For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ನಟ ಅನಿರುದ್ಧ್

  |

  ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಕಿರುತೆರೆಯ ಜೊತೆಯಾದ ಮೇಲೆ ಸಖತ್ ಬ್ಯುಸಿಯಾಗಿದ್ದಾರೆ. ಅದರಲ್ಲೂ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಅನಿರುದ್ಧ ಲುಕ್, ಸ್ಟೈಲ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆರ್ಯವರ್ಧನ್ ಆಗಿ ಪ್ರೇಕ್ಷಕರ ಮನೆಗಿದ್ದಿರುವ ಅನಿರುದ್ಧ್ ಈಗ ದಿಢೀರನೆ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

  ಅಭಿಮಾನಿಗಳಿಗೆ ಚಾಲೆಂಜ್ ನೀಡಿದ ಅನಿರುದ್ಧ್: ಸವಾಲ್ ಸ್ವೀಕರಿಸಲು ನೀವು ರೆಡಿನಾ?ಅಭಿಮಾನಿಗಳಿಗೆ ಚಾಲೆಂಜ್ ನೀಡಿದ ಅನಿರುದ್ಧ್: ಸವಾಲ್ ಸ್ವೀಕರಿಸಲು ನೀವು ರೆಡಿನಾ?

  ಅಂದ್ಹಾಗೆ ಅನಿರುದ್ಧ್ ಕ್ಷಮೆಯಾಚಿಸುವಂತಹ ತಪ್ಪೇನು ಮಾಡಿದ್ದಾರೆ ಅಂತ ಯೋಚಿಸುತ್ತಿದ್ದೀರಾ. ಆಗಿದ್ದಿಷ್ಟೆ, ಅನಿರುದ್ಧ್ ಗೆ ದಿನಕ್ಕೆ ಸಾವಿರಗಟ್ಟಲೆ ಮೆಸೇಜ್ ಗಳು ಬರುತ್ತಿದೆಯಂತೆ. ಅಭಿಮಾನಿಗಳ ಈ ಮಸೇಜ್ ಗಳಿಗೆ ಉತ್ತರಿಸಲು ಅನಿರುದ್ಧ್ ಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್ಲಾ ಸಂದೇಶಗಳಿಗೂ ಪ್ರತಿಕ್ರಿಯೆ ನೀಡಲು ಆಗುತ್ತಿಲ್ಲ ಕ್ಷಮಿಸಿ ಎಂದು ಹೇಳಿದ್ದಾರೆ.

  ಕಿರುತೆರೆ ಎಂಟ್ರಿ ನಂತರ ಅಭಿಮಾನಿಗಳ ಸಂಖ್ಯೆ ಹೆಚ್ಚಳ

  ಕಿರುತೆರೆ ಎಂಟ್ರಿ ನಂತರ ಅಭಿಮಾನಿಗಳ ಸಂಖ್ಯೆ ಹೆಚ್ಚಳ

  ಅನಿರುದ್ಧ ಕಿರುತೆರೆ ಎಂಟ್ರಿ ಕೊಟ್ಟ ನಂತರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದಾರೆ. ಆರ್ಯವರ್ದನ್ ಆಗಿ ಬದಲಾದ ನಂತರ ಅನಿರುದ್ಧ್ ಫೇಸ್ ಬುಕ್ ನಲ್ಲಿ ಒಂದು ಲಕ್ಷಕ್ಕು ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಈ ಸಂತಸವನ್ನು ಅನಿರುದ್ಧ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಅನಿರುದ್ಧ್ ಹೇಳಿದ್ದೇನು?

  ಅನಿರುದ್ಧ್ ಹೇಳಿದ್ದೇನು?

  "ಎಲ್ಲಾ ನನ್ನ ಪ್ರೀತಿಯ ಸ್ನೇಹಿತರಿಗೆ ನಮಸ್ಕಾರ. ನಿಮ್ಮೆಲ್ಲರ ಪ್ರೀತಿಯಿಂದ ನನ್ನ ಈ ಅಧಿಕೃತ ಪೇಜ್ ಮೂಲಕ ಒಂದು ಲಕ್ಷ ಸ್ನೇಹಿತರ ಪ್ರೀತಿಯನ್ನು ನಾನು ಪಡೆದಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ನಾ ಸದಾ ಚಿರಋಣಿ. ಇಂದು ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಮೆಸೆಜ್ ಗಳು ಬಂದಿವೆ. ನನಗೆ ಬಿಡುವಾದಾಗಲೆಲ್ಲಾ ನಿಮಗೆ ಉತ್ತರಿಸಲು ಪ್ರಯತ್ನಿಸುತ್ತೇನೆ" ಎಂದು ಹೇಳಿದ್ದಾರೆ.

