ಮದುವೆಯಾದರೂ ಮಾಜಿ ಬಾಯ್‌ಫ್ರೆಂಡ್‌ ಸುಶಾಂತ್ ಸಿಂಗ್ ರಜಪೂತ್ ನೆನಪಿನಲ್ಲಿದ್ದಾರೆ ನಟಿ ಅಂಕಿತಾ ಲೋಖಂಡೆ !?

By ಫಿಲ್ಮಿಬೀಟ್ ಡೆಸ್ಕ

ಬಿಗ್ ಬಾಸ್ ಹಿಂದಿ ಸೀಸನ್ 17 ಎಲ್ಲರ ಗಮನ ಸೆಳೆಯುತ್ತಿದೆ. ಈ ಬಾರಿ ಹೊಸ ಬಗೆಯಲ್ಲಿ ಬಿಗ್ ಬಾಸ್ ನಡೆಯುತ್ತಿದ್ದು, ಸ್ಒರ್ಥಿಗಳ ಮನಸ್ಥಿತಿಯೊಂದಿಗೆ ಆಟವಾಡಲಾಗುತ್ತಿದೆ. ಮದುವೆಯಾದ ದಂಪತಿ, ಮಾಜಿ ಪ್ರೇಮಿಗಳು, ಎಕ್ಸ್ ಬಾಯ್‌ಫ್ರೆಂಡ್, ಎಕ್ಸ್ ಗರ್ಲ್‌ಫ್ರೆಂಡ್ ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ. ಇದರಿಂದ ದಿನ ದಿನಕ್ಕೂ ರಿಯಾಲಿಟಿ ಶೋ ಕುತೂಹಲ ಮೂಡಿಸುತ್ತಿದೆ.

ಈ ಸೀಸನ್‌ನಲ್ಲಿ ಅವೂರಾ, ನೀಲ್ ಭಟ್, ಅಂಕಿತಾ ಲೋಖಂಡೆ, ವಿಕ್ಕಿ ಜೈನ್, ಮುನಾವರ್ ಫಾರೂಕಿ, ಇಶಾ ಮಾಳವಿಯಾ, ಅಭಿಷೇಕ್ ಕುಮಾರ್, ಆಯೇಶಾ ಖಾನ್, ಅನುರಾಗ್ ದೋಭಾಲ್ ಅಕಾ ಯುಕೆ ರೈಡರ್, ಮನ್ನಾರಾ ಚೋಪ್ರಾ, ರಿಂಕು ಧವನ್, ಅರುಣ್ ಮಹಾಶೆಟ್ಟೆ, ಸಮರ್ಥ್ ಜುರೆಲ್ ಅವರು ಮನೆಯಲ್ಲಿದ್ದಾರೆ. ಆದರೆ, ಹೆಚ್ಚು ಸುದ್ದಿಯಾಗುತ್ತಿರುವುದು ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ದಂಪತಿ. ಅದು ಅಂಕಿತಾ ಪದೇ ಪದೇ ದಿವಂಗತ ನಟ, ಮಾಜಿ ಗೆಳೆಯ ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಮಾತನಾಡುತ್ತಿರುತ್ತಾರೆ.

Ankita Lokhande shared a lot about her ex-boyfriend Sushant Singh Rajput in Bigg Boss 17

ಅಂಕಿತಾ ಇನ್ನೂ ಮರೆತಿಲ್ವಾ ಮಾಜಿ ಗೆಳೆಯ ಸುಶಾಂತ್ ಸಿಂಗ್ ರಜಪೂತ್‌ರನ್ನು?

ಬಿಗ್ ಬಾಸ್ ಮನೆಯಲ್ಲಿ ಅಂಕಿತಾ ಲೋಖಂಡೆ ಹೆಚ್ಚು ಮಾತನಾಡುವ ಸ್ಪರ್ಧಿಗಳಲ್ಲಿ ಒಬ್ಬರು. ಅವರು ಪತಿ ವಿಕ್ಕಿ ಜೈನ್ ಅವರೊಂದಿಗೆ ಮನೆಗೆ ಬಮದಿರುವ ಅವರು ಹಲವು ಬಾರಿ ಕೆಟ್ಟ ಘಟನೆಗಳಿಂದ ಸುದ್ದಿಯಾಗಿದ್ದಾರೆ. ಇಬ್ಬರ ಜಗಳ ನೋಡಿ ಅಂಕಿತಾ ಮತ್ತು ವಿಕ್ಕಿಯ ತಾಯಂದಿರು ಕೂಡ ಮನೆಗೆ ಬಂದಿದ್ದರು. ಆದರೂ ಯಾವುದೇ ಬದಲಾವಣೆ ಬಂದಿಲ್ಲ. ಜಗಳ ನಡೆಯುತ್ತಲೇ ಇವೆ. ಇನ್ನು, ಅಂಕಿತಾ ಲೋಖಂಡೆ ತನ್ನ ಮಾಜಿ ಗೆಳೆಯ ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಬಹಳಷ್ಟು ಹಂಚಿಕೊಂಡಿದ್ದಾರೆ.

