ಮೆಟ್ರೋ ರೈಲಿನಲ್ಲಿ ಅನಿರುದ್ಧ್ - ಮೇಘ ಶೆಟ್ಟಿ 'ಜೊತೆ ಜೊತೆಯಲಿ'

ಎಲ್ಲೆಲ್ಲೂ ಗಿಜಿಗುಡುವ ಟ್ರಾಫಿಕ್ ನಲ್ಲಿ ಬೆಂಗಳೂರಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗಬೇಕು ಅಂದ್ರೆ 'ನಮ್ಮ ಮೆಟ್ರೋ' ಬೆಸ್ಟ್ ಆಪ್ಷನ್. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಸಿಸುವ ಬಹುತೇಕ ಮಂದಿ 'ನಮ್ಮ ಮೆಟ್ರೋ' ಅವಲಂಬಿಸಿದ್ದಾರೆ.

ಸದಾ ತುಂಬಿ ತುಳುಕುವ 'ನಮ್ಮ ಮೆಟ್ರೋ'ದಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಬೇಕು ಎಂಬ ಆಸೆ ಯಾರಿಗೆ ಇದ್ಯೋ, ಇಲ್ವೋ.. ಆದ್ರೆ, ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಖಂಡಿತ ಇತ್ತು. ಆ ಆಸೆಯನ್ನ ಮೊನ್ನೆಯಷ್ಟೇ ಮೆಟ್ರೋದಲ್ಲಿ ಪ್ರಯಾಣಿಸಿ ರಚಿತಾ ರಾಮ್ ಈಡೇರಿಸಿಕೊಂಡರು. ಇದೀಗ 'ಜೊತೆ ಜೊತೆಯಲಿ' ತಂಡದ ಸರದಿ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಹು ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ'. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಜತ್ಕರ್ 'ಜೊತೆ ಜೊತೆಯಲಿ' ಮೂಲಕ ಕನ್ನಡಿಗರ ಮನೆ ಮನ ಗೆದ್ದಿದ್ದಾರೆ. ತಮ್ಮ ಧಾರಾವಾಹಿ ಬಗ್ಗೆ ಜನರ ಪ್ರತಿಕ್ರಿಯೆ ತಿಳಿದುಕೊಳ್ಳಲು ಅನಿರುದ್ಧ್ ಮತ್ತು ನಟಿ ಮೇಘ ಶೆಟ್ಟಿ ಮೆಟ್ರೋ ರೈಲು ಹತ್ತಿದ್ದಾರೆ. ಮುಂದೆ ಓದಿರಿ...

'ಜೊತೆ ಜೊತೆಯಲಿ' ಮೆಟ್ರೋ ಪ್ರಯಾಣ

'ಜೊತೆ ಜೊತೆಯಲಿ' ಮೆಟ್ರೋ ಪ್ರಯಾಣ

'ಜೊತೆ ಜೊತೆಯಲಿ' ಧಾರಾವಾಹಿ ಶುರುವಾಗಿದ್ದು ಕೆಲವೇ ಕೆಲವು ವಾರಗಳ ಹಿಂದೆಯಷ್ಟೇ. ಹೀಗಿದ್ದರೂ, ಟಿ.ಆರ್.ಪಿ ರೇಟಿಂಗ್ ನಲ್ಲಿ 'ಜೊತೆ ಜೊತೆಯಲಿ' ಟಾಪ್ ನಲ್ಲಿದೆ. ಕಿರುತೆರೆ ವೀಕ್ಷಕರ ಮನಮುಟ್ಟುವಲ್ಲಿ 'ಜೊತೆ ಜೊತೆಯಲಿ' ತಂಡ ಯಶಸ್ವಿ ಆಗಿದೆ. 'ಜೊತೆ ಜೊತೆಯಲಿ' ಧಾರಾವಾಹಿಗೆ ವೀಕ್ಷಕರ ಅಭಿಪ್ರಾಯ ಹೇಗಿದೆ ಅಂತ ಸ್ವತಃ ತಿಳಿದುಕೊಳ್ಳಲು ನಟಿ ಮೇಘ ಶೆಟ್ಟಿ ಜೊತೆಗೆ ನಟ ಅನಿರುದ್ಧ್ ಜತ್ಕರ್ 'ನಮ್ಮ ಮೆಟ್ರೋ'ದಲ್ಲಿ ಪ್ರಯಾಣ ಮಾಡಿದ್ದಾರೆ.

