For Quick Alerts
  ALLOW NOTIFICATIONS  
  For Daily Alerts

  ಅಪ್ಪ ತೀರಿ ಹೋದಾಗಲು ಶೂಟಿಂಗ್‌ಗೆ ಹೋಗಿದ್ದೆ: 10 ವರ್ಷಗಳ ಬಳಿಕ ಸುಷ್ಮಾ ಕಂಬ್ಯಾಕ್‌

  |

  ಕನ್ನಡ ಕಿರುತೆರೆಯಲ್ಲಿ ಮತ್ತೊಂದು ಹೊಚ್ಚ ಹೊಸ ಧಾರಾವಾಹಿ ಪ್ರಸಾರವಾಗಲು ಸಜ್ಜಾಗಿದೆ. ಜನಪ್ರಿಯ ವಾಹಿನಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಭಾಗ್ಯಲಕ್ಷ್ಮೀ ಎಂಬ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಅಕ್ಟೋಬರ್ 10ರಿಂದ ಪ್ರತಿದಿನ ಪ್ರಸಾರವಾಗಲಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಈಗಾಗಲೇ ಪ್ರೋಮೋ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

  ಕಥಾ ನಾಯಕಿಯ ವಿಚಾರಕ್ಕೆ ಬಂದರೆ ಅಕ್ಕ-ತಂಗಿ ಬಾಂಧವ್ಯ, ಅದೇ ಕಥಾ ನಾಯಕನ ವಿಚಾರಕ್ಕೆ ಬಂದರೆ ಅಮ್ಮ-ಮಗನ ಬಾಂಧವ್ಯ ಹೊಂದಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿಪ್ರಮುಖ ಪಾತ್ರದಲ್ಲಿ ನಟಿ, ನಿರೂಪಕಿ ಸುಷ್ಮಾ ನಟಿಸುತ್ತಿದ್ದಾರೆ. ಇನ್ನು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಬಿಗ್‌ ಬಾಸ್‌ ಬ್ರೋ ಗೌಡ ಖ್ಯಾತಿಯ ಶಮಂತ್‌, ಭೂಮಿಕಾ ಹಾಗೂ ಹಿರಿಯ ನಟಿ ಪದ್ಮಜಾ ರಾವ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಝೇಂಡೇ ಆರ್ಯನ ಮೊಬೈಲ್ ನಂಬರ್ ಹೇಳಿದ ಸಂಜು ಪ್ಲ್ಯಾನ್ ಏನು..?ಝೇಂಡೇ ಆರ್ಯನ ಮೊಬೈಲ್ ನಂಬರ್ ಹೇಳಿದ ಸಂಜು ಪ್ಲ್ಯಾನ್ ಏನು..?

  ಹತ್ತು ವರ್ಷಗಳ ಬಳಿಕ ನಿರೂಪಕಿ ಸುಷ್ಮಾ ಪ್ರಮುಖ ಪಾತ್ರದೊಂದಿಗೆ ಮತ್ತೆ ಕಿರುತೆರೆಗೆ ಕಂಬ್ಯಾಕ್‌ ಮಾಡುತ್ತಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೈ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಸುಷ್ಮಾ, ಗುಪ್ತಗಾಮಿನಿ, ಸೊಸೆ ತಂದ ಸೌಭಾಗ್ಯ, ಯಾವ ಜನ್ಮದ ಮೈತ್ರಿ, ಸ್ವಾತಿ ಮುತ್ತು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಸುಷ್ಮಾ ಕಿರುತೆರೆಗೆ ವಾಪಸ್‌ ಆಗಿದ್ದಾರೆ.

  ಈ ಬಗ್ಗೆ ಮಾತನಾಡಿರುವ ಸುಷ್ಮಾ, ನಾವು ಪ್ರೇಕ್ಷಕರಿಗೂ ಸಮಯ ಕೊಡಬೇಕು. ನಾವು ಒಂದಾದ ಮೇಲೊಂದು ಧಾರಾವಾಹಿ ಮಾಡಿಕೊಂಡು ಹೋದರೆ ನಾವು ಮುಂದೆ ಏನು ಮಾಡುತ್ತೇವೆ ಅಂತಾ ಅವರೇ ಗೆಸ್‌ ಮಾಡುತ್ತಾರೆ. ಪ್ರೇಕ್ಷಕರಿಗೂ ಸಲ್ಪ ಸಮಯ ಕೊಟ್ಟು ಹೊಸದಾಗಿ ಜರ್ನಿ ಶುರು ಮಾಡುವುದರಲ್ಲಿ ಅರ್ಥವಿದೆ ಅಂತಾ ಇಷ್ಟು ವರ್ಷಗಳ ಬಳಿಕ ಕಂಬ್ಯಾಕ್‌ ಮಾಡುತ್ತಿದ್ದೇನೆ ಎಂದರು.

  ಸೌಭಾಗ್ಯರಂತೆ ಆಗ್ಬಿಟ್ರಾ ದಿಗಂತ್ ಅಮ್ಮ: ಮಗನ ಕೊಲೆಗೆ ಸಾಥ್ ನೀಡಿದ್ರಾ?ಸೌಭಾಗ್ಯರಂತೆ ಆಗ್ಬಿಟ್ರಾ ದಿಗಂತ್ ಅಮ್ಮ: ಮಗನ ಕೊಲೆಗೆ ಸಾಥ್ ನೀಡಿದ್ರಾ?

  ಇನ್ನು ಯಾವುದೇ ಒಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದೇವೆ ಎಂದರೆ ನಮಗೆ ಅದು ಮಾನಸಿಕವಾಗಿ, ದೈಹಿಕವಾಗಿ ಸವಾಲಾಗಿರುತ್ತದೆ. ನಾನು ಈ ಹಿಂದೆ ಧಾರಾವಾಹಿ ಮಾಡುವಾಗ ನನ್ನ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡೆ. ಅನಾರೋಗ್ಯ ಸಮಯದಲ್ಲೂ ನಟನೆ ಮಾಡಿದ್ದೆ, ನಮ್ಮ ತಂದೆ ತೀರಿ ಹೋದಾಗಲೂ ಶೂಟಿಂಗ್‌ಗೆ ಹೋಗಿದ್ದೆ, ಅಮ್ಮನಿಗೆ ಬ್ರೈನ್ ಟ್ಯೂಮರ್‌ ಆಗಿತ್ತು. ಆಗಲೂ ಆ್ಯಕ್ಟಿಂಗ್‌ಗೆ ಹೋಗಬೇಕಾಗಿತ್ತು. ಇನ್ಯಾವ ಕೆಲಸ ಆದರೂ ಅವತ್ತಿನ ದಿನಕ್ಕೆ ಮತ್ಯಾರೋ ಬಂದು ಮಾಡಬಹುದು ಆದರೆ ನಟನೆ ಹಾಗಲ್ಲ ಎಂದು ಹೇಳಿದರು.

  ಇನ್ನು ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ಒಂದು ಅಕ್ಕ ತಂಗಿಯ ಬಾಂಧವ್ಯ ನೋಡಬಹುದು. ಗಂಡ-ಹೆಂಡತಿ ನಡುವಿನ ಬಾಂಧವ್ಯ ನೋಡಬಹುದು, ಒಂದು ಕುಟುಂಬದಲ್ಲಿರುವ ಎಲ್ಲಾ ಸಂಬಂಧಗಳ ನಡುವಿನ ಬಾಂಧವ್ಯವನ್ನು ನೋಡಬಹುದು. ಭಾಗ್ಯಲಕ್ಷ್ಮೀ ಎನ್ನುವುದು ಸಂಬಂಧಗಳ ನಡುವೆ ಸುತ್ತುವ ಕತೆ. ಈ ಧಾರಾವಾಹಿ ಮೂಲಕ ಕಂಬ್ಯಾಕ್‌ ಮಾಡುತ್ತಿರುವುದು ತುಂಬಾ ಖುಷಿ ಇದೆ. ಈ ಧಾರಾವಾಹಿಯ ಎಲ್ಲರ ಜೊತೆ ಆತ್ಮೀಯತೆ ಬೆಳೆದಿದೆ ಅದು ತುಂಬಾ ಖುಷಿಕೊಡುತ್ತದೆ ಎಂದು ಹೇಳಿದರು.

  ಹಿರಿಯ ಕಲಾವಿದೆ ವಿದ್ಯಾಮೂರ್ತಿ ಅವರ ಬಣ್ಣದ ಲೋಕದ ಪಯಣಹಿರಿಯ ಕಲಾವಿದೆ ವಿದ್ಯಾಮೂರ್ತಿ ಅವರ ಬಣ್ಣದ ಲೋಕದ ಪಯಣ

  English summary
  Anchor Sushma come back to small screen acting after 10 years.
  Tuesday, October 4, 2022, 19:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X