For Quick Alerts
  ALLOW NOTIFICATIONS  
  For Daily Alerts

  ಕ್ಷಮೆ ಕೇಳಿದ ಆಂಡ್ರ್ಯೂ: ಕವಿತಾ ಜೊತೆಗಿನ ಜಟಾಪಟಿ ಸುಖಾಂತ್ಯ.!

  |

  ಕಡೆಗೂ ಕವಿತಾ ಗೌಡ ಕೊಂಚ ತಣ್ಣಗಾಗಿದ್ದಾರೆ. ಆಂಡ್ರ್ಯೂ-ಕವಿತಾ ಗೌಡ ನಡುವಿನ ಮುನಿಸಿಗೆ ಫುಲ್ ಸ್ಟಾಪ್ ಬಿದ್ದಿದೆ. ಇಬ್ಬರ ಜಗಳ ಇದೀಗ ಸುಖಾಂತ್ಯ ಕಂಡಿದೆ.

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಮುಗಿದರೂ, ಆಂಡ್ರ್ಯೂ ಮತ್ತು ಕವಿತಾ ಗೌಡ ನಡುವಿನ ಗಲಾಟೆ ಮಾತ್ರ ಮುಂದುವರೆದಿತ್ತು. ''ಬಿಗ್ ಬಾಸ್' ಮನೆಯೊಳಗೆ ಆಂಡ್ರ್ಯೂ ಕಿರುಕುಳ ಕೊಟ್ಟಿದ್ದಾರೆ. ಹೊರಗೆ ಬಂದ ಮೇಲೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ'' ಎಂದು ಆರೋಪಿಸಿ ಆಂಡ್ರ್ಯೂ ವಿರುದ್ಧ ಮಹಿಳಾ ಆಯೋಗಕ್ಕೆ ಕವಿತಾ ಗೌಡ ದೂರು ಕೊಟ್ಟಿದ್ದರು.

  ದೂರು ಕೊಟ್ಟ ಕವಿತಾ ವಿರುದ್ಧ ಹೊಸ ಬಾಂಬ್ ಸಿಡಿಸಿದ ಆಂಡ್ರ್ಯೂ.! ದೂರು ಕೊಟ್ಟ ಕವಿತಾ ವಿರುದ್ಧ ಹೊಸ ಬಾಂಬ್ ಸಿಡಿಸಿದ ಆಂಡ್ರ್ಯೂ.!

  ಕವಿತಾ ಕೊಟ್ಟಿದ್ದ ದೂರಿನ ಅನ್ವಯ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಪ್ರಕರಣದ ಕುರಿತು ವಿಚಾರಣೆ ನಡೆಸಿದರು. ವಿಚಾರಣೆ ಬಳಿಕ ಕವಿತಾ ಗೌಡಗೆ ಕ್ಷಮೆ ಕೇಳಲು ಆಂಡ್ರ್ಯೂ ಒಪ್ಪಿಕೊಂಡರು. ತಮ್ಮ ತಪ್ಪನ್ನು ಆಂಡ್ರ್ಯೂ ಒಪ್ಪಿಕೊಂಡಿರುವ ಕಾರಣ, ಪ್ರಕರಣವನ್ನು ಇಲ್ಲೇ ಕೈಬಿಡಲು ಕವಿತಾ ಗೌಡ ಮನಸ್ಸು ಮಾಡಿದ್ದಾರೆ. ಮುಂದೆ ಓದಿರಿ...

  ಕ್ಷಮೆ ಕೇಳಿದ ಆಂಡ್ರ್ಯೂ

  ಕ್ಷಮೆ ಕೇಳಿದ ಆಂಡ್ರ್ಯೂ

  ''ಒಬ್ಬರಿಗೆ ಬೇಜಾರಾಗಿದೆ ಅಂದ್ರೆ ಖಂಡಿತ ಕ್ಷಮೆ ಕೇಳುವೆ ಅಂತ ಮಹಿಳಾ ಆಯೋಗದ ಅಧ್ಯಕ್ಷರ ಮುಂದೆ ಒಪ್ಪಿಕೊಂಡೆ. ಕವಿತಾ ಮೇಲೆ ಈಗಲೂ ನನಗೆ ಗೌರವ ಇದೆ. ಗೇಮ್ ನಲ್ಲಿ ಆಗಿರುವ ಕಿರಿಕಿರಿಗೆ ನಾನು ಕವಿತಾಗೆ ಕ್ಷಮೆ ಕೇಳಿದ್ದೇನೆ. ಇದರಿಂದ ಕವಿತಾಗೆ ಖುಷಿ ಆದರೆ ನನಗೂ ಖುಷಿನೇ.!'' ಎಂದರು ಆಂಡ್ರ್ಯೂ.

  'ಬಿಗ್ ಬಾಸ್' ಮುಗಿದ್ಮೇಲೂ ತೊಂದರೆ ತಪ್ಪಿಲ್ಲ: ಆಂಡ್ರ್ಯೂ ವಿರುದ್ಧ ಮಹಿಳಾ ಆಯೋಗಕ್ಕೆ ಕವಿತಾ ದೂರು.!'ಬಿಗ್ ಬಾಸ್' ಮುಗಿದ್ಮೇಲೂ ತೊಂದರೆ ತಪ್ಪಿಲ್ಲ: ಆಂಡ್ರ್ಯೂ ವಿರುದ್ಧ ಮಹಿಳಾ ಆಯೋಗಕ್ಕೆ ಕವಿತಾ ದೂರು.!

