'ಜಾನಕಿ ಸಂಸಾರ' ಸಂಸಾರದ ಬಳಿಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡ ಈ ನಟಿ ಯಾರು ಗೊತ್ತೇ?

By ಅನಿತಾ ಬನಾರಿ

ಹದಿಮೂರು ವರ್ಷಗಳ ಹಿಂದೆ 'ಕೃಷ್ಣರುಕ್ಮಿಣಿ' ಧಾರಾವಾಹಿಯಲ್ಲಿ ರುಕ್ಮಿಣಿಯಾಗಿದ್ದ ಅಂಜನಾ ಶ್ರೀನಿವಾಸ್ ಈಗ ಮತ್ತೆ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಅಂಜನಾ ಶ್ರೀನಿವಾಸ್ ಇವರು 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ಎಲ್ಲರ ಮನ ಗೆದ್ದಿದ್ದರು. ತದ ನಂತರ ತೆಲುಗು ಧಾರಾವಾಹಿಗಳಲ್ಲಿ ಈಕೆ ಅಭಿನಯಿಸುತ್ತಿದ್ದರು. ಆದರೆ, ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ 'ಜಾನಕಿ ಸಂಸಾರ' ಧಾರಾವಾಹಿಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.

ಅಂಜನಾ ಶ್ರೀನಿವಾಸ್ ರವರು ಚಿಕ್ಕಬಳ್ಳಾಪುರದ ಚಿಕ್ಕ ಹಳ್ಳಿಯಲ್ಲಿ ಜನಿಸಿದರೂ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಇವರು ಬಾಲ್ಯದಿಂದಲೂ ನೃತ್ಯ ಮಯೂರಿ. ಸ್ಕೂಲು ಕಾಲೇಜಿನ ದಿನಗಳಲ್ಲಿ ಸಾಕಷ್ಟು ಸ್ಟೇಜ್ ಪರ್ಫಾರ್ಮೆನ್ಸ್ ಕೊಡುತ್ತಿದ್ದರಂತೆ. ಕಾಲೇಜಿನ ಅಧ್ಯಾಪಕರೊಬ್ಬರೂ ನಟನೆಗೆ ಯಾಕೆ ಪ್ರಯತ್ನಿಸಬಾರದು ಎಂದು ಸಲಹಿದಾಗ ತುಂಬು ಕುಟುಂಬದಲ್ಲಿ ಬೆಳೆದ ಅಂಜನಾ ರವರಿಗೆ ಆಸಕ್ತಿ ಇದ್ದರೂ ಮನೆಯವರ ಬೆಂಬಲ ಸಿಕ್ಕಿರಲಿಲ್ಲ.

Anjana Srinivas doing major role in Janaki Samsara serial

ಹೀಗಿರುವಾಗ ತನ್ನ ತಂದೆಗೆ ತಾನು ನಟನೆಗೆ ಹೋಗಬೇಕೆಂದು ಬಯಸಿದ್ದರಂತೆ. ಅಂತೆಯೇ ಮೇಕಪ್ ಕಲಾವಿದರೊಬ್ಬರ ಸಲಹೆ ಮೇರೆಗೆ ಆಡಿಷನ್‌ಗೆಂದು ಹೋಗಿದ್ದಾಗ ನಿರ್ದೇಶಕರು ಇವರ ಕಾನ್ಫಿಡೆನ್ಸ್ ಮೆಚ್ಚಿದ್ದರಂತೆ. ಹೀಗೆ ಇವರು ಈಗ ಇದೆ ವೃತ್ತಿಯಲ್ಲಿದ್ದಾರೆ.

ಕನ್ನಡ ಸೀರಿಯಲ್ ಸೆಟ್‌ನಿಂದ ಲಾಂಗ್ ಬ್ರೇಕ್ ತೆಗೆದುಕೊಂಡಿರುವ ಬಗ್ಗೆ ಅಂಜನಾರವರನ್ನು ಪ್ರಶ್ನಿಸಿದಾಗ 'ಕೃಷ್ಣರುಕ್ಮಿಣಿ' ಧಾರಾವಾಹಿಯಲ್ಲಿ ನಂದು ಮಹತ್ತರವಾದ ಪಾತ್ರವಿತ್ತು. ಆದರೆ ನನಗೆ ಆಗಿನ್ನೂ 17 ವರ್ಷ, ಡೈರೆಕ್ಟರ್ ಹೇಳಿದ್ದ ಹಾಗೆ ನಾನು ಅಭಿನಯಿಸುತ್ತಿದ್ದೆ. ಆದರೆ, ಈ ಧಾರಾವಾಹಿಯಲ್ಲಿ ಜಾನಕಿ ಪಾತ್ರವು ತುಂಬಾ ಜವಾಬ್ದಾರಿಯುತದ್ದಾಗಿದೆ. ತನ್ನಿಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದಾಳೆ ಜಾನಕಿ. ಯಾರೇ ಕೆಟ್ಟದ್ದನ್ನು ಬಯಸಿದರೂ ತನ್ನ ಓಳ್ಳೆತನದಿಂದಲೇ ಅವರನ್ನು ಕಾಣುತ್ತಾಳೆ" ಎಂದು ಪಾತ್ರದ ಬಗ್ಗೆ ಈಕೆ ಹೇಳಿಕೊಂಡಿದ್ದರು.

"ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಧಾರಿಯನ್ನು ಬಹಳ ಒಳ್ಳೆಯವರಾಗಿ ತೋರಿಸುತ್ತಾರೆ. ಆದರೆ, ನಿಜ ಜೀವನದಲ್ಲಿ ನಾವು ಅದೇ ರೀತಿ ಬದುಕುವುದು ಅಸಹಜ. ಏಕೆಂದರೆ, ಸಂದರ್ಭಕ್ಕೆ ಸರಿಯಾಗಿ ಕೆಲವೊಮ್ಮೆ ಕೆಲವೊಬ್ಬರಿಗೆ ಕೆಟ್ಟವರಾಗಿಯೂ ಕೆಲವೊಬ್ಬರಿಗೆ ಒಳ್ಳೆಯವರಾಗಿಯೂ ಕಾಣುತ್ತಿರುತ್ತೇವೆ. ಹಾಗಾಗಿಯೇ ಬಹುಶಃ ನಾನು ಜಾನಕಿ ಸಂಸಾರ ಧಾರಾವಾಹಿಯ ಜಾನಕಿ ಪಾತ್ರದಷ್ಟು ನಿಜ ಜೀವನದಲ್ಲಿ ಒಳ್ಳೆಯವಳಲ್ಲ ಎಂದು ನನಗನಿಸುತ್ತೆ" ಎಂದು ಹೇಳಿದ್ದರು ಅಂಜನಾ ಶ್ರೀನಿವಾಸ್.

Anjana Srinivas doing major role in Janaki Samsara serial

ಅಂಜನಾ ಶ್ರೀನಿವಾಸ್‌ರವರು ನೃತ್ಯದಲ್ಲಿ ಅಲ್ಲದೇ ಬ್ಯಾಡ್ಮಿಂಟನ್‌ನಲ್ಲೂ ಬಹಳ ಆಸಕ್ತರಗಿದ್ದಾರಂತೆ. ಇವರಿಗೆ ಚಿಕ್ಕ ಕಥೆ ಪುಸ್ತಕಗಳನ್ನು ಓದುವುದರಲ್ಲಿ ಖುಷಿ ಸಿಕ್ಕುತ್ತದೆ. ಐತಿಹಾಸಿಕ ಕಥೆಗಳಲ್ಲೂ ಆಸಕ್ತಿ ಇದೆ" ಎಂದು ಅಂಜನಾ ಹಂಚಿಕೊಂಡಿದ್ದಾರೆ.

ಅಂಜನಾರವರು ಕಿರುತೆರೆಗೆ ಕಲಿಟ್ಟಾಗ ಬೋಲ್ಡ್ ಪ್ರತ್ರಗಳಲ್ಲಿ ನಟಿಸಲು ಇಚ್ಛೆಸುತ್ತಿದ್ದರಂತೆ. ಆದರೆ, ಈಗ ನಟಿಸುತ್ತಿರುವ ಜಾನಕಿ ಪಾತ್ರವು ಅದಕ್ಕೆ ತವಿರುದ್ಧವಾಗಿದೆ ಮತ್ತು ನಾನು ಈ ಪಾತ್ರವನ್ನು ಬಹಳ ಖುಷಿಯಾಗಿ ಅಭಿನಯಿಸುತ್ತಿದ್ದೇನೆ. ಯಾವುದೇ ಪಾತ್ರವಾಗಿದ್ದರು ಕಥೆಯ ಮಹತ್ವ ತುಂಬಾ ಮುಖ್ಯವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

More from Filmibeat

English summary
Anjana Srinivas doing major role in Janaki Samsara serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X