Just In
Don't Miss!
- News
ಚುನಾವಣೆಯ ದಿನ ರಮೇಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ: ಇದು ಆಗುಹೋಗುವ ಮಾತಾ?
- Technology
ಭಾರತದಲ್ಲಿ ನೋಕಿಯಾ 55 ಇಂಚಿನ ಸ್ಮಾರ್ಟ್ಟಿವಿ ಬಿಡುಗಡೆ!..ಬೆಲೆ ಎಷ್ಟು?
- Sports
India vs West Indies: ಧೋನಿ ದಾಖಲೆ ಸರಿಗಟ್ಟಲಿದ್ದಾರೆ ರಿಷಬ್ ಪಂತ್
- Finance
ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷ; ಅದರಲ್ಲಿ ಇಳಿಕೆ ಇಲ್ಲ
- Automobiles
ಬೈಕ್ - ಸ್ಕೂಟರ್ ಖರೀದಿ ಮೇಲೆ ಹೋಂಡಾ ನೀಡುತ್ತಿದೆ ಭರ್ಜರಿ ಆಫರ್
- Education
NHSRCL Recruitment 2019: 5 ವ್ಯವಸ್ಥಾಪಕ/ ಹಿರಿಯ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್ ಸಿಇಓ ಆದ ಸುಂದರ್ ಪಿಚೈ ಕುರಿತ ಆಸಕ್ತಿಕರ ಸಂಗತಿಗಳು
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
ಮೆಟ್ರೋ ರೈಲಿನಲ್ಲಿ ಅನಿರುದ್ಧ್ - ಮೇಘ ಶೆಟ್ಟಿ 'ಜೊತೆ ಜೊತೆಯಲಿ'
ಎಲ್ಲೆಲ್ಲೂ ಗಿಜಿಗುಡುವ ಟ್ರಾಫಿಕ್ ನಲ್ಲಿ ಬೆಂಗಳೂರಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗಬೇಕು ಅಂದ್ರೆ 'ನಮ್ಮ ಮೆಟ್ರೋ' ಬೆಸ್ಟ್ ಆಪ್ಷನ್. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಸಿಸುವ ಬಹುತೇಕ ಮಂದಿ 'ನಮ್ಮ ಮೆಟ್ರೋ' ಅವಲಂಬಿಸಿದ್ದಾರೆ.
ಸದಾ ತುಂಬಿ ತುಳುಕುವ 'ನಮ್ಮ ಮೆಟ್ರೋ'ದಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಬೇಕು ಎಂಬ ಆಸೆ ಯಾರಿಗೆ ಇದ್ಯೋ, ಇಲ್ವೋ.. ಆದ್ರೆ, ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಖಂಡಿತ ಇತ್ತು. ಆ ಆಸೆಯನ್ನ ಮೊನ್ನೆಯಷ್ಟೇ ಮೆಟ್ರೋದಲ್ಲಿ ಪ್ರಯಾಣಿಸಿ ರಚಿತಾ ರಾಮ್ ಈಡೇರಿಸಿಕೊಂಡರು. ಇದೀಗ 'ಜೊತೆ ಜೊತೆಯಲಿ' ತಂಡದ ಸರದಿ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಹು ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ'. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಜತ್ಕರ್ 'ಜೊತೆ ಜೊತೆಯಲಿ' ಮೂಲಕ ಕನ್ನಡಿಗರ ಮನೆ ಮನ ಗೆದ್ದಿದ್ದಾರೆ. ತಮ್ಮ ಧಾರಾವಾಹಿ ಬಗ್ಗೆ ಜನರ ಪ್ರತಿಕ್ರಿಯೆ ತಿಳಿದುಕೊಳ್ಳಲು ಅನಿರುದ್ಧ್ ಮತ್ತು ನಟಿ ಮೇಘ ಶೆಟ್ಟಿ ಮೆಟ್ರೋ ರೈಲು ಹತ್ತಿದ್ದಾರೆ. ಮುಂದೆ ಓದಿರಿ...

