'ಅಣ್ಣಯ್ಯ'ನ 2025 ರೆಸ್ಯೂಲೇಷನ್ ಏನ್ ಗೊತ್ತಾ? ಪ್ರೇಯಸಿಯನ್ನು ಪರಿಚಯ ಮಾಡಿಕೊಡೋದು..!
ಜೀ ಕನ್ನಡದಲ್ಲಿ ಈಚೆಗಷ್ಟೇ ಹೊಸ ಧಾರಾವಾಹಿ ಶುರುವಾಗಿದೆ. ಅದೇ 'ಅಣ್ಣಯ್ಯ'. ನಿಶಾ ರವಿಕೃಷ್ಣ ಹಾಗೂ ವಿಕಾಸ್ ಉತ್ತಯ್ಯ ಜೋಡಿಗೆ ಕಿರುತೆರೆ ವೀಕ್ಷಕರು ಉಘೇ ಎಂದಿದ್ದಾರೆ. ಈ ಮೊದಲು ಗಟ್ಟಿಮೇಳದ ವೇದಾಂತ್ ಹಾಗೂ ಅಮೂಲ್ಯ ಜೋಡಿಗೆ ಎಷ್ಟು ಕ್ರೇಜ್ ಇತ್ತೋ ಈಗ ಅದೇ ಕ್ರೇಜ್ ಈಗ ಅಣ್ಣಯ್ಯ ಹಾಗೂ ಪಾರ್ವತಿ ಕ್ರೇಜ್ ಹುಟ್ಟು ಹಾಕಿದ್ದಾರೆ.
ಪಾರು ಡಾಕ್ಟರ್ ಓದಿದ್ದಾಳೆ. ಓದುವಾಗಲೇ ಸಿದ್ಧಾರ್ಥ್‌ನ ಲವ್ ಮಾಡುತ್ತಿದ್ದಳು. ಆದರೆ ಆತ ಹಣಕ್ಕಾಗಿ ತನ್ನ ಪ್ರೀತಿಗೆ ಮೋಸ ಮಾಡಿ ಹೋದ. ಈ ಮೋಸ ಅರಿಯದೆ ಪಾರು ಕಾದು ಕಾದು ಕುಳಿತಿದ್ದಳು. ಆದರೆ ಈಗ ಪಾರುಗೆ ಸಿದ್ದಾರ್ಥ್ ಮೋಸದ ಸತ್ಯ ಗೊತ್ತಾಗಿದೆ. ಇನ್ನೇನಿದ್ದರು ಅಣ್ಣಯ್ಯನ ಹುಡುಗಿ ಯಾರೆಂಬಸತ್ಯ ಗೊತ್ತಾಗಬೇಕಾಗಿದೆ.

ವಿಕಾಸ್ ನ್ಯೂ ಇಯರ್ ರೆಸ್ಯೂಲೇಷನ್
ಹೊಸ ವರ್ಚ ಬಂತು ಅಂದ್ರೆ ಎಲ್ಲರೂ ಒಂದೊಂದು ರೀತಿಯ ರೆಸ್ಯೂಲೇಷನ್ ಹಾಕಿಕೊಳ್ಳುತ್ತಾರೆ. ಕೆಲವೊಂದಿಷ್ಟು ಜನ ಅದನ್ನ ಬ್ರೇಕ್ ಮಾಡ್ತಾರೆ, ಬೆರಳೆಣಿಕೆಯಷ್ಟು ಮಂದಿ ಅದನ್ನ ಫಾಲೋ ಮಾಡ್ತಾರೆ. ಈಗ ವಿಕಾಸ್ ಉತ್ತಯ್ಯ ಕೂಡ ಒಂದು ಹೈ ರೆಸ್ಯೂಲೇಷನ್ ಹಾಕಿಕೊಂಡಿದ್ದಾರೆ. ಅದು ಅವರ ಲೇಡಿ ಫ್ಯಾನ್ಸ್‌ಗೆ ಬೇಸರವನ್ನಂತು ಮಾಡಬಹುದು. ಯಾಕಂದ್ರೆ ಕೊಡಗಿನ ಕುವರ ಆಗಿರುವ ವಿಕಾಸ್, ಪಕ್ಕ ಹಳ್ಳಿ ಭಾಷೆಯನ್ನ ಸುಸೂತ್ರವಾಗಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅಕ್ಷರಗಳನ್ನು ಹೇಳಿದ ವಿಕಾಸ್
ವಿಕಾಸ್ ಉತ್ತಯ್ಯ 2025 ರೆಸ್ಯೂಲೇಷನ್‌ನಲ್ಲಿ ತಾನೂ ಮದುವೆಯಾಗುವ ಹುಡುಗಿಯನ್ನು ಪರಿಚಯ ಮಾಡಿಕೊಡುವ ನಿರ್ಧಾರ ಮಾಡಿದ್ದಾರೆ. ಅದನ್ನೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. 'ಯಾರೇ ಆಗಲಿ ಸಾಮಾನ್ಯವಾಗಿ ಎಂಗೇಜ್ಮೆಂಟ್ ಆಗುವ ತನಕ, ಮದುವೆ ಸೆಟ್ ಆಗುವ ತನಕ ತಾನೂ ಪ್ರೀತಿಸಿದ ಹುಡುಗಿಯ ಬಗ್ಗೆ ಹೇಳುವುದರಿಲ್ಲ. ಆದರೆ ನಾನು ಈ ವರ್ಷದ ರೆಸ್ಯೂಲೇಷನ್ ಏನು ಹಾಕಿಕೊಂಡೊದ್ದೀನಿ ಅಂದ್ರೆ, ನಾನು ಪ್ರೀತಿಸುತ್ತಿರುವ ಹುಡುಗಿಗೆ ಹೇಳುವುದಕ್ಕೂ ಮೊದಲು ನಿಮಗೆ ಹೇಳ್ತೀನಿ' ಎಂದಿದ್ದಾರೆ.
ಪಿ ಅಕ್ಷರದ ಆ ಹುಡುಗಿ ಯಾರು?
ವಿಕಾಸ್ ತಾನೂ ಪ್ರೀತಿಸುತ್ತಿರುವ ಹುಡುಗಿಯ ಹೆಸರಿನ ಅಕ್ಷರವನ್ನು ತಿಳಿಸಿದ್ದಾರೆ. ಅದರಲ್ಲೂ ಮೂರು ಅಕ್ಷರಗಳನ್ನ ಹೇಳಿದ್ದಾರೆ. ನಾನು ಪ್ರೀತಿಸಿದ ಹುಡುಗಿಯನ್ನ ಯಾರು ಅಂತ ತಿಳಿಸುತ್ತೀನಿ. ಅವಳ ಹೆಸರು P, Q, R ಅಕ್ಷರದಿಂದ ಬರುತ್ತೆ ಎಂದಿದ್ದಾರೆ. ಈ ಅಕ್ಷರ ಕೇಳುತ್ತಿದ್ದಂತೆ ಅಣ್ಣಯ್ಯ ಫ್ಯಾನ್ಸ್ ಎಲ್ಲಾ ಪಾರುನೇನಾ ಆ ಹುಡುಗಿ ಎಂದು ಕೇಳುತ್ತಿದ್ದಾರೆ. ಆದರೆ ಪಾರು ನಿಜವಾದ ಹೆಸರು ನಿಶಾ. ಆ ಅಕ್ಷರವನ್ನೇ ಉದಾಹರಣೆಯಾಗಿ ಕೊಟ್ಟಿಲ್ಲ. ಹೀಗಾಗಿ ಹುಡುಗಿ ಬೇರೆ ಇರಬಹುದು ಎಂಬ ಕುತೂಹಲ ಮೂಡಿದೆ.
ಪಾರು- ಶಿವು ಲವ್
'ಅಣ್ಣಯ್ಯ' ಧಾರಾವಾಹಿಯಲ್ಲಿ ಶಿವುಗೆ ತಂಗಿಯರ ಜವಬ್ದಾರಿ ಇದೆ. ಅವರಿಗೆ ಮದುವೆ ಮಾಡಬೇಕು. ಇದರ ನಡುವೆ ಚಿಕ್ಕ ವಯಸ್ಸಿನಿಂದ ಪ್ರಿತೀಸುತ್ತಿದ್ದ ಪಾರುನೇ ಅಚಾನಕ್ಕಾಗಿ ಹೆಮನಡತಿಯಾಗಿ ಬಂದಿದ್ದಾಳೆ. ಅವಳನ್ನು ಕೂಡ ಜವಾಬ್ದಾರಿಯಿಂದ ನೋಡಿಕೊಳ್ಳುತ್ತಿದ್ದಾನೆ. ಆದರೆ ತನ್ನ ಪ್ರೀತಿಯನ್ನ ಮಾತ್ರ ತೋರಿಸುತ್ತಿಲ್ಲ. ಮನಸ್ಸೊಳಗೆ ಇಟ್ಟುಕೊಂಡು, ಪಾರುಳನ್ನ ಆರಾಧಿಸುತ್ತಿದ್ದಾನೆ. ಪಾರು ಕೂಡ ಮವ ಪ್ರೀತಿಸಿದ ಹುಡುಗಿ ಯಾರೆಂದು ಹುಡುಕಲು ಹೊರಟಿದ್ದಾಳೆ. ಕಥೆ ಅದ್ಭುತವಾಗಿ ಸಾಗುತ್ತಿದೆ.


Click it and Unblock the Notifications











