Actress Sushmitha Bhat: ಕಾವ್ಯಾಂಜಲಿಯ ಅಂಜಲಿ ಪಾತ್ರಧಾರಿ ನೆನಪಿದ್ದಾರಾ? ಈಗೇನು ಮಾಡ್ತಿದ್ದಾರೆ?
ಸುಶ್ಮಿತಾ ಭಟ್.. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ಅಂಜಲಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ಸುಶ್ಮಿತಾ ಭಟ್ ಮೊದಲ ಧಾರಾವಾಹಿಯಲ್ಲಿಯೇ ಗುರುತಿಸಿಕೊಂಡ ಬೆಡಗಿ. ಕಾವ್ಯಾ ಮತ್ತು ಅಂಜಲಿ ಎಂಬ ಇಬ್ಬರು ಹುಡುಗಿಯರ ನಡುವಿನ ಕಥೆಯನ್ನು ಒಳಗೊಂಡಿದ್ದ ಈ ಧಾರಾವಾಹಿಯಲ್ಲಿ ಸುಶ್ಮಿತ ಭಟ್ ಅಂಜಲಿಯಾಗಿ ಅಭಿನಯಿಸಿದ್ದರು.
ಒಂದಷ್ಟು ಸಂಚಿಕೆಗಳ ನಂತರ ಕಾರಣಾಂತರಗಳಿಂದ ಸುಶ್ಮಿತಾ ಅವರು ಆ ಪಾತ್ರಕ್ಕೆ ವಿದಾಯವನ್ನು ಕೂಡಾ ಹೇಳಿದ್ದರು. ಆದರೆ, ಇದೀಗ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಆನಂದರಾಗ' ಧಾರಾವಾಹಿಯಲ್ಲಿ ಕಳೆದ ವಾರ ನಾಯಕ ಚೆಲುವನ ಮದುವೆಯ ಸಂಚಿಕೆ ಪ್ರಸಾರವಾಗಿದ್ದು, ಆ ಮದುವೆಗೆ ಅಂಜಲಿಯಾಗಿ ಈಕೆ ಕಾಣಿಸಿಕೊಂಡಿದ್ದರು.

ಇಂಜಿನಿಯರಿಂಗ್ ಪದವೀಧರೆ
ಅಸಲಿಗೆ ಇಂಜಿನಿಯರಿಂಗ್ ಪದವಿಪ ಪಡೆದಿರುವ ಸುಶ್ಮಿತಾ ಭಟ್ ಅವರು ವಿದ್ಯಾಭ್ಯಾಸದ ಬಳಿಕ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅಚಾನಕ್ ಆಗಿ ದೊರೆತ ಅವಕಾಶದಿಂದ ಕಿರುತೆರೆಗೆ ಕಾಲಿಟ್ಟ ಈಕೆ ಅಲ್ಲೂ ಕೂಡಾ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.
ನೆನಪಲ್ಲಿ ಉಳಿಯುವ ಪಾತ್ರ
'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ಸುಶ್ಮಿತಾ ಅವರು ಅರ್ಧದಿಂದ ಧಾರಾವಾಹಿಯಿಂದ ಹೊರಬಂದಿದ್ದರೂ ಇಂದಿಗೆ ಕಾವ್ಯಾಂಜಲಿ ಹೆಸರು ಕೇಳಿದಾಗ ನೆನಪಾಗುವುದು ಸುಶ್ಮಿತಾ ಅವರ ಮುಖ. ಪಾಸಿಟಿವ್ ಹುಡುಗಿಯಾಗಿದ್ದ ಅಂಜಲಿ ತನ್ನ ಸುತ್ತಮುತ್ತಲಿನವರೂ ಕೂಡಾ ಅದೇ ರೀತಿ ಇರಬೇಕೆಂದು ಬಯಸುತ್ತಿದ್ದಳು.
ಗೆಳೆಯ ಗೆಳೆಯತಿಯರ ಜೊತೆಗೆ ಸಂಬಂಧಕ್ಕೆ ಬೆಲೆ ಕೊಡುತ್ತಿದ್ದ ಆಕೆ ಎಲ್ಲರ ಭಾವನೆಗಳಿಗೂ ಗೌರವ ನೀಡುತ್ತಿದ್ದಳು. ಒಟ್ಟಿನಲ್ಲಿ ಶಾಂತ ಸ್ವಭಾವದ ಅಂಜಲಿ ತನ್ನ ಸುತ್ತ ಮುತ್ತಲು ಇರುವವರು ಸಂತೋಷ ನೆಲೆಸಬೇಕು ಎಂದು ಬಯಸುತ್ತಿದ್ದ ಹುಡುಗಿ. ಹೀಗಾಗಿ ಧಾರಾವಾಹಿ ಮುಗಿದು ವರ್ಷಗಳಾಗುತ್ತಾ ಬಂದರೂ ಇನ್ನು ಕೂಡಾ ಅಂಜಲಿ ಪಾತ್ರ ವೀಕ್ಷಕರ ಮನದಲ್ಲಿ ನೆಲೆಯೂರಿ ಬಿಟ್ಟಿದೆ.

ಆರಂಭದಲ್ಲಿ ಕಷ್ಟ ಎಂದೆನಿಸಿತ್ತು
'ಕಾವ್ಯಾಂಜಲಿ' ಧಾರಾವಾಹಿಯ ಆರಂಭದ ದಿನ ಶೂಟಿಂಗ್‌ಗೆ ಬಂದಾಗ ಸುಶ್ಮಿತಾ ಅವರಿಗೆ ಸಹಜವಾಗಿ ಕೊಂಚ ಭಯವಾಗಿತ್ತಂತೆ. ಅಂಜಲಿಯಾಗಿ ಪ್ರೇಕ್ಷಕರನ್ನು ರಂಜಿಸಲು ಸಾಧ್ಯವಾ ಎಂಬ ಅಳುಕು ಕೂಡಾ ಕಾಡಿತ್ತಂತೆ. ಆದರೆ ಮುಂದೆ ನಿರ್ದೇಶಕ, ಸಹಾಯಕ ನಿರ್ದೇಶಕ ಹಾಗೂ ಸಹಕಲಾವಿದರ ಬಳಿಯಿಂದ ನಟನೆಯ ಆಳ ಅಗಲ, ರೀತಿ ನೀತಿಗಳನ್ನು ಹಂತಹಂತವಾಗಿ ಕಲಿತ ಈಕೆ ಅಂಜಲಿ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯೂ ಆದರು.
ನಟನೆಯಿಂದ ದೂರವಿದ್ದಾರಾ?
'ಕಾವ್ಯಾಂಜಲಿ' ಧಾರಾವಾಹಿಯ ನಂತರ ಬೇರೆ ಯಾವುದೇ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರದ ಈಕೆ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟಿವ್. ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡುವ ಈಕೆ ರೀಲ್ಸ್ ಗಳನ್ನು ಮಾಡಿ ಅಪ್ ಲೋಡ್ ಮಾಡುವುದನ್ನು ಮರೆಯುವುದಿಲ್ಲ. ಸಾವಿರಗಟ್ಟಲೇ ವೀವ್ಸ್ ಪಡೆಯುತ್ತಿರುವ ಇವರ ರೀಲ್ಸ್ ಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇಂತಿಪ್ಪ ಈಕೆ ಮತ್ತೆ ನಟನೆಗೆ ಬಂದರೆ ವೀಕ್ಷಕರು ಮೆಚ್ಚಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications











