ಪತಿಯ ಏಳನೆ ವರ್ಷದ ತಿಥಿ ಕಾರ್ಯದಲ್ಲಿ ಸಂಜನಾ

ಚಿರಂತನ್ ಕ್ರಿಮಿನಲ್ ಬುದ್ದಿ ಮೀರಾಗೆ ಗೊತ್ತಾಗಿದೆ. ಉಜ್ವಲ ಶೇಖರ್ ಬಗ್ಗೆ ಮೀರಾ ವಿಚಾರಿಸಿದ್ದಾರೆ. ಆದ್ರೆ ಚಿರಂತನ್ ಸತ್ಯವನ್ನು ಮುಟ್ಟಿದ್ದಾರೆ. ಈ ಉಜ್ವಲ ಶೇಖರ್ ಯಾರು ಎನ್ನುವುದನ್ನು ಇನ್ನು ಬಹಿರಂಗ ಪಡಿಸಿಲ್ಲ. ಅಲ್ಲದೆ ಚಿರಂತನ್ ಮತ್ತು ಉಜ್ವಲ ಶೇಖರ್ ನಡುವೆ ಏನು ನಡೆದಿತ್ತು ಎನ್ನುವುದು ಸಹ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

ಮತ್ತೊಂದೆಡೆ ನಿರಂಜನ್ ಕಂಪೆನಿಯ ಲಾಭ ಹೆಚ್ಚಾಗುತ್ತಿದೆ. ಬಂದ ಲಾಭದಿಂದ ಮನೆಯವರಿಗೆ ಗಿಫ್ಟ್ ತಂದು ಕೊಟ್ಟಿದ್ದಾರೆ. ಇನ್ಮುಂದೆಯಾದರು ಕಷ್ಟದ ದಿನಗಳು ದೂರವಾಯಿತು ಎಂದು ನಿರಂಜನ್ ತಾಯಿ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಜಾನಕಿಗೆ ಸೀರೆ ಮತ್ತು ಮಲ್ಲಿಗೆ ಹೂ ಕೊಟ್ಟು ಅದೃಷ್ಟ ಲಕ್ಷ್ಮಿ ಎಂದು ಹಾಡಿ ಹೊಗಳಿದ್ದಾರೆ.

ಸಿ ಎಸ್ ಪಿ ಹರಿಕುಮಾರ್ ಅವರನ್ನು ಸರಿಯಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಮಲ ಬಳಿ ಸಾಲ ತೆಗೆದುಕೊಂಡು ಸಿ ಎಸ್ ಪಿಗೆ ವಾಪಾಸ್ ಮಾಡಿದ್ದು ಸಿ ಎಸ್ ಪಿಗೆ ಗೊತ್ತಾಗಿದೆ. ಇತ್ತ ಹಣಕ್ಕಾಗಿ ಸಂಜನಾ ಮತ್ತು ನಿರಂಜನ್ ಇಬ್ಬರು ಜಗಳವಾಡುತ್ತಿದ್ದಾರೆ. ಸಂಜನಾ ಗಂಡನ ಏಳನೆ ವರ್ಷದ ತಿಥಿಯ ಬಗ್ಗೆ ಜಾನಕಿ ಬಳಿ ಹೇಳಿಕೊಂಡಿದ್ದಾರೆ.

ಸಂಜನಾ ಬಳಿ ಹಣ ಕೇಳಿದ ನಿರಂಜನ್

ಸಂಜನಾ ಬಳಿ ಹಣ ಕೇಳಿದ ನಿರಂಜನ್

ನಿರಂಜನ್ ಹಣವಿಲ್ಲ ಎಂದು ಸಂಜನಾ ಬಳಿ ಕೇಳಿದಾಗ ಸಂಜನಾ ನಿರಂಜನ್ ಮೇಲೆ ರೇಗಾಡಿದ್ದಾರೆ. ಹಣವೆಲ್ಲ ಏನು ಮಾಡುತ್ತೀಯಾ ಎಂದು ನಿರಂಜನ್ ಕೇಳಿದ್ದಕ್ಕೆ ಸಂಜನಾ ನಿರಂಜನ್ ಮೇಲೆ ಮುನಿಸಿಕೊಂಡಿದ್ದಾರೆ. ಅಲ್ಲದೆ ಬರುವ ಸಂಬಳದಲ್ಲಿ ಮಗಳ ಶಾಲೆ ಫೀಸ್ ಕಟ್ಟಬೇಕು ಎಂದು ಹೇಳಿ ತನ್ನ ಕಷ್ಟವನ್ನು ತೋಡಿಕೊಂಡಿದ್ದಾರೆ.