'ಜೊತೆ ಜೊತೆಯಲಿ' ಮೆಟ್ರೋ ಪ್ರಯಾಣ
'ಜೊತೆ ಜೊತೆಯಲಿ' ಧಾರಾವಾಹಿ ಶುರುವಾಗಿದ್ದು ಕೆಲವೇ ಕೆಲವು ವಾರಗಳ ಹಿಂದೆಯಷ್ಟೇ. ಹೀಗಿದ್ದರೂ, ಟಿ.ಆರ್.ಪಿ ರೇಟಿಂಗ್ ನಲ್ಲಿ 'ಜೊತೆ ಜೊತೆಯಲಿ' ಟಾಪ್ ನಲ್ಲಿದೆ. ಕಿರುತೆರೆ ವೀಕ್ಷಕರ ಮನಮುಟ್ಟುವಲ್ಲಿ 'ಜೊತೆ ಜೊತೆಯಲಿ' ತಂಡ ಯಶಸ್ವಿ ಆಗಿದೆ. 'ಜೊತೆ ಜೊತೆಯಲಿ' ಧಾರಾವಾಹಿಗೆ ವೀಕ್ಷಕರ ಅಭಿಪ್ರಾಯ ಹೇಗಿದೆ ಅಂತ ಸ್ವತಃ ತಿಳಿದುಕೊಳ್ಳಲು ನಟಿ ಮೇಘ ಶೆಟ್ಟಿ ಜೊತೆಗೆ ನಟ ಅನಿರುದ್ಧ್ ಜತ್ಕರ್ 'ನಮ್ಮ ಮೆಟ್ರೋ'ದಲ್ಲಿ ಪ್ರಯಾಣ ಮಾಡಿದ್ದಾರೆ.
ಕನ್ನಡ ಕಿರುತೆರೆ ಲೋಕದಲ್ಲಿ ದಾಖಲೆ ಬರೆದ ವಿಷ್ಣುವರ್ಧನ್ ಅಳಿಯ ಅನಿರುದ್ಧ್

ಅನಿರುದ್ಧ್ ಗೆ ಖುಷಿಯೋ ಖುಷಿ
ಫುಲ್ ರಷ್ ಇದ್ದರೂ 'ನಮ್ಮ ಮೆಟ್ರೋ' ಹತ್ತಿದ ಅನಿರುದ್ಧ್ ಮತ್ತು ಮೇಘ ಶೆಟ್ಟಿ, ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಜನರ ಜೊತೆಗೆ ಮಾತನಾಡಿ ತಮ್ಮ ಧಾರಾವಾಹಿಯ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿ ಮತ್ತು ಅನಿರುದ್ಧ್ ನಟನೆ ಬಗ್ಗೆ ಜನರ ಪ್ರತಿಕ್ರಿಯೆ ಕಂಡು ನಟ ಅನಿರುದ್ಧ್ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ.
ಅಭಿಮಾನಿಗಳಿಗೆ ಚಾಲೆಂಜ್ ನೀಡಿದ ಅನಿರುದ್ಧ್: ಸವಾಲ್ ಸ್ವೀಕರಿಸಲು ನೀವು ರೆಡಿನಾ?

ಆರ್ಯವರ್ಧನ್ ಆಗಿ ಅನಿರುದ್ಧ್
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ 45 ವರ್ಷದ ಶ್ರೀಮಂತ ಉದ್ಯಮಿ ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್ ಜತ್ಕರ್ ನಟಿಸಿದ್ದರೆ, ಹರೆಯದ ಹುಡುಗಿ ಅನು ಪಾತ್ರದಲ್ಲಿ ಮೇಘ ಶೆಟ್ಟಿ ಅಭಿನಯಿಸಿದ್ದಾರೆ. ಇವರಿಬ್ಬರ ನಡುವೆ ಮೂಡುವ ಪ್ರೀತಿ ಮತ್ತು ಮದುವೆಯ ಕಥೆಯೇ 'ಜೊತೆ ಜೊತೆಯಲಿ' ಸೀರಿಯಲ್ ನ ಕಥಾಹಂದರ.

ನಂಬರ್ ಒನ್ ಸ್ಥಾನದಲ್ಲಿದ್ದ 'ಜೊತೆ ಜೊತೆಯಲಿ'
ಅನಿರುದ್ಧ್ ಅಭಿನಯದ 'ಜೊತೆ ಜೊತೆಯಲಿ' ಧಾರಾವಾಹಿ ನಂ.1 ಸ್ಥಾನದಲ್ಲಿತ್ತು. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿಗಳನ್ನು ಹಿಂದಿಕ್ಕಿ, ಮೊದಲ ವಾರದಲ್ಲೆ ನಂ. 1 ಸ್ಥಾನ ಗಳಿಸಿತ್ತು. ಗಟ್ಟಿಮೇಳ, ಪಾರು, ಕಮಲಿ ಧಾರಾವಾಹಿಗಳನ್ನು 'ಜೊತೆ ಜೊತೆಯಲಿ' ಹಿಂದಕ್ಕೆ ತಳ್ಳಿತ್ತು.