ನಿರೂಪಕಿ ರಶ್ಮಿ ಸೀಕ್ರೆಟ್ ಮ್ಯಾರೇಜ್? ವರನ್ಯಾರು ಗೊತ್ತೇ?

ತೆಲುಗಿನಲ್ಲಿ ಟಿವಿ ನಿರೂಪಕರಿಗೆ ಇರುವ ಪಾಪ್ಯುಲಾರಿಟಿ ಸಾಮಾನ್ಯದ್ದಲ್ಲ. ಅವರು ಸಿನಿಮಾ ಹೀರೋಯಿನ್‌ಗಳಷ್ಟೇ ಜನಪ್ರಿಯರು ಕೂಡ. ಸುಮ ಕನಕಲ, ಅನುಸೂಯಾ ಭಾರದ್ವಾಜ್, ರಶ್ಮಿ ಗೌತಮ್ ಈ ಮೂರು ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿರುವ ಕಾರ್ಯಕ್ರಮ ನಿರೂಪಕಿಯರು. ಸುಮ ಮನೆಯ ಹಿರಿಯ ಮಗಳಂತೆ ಜನ ನೋಡುತ್ತಾರೆ ಮತ್ತು ಗೌರವಿಸುತ್ತಾರೆ. ಅನುಸೂಯ ಇತ್ತೀಚೆಗೆ ತನ್ನ ಗ್ಲಾಮರ್ ಕಾರಣದಿಂದ ಭಾರಿ ಗಮನ ಸೆಳೆಯುತ್ತಿದ್ದಾರೆ. ಇವರಿಬ್ಬರಿಗೂ ಕಂಪೇರ್ ಮಾಡಿದರೆ ವಯಸ್ಸಿನಲ್ಲಿ ಕಿರಿಯಳು ಮತ್ತು ಹೋಮಿಲಿ ಲುಕ್ ಹೊಂದಿರುವ ರಶ್ಮಿ ಗೌತಮ್ ಜಬರ್ದಸ್ತ್ ಆಗಿ ಪಡ್ಡೆ ಹುಡುಗರ ಗಮನ ಸೆಳೆಯುತ್ತಿದ್ದಾರೆ.

ನಿರೂಪಕಿಯಾಗಿ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿರುವ ರಶ್ಮಿ, ಸಾಧ್ಯವಾದಾಗಲೆಲ್ಲಾ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಜಬರ್ದಸ್ತ್ ಜೊತೆಗೆ 'Dhee' ಅಲ್ಟಿಮೇಟ್ ಗೇಮ್ ಶೋಗೆ ನಿರೂಪಕಿಯಾಗಿ ವಿಶೇಷ ಕಾರ್ಯಕ್ರಮಗಳನ್ನು ಮಾಡಿ ಭಾರೀ ಜನಪ್ರಿಯತೆ ಗಳಿಸಿದ್ದಾರೆ.