  ಕನ್ನಡ ಕಿರುತೆರೆ ಲೋಕದಲ್ಲಿ ದಾಖಲೆ ಬರೆದ ವಿಷ್ಣುವರ್ಧನ್ ಅಳಿಯ ಅನಿರುದ್ಧ್ಕನ್ನಡ ಕಿರುತೆರೆ ಲೋಕದಲ್ಲಿ ದಾಖಲೆ ಬರೆದ ವಿಷ್ಣುವರ್ಧನ್ ಅಳಿಯ ಅನಿರುದ್ಧ್

  ದಯಮಾಡಿ ಕ್ಷಮೆ ಇರಲಿ

  ದಯಮಾಡಿ ಕ್ಷಮೆ ಇರಲಿ

  "ಎಲ್ಲಾ ಮೆಸೆಜ್ ಓದಲು ಸಮಯ ಸಾಲದು. ದಯಮಾಡಿ ಕ್ಷಮೆ ಇರಲಿ. ಮೆಸೆಜ್ ಗಳ ಮೂಲಕ, ಕಮೆಂಟ್ ಗಳ ಮೂಲಕ ನನಗೆ ಪ್ರೀತಿ ತೋರಿದ ಎಲ್ಲರಿಗೂ ಹಾಗೂ ಜೊತೆ ಜೊತೆಯಲಿ ಧಾರಾವಾಹಿಯನ್ನು ಇಷ್ಟಪಟ್ಟು ನೋಡುವ ಮೂಲಕ ಪ್ರೋತ್ಸಾಹಿಸುತ್ತಿರುವ ಎಲ್ಲಾ ನನ್ನ ತಾಯಂದಿರಿಗೂ, ಸಹೋದರ ಸಹೋದರಿಯರಿಗೂ, ಜೀ ವಾಹಿನಿ ಹಾಗೂ ನನ್ನ ಪ್ರೀತಿಯ ಜೊತೆಜೊತೆಯಲಿ ಸಂಪೂರ್ಣ ತಂಡಕ್ಕೂ ನನ್ನ ಮನಃಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ. ಸದಾ ನಿಮ್ಮವ, ನಿಮ್ಮ ಅನಿರುದ್ಧ್" ಎಂದು ಬರೆದು ಕ್ಷಮೆಕೇಳಿದ್ದಾರೆ

  ಕಿರುತೆರೆಯಲ್ಲಿ ದಾಖಲೆ ನಿರ್ಮಿಸಿದ ವಿಷ್ಣುವರ್ಧನ್ ಅಳಿಯ: ಎರಡನೇ ವಾರವೂ ನಂ.1ಕಿರುತೆರೆಯಲ್ಲಿ ದಾಖಲೆ ನಿರ್ಮಿಸಿದ ವಿಷ್ಣುವರ್ಧನ್ ಅಳಿಯ: ಎರಡನೇ ವಾರವೂ ನಂ.1

  ರಾಜ ಸಿಂಹ ಕೊನೆಯ ಸಿನಿಮಾ

  ರಾಜ ಸಿಂಹ ಕೊನೆಯ ಸಿನಿಮಾ

  ಅನಿರುದ್ಧ ಕೊನೆಯದಾಗಿ ರಾಜಸಿಂಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ರಾಜ ಸಿಂಹ ಸಿನಿಮಾ ತೆರೆಗೆ ಬಂದಿತ್ತು. ಆ ನಂತರ ಮತ್ತೆ ತೆರೆ ಮಲೆ ಕಾಣಿಸಿಕೊಂಡಿಲ್ಲ. ಆದ್ರೀಗ ಕಿರುತೆರೆಯಲ್ಲಿ ಮಿಂಚುತ್ತಿರುವ ಅನಿರುದ್ಧ್ ಗೆ ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿದೆ. ಕಿರುತೆರೆ ಪ್ರೇಕ್ಷಕರ ಮನೆಮಾತಾಗಿರುವ ಅನಿರುದ್ಧ್ ಗೆ ಅಪಾರ ಅಭಿಮಾನಿಗಳ ಪ್ರೀತಿ ಸಿಕ್ಕಿದೆ. ಈ ಖುಷಿಯಲ್ಲಿಯೆ ಅನಿರುದ್ಧ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿದ್ದಾರೆ.

  English summary
  Kannada actor Aniruddha Jatkar Apologized to fans for not reply to fans messages.
  Sunday, October 27, 2019, 10:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X