'ಅಣ್ಣ ತಂಗಿ' ಧಾರಾವಾಹಿಯ ಅಖಿಲಾ ಪ್ರಕಾಶ್ ನಿಶ್ಚಿತಾರ್ಥ: ಭಾವಿ ಪತಿ ಹಿನ್ನೆಲೆಯೇನು?

By ಅನಿತಾ ಬನಾರಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಣ್ಣ ತಂಗಿ' ಧಾರಾವಾಹಿಯಲ್ಲಿ ನಾಯಕಿ ತುಳಸಿಯಾಗಿ ಅಭಿನಯಿಸುತ್ತಿರುವ ಅಖಿಲಾ ಪ್ರಕಾಶ್ ಸಿಹಿ ಸುದ್ದಿ ನೀಡಿದ್ದಾರೆ. ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿರಿಸಲಿರುವ ಅಖಿಲಾ ಪ್ರಕಾಶ್ ಭರತ್ ಕಾಂತ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡದ್ದಾರೆ.

ಅಖಿಲಾ ಪ್ರಕಾಶ್ ಹಾಗೂ ಭರತ್ ಕಾಂತ್ ಅವರ ನಿಶ್ಚಿತಾರ್ಥ ಮೈಸೂರಿನಲ್ಲಿ ಇತ್ತೀಚೆಗೆ ನಡೆದಿದೆ. ಇದ ವೇಳೆ 'ಅಣ್ಣ ತಂಗಿ' ಧಾರಾವಾಹಿಯ ಕಲಾವಿದರುಗಳು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

Anna Thangi serial fame Akhila Prakash engagement with Bharat Kant

ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅಖಿಲಾ ಪ್ರಕಾಶ್ ಭಾವಿ ಪತಿ ಭರತ್ ಕಾಂತ್ ಅವರ ಜೊತೆಗಿನ ಫೋಟೋವನ್ನು ಅಪರೂಪಕ್ಕೊಮ್ಮೆ ಹಂಚಿಕೊಳ್ಳುತ್ತಿದ್ದರು. ಅಖಿಲಾ ಮತ್ತು ಭರತ್ ಅವರದು ಲವ್ ಮ್ಯಾರೇಜ್ ಎಂಬ ಮಾತು ಕೇಳಿಬರುತ್ತಿದ್ದು ಸ್ಪಷ್ಟವಾದ ಮಾಹಿತಿ ಹೊರಬರಬೇಕಷ್ಟೇ. ಮಾತ್ರವಲ್ಲದೇ ಭರತ್ ಕಾಂತ್ ಯಾರು? ಎಲ್ಲಿಯವರು? ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಯು ಇನ್ನು ಹೊರಬೀಳಬೇಕಿದೆ.

ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್ 3ಯಲ್ಲಿ ಸ್ಪರ್ಧಿಯಾಗಿದ್ದ ಅಖಿಲಾ ಡಾಕ್ಟರ್ ಆಗಬೇಕು ಎಂದು ಬಯಸಿದ್ದರು. ಆದರೆ ಬಿ.ಕಾಂ ಪದವಿ ಪಡೆದು, ಆ್ಯಕ್ಟರ್ ಆದರು. ನಾಗತಿಹಳ್ಳಿ ಚಂದ್ರಶೇಖರ್ ಅವರ ಗರಡಿಯಲ್ಲಿ ಪಳಗಿದ ಅಖಿಲಾ ಪ್ರಕಾಶ್ ಅವರ ಬಣ್ಣದ ಬದುಕಿಗೆ ಮುನ್ನುಡಿ ಬರೆದಿದ್ದು ಹಿರಿತೆರೆ.

'ಸೋಜಿಗ'ದ ಮೂಲಕ ನಟನೆಗೆ ಪಾದಾರ್ಪಣೆ

Anna Thangi serial fame Akhila Prakash engagement with Bharat Kant

'ಸೋಜಿಗ' ಸಿನಿಮಾದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಅಖಿಲಾ ಪ್ರಕಾಶ್ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಓಳ್ ಮುಸ್ಸಾಮಿ', '18 ರಿಂದ 25', 'ರತ್ನಮಂಜರಿ', 'ಗಾಂಚಾಲಿ' ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ.

ಕಿರುತೆರೆಯಲ್ಲಿ ನಟಿಸುವುದು ಕಷ್ಟ

ಕಿರುತೆರೆ ಮತ್ತು ಹಿರಿತೆರೆಗೆ ತುಂಬಾ ಅಂತರವಿದೆ ಎಂದು ಹೇಳುವ ಅಖಿಲಾ ಪ್ರಕಾಶ್ ಕಿರುತೆರೆಯಲ್ಲಿ ನಿರಂತರವಾಗಿ ಶೂಟಿಂಗ್ ನಡೆಯುತ್ತಿರುತ್ತದೆ. ಜೊತೆಗೆ ಕಿರುತೆರೆಯಲ್ಲಿ ಒತ್ತಡ ಜಾಸ್ತಿ ಇರುವ ಕಾರಣ ಆರಂಭದ ದಿನಗಳಲ್ಲಿ ಅಖಿಲಾಗೆ ನಟಿಸಲು ಕಷ್ಟವಾಗುತ್ತಿತ್ತಂತೆ. ಈಗ ಅಭ್ಯಾಸವಾಯಿತು ಎಂದು ಹೇಳುವ ಅಖಿಲಾ ಪ್ರಕಾಶ್ ಅವರ ಹೊಸ ಪಯಣ ಸುಖಕರವಾಗಿ ಸಾಗಲಿ ಎಂದು ಹಾರೈಸೋಣ.

More from Filmibeat

English summary
Anna Thangi serial fame Akhila Prakash got engaged to Bharat Kant. Anna Tangi serial artists witnessed the moment of celebration,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X