»   » ನಟ ಅನೀಶ್ ಗೆ ಇದೆ ದೊಡ್ಡ ಆಸೆ: ನಟಿ ರಮ್ಯಾ ತಥಾಸ್ತು ಎನ್ನಬೇಕಷ್ಟೆ.!

ನಟ ಅನೀಶ್ ಗೆ ಇದೆ ದೊಡ್ಡ ಆಸೆ: ನಟಿ ರಮ್ಯಾ ತಥಾಸ್ತು ಎನ್ನಬೇಕಷ್ಟೆ.!

Posted By:
Subscribe to Filmibeat Kannada

ಒಂದ್ಕಾಲದಲ್ಲಿ ಸ್ಯಾಂಡಲ್ ವುಡ್ ನ ನಂಬರ್ ಒನ್ ನಟಿ ಆಗಿ ಮೆರೆದ ನಟಿ ರಮ್ಯಾ ಈಗ ರಾಜಕಾರಣದಲ್ಲಿಯೇ ಬಿಜಿ. ರಾಜಕೀಯ ರಂಗದಲ್ಲಿ ಸಕ್ರಿಯರಾಗಿರುವ ರಮ್ಯಾ ಇನ್ಮುಂದೆ ಸಿನಿಮಾ ಮಾಡಲ್ಲ ಅಂತ ಈಗಾಗಲೇ ಹೇಳಿ ಅಗಿದೆ.

ಹೀಗಿದ್ದರೂ, ನಟಿ ರಮ್ಯಾ ಜೊತೆ ನಟಿಸಬೇಕೆಂಬ ಆಸೆ ನಟ ಅನೀಶ್ ತೇಜೇಶ್ವರ್ ರವರಿಗಿದೆ. ಹಾಗಂತ ಸ್ವತಃ ನಟ ಅನೀಶ್ ಹೇಳಿಕೊಂಡಿದ್ದಾರೆ. ಅದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ.

Anish Tejeshwar expresses his desire to act with Ramya aka Divya Spandana

'ನಮ್ ಏರಿಯಾಲ್ ಒಂದಿನ', 'ಪೊಲೀಸ್ ಕ್ವಾಟರ್ಸ್', 'ಅಕಿರ' ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಅನೀಶ್ ತೇಜೇಶ್ವರ್ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಪ್ರಶ್ನೋತ್ತರ ಸುತ್ತಿನಲ್ಲಿ, ''ಯಾವ ನಟಿಯ ಜೊತೆ ಆಕ್ಟ್ ಮಾಡಲೇಬೇಕು ಎಂಬ ಕಾತರ ಇದೆ'' ಎಂದು ಅನೀಶ್ ಗೆ ನಿರೂಪಕ ಅಕುಲ್ ಬಾಲಾಜಿ ಕೇಳಿದಾಗ, ರಮ್ಯಾ ಹೆಸರನ್ನ ಅನೀಶ್ ತೇಜೇಶ್ವರ್ ಹೇಳಿದರು.

ರಾಜಕಾರಣದಲ್ಲಿ ಬಿಜಿಯಾಗಿರುವ ರಮ್ಯಾ ಮುಂದೆ ಸಿನಿಮಾ ಮಾಡುವ ಮನಸ್ಸು ಮಾಡಿದರೆ ಅನೀಶ್ ಆಸೆ ಈಡೇರಬಹುದೇನೋ..!?

English summary
Kannada Actor Anish Tejeshwar expresses his desire to share screen space with Kannada Actress, EX MP, Congress Politician Ramya aka Divya Spandana

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada