chaitra Vasudevan: 2ನೇ ಮದುವೆಗೆ ಚೈತ್ರಾ ಸಿದ್ಧ; ಹೊಸ ವಿಡಿಯೋ ಬಿಟ್ಟ ಆಂಕರ್.. ಆದರೆ..
ಕನ್ನಡ ನಿರೂಪಕಿ ಕಂ ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ತಮ್ಮದೇ ಆದ ಇವೆಂಟ್ ಬಿಸಿನೆಸ್ ಮಾಡುತ್ತಿರುವ ಚೈತ್ರಾ, ಅದರಲ್ಲಿಯೇ ಮುಳುಗಿ ಹೋಗಿದ್ದರು. ಅಷ್ಟು ಬ್ಯುಸಿ ಇದ್ದರೂ ಪ್ರವಾಸಕ್ಕೂ ಸಮಯ ಕೊಡುತ್ತಾರೆ. ಇದೀಗ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆ ಒಂದು ಸುದ್ದಿಗೆ ಬಾಳು ಬೆಳಕಾಗಲಿ ಎಂದು ಅವರ ಫ್ಯಾನ್ಸ್ ಹಾರೈಸುತ್ತಿದ್ದಾರೆ.
ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಚೈತ್ರಾ ವಾಸುದೇವ್ ಅವರದ್ದೇ ಸುದ್ದಿ. ಚೈತ್ರಾ ವಾಸುದೇವನ್ ಮತ್ತೆ ಹೊಸ ಬದುಕೊಂದನ್ನ ಶುರು ಮಾಡುತ್ತಿದ್ದಾರೆ ಎಂದು. ಜಾಲಿ ಲೈಫ್ ಕಳೆಯುವ ಚೈತ್ರಾ, ಒಂದಷ್ಟು ಜನರಿಗೆ ಉದ್ಯೋಗವನ್ನು ಕೊಟ್ಟಿದ್ದಾರೆ. ಇದೀಗ ಮದುವೆಯಾಗುತ್ತಿರುವುದಾಗಿ ಅನೌನ್ಸ್ ಮಾಡಿದ್ದಾರೆ. ಅದು ಚೈತ್ರಾಗೆ ಇದು ಎರಡನೇ ಮದುವೆ.

2ನೇ ಮದುವೆಗೆ ಸಿದ್ಧತೆ
ಚೈತ್ರಾ ವಾಸುದೇವನ್ ಈ ಮೊದಲೇ ಮದುವೆಯಾಗಿದ್ದರು. ಆದರೆ ಕಾರಾಣಾಂತರಗಳಿಂದ ಆ ಮದುವೆಯ ಬಂಧನದಿಂದ ಬಿಡಿಸಿಕೊಂಡು ಹೊರಗೆ ಬಂದಿದ್ದರು. ಅದನ್ನ ಅದಾಗಲೇ ಅನೌನ್ಸ್ ಕೂಡ ಮಾಡಿದ್ದರು. ಡಿವೋರ್ಸ್ ಆದ ಮೇಲೆ ಹೊಸ ಬದುಕನ್ನು ಕಟ್ಟಿಕೊಳ್ಳಲು ರೆಡಿಯಾಗಿದ್ದಾರೆ. ಎರಡನೇ ಮದುವೆಯ ಬಗ್ಗೆಯೂ ಅನೌನ್ಸ್ ಮಾಡಿದ್ದಾರೆ. ಮಾರ್ಚ್‌ನಲ್ಲಿ ಮದುವೆಯಾಗ್ತಿರೋದಾಗಿ ಹೇಳಿದ್ದಾರೆ. ನಿನ್ನೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಗ್ರ್ಯಾಂಡ್ ಆಗಿ ರೆಡಿಯಾಗಿ, ಫೋಟೋಶೂಟ್ ಮಾಡಿಸಿದ ವಿಡಿಯೋ ಶೇರ್ ಮಾಡಿಕೊಂಡು ಮದುವೆ ವಿಚಾರವನ್ನ ತಿಳಿಸಿದ್ದಾರೆ.
