For Quick Alerts
  ALLOW NOTIFICATIONS  
  For Daily Alerts

  ಕೊರೊನಾದ ಕರಾಳ ಮುಖ ಬಿಚ್ಚಿಟ್ಟ ನಟ ಅನಿರುದ್ಧ

  |

  ಕೊರೊನಾದ ಎರಡನೇ ಅಲೆ ಮೊದಲನೇಯದ್ದಕ್ಕಿಂತಲೂ ಭೀಕರವಾಗಿ ಎರಗಿದಂತಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳು ಸಿಗುತ್ತಿಲ್ಲ, ಆಮ್ಲಜನಕ ಕೊರತೆ ಇನ್ನಿಲ್ಲದಂತೆ ಕಾಡುತ್ತಿದೆ. ಹೆಣಗಳ ಅಂತ್ಯಸಂಸ್ಕಾರಕ್ಕೆ ಹೊಸ ಸ್ಮಶಾನಗಳನ್ನೇ ತೆರೆಯಲಾಗುತ್ತಿದೆ.

  ಕೊರೊನಾ ಚಿಕಿತ್ಸೆಯ ದುಸ್ಥಿತಿಯನ್ನು ವಿವರಿಸಿದ ನಟ ಅನಿರುದ್ಧ್ | Filmibeat Kannada

  ಎರಡನೇ ಅಲೆಯಲ್ಲಿ ಹಲವು ಸೆಲೆಬ್ರಿಟಿಗಳು ಕೋವಿಡ್‌ಗೆ ತುತ್ತಾಗಿದ್ದಾರೆ ಜೊತೆಗೆ ಕೊರೊನಾದ ತಮ್ಮ ಕರಾಳ ಮುಖವನ್ನು ಹತ್ತಿರದಿಂದ ನೋಡಿದ್ದಾರೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

  ಗಾಯಕಿ ಕಸ್ತೂರಿ ಶಂಖರ್, ನಟಿ ಶಾಲಿನಿ, ಅನು ಪ್ರಭಾಕರ್, ನಟ ಪವನ್ ಆದ ಬಳಿಕ ಈಗ ನಟ ಅನಿರುದ್ಧ ಅವರು ತಮಗಾದ ಕೊರೊನಾದ ಕೆಟ್ಟ ಅನುಭವದ ಬಗ್ಗೆ ಮಾತಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ವಿಡಿಯೋ ಪ್ರಕಟಿಸಿರುವ ಅನಿರುದ್ಧ ಕೊರೊನಾದ ಕರಾಳ ಮುಖ ತೆರೆದಿಟ್ಟಿದ್ದಾರೆ.

  ನಟ ಅನಿರುದ್ಧ ಅವರ ಗೆಳೆಯರೊಬ್ಬರು ಕೊರೊನಾಕ್ಕೆ ತುತ್ತಾಗಿದ್ದರಂತೆ. ಅವರಿಗೆ ಆಸ್ಪತ್ರೆ ಬೆಡ್ ಹಾಗೂ ಆಮ್ಲಜನಕ ಒದಗಿಸಲು ಬಹಳ ಪ್ರಯಾಸ ಪಟ್ಟಿದ್ದಾಗಿ ಅನಿರುದ್ಧ ವಿಡಿಯೋದಲ್ಲಿ ಹೇಳಿದ್ದಾರೆ. ಸಾಕಷ್ಟು ಪ್ರಭಾವ ಬಳಸಿದ ಬಳಿಕ ಬೆಡ್‌ ಹಾಗೂ ಆಮ್ಲಜನಕ ಸಿಕ್ಕಿತಾದರೂ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ ಎಂದಿದ್ದಾರೆ ಅನಿರುದ್ಧ.

  ಸ್ಮಶಾನದ ಮುಂದೆ ಆಂಬುಲೆನ್ಸ್‌ ವಾಹಗಳು ಸಾಲುಗಟ್ಟಿ ನಿಂತಿವೆ. ಸುಮಾರು 40ಕ್ಕೂ ಹೆಚ್ಚು ಆಂಬುಲೆನ್ಸ್‌ಗಳು ಹೆಣಗಳನ್ನು ಪ್ರತಿದಿನ ಕರೆತರುತ್ತಿವೆ. ಸರದಿ ಸಾಲಿನಲ್ಲಿ ನಿಂತು ಅಂತ್ಯಸಂಸ್ಕಾರ ಮಾಡಲಾಯಿತು. ಅದನ್ನೆಲ್ಲಾ ನೋಡಿ ಆತಂಕವಾಯಿತು ಎಂದಿದ್ದಾರೆ ಅನಿರುದ್ಧ.

  ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ, ಬೆಡ್ ಸಿಕ್ಕರೆ ಐಸಿಯು ಇರುವುದಿಲ್ಲ. ಆಮ್ಲಜನಕ ಇರುವುದಿಲ್ಲ. ರೆಮ್‌ಡಿಸಿವರ್ ಸಿಗುತ್ತಿಲ್ಲ ಎಲ್ಲದಕ್ಕೂ ಬಹಳ ಕಷ್ಟವಿದೆ. ಆಹಾಕಾರವೆದ್ದಿದೆ, ದಯವಿಟ್ಟು ಪರಿಸ್ಥಿತಿಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿದ್ದಾರೆ ಅನಿರುದ್ಧ.

  English summary
  Actor Anirudh request people to take COVID 19 situation seriously. He said COVID situation becoming worst day by day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X