ಪತ್ನಿ ಪಕ್ಕದಲ್ಲಿದ್ದರೂ ಬೇರೆ ನಟಿಯ ಮೇಲೆ ಕಣ್ಣಾಕಿದ ನಟ, ಆಮೇಲೆ ಆಗಿದ್ದೇನು ?

ಪ್ರೀತಿ ಇದ್ದಲ್ಲಿ ಭಯ ಅಥವಾ ಅಭದ್ರತೆ ಇರುವುದಿಲ್ಲ ಎನ್ನುವ ಮಾತು ಇದೆ. ಆದರೆ.. ಈಗೀಗ ಸಂಬಂಧಗಳಲ್ಲಿ ಪೊಸೆಸಿವ್‌ನೆಸ್ ಹೆಚ್ಚಾಗುತ್ತಿದೆ. ನಂಬಿಕೆ ಮತ್ತು ಸ್ವಾತಂತ್ರ್ಯ ಎರಡು ಅರ್ಥವನ್ನು ಕಳೆದುಕೊಳ್ಳುತ್ತಿವೆ. ಅರಿವು ಆಗದಂತೆ ಅಸೂಯೆ ಬೆಳೆಯಲು ಶುರುವಾಗುತ್ತಿದೆ. ತಮ್ಮ ಸಂಗಾತಿಯ ಚಲನವಲನಗಳ ಮೇಲೆ ನಿಗಾ ಇಡುವುದು.. ಚಿಕ್ಕ ಚಿಕ್ಕ ವಿಚಾರಕ್ಕೂ ಅನುಮಾನ ಪಡುವುದು.. ನಮ್ಮ ಇಷ್ಟದ ಹುಡುಗ ಅಥವಾ ಹುಡುಗಿ..

ಯಾರದಾದರೂ ಜೊತೆ ಚೂರೇ ಚೂರು ಸಲುಗೆಯಿಂದ ಮಾತನಾಡಿದರೂ ಕೂಡ ಕೋಪ ಮಾಡಿಕೊಳ್ಳುವುದು ಅವರ ಆಪ್ತತೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಅಸೂಯೆ ಪಡುವುದು.. ಸ್ನೇಹಿತರ ಆಯ್ಕೆಯ ವಿಚಾರದಲ್ಲಿ ಕೂಡ ನಿಯಂತ್ರಣ ಹೇರಲು ಮುಂದಾಗುವುದು.. ಹೀಗೆ ಪ್ರೀತಿಸುವ ವ್ಯಕ್ತಿಯ ಸಂಪೂರ್ಣ ಸಮಯ ತನಗೆ ದಕ್ಕಲಿ ಎಂದು ಆಲೋಚನೆ ಮಾಡುವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

Ankita Lokhande Reportedly Jealous as Vicky Jain Holds Meera Chopra s Hand in Front of Media

ಕೇವಲ ಜನಸಾಮಾನ್ಯರು ಮಾತ್ರ ಅಲ್ಲ ಈ ಪೊಸೆಸಿವ್‌ನೆಸ್‌ ಬಣ್ಣದ ಲೋಕದಲ್ಲಿ ಕೂಡ ಹಲವರಲ್ಲಿದೆ. ಇದಕ್ಕೆ ಅಂಕಿತಾ ಲೋಖಂಡೆಯ ಸದ್ಯದ ವರ್ತನೆ ಇತ್ತೀಚೆನ ಉದಾಹರಣೆ. ಹೌದು, ಅಂಕಿತಾ ಲೋಖಂಡೆ ಹಿಂದಿ ಕಿರುತೆರೆಯ ಬಹುದೊಡ್ಡ ಹೆಸರು. ಇವರ ಪವಿತ್ರ ರಿಷ್ತಾ ಹೆಂಗಳೆಯರ ಪಾಲಿನ ನೆಚ್ಚಿನ ಧಾರಾವಾಹಿಗಳಲ್ಲೊಂದು.

ಇನ್ನು ಅಂಕಿತಾ, ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಪ್ರೇಯಸಿಯೂ ಹೌದು. ಹಿಂದಿಯ ಬಿಗ್ ಬಾಸ್ ಗೆ ತನ್ನ ಗಂಡ ವಿಕ್ಕಿ ಜೈನ್ ಜೊತೆ ತೆರಳಿ, ಸಾಂಸಾರಿಕ ಜೀವನವನ್ನೇ ಪಣಕ್ಕಿಟ್ಟಿದ್ದ ಅಂಕಿತಾ ಸದ್ಯ ಎಲ್ಲರೆದುರು ತಮ್ಮ ಪತಿದೈವನ ಮೇಲೆ ಕೆಂಡ ಕಾರಿದ್ದಾರೆ. ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗಿದ್ದಾರೆ. ಟ್ರೋಲಿಗರಿಗೆ ಆಹಾರವೂ ಆಗಿದ್ದಾರೆ.