  ಪ್ರಕರಣವನ್ನು ಇಲ್ಲಿಗೇ ಬಿಡುತ್ತಿದ್ದೇನೆ

  ಪ್ರಕರಣವನ್ನು ಇಲ್ಲಿಗೇ ಬಿಡುತ್ತಿದ್ದೇನೆ

  ''ಆಂಡ್ರ್ಯೂ ನನಗೆ ಕ್ಷಮೆ ಕೇಳಿದ್ದಾರೆ. ಕಿರುಕುಳ ಕೊಟ್ಟಿರುವ ಬಗ್ಗೆ ಆಂಡ್ರ್ಯೂ ಒಪ್ಪಿಕೊಳ್ಳಬೇಕಿತ್ತು... ಒಪ್ಪಿಕೊಂಡಿದ್ದಾರೆ. ಇನ್ಮುಂದೆ ಹೀಗೆಲ್ಲ ಮಾಡಲ್ಲ ಅಂದಿದ್ದಾರೆ. ಅದಕ್ಕೆ ಈ ಪ್ರಕರಣವನ್ನು ಇಲ್ಲಿಗೆ ಬಿಡುತ್ತಿದ್ದೇನೆ'' ಎಂದಿದ್ದಾರೆ ಕವಿತಾ ಗೌಡ.

  ಮಹಿಳಾ ಆಯೋಗಕ್ಕೆ ಕವಿತಾ ದೂರು: ಆಂಡ್ರ್ಯೂ ಹೇಳಿದ್ದೇನು.?ಮಹಿಳಾ ಆಯೋಗಕ್ಕೆ ಕವಿತಾ ದೂರು: ಆಂಡ್ರ್ಯೂ ಹೇಳಿದ್ದೇನು.?

  ಗುರುದಾಸ್ ಶೆಣೈ ವಿರುದ್ಧ ಕಂಪ್ಲೇಂಟ್ ಯಾಕೆ.?

  ಗುರುದಾಸ್ ಶೆಣೈ ವಿರುದ್ಧ ಕಂಪ್ಲೇಂಟ್ ಯಾಕೆ.?

  ''ಗುರುದಾಸ್ ಶೆಣೈ ಮೇಲೆ ನನಗೆ ಯಾವುದೇ ಕಂಪ್ಲೇಂಟ್ ಇರಲಿಲ್ಲ. ಕೇಸ್ ಹಾಕುವೆ ಅಂತ 'ಬಿಗ್ ಬಾಸ್' ಮನೆ ಒಳಗೆ ಹೇಳಿದಾಗ, ಅವರು ''ಕೇಸ್ ಹಾಕಿ. ಚಾನೆಲ್ ಕಡೆಯಿಂದ ಸಪೋರ್ಟ್ ಬೇಕು ಅಂದ್ರೆ ಮಾಡ್ತೀವಿ'' ಅಂತ ಹೇಳಿದ್ದರು. ಆದರೆ ಸ್ಪ್ರೇ ಮಾಡುವಾಗ ವಾಹಿನಿಯವರು ಯಾಕೆ ಸುಮ್ಮನೆ ಇದ್ದರು ಅನ್ನೋದು ನನ್ನ ಪ್ರಶ್ನೆ'' ಎನ್ನುತ್ತಾರೆ ಕವಿತಾ ಗೌಡ.

  ಕವಿತಾ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹಾಕಬಹುದು ಎಂದ ಅಕ್ಷತಾ.!ಕವಿತಾ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹಾಕಬಹುದು ಎಂದ ಅಕ್ಷತಾ.!

  ಅಂತು ಇಂತೂ ಮುಗೀತು.!

  ಅಂತು ಇಂತೂ ಮುಗೀತು.!

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಮುಗಿದು ಹತ್ತತ್ರ ಒಂದು ತಿಂಗಳು ಕಳೆದ ಮೇಲೆ ಕವಿತಾ ಗೌಡ ಮತ್ತು ಆಂಡ್ರ್ಯೂ ನಡುವಿನ ಮುನಿಸು ಶಮನಗೊಂಡಿದೆ. ಇನ್ಮುಂದೆ ಕವಿತಾ ತಂಟೆಗೆ ಹೋಗಲ್ಲ ಎಂದಿದ್ದಾರೆ ಆಂಡ್ರ್ಯೂ. ಕವಿತಾ ಕೂಡ ಇಷ್ಟಕ್ಕೆ ಪೂರ್ಣ ವಿರಾಮ ಇಟ್ಟಿದ್ದಾರೆ.

  ''ಆಂಡಿ ಹಾಗೆಲ್ಲ ಮಾಡಲ್ಲ'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ ಮುರಳಿ.!''ಆಂಡಿ ಹಾಗೆಲ್ಲ ಮಾಡಲ್ಲ'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ ಮುರಳಿ.!

  English summary
  Bigg Boss Kannada 6 Contestant Andrew apologized Kavitha Gowda in Women's Commission. Kavitha Gowda had filed a complaint against Andrew in Women's Commission.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X