For Quick Alerts
  ALLOW NOTIFICATIONS  
  For Daily Alerts

  ಕನ್ನಡ ಕಿರುತೆರೆ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ 'ಜೊತೆ ಜೊತೆಯಲಿ' ಧಾರಾವಾಹಿ

  |

  ನಟ ಅನಿರುದ್ಧ ನಟನೆಯ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ದಾಖಲೆ ನಿರ್ಮಿಸಿದೆ. ಕನ್ನಡ ಕಿರುತೆರೆ ವೀಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಕೂಡ ಒಂದು. ಸಾಕಷ್ಟು ಜನಪ್ರಿಯತೆ ಪಡೆದು ಕೊಂಡಿರುವ ಈ ಧಾರಾವಾಹಿಯ ಎಲ್ಲಾ ಪಾತ್ರಗಳು ಗಮನ ಸೆಳೆದಿದೆ.

  ಕನ್ನಡ ಕಿರುತೆರೆ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ | Filmibeat Kannada

  ಧಾರಾವಾಹಿ ಪ್ರಾರಂಭವಾದಗಿನಿಂದ ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಜೊತೆ ಜೊತೆಯಲಿ ಟಿ ಆರ್ ಪಿಯಲ್ಲೂ ದಾಖಲೆ ನಿರ್ಮಿಸಿತ್ತು. ಇದೀಗ ಟೈಟಲ್ ಟ್ರ್ಯಾಕ್ ವಿಚಾರದಲ್ಲೂ ದಾಖಲೆ ನಿರ್ಮಿಸಿದೆ. ಧಾರಾವಾಹಿಯಷ್ಟೆ ಟೈಟಲ್ ಹಾಡು ಕೂಡ ವೀಕ್ಷಕರ ಮನ ಗೆದ್ದಿದ್ದು ಎಲ್ಲರ ಬಾಯಲ್ಲೂ ಇದೇ ಹಾಡು.

  ಅನಾರೋಗ್ಯದ ಬಗ್ಗೆ ಸುಳ್ಳು ಸುದ್ದಿ; ಸ್ಪಷ್ಟನೆ ನೀಡಿದ ನಟ ಅನಿರುದ್ಧ್ಅನಾರೋಗ್ಯದ ಬಗ್ಗೆ ಸುಳ್ಳು ಸುದ್ದಿ; ಸ್ಪಷ್ಟನೆ ನೀಡಿದ ನಟ ಅನಿರುದ್ಧ್

  ಇದೀಗ ಈ ಹಾಡು 25 ಮಿಲಿಯನ್ ವೀಕ್ಷಣೆ ಕಂಡು ರೆಕಾರ್ಡ್ ಕ್ರಿಯೇಟ್ ಮಾಡಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲೇ ಧಾರಾವಾಹಿ ಹಾಡೊಂದು ಅತೀ ಹೆಚ್ಚು ವೀಕ್ಷಣೆ ಪಡೆದಿರುವುದು ಇದೇ ಮೊದಲು. 1 ವರ್ಷದ ಹಿಂದೆ ಟೈಟಲ್ ಟ್ರ್ಯಾಕ್ ಜೀ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿತ್ತು.

  ಈ ಸಂತಸವನ್ನು ನಟ ಅನಿರುದ್ಧ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ.

  ಅಂದಹಾಗೆ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಅನ್ನು ಹರ್ಷ ಪ್ರಿಯ ಭದ್ರಾವತಿ ಬರೆದಿದ್ದಾರೆ. ಸುನಾದ್ ಗೌತಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿನಾದ್ ನಾಯಕ್, ನಿಹಾಲ್ ಮತ್ತು ರಜತ್ ಹೆಗ್ಡೆ ಧ್ವನಿ ನೀಡಿದ್ದಾರೆ.

  ಈ ಧಾರಾವಾಹಿ 45 ವರ್ಷದ ಮೇಲಿನ ಉದ್ಯಮಿ ಆರ್ಯ ವರ್ಧನ್ ಮತ್ತು 20 ವರ್ಷದ ಮಿಡ್ಲ್ ಕ್ಲಾಸ್ ಯುವತಿ ಅನು ಸಿರಿಮನೆ ನಡುವಿನ ಪ್ರೀತಿಯ ಕಥೆಯಾಗಿದೆ. ನಟ ಅನಿರುದ್ಧ ಆರ್ಯವರ್ಧನ್ ಆಗಿ ವೀಕ್ಷಕರ ಹೃದಯ ಗೆದ್ದಿದ್ದಾರೆ. ಮೊದಲ ಬಾರಿಗೆ ಕಿರುತೆರೆಯಲ್ಲಿ ಮಿಂಚಿರುವ ಅನಿರುದ್ದ್‌ಗೆ ಈ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದುಕೊಟ್ಟಿದೆ.

  English summary
  Actor Anirudh Jatkar starrer Jothe Jotheyali title track gets 25 million views.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X