ವಿಜಯ್ ಸೂರ್ಯ ಪ್ರೇಮಲೋಕಕ್ಕೆ ಬಂದಳು ಜಿಂಕೆ ಕಂಗಳ ಚೆಲುವೆ
ಅಗ್ನಿಸಾಕ್ಷಿ ಬಿಟ್ಟು ಹೋದ ವಿಜಯ್ ಸೂರ್ಯ ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರೇಮಲೋಕ ಎಂಬ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಗೊತ್ತೆ ಇದೆ. ಈಗಾಗಲೇ ಈ ಧಾರಾವಾಹಿಯ ಪ್ರೋಮೋ ಕೂಡ ಬಿಡುಗಡೆಯಾಗಿದೆ.
ಪ್ರೇಮಲೋಕದ ಮೂಲಕ ಕಿರುತೆರೆಯಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿರುವ ವಿಜಯ್ ಸೂರ್ಯಗೆ ಜೋಡಿ ಯಾರಾಗ್ತಾರೆ ಎಂಬುದು ಕುತೂಹಲ ಮೂಡಿಸಿತ್ತು. ಇದೀಗ, ಆ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು, ಜಿಂಕೆ ಕಂಗಳ ಚೆಲುವೆಯ ಆಗಮನವಾಗಿದೆ.
ಹೌದು, ಬೆಂಗಳೂರಿನ ಬೆಡಗಿ ಅಂಕಿತಾ ನವ್ಯಾ ಗೌಡ ಪ್ರೇಮಲೋಕಕ್ಕೆ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿದ್ದಾರೆ. ಪ್ರೇರಣಾ ಎಂಬ ಪಾತ್ರದಲ್ಲಿ ಅಂಕಿತಾ ಕಾಣಿಸಿಕೊಳ್ಳಲ್ಲಿದ್ದು ಇದು ಈಕೆಯ ಚೊಚ್ಚಲ ಧಾರಾವಾಹಿ ಎನ್ನುವುದು ವಿಶೇಷ.

ಇನ್ನುಳಿದಂತೆ 'ಪ್ರೇಮಲೋಕ' ಹಿಂದಿ ಧಾರಾವಾಹಿಯ ರೀಮೇಕ್. ಹಿಂದಿಯ ಜನಪ್ರಿಯ ಧಾರಾವಾಹಿಯಾದ 'ಕಸೂತಿ ಜಿಂದಗಿ ಕೇ' ಧಾರಾವಾಹಿಯ ರೀಮೇಕ್. ಈ ಧಾರಾವಾಹಿಯ ಅನುರಾಗ್ ಪಾತ್ರ ತುಂಬನೆ ಖ್ಯಾತಿಗಳಿಸಿದೆ. ಅನುರಾಗ್ ಪಾತ್ರದಲ್ಲಿ ವಿಜಯ್ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ.
More from Filmibeat
English summary
Agnisakshi fame actor vijay surya after exit Agnisakshi serial already signed new project. Vijay new serial title 'Premaloka' it will telecast shortly in star suvarna. Ankitha Navya Gowda playing female lead in Premaloka


Click it and Unblock the Notifications











