For Quick Alerts
  ALLOW NOTIFICATIONS  
  For Daily Alerts

  ಕೋವಿಡ್ ಗೆದ್ದು 55 ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಅನಿರುದ್ಧ್ ಭಾವುಕ

  |

  ಕೊರೊನಾ ಭೀಕರತೆ ದೇಶದಲ್ಲಿ ಕೊಂಚ ಮಟ್ಟಿಗೆ ತಗ್ಗಿದೆ. ದೇಶದ ಬಹುತೇಕ ಜನರ ಬದುಕಲ್ಲಿ ಕೋವಿಡ್ ಬಿರುಗಾಳಿ ಎಬ್ಬಿಸಿದೆ. ಲಕ್ಷಾಂತರ ಜನ ಮಹಾಮಾರಿ ಕೊರೊನಾಗೆ ಪ್ರಾಣ ಕಳೆಕೊಂಡಿದ್ದಾರೆ. ಇನ್ನು ಸಾಕಷ್ಟು ಮಂದಿ ಸಾವಿನ ಅಂಚಿಗೆ ಹೋಗಿ ವಾಪಸ್ ಆಗಿದ್ದಾರೆ. ಕೊರೊನಾ ವಿರುದ್ಧ ಹೋರಾಡಿ ಗೆದ್ದವರಲ್ಲಿ ಹಿಂದಿ ಕಿರುತೆರೆಯ ಖ್ಯಾತ ನಟ ಅನಿರುದ್ಧ ದವೆ ಕೂಡ ಒಬ್ಬರು.

  ಬರೋಬ್ಬರಿ 55 ದಿನಗಳ ಸಾವು ಬದುಕಿನ ಹೋರಾಟದಲ್ಲಿ ಅನಿರುದ್ಧ್ ಗೆದ್ದು ಬಂದಿದ್ದಾರೆ. ಸದ್ಯ ಅನಿರುದ್ಧ್ ದವೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ತಿಂಗಳುಗಳ ಬಳಿಕ ಪುಟ್ಟ ಮಗುವನ್ನು ಮುದ್ದಾಡಿ ಸಂಭ್ರಮಿಸಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಗ್ಗೆ ನಟ ಅನಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡು ತುಂಬಾ ಭಾವುಕ ಕ್ಷಣ ಎಂದು ಬರೆದುಕೊಂಡಿದ್ದಾರೆ. ಮುಂದೆ ಓದಿ...

  ಏಪ್ರಿಲ್ 23ರಂದು ಕೊರೊನಾ ಸೋಂಕಿಗೆ ತುತ್ತಾಗಿದ್ದ ನಟ

  ಏಪ್ರಿಲ್ 23ರಂದು ಕೊರೊನಾ ಸೋಂಕಿಗೆ ತುತ್ತಾಗಿದ್ದ ನಟ

  ಏಪ್ರಿಲ್ 23ರಂದು ಅನಿರುದ್ಧ ದೇವ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಕೆಲವು ದಿನ ಮನೆಯಲ್ಲಿಯೇ ಐಸೋಲೇಷಜನ್ ಗೆ ಒಳಪಟ್ಟಿದ್ದ ಅನಿರುದ್ಧ ನಂತರ ಆಸ್ಪತ್ರೆಗೆ ದಾಖಲಾದರು. ಕೂಡಲೇ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಅನಿರುದ್ಧ ಶ್ವಾಸಕೋಶಕ್ಕೆ 85% ಹಾನಿಯಾಗಿತ್ತು. ಕೃತಕ ಉಸಿರಾಟದಲ್ಲಿದ್ದರು.