ankita-lokhande-reportedly-jealous-as-vicky-jain-holds-meera-chopras-hand-in-front-of-media

ಹೌದು, ಅಸಲಿಗೆ ಶಾರುಖ್ ಖಾನ್ ಅಭಿನಯದ ಫೌಜಿ ಧಾರಾವಾಹಿಯ ಎರಡನೇ ಭಾಗ ಫೌಜಿ 2 ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ಅಂಕಿತಾ ಅವರ ಗಂಡ ವಿಕ್ಕಿ ಜೈನ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಗೌಹರ್ ಖಾನ್ ಈ ಧಾರಾವಾಹಿಯಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಇತ್ತೀಚೆಗೆ ಇದೇ ಫೌಜಿ 2 ಧಾರಾವಾಹಿ ತಂಡದ ಕಾರ್ಯಕ್ರಮ ನೆರವೇರಿತು. ವಿಕ್ಕಿ ಜೈನ್ ತಮ್ಮ ಪತ್ನಿ ಅಂಕಿತಾ ಜೊತೆ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಬಾಲಿವುಡ್‌ ಸ್ಟಾರ್ ಮನೋಜ್ ಬಾಜ್‌ಪೇಯಿ .. ಗೌಹರ್ ಖಾನ್ ಅವರ ಪತಿ ಜೈದ್ ದರ್ಬಾರ್ .. ಮೀರಾ ಚೋಪ್ರಾ ಹೀಗೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಸಮಯದಲ್ಲಿ ಮಾತನಾಡುತ್ತಾ ಮಾತನಾಡುತ್ತಾ ಮೀರಾ ಚೋಪ್ರಾ ಅವರ ಕೈಯನ್ನು ವಿಕ್ಕಿ ಜೈನ್ ತಮ್ಮ ಕೈಯಲ್ಲಿ ಹಿಡಿದುಕೊಂಡು ಮಾತನಾಡಿದ್ದಾರೆ. ಹೀಗೆ ಅತ್ತ ಈ ಇಬ್ಬರ ನಡುವೆ ಸಂಭಾಷಣೆ ನಡೆಯುತ್ತಿದ್ದರೆ ಇತ್ತ ಅಂಕಿತಾ ಕಣ್ಣು ಕೆಂಪಾಗಿದೆ. ತನ್ನ ಪತಿ ವಿಕ್ಕಿ ಜೈನ್‌ ಅವರನ್ನೇ ಅಂಕಿತಾ ಲೋಖಂಡೆ ಗುರಾಯಿಸಿದ್ದಾರೆ.

ಆ ನಂತರ ವಿಕ್ಕಿ ಜೈನ್ ತಮ್ಮ ಪತ್ನಿಯ ಬಳಿ ಬಂದಾಗ ಅಲ್ಲೇನು ಮಾಡ್ತಿದ್ದೆ ಎಂದು ಅಂಕಿತಾ ಕೇಳಿದಂತೆ ಇದೆ. ಈ ಪ್ರಶ್ನೆಗೆ ವಿಕ್ಕಿ ಜೈನ್ ಉತ್ತರಿಸಲು ಮುಂದಾದಾಗ ಅಂಕಿತಾ ಬಾಯ್ಮುಚ್ಚು ಎಂದು ಹೇಳಿದಂತೆ ಇದೆ ಎನ್ನುವುದು ವಿಡಿಯೋ ನೋಡಿದರೆ ಮೇಲ್ನೋಟಕ್ಕೆ ಗೊತ್ತಾಗುತ್ತೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರು ವಿಕ್ಕಿ ಜೈನ್ ಪರ ವಕಾಲತ್ತು ವಹಿಸಿ ಇಷ್ಟೊಂದು ಹೊಟ್ಟೆ ಕಿಚ್ಚು, ಪೊಸೆಸಿವ್‌ನೆಸ್ ಒಳ್ಳೆಯದಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ವಿಕ್ಕಿ ಜೈನ್ ಮೊದಲಿಂದ ಹುಡುಗಿಯರ ಜೊತೆ ಫ್ಲರ್ಟ್ ಮಾಡುವ ವ್ಯಕ್ತಿ, ಪತ್ನಿಯ ಕೈಯಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದು ಒಳ್ಳೆಯದಾಯ್ತು ಎನ್ನುತ್ತಿದ್ದಾರೆ.

More from Filmibeat

English summary
Watch the moment Ankita Lokhande's anger and alleged jealousy flared as husband Vicky Jain publicly held Meera Chopra's hand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X