Annayya serial: 'ಅಣ್ಣಯ್ಯ' ಪತ್ನಿ ಪಾರುಗೆ ಸೌಂದರ್ಯ ಜೊತೆ ಊಟ ಮಾಡುವಾಸೆ!

By ಎಸ್ ಸುಮಂತ್

ಜೀ ಕನ್ನಡದಲ್ಲಿ ಬರುತ್ತಿರುವ 'ಅಣ್ಣಯ್ಯ' ಧಾರಾವಾಹಿ ಈಗಂತೂ ಎಲ್ಲರ ಮೆಚ್ಚಿನ ಧಾರಾವಾಹಿಯಾಗಿದೆ. ಪಾರು-ಶಿವಣ್ಣ ಒಂದಾಗಬೇಕು ಎಂದೇ ತಂಗಿಯಂದಿರು ಬಯಸುತ್ತಿದ್ದರು.

ಶಿವು ಕೂಡ ಪಾರುಳನ್ನು ಬೆಟ್ಟಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ. ಆದರೆ ಪಾರು ಆಸೆ, ಪ್ರೀತಿ ಬೇರೆಯೇ ಆಗಿತ್ತು. ಶಿವು ಬಿಟ್ಟು ಸಿದ್ಧಾರ್ಥ್ ನ ಲವ್ ಮಾಡ್ತಾ ಇದ್ಲು. ಇದು ಪಾರು ಆಸೆಯಾದರೆ ವಿಧಿಯ ಆಸೆ ಬೇರೆಯೇ ಆಗಿತ್ತು. ಶಿವು ಜೊತೆಗೇನೆ ಪಾರು ಮದುವೆಯಾಗುವಂತೆ ಆಗಿದೆ.

Annaiah Serial Fame actress nisha Said she is big fan of actress soundarya

ಪಾರು ಬಂದ್ಮೇಲೆ ಶಿವು ಮನೆ ಸಂಪೂರ್ಣವಾಗಿ ಬದಲಾಗಿದೆ. ತಂಗಿಯಂದಿರಂತು ಎಲ್ಲಾ ತಿಳಿದಿರುವ ಅತ್ತಿಗೆ ಸಿಕ್ಕಿರುವುದಕ್ಕೆ ಖುಷಿ ಪಡುತ್ತಿದ್ದಾರೆ. ವೀಕ್ಷಕರು ಕೂಡ ಇದ್ದರೆ ಇಂಥ ಅತ್ತಿಗೆ ನಾದಿನಿಯರು ಇರಬೇಕು ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ. ಇಡೀ ಮನೆ ಖುಷಿಯಾಗಿದೆ. ಇದೇ ಸಂತಸದಲ್ಲಿ ಪಾರುಗೆ ಏನೆಲ್ಲಾ ಇಷ್ಟ ಎಂಬುದನ್ನು ಜೀ ಕನ್ನಡದಲ್ಲಿ ಚಿಟ್ ಚಾಟ್ ಮಾಡಲಾಗಿದೆ.

ಭಾವಗೀತೆ ಇಷ್ಟಪಡುವ ನಿಶಾ

ನಿಶಾ ರಾಮಕೃಷ್ಣಗೆ ನಟನೆ ಮಾತ್ರವಲ್ಲ, ಹಾಡುವುದೆಂದರೂ ಬಲು ಪ್ರೀತಿ. ಆಗಾಗ ಗುನುಗುತ್ತಾ ಇರುತ್ತಾರೆ. ಜಸ್ ಕರಣ್ ಸಿಂಗ್ ಜೊತೆಗೂ ಹಾಡಿದ್ದಾರೆ. 'ಬೆಳ್ದಿಂಗಳಂಗೆ' ಹಾಡಂತು ಫುಲ್ ವೈರಲ್ ಆಗಿದೆ. ಹೀಗೆ ಹಾಡೆಂದರೆ ಕ್ರೇಜ್ ಇರೋ ನಿಶಾಗೆ ಫೇವರಿಟ್ ಹಾಡು ಯಾವ್ದು ಗೊತ್ತಾ..? ಭಾವಗೀತೆಯನ್ನೇ ಗುನುಗುತ್ತಾ ಇರ್ತಾರೆ ನಿಶಾ. 'ನೀ ಸಿಗದೆ ಬಾಳೊಂದು ಬಾಳೆ ಕೃಷ್ಣ' ಹಾಡು ಹೆಚ್ಚು ಕಾಡುವ ಹಾಡಾಗಿದೆ. ಕುಂತಲ್ಲಿ ನಿಂತಲ್ಲಿ ಈ ಹಾಡನ್ನು ಗುನುಗುತ್ತಾ ಇರುತ್ತಾರಂತೆ.

