಗೆ ಒತ್ತಾಯ ಮಾಡಿದರು. ಉದ್ಯಮವಿದೆ, ಬಾಳ ಸಂಗಾತಿಯನ್ನು ಆರಿಸಿಕೊಂಡರೆ ಜೀವನ ಚೆನ್ನಾಗಿರುತ್ತದೆ ಎಂದು ಮನೆಯವರು ಕನಸು ಕಂಡರು. ನಾನು ಅದೇ ಸರಿ ಎಂದು ನಂಬಿ ಒಬ್ಬರನ್ನು ಮದುವೆಯಾದೆ. ಆದರೆ, ನಾನು ತಿಳಿದಿದ್ದೇ ಒಂದು. ಅಲ್ಲಿ ಆದದ್ದು ಮತ್ತೊಂದು. ನಮ್ಮ ನಡುವೆ ಯಾವುದೇ ರೀತಿಯ ಹೊಂದಾಣಿಕೆ ಬರಲಿಲ್ಲ. ಬಹಳ ಕಷ್ಟ ಪಡಬೇಕಾಗಿ ಬಂತು. ಕೊನೆಗೆ ವಿಚ್ಛೇದನಕ್ಕೂ ಹೋಯಿತು ಎಂದು ತಮ್ಮ ವೈಯಕ್ತಿಕ ಜೀವನದ ಮಾಹಿತಿಯನ್ನು ಹಂಚಿ ಕೊಂಡು ನಿರೂಪಕಿ ಚೈತ್ರಾ ವಾಸುದೇವನ್ ಕಣ್ಣೀರಿಟ್ಟಿದ್ದಾರೆ.
"ಅದೂವರೆಗೂ ನನ್ನ ಜೀವನದಲ್ಲಿ ಯಾವುದೇ ರೀತಿಯ ಕಪ್ಪು ಚುಕ್ಕೆ ಇರಲಿಲ್ಲ. ಮದುವೆ ಮತ್ತು ಅದರಿಂದ ಎದುರಾದ ಸಂಕಷ್ಟಗಳು ಕೊನೆಗೆ ವಿಚ್ಛೇದನ ಎಲ್ಲವೂ ನನ್ನ ಕಾನ್ಫಿಡೆನ್ಸ್ ಅನ್ನು ಬಹಳ ಕುಗ್ಗಿಸಿತು. ಈ ಎಲ್ಲಾ ಕಷ್ಟದ ದಿನಗಳಿಂದ ಹೊರಬರಲು ನನಗೆ ಚಾನೆಲ್ ಬಹಳ ಸಹಾಯ ಮಾಡಿದೆ. ಬಹಳಷ್ಟು ಬೇರೆ ಬೇರೆ ರೀತಿಯ ಕೆಲಸಗಳನ್ನು ಕೊಟ್ಟು ನನ್ನ ನೋವಿನಿಂದ ಹೊರಬರಲು ಸಹಕಾರ ನೀಡಿದೆ. ಈ ವಿಚಾರವಾಗಿ ನಾನು ಚಾನೆಲ್ ಗೆ ಹಾಗೂ ನನ್ನೆಲ್ಲಾ ಸಹೋದ್ಯೋಗಿಗಳಿಗೆ ಬಹಳ ಋಣಿಯಾಗಿದ್ದೇನೆ" ಎಂದು ನಿರೂಪಕಿ ಚೈತ್ರಾ ವಾಸುದೇವನ್ ಹೇಳಿಕೊಂಡಿದ್ದಾರೆ.

ಅಂದ ಹಾಗೆ ನಿರೂಪಕಿ ಚೈತ್ರಾ ವಾಸುದೇವನವರು ವಿಜೆಯಾಗಿ ಕೆಲಸ ಮಾಡುತ್ತಿರುವುದಷ್ಟೇ ಅಲ್ಲದೆ ಅವರದ್ದೇ ಆದ ಒಂದು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಇಟ್ಟುಕೊಂಡಿದ್ದಾರೆ. ಹಲವಾರು ಸೆಲೆಬ್ರಿಟಿಗಳ ಮದುವೆ ಸಂಭ್ರಮಗಳು ಅಷ್ಟೇ ಅಲ್ಲದೆ ಚಾನಲ್‌ಗಳು ಬೇರೆ ಬೇರೆ ಕಾರ್ಯಕ್ರಮಗಳ ಸೆಟ್ಟುಗಳನ್ನು ಇವರ ಇವೆಂಟ್ ಮ್ಯಾನೇಜ್ಮೆಂಟ್ ಮೂಲಕ ಇವರು ಮ್ಯಾನೇಜ್ ಮಾಡಿದ್ದಾರಂತೆ.
ಚೈತ್ರಾ ವಾಸುದೇವನ್ ಅವರ ದುಃಖಕ್ಕೆ ಪ್ರತಿಕ್ರಿಯಿಸಿದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಶೋನ ಜಡ್ಜ್ ನಟ ಜಗ್ಗೇಶ್, "ದೇವರು ಎಂದೂ ಕೈಬಿಡುವುದಿಲ್ಲ. ದೇವರನ್ನು ಸ್ಥಿರವಾಗಿ ನಂಬು. ಹೆಂಡತಿ ಸತ್ತಾಗ ಗಂಡಂದಿರು ಸನ್ಯಾಸಿಯಂತೆ ಕೂರುವುದಿಲ್ಲ. ಬದಲಾಗಿ ಇನ್ನೊಂದು ಮದುವೆ ಮಾಡಿಕೊಳ್ಳುವ ಯೋಚನೆ ಮಾಡುತ್ತಾರೆ. ಅಂತೆಯೇ ನೀನು ಕೂಡ ಜೀವನದಲ್ಲಿ ಹೊಸತನಕ್ಕೆ ಹೊಸ ಸಂಗಾತಿಯನ್ನು ಆರಿಸುವುದರಲ್ಲಿ ತಪ್ಪೇನಿಲ್ಲ. ಹಳೆಯದನ್ನು ಮರೆತು ಹೊಸ ಜೀವನದೆಡೆಗೆ ನಡೆ" ಎಂದಿದ್ದಾರೆ.


Click it and Unblock the Notifications