ಜಬರ್ದಸ್ತ್ ತೆಲುಗಿನ ಖ್ಯಾತ ಹಾಸ್ಯ ಕಾರ್ಯಕ್ರಮಗಳಲ್ಲಿ ಒಂದು. ಒಂದಾನೊಂದು ಸಂದರ್ಭದಲ್ಲಿ ದೇಶದಲ್ಲಿ ಅತಿ ಹೆಚ್ಚು TRP ಹೊಂದಿದ್ದ ಹಾಸ್ಯ ಕಾರ್ಯಕ್ರಮ ಇದಾಗಿತ್ತು. ಚಮಕ್ ಚಂದ್ರ ಫ್ಯಾಮಿಲಿ ಸ್ಕಿಟ್‌ಗಳು, ಹೈಪರ್ ಆದಿ- ಅನುಸೂಯಾ ರೊಮ್ಯಾಂಟಿಕ್ ಡೈಲಾಗಗಳು, ರಶ್ಮಿ- ಸುಡಿಗಾಲಿ ಸುಧೀರ್ ಲವ್ ಟ್ರ್ಯಾಕ್ ಎಪಿಸೋಡುಗಳು ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿತ್ತು. ರಶ್ಮಿ- ಸುಧೀರ್ ರೋಮ್ಯಾಂಟಿಕ್ ಟ್ರ್ಯಾಕ್ ಎಷ್ಟರಮಟ್ಟಿಗೆ ಜನರಲ್ಲಿ ಮನೆ ಮಾಡಿತ್ತು ಎಂದರೆ ಅವರಿಬ್ಬರು ಈಗಾಗಲೇ ಮದುವೆಯಾಗಿದ್ದಾರೆ ಅಂತ ಭಾವಿಸುವಷ್ಟು. ಏಕೆಂದರೆ ಇವರಿಬ್ಬರು ಜಬರ್ದಸ್ತ್ ನಲ್ಲಿ ಮಾತ್ರವಲ್ಲದೆ ಡಿ ಶೋನಲ್ಲಿ ಅಭಿನಯಿಸುವಾಗ ರೋಮ್ಯಾಂಟಿಕ್ ಎಪಿಸೋಡ್ ಗಳು ಮೂಡಿಬರುತ್ತಿತ್ತು ಹೀಗಾಗಿ ಇವರಿಬ್ಬರು ಈಗಾಗಲೇ ಸೀಕ್ರೆಟಾಗಿ ಮದುವೆಯಾಗಿದ್ದಾರೆ ಅಂತ ಗುಸುಗುಸು ಮಾತುಗಳು ಸಹ ಒಂದು ಹಂತದಲ್ಲಿ ಕೇಳಿಬಂತು. ಆದರೆ ಇದಕ್ಕೆಲ್ಲ ಇತಿಶ್ರೀ ಹಾಡಿದ ಅವರಿಬ್ಬರು ತಾವು ಕೇವಲ ಅಭಿನಯ ಮಾತ್ರ ಮಾಡಿದ್ದು ಅದು ತಮ್ಮ ನೈಜ ಜೀವನವಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ನಾಯಕನಟನಾಗಿ ಬಡ್ತಿ ಪಡೆದಿರುವ ಸುಡಿಗಾಲಿ ಸುಧೀರ್ ಜಬರ್ದಸ್ತ್ ಕಾರ್ಯಕ್ರಮವನ್ನು ತೊರೆದಿದ್ದಾನೆ.

ರಶ್ಮಿ ರಹಸ್ಯವಾಗಿ ಮದುವೆಯಾಗಿದ್ದಾರೆ?

ರಶ್ಮಿ ರಹಸ್ಯವಾಗಿ ಮದುವೆಯಾಗಿದ್ದಾರೆ?

ಆದರೆ ಇದೀಗ ರಶ್ಮಿ ಮದುವೆ ವಿಷಯ ಮತ್ತೊಮ್ಮೆ ಸುದ್ದಿಯಾಗಿದೆ . ನಿರೂಪಕಿ ರಶ್ಮಿ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ರಶ್ಮಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಕ್ರೇಜಿ ಅಪ್‌ಡೇಟ್ ಹಲ್ಚಲ್ ಮಾಡುತ್ತಿದೆ. ಆದರೆ ರಶ್ಮಿ ವಿವಾಹವಾಗಿರುವ ವ್ಯಕ್ತಿಗೂ, ಉದ್ಯಮಕ್ಕೂ ಯಾವುದೇ ಸಂಬಂಧವಿಲ್ಲ, ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಪತಿಯೊಂದಿಗೆ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಕರಿಯರ್ ಗೆ ಏನಾದರೂ ತೊಂದರೆ ಆಗಬಹುದೇನೋ ಎಂದುಕೊಂಡ ರಶ್ಮಿ ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಈ ಹಿಂದೆಯೂ ಗಾಳಿ ಸುದ್ದಿ ಹರಿದಾಡಿತ್ತು

