ಜೊತೆ ಜೊತೆಯಲಿ: ಕೆಲವೇ ಸಂಚಿಕೆಗಳಲ್ಲಿ ಅನಿರುದ್ಧ, ಹೊಸ ಆರ್ಯವರ್ಧನ್ ಬರೋದು ಯಾವಾಗ?

'ಜೊತೆ ಜೊತೆಯಲಿ' ಧಾರಾವಾಹಿ ತಂಡ ಮತ್ತು ನಟ ಅನಿರುದ್ಧ್ ನಡುವೆ ವೈಮನಸ್ಸು ಉಂಟಾಗಿ, ನಟ ಅನಿರುದ್ಧ್ ಈ ಸೀರಿಯಲ್ ತಂಡದಿಂದ ಹೊರ ಬಂದಿದ್ದಾಗಿದೆ. ತಂಡದಲ್ಲಿ ಆದ ಕಿರಿಕ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಅನಿರುದ್ಧ್ ವಿರುದ್ಧ ತಂಡ ರೊಚ್ಚಿಗೆದ್ದಿದೆ. ಅನಿರುದ್ಧ್ ಕೂಡ ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಚಾರ ಎಲ್ಲೆಡೆ ಸದ್ದು ಮಾಡುತ್ತಲೇ, ನಟ ಅನಿರುದ್ಧ್ ನಡೆದಿರುವುದರ ಬಗ್ಗೆ ಮಾಧ್ಯಗಳ ಸ್ಪಷ್ಟನೆ ಕೊಟ್ಟರು. ತಮ್ಮ ಮೇಲೆ ಸೀರಿಯಲ್ ನಿರ್ದೇಶಕ, ನಿರ್ಮಾಪಕ ಜಗದೀಶ್ ಅವರು ಮಾಡಿರುವ ಆರೋಪಗಳ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದರು.

ಇದೆಲ್ಲವು ಮುಗಿದು ಹೋದ ಕಥೆ. ಈಗೇನಿದ್ದರು ಧಾರಾವಾಹಿ ಮತ್ತು ನಟ ಅನಿರುದ್ಧ್ ಮುಂದಿನ ನಡೆ ಏನು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಅನಿರುದ್ಧ್ ಕೆಲವೇ ಸಂಚಿಕೆಗಳಲ್ಲಿ ಇರುವ ಕಾರಣ, ಇನ್ನು ಆರ್ಯವರ್ಧನ್ ಆಗುವವರು ಯಾರು ಎನ್ನುವ ಕುತೂಹಲ ಕೂಡ ಸೃಷ್ಟಿಯಾಗಿದೆ.

ಕೆಲವೇ ಸಂಚಿಕೆಯಲ್ಲಿ ಅನಿರುದ್ಧ್!

ಕೆಲವೇ ಸಂಚಿಕೆಯಲ್ಲಿ ಅನಿರುದ್ಧ್!

ಜೊತೆ ಜೊತೆಯಲ್ಲಿ ಧಾರವಾಹಿಯಿಂದ ನಟ ಅನಿರುದ್ಧ ಹೊರಬಂದಿರುವುದು ಖಚಿತವಾಗಿದೆ. ಇನ್ನು ಮುಂದೆ ಆರ್ಯವರ್ಧನ್ ಪಾತ್ರದಲ್ಲಿ ನಟ ಅನಿರುದ್ಧ ಇರುವುದಿಲ್ಲ. ಆದರೆ ಈ ಮೊದಲೇ ಚಿತ್ರೀಕರಣ ಮಾಡಿದಂತಹ ಕೆಲವು ಸಂಚಿಕೆಗಳಲ್ಲಿ ಮಾತ್ರ ಅನಿರುದ್ಧ ಪಾತ್ರ ಬರುತ್ತದೆ. ಹಾಗಾಗಿ ಒಂದು ವಾರದಲ್ಲಿ ನಟ ಅನಿರುದ್ಧ ಪಾತ್ರ ಅಂತ್ಯವಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಚಿತ್ರೀಕರಣಗೊಂಡಿರುವ ಸಂಚಿಕೆಗಳಲ್ಲಿ ಅನಿರುದ್ಧ ಕಾಣಿಸಿಕೊಳ್ಳುತ್ತಿದ್ದಾರೆ. ಬ್ಯಾಂಕಿಂಗ್ ಎಪಿಸೋಡ್‌ಗಳು ಮುಗಿದ ಬಳಿಕ ಅನಿರುದ್ಧ ಜಾಗಕ್ಕೆ ಹೊಸ ನಾಯಕನಟನ ಎಂಟ್ರಿ ಆಗಲಿದೆ.

ಆಸ್ತಿ ತ್ಯಾಗದ ಸಂಚಿಕೆ ಶುರು!

ಆಸ್ತಿ ತ್ಯಾಗದ ಸಂಚಿಕೆ ಶುರು!