ಪಿಜ್ಹಾ ಪ್ರಿಯೆ ನಿಶಾ ರವಿಕೃಷ್ಣ

ನಟಿ ಮಣಿಯರು ಫಿಟ್ನೆಸ್‌ಗೆ ಹೆಚ್ಚು ಒಲವು ತೋರಿಸುತ್ತಾರೆ. ಅದಕ್ಕಾಗಿ ಡಯೆಟ್, ವರ್ಕೌಟ್ ಅಂತ ಮಾಡ್ತಾನೆ ಇರುತ್ತಾರೆ. ಹಾಗೇ ಅಮೂಲ್ಯ ಪಾತ್ರದಲ್ಲಿಯೇ ಫೇಮಸ್ ಆಗಿರುವ ನಿಶಾ ಕೂಡ ತಮ್ಮ ಫಿಟ್ನೆಸ್ ಅಂಡ್ ಬ್ಯೂಟಿಯನ್ನು ತುಂಬಾ ಚೆನ್ನಾಗಿಯೇ ಮೆಂಟೈನ್ ಮಾಡಿದ್ದಾರೆ. ಹಾಗಂತ ಇವರೇನು ಜಂಕ್ ಫುಡ್ ತಿನ್ನಲ್ಲ ಅಂತಲ್ಲ. ನಿಶಾ ಅವರಿಗೂ ಪಿಜ್ಹಾ, ಬರ್ಗರ್ ತುಂಬಾನೇ ಇಷ್ಟವಂತೆ. ಅದರಲ್ಲೂ ಐಸ್ ಕ್ರೀಂ ಪ್ರಿಯೆ ಇವರು. ಬಟರ್ ಸ್ಕಾಚ್ ತಿಂತಾ ಇದ್ದ ನಿಶಾ ಅವರಿಗೆ ಬ್ಲ್ಯಾಕರ್ ಅಂಡ್ ಟ್ಯಾಕೋ ತುಂಬಾ ಇಷ್ಟವಾದ ಐಸ್ ಕ್ರೀಂ ಆಗಿದೆ.

ನಿಶಾ ಕನಸು ಏನಾಗಿತ್ತು?

'ಗಟ್ಟಿಮೇಳ' ಧಾರಾವಾಹಿ ಮೂಲಕ ಎಲ್ಲರ ಮನಗೆದ್ದ ಚೆಲುವೆ ನಿಶಾ ರಾಮಕೃಷ್ಣ. ಈಗ 'ಅಣ್ಣಯ್ಯ' ಧಾರಾವಾಹಿಯಲ್ಲೂ ಅಷ್ಟೇ ಮುದ್ದಾಗಿ ಕಾಣಿಸ್ತಾ ಇದ್ದಾರೆ. ತೆಲುಗು ಧಾರಾವಾಹಿಯಲ್ಲೂ ಇವರದ್ದೇ ಹವಾ. ಆದರೆ ನಟಿಯಾಗದೆ ಇದ್ದಿದ್ದರೆ ನಿಶಾ ಏನು ಮಾಡ್ತಾ ಇದ್ರು ಎಂಬ ಬಗ್ಗೆ ಅವರೇ ಉತ್ತರ ಕೊಟ್ಟಿದ್ದಾರೆ. 'ನಮ್ಮ ತಂದೆಗೆ ನಾನೊಳ್ಳೆ ಭರತನಾಟ್ಯಂ ಡ್ಯಾನ್ಸರ್ ಆಗ್ಬೇಕು ಅಂತಿತ್ತು. ಮೇಬೀ ನಟಿಯಾಗದೆ ಇದ್ದಿದ್ದರೆ ಯಾವುದಾದ್ರೂ ಪ್ರೊಫೆಷನಲ್‌ನಲ್ಲಿ ಇರ್ತಾ ಇದ್ದೆ' ಎಂದಿದ್ದಾರೆ.

ಸೌಂದರ್ಯ ಎಂದರೆ ತುಂಬಾ ಇಷ್ಟ

ನಟಿ ನಿಶಾ ಅವರಿಗೆ ದಿವಂಗತ ನಟಿ ಸೌಂದರ್ಯ ಎಂದರೆ ತುಂಬಾನೇ ಇಷ್ಟ. ದೈಹಿಕವಾಗಿ ಅವರಿಲ್ಲದೇ ಇದ್ದರೂ, ಅವರು ನಟಿಯರಿಗೆ ಇಷ್ಟ. ಸೌಂದರ್ಯ ಮೇಡಂ ಜೊತೆಗೆ ಕೂತು ಊಟ ಮಾಡುವಾಸೆ ಇತ್ತು ಎಂದಿದ್ದಾರೆ ನಿಶಾ. ಇನ್ನು ಪ್ರಾಣಿ ಪ್ರಿಯೆಯಾಗಿರುವ ನಿಶಾ, ಎಷ್ಟೇ ಕೋಟಿ ಸಿಕ್ಕರು ಪ್ರಾಣಿಗಳಿಗಾಗಿ ಒಂದೊಳ್ಳೆ ಜಾಗ ಮಾಡಬೇಕೆಂಬ ಆಸೆ ಇದೆ ಎಂದಿದ್ದಾರೆ.

More from Filmibeat

English summary
Kannada Tv actress talks about her personal life and carrer
Read more about: sumanth sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X