ಈ ಹಿಂದೆಯೂ ಗಾಳಿ ಸುದ್ದಿ ಹರಿದಾಡಿತ್ತು

ಈ ಹಿಂದೆಯೂ ರಶ್ಮಿ ಬಗ್ಗೆ ಹಲವು ಸುದ್ದಿಗಳು ಹರಿದಾಡಿದ್ದವು. ಅದರಲ್ಲೂ ಸುಧೀರ್ ಗೂ ರಶ್ಮಿಗೂ ನಂಟು ಹಾಕಿ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಗುಸುಗುಸು ಗಳು ಕೇಳಿಬಂದಿತ್ತು. ಆದರೆ, ಕೊನೆಗೆ ತಮ್ಮ ನಡುವೆ ಏನೂ ಇಲ್ಲ ಎಂದು ರಶ್ಮಿ 'ಕೇವಲ ಕ್ಯಾಮರಾ ಮುಂದೆ ಇರುವುದನ್ನು ಬಿಟ್ಟರೆ ತಮ್ಮ ನಡುವೆ ಬೇರೇನೂ ಇಲ್ಲ' ಎಂದು ಖಚಿತಪಡಿಸಿದಳು. ಇದೀಗ ಮದುವೆಯ ಸುದ್ದಿ ತೆರೆಗೆ ಬಂದಿದೆ. ಹಾಗಾದ್ರೆ.. ಈ ವಿಚಾರದಲ್ಲಿ ರಶ್ಮಿ ಕ್ಲಾರಿಟಿ ಕೊಡ್ತಾರಾ?

ಪೋಷಕ ಪಾತ್ರದಿಂದ ಕ್ರೇಜಿ ಆಂಕರ್‌ವರೆಗೆ ರಶ್ಮಿ ಪಯಣ

ಪೋಷಕ ಪಾತ್ರದಿಂದ ಕ್ರೇಜಿ ಆಂಕರ್‌ವರೆಗೆ ರಶ್ಮಿ ಪಯಣ

ಆಂಕರ್ ರಶ್ಮಿ ಗೌತಮ್ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಭಾರೀ ಕ್ರೇಜ್ ಹೊಂದಿದ್ದಾರೆ. ಬೆಳ್ಳಿತೆರೆಗೆ ಮೊದಲು ಪರಿಚಯವಾದ ರಶ್ಮಿಗೆ ಹಿರಿತೆರೆಯಲ್ಲಿ ಮನ್ನಣೆ ಸಿಕ್ಕಿತು. 'ಹೋಲಿ' ಸಿನಿಮಾದಲ್ಲಿ ಪೋಷಕ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ರಶ್ಮಿ ಜಬರ್ದಸ್ತ್ ಕಾರ್ಯಕ್ರಮದ ನಿರೂಪಕಿ ಆದ ನಂತರ ಬೆಳಕಿಗೆ ಬಂದವರು. ಗಾಡ್ ಫಾದರ್ ಗಳ ಸಹಾಯವಿಲ್ಲದೆ ಜರ್ನಿ ಶುರುಮಾಡಿದ್ದ ರಶ್ಮಿ ಇಂದು ಟಾಪ್ ನಿರೂಪಕಿಯರಲ್ಲಿ ಒಬ್ಬರಾಗಿ ಬೆಳೆದು ದೊಡ್ಡ ಹೆಸರು ಮತ್ತು ಹಣ ಕೂಡ ಗಳಿಕೆ ಮಾಡಿದ್ದಾಳೆ.