ರಶ್ಮಿ ಗೆ ಫೋನ್ ಮಾಡಿದ ರಾಜು ಚೌಧರಿ

ರಶ್ಮಿ ಗೆ ಫೋನ್ ಮಾಡಿದ ರಾಜು ಚೌಧರಿ

ರಾಜು ಚೌಧರಿ ಅವರು ರಶ್ಮಿ ಅವರಿಗೆ ಫೋನ್ ಮಾಡಿದ್ದಾರೆ. ಮಗ ಚಿರಂತನ್ ಅವರ ನಿಶ್ಚಿತಾರ್ಥ ಆಗಿ ಒಂದು ವಾರ ಆಗಿದೆ. ಹೇಗೆ ಆಯ್ತು ನಿಶ್ಚಿತಾರ್ಥ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಅಲ್ಲದೆ ಮಗನನ್ನು ಮನೆಯಿಂದ ಎಳೆದುಕೊಂಡು ಹೋಗಿದ್ದೀರಿ ಅಲ್ವಾ ಎಂದು ರಶ್ಮಿ ಬಳಿ ಆತಂಕ ಹೇಳಿಕೊಂಡಿದ್ದಾರೆ. ಮನೆಯವರನ್ನ ಕರೆಯದೆ ನಿಶ್ಚಿತಾರ್ಥವನ್ನು ಮುಗಿಸಿದ್ದೀರಿ ಅಲ್ವಾ. ತಂದೆ ಮಗನನ್ನು ಶಾಶ್ವತವಾಗಿ ದೂರ ಮಾಡಿದ್ದೀರಾ ಎಂದು ರಶ್ಮಿ ಬಳಿ ಹೇಳಿಕೊಂಡಿದ್ದಾರೆ.

ರಾಕೆಟ್ ಬೇಕೆಂದು ಹಠ ಹಿಡಿದ ಇಂಚರಾ

ರಾಕೆಟ್ ಬೇಕೆಂದು ಹಠ ಹಿಡಿದ ಇಂಚರಾ

ಹಣ ಇಲ್ಲ ಎಂದು ಹೇಳುತ್ತ ಎರಡು ಸಾವಿರ ಕೊಟ್ಟು ಪುಸ್ತಕಗಳನ್ನು ಕೊಂಡುಕೊಳ್ಳುತ್ತೀಯಾ. ಆದ್ರೆ ನಾನು ಕೇಳಿದ್ರೆ ಏನು ಕೊಡಿಸುವುದಿಲ್ಲ ಎಂದು ಇಂಚರಾ ಅಮ್ಮನ ಬಳಿ ಹಠ ಹಿಡಿದಿದ್ದಾಳೆ. ಕೊಡಿಸಿಲ್ಲ ಎಂದರೆ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಅಲ್ಲದೆ ಯಾರ್ಯಾರಿಗೊ ಏನೇನೋ ಕೊಡುತ್ತೀಯಾ ಆದ್ರೆ ನನಗೆ ಮಾತ್ರ ಏನು ಕೊಡಿಸುವುದಿಲ್ಲ ಎಂದು ರಗಳೆ ಶಿರುಮಾಡಿಕೊಂಡಿದ್ದಾಳೆ ಇಂಚರ. ಮಾತಿನಿಂದ ಸಿಟ್ಟಿಗೆದ್ದ ಸಂಜನಾ ನಾಲ್ಕು ಬಾರಿಸಿದ್ದಾಳೆ.