ತಮ್ಮ ನಡುವೆ ಹೇಗೆ ಬ್ರೇಕ್‌ಅಪ್ ಆಯಿತು...? ಆಗ ತಾನು ಹೇಗೆ ಖಿನ್ನತೆಗೆ ಒಳಗಾಗಿದ್ದೆ ಎಂಬುದರ ಕುರಿತು ಅಂಕಿತಾ ಲೋಖಂಡೆ ಮಾತನಾಡಿದ್ದರು. ಜೊತೆಗೆ ಸುಶಾಂತ್ ಸಿಂಗ್ ರಜಪೂತ್ ಅವರನ್ನು ತುಂಬಾ ಹೊಗಳಿದ್ದರು. ಸುಶಾಂತ್ ತನ್ನನ್ನು ಎಂದಿಗೂ ಕೆಟ್ಟದಾಗಿ ನಡೆಸಿಕೊಂಡಿಲ್ಲ ಎಂದು ಹೇಳಿದರು. ತಾನು ಮತ್ತು ಸುಶಾಂತ್ ಜೊತೆಯಾಗಿ ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಸಿನಿಮಾ ನೋಡಿದ್ದೇವು ಎಂದು ಹೇಳಿಕೊಂಡಿದ್ದಾರೆ.

Ankita Lokhande shared a lot about her ex-boyfriend Sushant Singh Rajput in Bigg Boss 17

ಸುಶಾಂತ್ ನೆನಪಿನಿಂದ ಹೊರ ಬಂದಿಲ್ಲ ಅಂಕಿತಾ!

ಅಂಕಿತಾ ಯಾವಾಗಲೂ ಸುಶಾಂತ್ ಬಗ್ಗೆ ಏನನ್ನಾದರೂ ಮಾರನಾಡುತ್ತಾರೆ. ಇಅದಕ್ಕಾಗಿ ಸಕತ್ ಟ್ರೋಲ್ ಕೂಡ ಆಗಿದ್ದಾರೆ. ಅಂಕಿತಾ ಸುಶಾಂತ್ ಹೆಸರನ್ನು ಬಳಸುತ್ತಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಆದರೆ, ಅಂಕಿತಾ ಎಂದಿಗೂ ಸುಶಾಂತ್‌ ಸಿಂಗ್ ರಜಪೂತ್ ಅವರನ್ನು ಮರೆಯಲೇ ಇಲ್ಲ. ಅವರ ನೆನಪಿನಿಂದ ಹೊರ ಬಂದಿಲ್ಲ ಎಂದು ಆಕೆಯ ಗೆಳೆಯ ಸಂದೀಪ್ ಸಿಂಗ್ ಬಹಿರಂಗಪಡಿಸಿದ್ದಾರೆ.

ಅಂಕಿತಾ ಲೋಖಂಡೆ ಸುಶಾಂತ್‌ ನೆನಪಿನಿಂದ ಯಾವತ್ತೂ ಮೂವ್ ಆನ್ ಆಗಲಿಲ್ಲ ಎಂಬುದನ್ನು ಅಂಕಿತಾ ಅವರ ಆಪ್ತ ಸ್ನೇಹಿತ ಸಂದೀಪ್ ಸಿಂಗ್ ಬಹಿರಂಗಪಡಿಸಿದ್ದಾರೆ. ಜೊತೆಗೆ ಅಂಕಿತಾ ಮತ್ತು ವಿಕ್ಕಿ ಈಗ ಮದುವೆಯಾಗಿದ್ದು, ಬಿಗ್ ಬಾಸ್ ಮನೆಯಲ್ಲಿ ಸಂತೋಷವಾಗಿದ್ದಾರೆ ಹಾಗಾಗಿ ಈಗ ಏನನ್ನೂ ಹೇಳಲು ಬಯಸುವುದಿಲ್ಲ ಎಂದೂ ಹೇಳಿದ್ದಾರೆ.

ನಟಿ ಅಂಕಿತಾ ಲೋಖಂಡೆ ಜೀ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಪವಿತ್ರ ರಿಶ್ತಾ ಧಾರಾವಾಹಿಯಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆಗೆ ನಟಿಸಿದ್ದರು. ಇಬ್ಬರು ಅಲ್ಲೇ ಪ್ರೀತಿಯಲ್ಲಿ ಬಿದ್ದಿದ್ದರು.

More from Filmibeat

English summary
Ankita Lokhande talks about her ex-boyfriend Sushant Singh Rajput in Bigg Boss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X