ಬೀದಿನಾಯಿಗಳು ಮತ್ತು ಸಾಕು ಪ್ರಾಣಿಗಳಗಾಗಿ ರಶ್ಮಿ ಕೆಲಸ

ಬೀದಿನಾಯಿಗಳು ಮತ್ತು ಸಾಕು ಪ್ರಾಣಿಗಳಗಾಗಿ ರಶ್ಮಿ ಕೆಲಸ

ರಶ್ಮಿತೆರೆಯ ಮೇಲೆ ತುಂಬಾ ಗ್ಲಾಮರಸ್ ಆಗಿ ಕಾಣಿಸುತ್ತಾರೆ. ಆದರೆ ರಶ್ಮಿಯ ಹೊರಗೆ ಇದಕ್ಕೆ ತದ್ವಿರುದ್ಧ. ತೆರೆಯ ಮೇಲೆ ರಶ್ಮಿಯ ಸೌಂದರ್ಯ ಕಂಡರೆ, ರಶ್ಮಿಯ ಒಳ್ಳೆ ಮನಸ್ಸು ಹೊರಗೆ ಕಾಣುತ್ತಿದೆ. ಮೂಕ ಜೀವಿಗಳಿಗೆ ರಶ್ಮಿ ನಡೆದುಕೊಳ್ಳುವ ರೀತಿಯನ್ನು ಎಲ್ಲರೂ ಗಮನಿಸಬೇಕು. ಹಸು, ನಾಯಿಯಂತಹ ಪ್ರಾಣಿಗಳ ರಕ್ಷಣೆಗೆ ರಶ್ಮಿ ಮುಂದೆ ಬರುತ್ತಾಳೆ. ಮುಖ್ಯವಾಗಿ ಬೀದಿಬದಿಯ ನಾಯಿಗಳಿಗಾಗಿ ರಶ್ಮಿ ಸದಾ ಧ್ವನಿಯಾಗುತ್ತಿದ್ದಾರೆ. ಎಲ್ಲಿಯಾದರೂ, ಯಾರೋ ಸಾಕುಪ್ರಾಣಿಗಳಿಗೆ ತೊಂದರೆ ಕೊಟ್ಟಿರುವುದು ತನ್ನ ಗಮನಕ್ಕೆ ಬಂದಾಗಲೂ ರಶ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಬೀದಿಬದಿಯ ನಾಯಿಗಳಿಗಾಗಿ ರಶ್ಮಿ ಖುದ್ದಾಗಿ ಆಹಾರವನ್ನು ನೀಡಿದ್ದಾರೆ ಮತ್ತು ಈಗಲೂ ನೀಡುತ್ತಿದ್ದಾರೆ. ನಾಯಿಗಳನ್ನು ಕೊಲ್ಲಬೇಡಿ ಎಂದು ಕೇಳಿಕೊಳ್ಳುವ ರಶ್ಮಿಪ್ರಾಣಿಗಳ ದತ್ತು ಸ್ವೀಕಾರದ ಬಗ್ಗೆ ಪ್ರತಿನಿತ್ಯ ಪೋಸ್ಟ್ ಮಾಡುತ್ತಲೇ ಇರುತ್ತಾಳೆ. ಇತ್ತೀಚೆಗೆ ರಶ್ಮಿ ಇದೇ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಪತ್ರ ಬರೆದು ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಂಡಿರುವ ರಶ್ಮಿ

ಪೋಸ್ಟ್ ಹಂಚಿಕೊಂಡಿರುವ ರಶ್ಮಿ

'ನಾನು ಪ್ರತಿದಿನ ಪ್ರಾಣಿಗಳ ಆರೈಕೆಯ ಬಗ್ಗೆ ಏಕೆ ಪೋಸ್ಟ್ ಮಾಡುತ್ತೇನೆ? ಪ್ರತಿದಿನ ನಾನು ಎಲ್ಲರನ್ನು ಕೇಳುತ್ತೇನೆ. ಈ ಜಗತ್ತು ಯಾವಾಗ ಬದಲಾಗುತ್ತದೆ? ಅದು ಹೇಗೆ ಬದಲಾಗುತ್ತದೆ? ನನಗೆ ಗೊತ್ತಿಲ್ಲ. ಆದರೆ ಬದಲಾಗುವ ಭರವಸೆ ಇದೆ. ನನ್ನ ಪೋಸ್ಟ್ ನೋಡಿ ಪ್ರತಿದಿನ ಬೆಳಗ್ಗೆ ಏಳುವ ಯಾರಾದರೂ ಬದಲಾಗುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಅದರಲ್ಲಿ ಹೇಳಿದ್ದಾರೆ.

More from Filmibeat

English summary
The Crazy update is roaming around that Anchor Rashmi had a secret marriage during the lock down last year. And her husband nothing to do with film industry. He works as a manager in a private company.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X