ಇಬ್ಬರ ಉಂಗುರದ ವಿಡಿಯೋ ಶೇರ್
ನಿನ್ನೆಯಷ್ಟೇ ಚೈತ್ರಾ ತಮ್ಮ ಎರಡನೇ ಮದುವೆ ಬಗ್ಗೆ ಹೇಳಿದ್ದರು. ಆಗಿನಿಂದ ಹುಡುಗನ ಬಗ್ಗೆ ಸಾಕಷ್ಟು ಸರ್ಚಿಂಗ್ ನಡೀತಾ ಇದೆ. ಇಂದು ಹೊಸದೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಇಬ್ಬರ ಕೈನಲ್ಲೂ ಪ್ಲಾಟಿನಂ ಉಂಗುರ ಕಾಣಿಸುವಂತೆ ಇರುವ ವಿಡಿಯೋ ಅದು. ಇಬ್ಬರ ಎಂಗೇಜ್ಮೆಂಟ್ ಆಗಿದೆ ಅನ್ನೋದು ಈ ವಿಡಿಯೋ ಮೂಲಕವೇ ಗೊತ್ತಾಗ್ತಾ ಇದೆ. ಇಬ್ಬರು ಕೈಯಲ್ಲಿ ಗ್ಲಾಸ್ ಹಿಡಿದು, ಸೆಲೆಬ್ರೇಷನ್ ಮೂಡಲ್ಲಿದ್ದು, ಎಂಗೇಜ್ಮೆಂಟ್ ರಿಂಗ್ ತೋರಿಸಿದ್ದಾರೆ. ಆದರೆ ಆ ವಿಡಿಯೋದಲ್ಲಿ ಜಸ್ಟ್ ಮಿಸ್ ಹುಡುಗನ ಮುಖ ತೋರಿಸಿಲ್ಲ.
ಜಸ್ಟ್ ಮಿಸ್ ಹುಡುಗನ ಮುಖ
ಪ್ಯಾರೀಸ್ ಪ್ರಯಾಣದಲ್ಲಿರೋ ಚೈತ್ರಾ, ಲವ್ ಬರ್ಡ್ಸ್‌ಗಳಂತೆ ಅಲ್ಲಿ ಎಂಜಾಯ್ ಮಾಡ್ತಾ ಇದಾರೆ. ಹುಡುಗನ ಮುಖವನ್ನ ಮಾತ್ರ ಹೈಡ್ ಮಾಡಿದ ಚೈತ್ರಾ, ಪ್ಯಾರೀಸ್ ಸೌಂದರ್ಯವನ್ನ ತಮ್ಮ ವಿಡಿಯೋದಲ್ಲಿ ತೋರಿಸಿದ್ದಾರೆ. ಚೈತ್ರಾ ಮದುವೆಯಾಗ್ತಿರೋ ಆ ಹುಡುಗ ಯಾರು..? ಎಲ್ಲಿಯವರು..? ಏನು ಕೆಲಸ ಮಾಡ್ತಾ ಇದಾರೆ ಅಂತ ಸಾಧ್ಯವಾದಷ್ಟು ಸರ್ಚ್ ಮಾಡುತ್ತಿದ್ದಾರೆ. ಆದರೆ ಚೈತ್ರಾ ಮಾತ್ರ ಈ ಸಂತಸದ ಗಳಿಗೆಯಲ್ಲಿ ಹುಡುಗನ ಹಿನ್ನೆಲೆಯನ್ನು ಹೈಡ್ ಮಾಡುತ್ತಿದ್ದಾರೆ.
ವಿಶ್ ಮಾಡಿದ ಮಂದಿ
ಚೈತ್ರಾ ಈ ವಿಚಾರವನ್ನು ಹಂಚಿಕೊಳ್ಳುತ್ತಿದ್ದಂತೆ ಬಹಳಷ್ಟು ಮಂದಿ ಖುಷಿ ಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚೈತ್ರಾ ಹಾಕಿರುವ ವಿಡಿಯೋಗೆ ಎಲ್ಲರೂ ಶುಭಾಶಯಗಳ ಮಹಾಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಚಿತ್ರರಂಗದ ನಟ-ನಟಿಯರು ಚೈತ್ರಾ ಹೊಸ ಬಾಳು ಹಸನಾಗಲಿ ಎಂದು ಹಾರೈಸುತ್ತಿದ್ದಾರೆ. ಅವರನ್ನು ಫಾಲೋ ಮಾಡುವ ಫಾಲೋವರ್ಸ್ ಕೂಡ ಹೊಸ ಜೋಡಿಗೆ ಶುಭ ಹಾರೈಕೆ ನೀಡುತ್ತಿದ್ದಾರೆ. ಮಾರ್ಚ್ ನಲ್ಲಿ ಮದುವೆ ಎಂಬುದರ ಬಗ್ಗೆ ಚೈತ್ರಾ ಅವರೇ ಅನೌನ್ಸ್ ಮಾಡಿರುವಾಗ, ಕೆಲವೇ ದಿನಗಳಲ್ಲಿ ಹುಡುಗನ ಪರಿಚಯವನ್ನು ಮಾಡಿಕೊಡ್ತಾರೆ ಎಂಬ ನಂಬಿಕೆ ಅಭಿಮಾನಿಗಳದ್ದು.


Click it and Unblock the Notifications