ನಿರ್ದೇಶಕ ಮಧು ಉತ್ತಮ್ ಜಗಳಕ್ಕೆ ಕಾರಣವಾದ ಸಂಚಿಕೆಯ ಬಗ್ಗೆ ಹೇಳಿಕೊಂಡಿದ್ದರು. ಎಲ್ಲಾ ಆಸ್ತಿಯನ್ನು ತ್ಯಾಗಮಾಡಿ ಆರ್ಯವರ್ಧನ್ ಮನೆಯಿಂದ ಹೊರಡುವ ದೃಶ್ಯ ಅದಾಗಿತ್ತು ಎಂದು ಹೇಳಿದ್ದರು. ಅಂತೆಯೇ ಇದೀಗ ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ಆಸ್ತಿಯ ಬಗ್ಗೆ ಸಂಚಿಕೆ ಶುರುವಾಗಿದೆ. ಮಾನ್ಸಿ ಆಸ್ತಿಯ ವಿಚಾರವಾಗಿ ಕಿರಿಕ್ ತೆಗೆದಿದ್ದಾಳೆ. ಆರ್ಯವರ್ಧನ ಉದಾರಿಯಾದರೆ ನನ್ನ ಗಂಡ ಹರ್ಷನಿಗೆ ಬರುವ ಆಸ್ತಿಯನ್ನು ವಿಂಗಡಿಸಿ ಈಗಲೇ ಆತನಿಗೆ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಬಹುಶಃ ಇದೇ ವಿಚಾರವಾಗಿ ಮಾತನಾಡುವ ಆರ್ಯವರ್ಧನ್ ತನ್ನ ಭಾಗದ ಎಲ್ಲಾ ಆಸ್ತಿಯನ್ನು ತನ್ನ ತಮ್ಮ ಹರ್ಷನ ಪಾಲಿಗೆ ಬಿಟ್ಟುಕೊಟ್ಟು ಮನೆಯಿಂದ ಹೊರ ಹೋಗುವ ಸಂಭವವಿದೆ. ಹಾಗೊಂದು ವೇಳೆ ಆರ್ಯವರ್ಧನ್ ಮನೆಯಿಂದ ಹೊರನಡೆದರೆ ಇದೆ ಅವರು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಕಡೆಗೆ ಸಂಚಿಕೆ ಆಗಿರುತ್ತಾದೆ.

ಹೊಸ ಹೀರೋ ಎಂಟ್ರಿಯಲ್ಲಿ ಟ್ವಿಸ್ಟ್!

ಹೊಸ ಹೀರೋ ಎಂಟ್ರಿಯಲ್ಲಿ ಟ್ವಿಸ್ಟ್!

ಆರ್ಯವರ್ಧನ್ ಆಗಿ ಅನಿರುದ್ಧ ಮುಂದುವರೆಯುವುದಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಹಾಗಾಗಿ ಈ ಧಾರಾವಾಹಿಯಲ್ಲಿ ಮುಂದಿನ ಟ್ವಿಸ್ಟ್ ಹೇಗೆ ಇರಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಕೊಂಡಿದೆ. ಆರ್ಯವರ್ಧನ್ ಅವರ ಬದಲಿಗೆ ಬರುವ ಹೊಸ ಪಾತ್ರವನ್ನು ಹೇಗೆ ಪರಿಚಯಿಸಲಾಗುತ್ತದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಜೊತೆಗೆ ಇದು ತಂಡಕ್ಕೆ ಸವಾಲು ಕೂಡ. ಕಥೆಯಲ್ಲಿ ಯಾವ ರೀತಿಯ ಟ್ವಿಸ್ಟ್ ಕೊಟ್ಟು ಹೊಸ ಪಾತ್ರಧಾರಿಯನ್ನು ಪರಿಚಯ ಮಾಡ್ತಾರೆ ಎನ್ನುವ ಕುತೂಹಲ ದಟ್ಟವಾಗಿದೆ. ಆರ್ಯವರ್ಧನ್ ಪಾತ್ರ ಮುಗಿದ ಬಳಿಕ ಕೆಲವೇ ದಿನಗಳಲ್ಲಿ ಈ ವಿಚಾರ ಬಹಿರಂಗಗೊಳ್ಳಲಿದೆ.

ಅನಿರುದ್ಧ್ ಜಾಗಕ್ಕೆ ಅನೂಪ್ ಭಂಡಾರಿ!

ಅನಿರುದ್ಧ್ ಜಾಗಕ್ಕೆ ಅನೂಪ್ ಭಂಡಾರಿ!

ನಿರ್ದೇಶಕ ಅನೂಪ್ ಭಂಡಾರಿ 'ಜೊತೆ ಜೊತೆಯಲಿ' ಸೀರಿಯಲ್‌ನಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಜೊತೆ ಜೊತೆಯಲಿ ಸೀರಿಯಲ್ ತಂಡ ಅನೂಪ್ ಭಂಡಾರಿ ಅವರನ್ನು, ಆರ್ಯವರ್ಧನ್ ಪಾತ್ರ ಮಾಡುವಂತೆ ಕೇಳಿದೆ. ಅದರೆ ಸಿನಿಮಾದಲ್ಲಿ ಬ್ಯುಸಿ ಇರುವ ಕಾರಣ, ಸೀರಿಯಲ್‌ಗೆ ಹೆಚ್ಚು ಸಮಯ ಕೊಡಲು ಸಾಧ್ಯವಿಲ್ಲ ಎಂದು, ಅನೂಪ್ ಭಂಡಾರಿ ಈ ಪಾತ್ರ ಮಾಡಲು ತಿರಸ್ಕರಿಸಿದ್ದಾರೆ. ಹಾಗಾಗಿ ಆರ್ಯವರ್ಧನ್ ಯಾರು ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ.

More from Filmibeat

English summary
Aniruddha Jatkar Will Be Seen in Only Five Episode Of Jothe Jotheyali Serial, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X