ಅನಿರುದ್ಧ್ ಗೆ ಖುಷಿಯೋ ಖುಷಿ

ಅನಿರುದ್ಧ್ ಗೆ ಖುಷಿಯೋ ಖುಷಿ

ಫುಲ್ ರಷ್ ಇದ್ದರೂ 'ನಮ್ಮ ಮೆಟ್ರೋ' ಹತ್ತಿದ ಅನಿರುದ್ಧ್ ಮತ್ತು ಮೇಘ ಶೆಟ್ಟಿ, ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಜನರ ಜೊತೆಗೆ ಮಾತನಾಡಿ ತಮ್ಮ ಧಾರಾವಾಹಿಯ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿ ಮತ್ತು ಅನಿರುದ್ಧ್ ನಟನೆ ಬಗ್ಗೆ ಜನರ ಪ್ರತಿಕ್ರಿಯೆ ಕಂಡು ನಟ ಅನಿರುದ್ಧ್ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ.

ಆರ್ಯವರ್ಧನ್ ಆಗಿ ಅನಿರುದ್ಧ್

ಆರ್ಯವರ್ಧನ್ ಆಗಿ ಅನಿರುದ್ಧ್

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ 45 ವರ್ಷದ ಶ್ರೀಮಂತ ಉದ್ಯಮಿ ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್ ಜತ್ಕರ್ ನಟಿಸಿದ್ದರೆ, ಹರೆಯದ ಹುಡುಗಿ ಅನು ಪಾತ್ರದಲ್ಲಿ ಮೇಘ ಶೆಟ್ಟಿ ಅಭಿನಯಿಸಿದ್ದಾರೆ. ಇವರಿಬ್ಬರ ನಡುವೆ ಮೂಡುವ ಪ್ರೀತಿ ಮತ್ತು ಮದುವೆಯ ಕಥೆಯೇ 'ಜೊತೆ ಜೊತೆಯಲಿ' ಸೀರಿಯಲ್ ನ ಕಥಾಹಂದರ.

ನಂಬರ್ ಒನ್ ಸ್ಥಾನದಲ್ಲಿದ್ದ 'ಜೊತೆ ಜೊತೆಯಲಿ'

ನಂಬರ್ ಒನ್ ಸ್ಥಾನದಲ್ಲಿದ್ದ 'ಜೊತೆ ಜೊತೆಯಲಿ'

ಅನಿರುದ್ಧ್ ಅಭಿನಯದ 'ಜೊತೆ ಜೊತೆಯಲಿ' ಧಾರಾವಾಹಿ ನಂ.1 ಸ್ಥಾನದಲ್ಲಿತ್ತು. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿಗಳನ್ನು ಹಿಂದಿಕ್ಕಿ, ಮೊದಲ ವಾರದಲ್ಲೆ ನಂ. 1 ಸ್ಥಾನ ಗಳಿಸಿತ್ತು. ಗಟ್ಟಿಮೇಳ, ಪಾರು, ಕಮಲಿ ಧಾರಾವಾಹಿಗಳನ್ನು 'ಜೊತೆ ಜೊತೆಯಲಿ' ಹಿಂದಕ್ಕೆ ತಳ್ಳಿತ್ತು.

More from Filmibeat

English summary
Kannada Actor Aniruddha Jatkar and Megha Shetty of Jothe Jotheyali serial fame enjoys metro ride.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X