  ಪತಿಗಾಗಿ ಪ್ರಾರ್ಥಿಸಿ ಎಂದು ಕಣ್ಣೀರಿಟ್ಟಿದ್ದ ಪತ್ನಿ

  ಪತಿಗಾಗಿ ಪ್ರಾರ್ಥಿಸಿ ಎಂದು ಕಣ್ಣೀರಿಟ್ಟಿದ್ದ ಪತ್ನಿ

  ಅನಿರುದ್ಧ ಪರಿಸ್ಥಿತಿ ಚಿಂತಾಜನಕವಾಗಿ ಎಂದು ಗೊತ್ತಾಗುತ್ತಿದ್ದಂತೆ ಪತ್ನಿ ಸಾಮಾಜಿಕ ಜಾಲತಾಣದ ಮೂಲಕ ಕಣ್ಣೀರಾಗಿದ್ದರು. ಪತಿಗಾಗಿ ಪ್ರಾರ್ಥಿಸಿ ಎಂದು ಕೇಳಿಕೊಂಡಿದ್ದರು. ಎಲ್ಲರ ಆಶೀರ್ವಾದ ಹಾರೈಕೆಯಂತೆ ಅನಿರುದ್ಧ ಗುಣಮುಖರಾಗಿ ಮನೆಗೆ ವಾಪಸ್ ಆಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸ್ವತಃ ಅನಿರುದ್ಧ್ ಅವರೇ ಆಸ್ಪತ್ರೆಯಿಂದ ಆರೋಗ್ಯದ ಮಾಹಿತಿ ಹಂಚಿಕೊಂಡಿದ್ದರು.

  ಆಸ್ಪತ್ರೆಯಿಂದನೇ ಫೋಟೋ ಹಂಚಿಕೊಂಡಿದ್ದ ದವೆ

  ಆಸ್ಪತ್ರೆಯಿಂದನೇ ಫೋಟೋ ಹಂಚಿಕೊಂಡಿದ್ದ ದವೆ

  ಸತತ 22 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಮ್ಲಜನಕ ಪ್ರಮಾಣ ತೀವ್ರವಾಗಿ ಕುಸಿದಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ಹೇಳಿದ್ದರು. ಈಗಲೂ ಆಮ್ಲಜನಕ ನಳಿಕೆಯನ್ನು ತೆಗೆಯುವ ಸ್ಥಿತಿಯಲ್ಲಿಲ್ಲ ಆದರೆ ತಮ್ಮ ಆರೋಗ್ಯ ತುಸು ಸುಧಾರಿಸಿದೆ ಎಂದು ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

  ಡಿಸ್ಚಾರ್ಜ್ ಬಳಿಕ ಭಾವುಕ ಕ್ಷಣ ಎಂದ ಅನಿರುದ್ಧ್

  ಡಿಸ್ಚಾರ್ಜ್ ಬಳಿಕ ಭಾವುಕ ಕ್ಷಣ ಎಂದ ಅನಿರುದ್ಧ್

  ಸದ್ಯ ಮನೆಗೆ ಮರಳಿರುವ ಅನಿರುದ್ಧ್ ತನಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಅನಿರುದ್ಧ ಭಾವುಕ ಕ್ಷಣ ಎಂದು ಹೇಳಿದ್ದಾರೆ. "55 ದಿನಗಳ ನಂತರ ಇಂತಹ ಭಾವನಾತ್ಮಕ ಕ್ಷಣ. ನಾನು ಚಿರಾಯು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

  Sudha Murty ಪ್ರಕಾರ ಸಿನಿಮಾವನ್ನ ಥಿಯೇಟರ್ನಲ್ಲೇ ನೋಡ್ಬೇಕು ಯಾಕೆ ಗೊತ್ತಾ? | Oneindia Kannada
  ಎಲ್ಲರಿಗೂ ಧನ್ಯವಾದ ತಿಳಿಸಿದ ಟಿವಿ ಸ್ಟಾರ್

  ಎಲ್ಲರಿಗೂ ಧನ್ಯವಾದ ತಿಳಿಸಿದ ಟಿವಿ ಸ್ಟಾರ್

  "ಧನ್ಯವಾದಗಳು, ಇದು ತುಂಬಾ ಚಿಕ್ಕ ಪದ. ನಿಮ್ಮ ಪ್ರೀತಿ, ಮೆಚ್ಚುಗೆ, ಪ್ರಾರ್ಥನೆ ನನ್ನನ್ನು ಗುಣಮುಖವಾಗುವಂತೆ ಮಾಡಿದೆ" ಎಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದರು. ಆಸ್ಪತ್ರೆಯಿಂದನೇ ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.

  English summary
  Anirudh Dave discharged from hospital after 55 days due to Covid-19; gets emotional.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X