ಗಂಡನ ತಿಥಿಯ ಪ್ರಯುಕ್ತ ಪುಸ್ತಕ ವಿತರಣೆ

ಗಂಡನ ತಿಥಿಯ ಪ್ರಯುಕ್ತ ಪುಸ್ತಕ ವಿತರಣೆ

ಗಂಡನ ತಿಥಿಯ ಪ್ರಯುಕ್ತ ಸಂಜನಾ ಪುಸ್ತಗಳನ್ನು ಆನಾಥಾಶ್ರಮಕ್ಕೆ ಕೊಡಲು ತಂದಿದ್ದಾರೆ. ಆದ್ರೆ ಇಂಚರಾ ಎಲ್ಲಾ ಪುಸ್ತಕಗಳನ್ನು ಕೆಳಗೆ ಬಿಸಾಡಿದ್ದಾಳೆ. ಇದರಿಂದ ಸಂಜನಾ ಇಂಚರಾ ಮೇಲೆ ರೇಗಾಡಿದ್ದಾರೆ. ಸಂಜನಾ ವರ್ತನೆ ನೋಡಿ ದೇವಕಿ ಕೂಡ ಬುದ್ಧಿವಾದ ಹೇಳಿದ್ದಾರೆ. ಗಂಡನ ತಿಥಿಗಾಗಿ ಪುಸ್ತಕ ತರಿಸಿದ್ದು, ಶೋಕಿಗೆ ಅಲ್ಲ ಎಂದು ಹೇಳಿ ತಾಯಿ ಬಳಿ ನೋವನ್ನು ತೋಡಿಕೊಂಡಿದ್ದಾರೆ ಸಂಜನಾ.

ಜಾನಕಿ ಮೇಲೆ ರೇಗಿದ ಸಂಜನಾ

ಜಾನಕಿ ಮೇಲೆ ರೇಗಿದ ಸಂಜನಾ

ದೇವಕಿ ಮತ್ತು ಸಂಜನಾ ಇಬ್ಬರ ನಡುವೆ ಮಾತುಕತೆ ನಡೆಯುತ್ತಿರುವಾಗ ಜಾನಕಿ ಎಂಟ್ರಿ ಕೊಟ್ಟಿದ್ದಾರೆ ಎಂದು ಜಾನಕಿ ಮೇಲೆ ರೇಗಿದ್ದಾರೆ. ಒಳಗೆ ಬರುವಾಗ ಬಾಗಿಲು ಬಡಿದು ಒಳಗೆ ಬರಬೇಕೆಂದು ಗೊತ್ತಾಗುವುದಿಲ್ಲವ ಎಂದು ಜಾಕಿ ಮೇಲೆ ರೇಗಿದ್ದಾರೆ. ಈ ವಿಚಾರವನ್ನು ದೇವಕಿ ನಿರಂಜನ್ ಬಳಿ ಹೇಳಿಕೊಂಡು ಕಣ್ಣೀರಾಕಿದ್ದಾರೆ. ಈ ವಿಚಾರವಾಗಿ ನಿರಂಜನ್ ಜಾನಕಿ ಬಳಿ ಕ್ಷಮೆ ಕೇಳಿದ್ದಾರೆ.

ಜಾನಕಿ ಬಳಿ ಕ್ಷಮೆ ಕೇಳಿದ ಸಂಜನಾ

ಜಾನಕಿ ಬಳಿ ಕ್ಷಮೆ ಕೇಳಿದ ಸಂಜನಾ

ಜಾನಕಿಗೆ ಕಾಫಿ ತಂದು ಕೊಡುವ ನೆಪದಲ್ಲಿ ಜಾನಕಿ ಬಳಿ ಕ್ಷಮೆ ಕೇಳಿದ್ದಾರೆ. ಅಲ್ಲದೆ ತುಂಬ ರೇಗಿಬಿಟ್ಟೆ ಎಂದು ಜಾನಕಿ ಬಳಿ ಹೇಳಿಕೊಂಡು ನೊಂದುಕೊಳ್ಳುತ್ತಿದ್ದಾರೆ ಸಂಜನಾ. ಮನಸ್ಸಿನಲ್ಲಿ ಭಯ ಆತಂಕ ಎಲ್ಲಾ ಇದೆ ಎಂದು ಜಾನಕಿ ಬಳಿ ನೋವು ತೋಡಿಕೊಳ್ಳುತ್ತಿದ್ದಾರೆ ಸಂಜನಾ. ಸಂಜನಾ ಗಂಡನ ನಿಧನದ ಬಗ್ಗೆ ಜಾನಕಿ ವಿಚಾರಿಸುತ್ತಿದ್ದಾರೆ. ಹೇಗೆ ಸತ್ತೋದ್ರು ಎಂದು ಸಂಜನಾ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದಾರೆ ಜಾನಕಿ. ಹಿಮಪಾತದಿಂದ ಗಂಡ ತೀರಿಹೋದರು ಎನ್ನುವ ವಿಚಾರವನ್ನು ಜಾನಕಿ ಹೇಳಿಕೊಂಡಿದ್ದಾರೆ ಸಂಜನಾ.

More from Filmibeat

English summary
Sanjana is dejected as her husband's death anniversary is approaching. While Sanjana and Devaki are engaged in a heated argument.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X