ಪಾರುಗೆ ಗೊತ್ತಾಗೋಯ್ತು ಮಹಾಸತ್ಯ; ಇನ್ನಾದರೂ ಶಿವು ಮೇಲೆ ಪ್ರೀತಿ ಹುಟ್ಟುತ್ತಾ?

By ಪೂರ್ವ

ತನ್ನ ಪ್ರೀತಿ ಬಗ್ಗೆ ಬಹು ದೊಡ್ಡ ಸತ್ಯ ಪಾರುಗೆ ಗೊತ್ತಾಗಿದೆ. ಪಾರುಗೇ ಸಿದ್ದಾರ್ಥ್ ಎಂದರೆ ಹುಚ್ಚು ಪ್ರೀತಿ. ಆತನನ್ನು ಹೇಗಾದರು ಮಾಡಿ ಪಡೆದುಕೊಳ್ಳಲೇ ಬೇಕು ಎನ್ನುವ ಛಲ ಆಕೆಗೆ. ಸಿದ್ದಾರ್ಥ್ ಹಾಗೂ ಪಾರು ಮೆಡಿಕಲ್ ಮಾಡುತ್ತಿರುವಾಗ ಒಬ್ಬರನ್ನೊಬ್ಬರು ಬಹಳ ಅಘಾದವಾದ ಪ್ರೀತಿ ಮಾಡಿದ್ದರು.

ಸಿದ್ದಾರ್ಥ್ ಹೇಳಿಕೊಳ್ಳುವಷ್ಟು ದೊಡ್ಡ ವ್ಯಕ್ತಿ ಅಲ್ಲ ಅನ್ನೋದು ಗೊತ್ತಿದೆ. ಆದರೆ ಅದನ್ನು ಪಾರು ಬಳಿ ಹೇಳಲು ಯಾರು ಧೈರ್ಯ ಮಾಡಲಿಲ್ಲ. ಪಾರುಗೆ ತನ್ನ ಪ್ರಾಣಕ್ಕಿಂತ ಹೆಚ್ಚು ಸಿದ್ದಾರ್ಥ್ ಅನ್ನು ಪ್ರೀತಿಸಿದ್ದಳು. ಆತನನ್ನು ಮದುವೆ ಮಾಡಿಕೊಳ್ಳಲು ಮನೆ ಬಿಟ್ಟು ಬಂದಿದ್ದಳು. ಆದರೆ, ಸಿದ್ದಾರ್ಥ್ ಪಾರು ಅಣ್ಣ ಪರಶುರಾಮ ತೋರಿಸಿದ ದುಡ್ಡಿನ ಆಮಿಷಕ್ಕೆ ಬಲಿಯಾಗಿದ್ದ.

Annayya Kannada serial December 10th episode update

ಆತನಿಗೆ ಪಾರುವಿಗಿಂತ ಆಕೆಯ ಅಣ್ಣ ಕೊಡುವ ದುಡ್ಡು ಬಹಳ ಮುಖ್ಯ ಆಗಿತು. ಇತ್ತ ಪಾರುಗೆ ಸಿಟಿಯಲ್ಲಿ ಸಿದ್ದಾರ್ಥ್ ತಂದೆ ಕಾಣ ಸಿಗುತ್ತಾರೆ. ಅವರನ್ನು ಪಾರು ಅದೆಷ್ಟೇ ಕರೆದರು ಅವರಿಗೆ ಅದ್ಯಾವುದು ಕೇಳಿಸದೆ ಬೈಕ್‌ನಲ್ಲಿ ಮುಂದೆ ಸಾಗುತ್ತಾರೆ. ಬೈಕ್ ಚೇಸ್ ಮಾಡಿ ಪಾರು ಓಡಿಕೊಂಡು ಬರುತ್ತಿರುವಾಗಲೇ ಪಾರು ಗೆಳತಿ ಸಿಗುತ್ತಾಳೆ. ಸಿದ್ಧಾರ್ಥ್ ತಂದೆ ಬಳಿಗೆ ಪಾರುನ ಕರೆದುಕೊಂಡು ಹೋಗಿ ಬಿಡುತ್ತಾಳೆ. ದೇವಸ್ಥಾನದಲ್ಲಿ ಪಾರುನಾ ಹಿಂತಿರುಗಿ ನೋಡಿದ ಸಿದ್ದಾರ್ಥ್ ತಂದೆಗೆ ಪಾರು ಕಾಣಿಸುತ್ತಾಳೆ. ಆದರೆ ಆಕೆಯ ಪ್ರಶ್ನೆಗೆ ಉತ್ತರಿಸಲು ಸಿದ್ದಾರ್ಥ್ ತಂದೆಗೆ ಆಗುವುದಿಲ್ಲ.

ಮಗ ಮಾಡಿದ ತಪ್ಪಿನಿಂದಾಗಿ ತಂದೆ ತಲೆ ತಗ್ಗಿಸುವ ಹಾಗೆ ಆಯಿತು. ಪಾರು ಸಿದ್ದಾರ್ಥ್ ತಂದೆಯ ಬಳಿ ಗೆಳೆಯನ ಬಗ್ಗೆ ವಿಚಾರಣೆ ಮಾಡಿದಾಗ ಆತನ ತಂದೆ "ಸಿದ್ದಾರ್ಥ್ ನಿನ್ನನು ಬೇಕು ಎಂದೇ ಮದುವೆ ಆಗಲಿಲ್ಲ. ಆತನಿಗೆ ನಿನಗಿಂತ ಹಣವೇ ಮುಖ್ಯ ಆಗಿತ್ತು. ಹಣದ ಆಮಿಷಕ್ಕೆ ಒಳಗಾಗಿ ಸಿದ್ದಾರ್ಥ್ ನಿನ್ನನ್ನು ಬಿಟ್ಟು ಹಣದ ಹಿಂದೆ ಹೋದ. ಹಣದ ಆಮಿಷ ತೋರಿಸಿದ್ದು ಬೇರೆ ಯಾರು ಅಲ್ಲ. ನಿನ್ನ ಅಣ್ಣ ಪರಶುರಾಮ್" ಎಂದು ಹೇಳುತ್ತಾರೆ. ಆ ಬಳಿಕ ಪಾರುಗೆ ಕಿವಿ ಮಾತು ಹೇಳುತ್ತಾರೆ "ಸಿದ್ದಾರ್ಥ್ ನೀನು ಅಂದುಕೊಂಡಷ್ಟು ಒಳ್ಳೆಯವನು ಅಲ್ಲ. ಅವನು ಬೇಕು ಎಂದೇ ನಿನ್ನನ್ನು ಮದುವೆ ಆಗಲು ಬರಲಿಲ್ಲ" ಎಂದು ಕಠೋರವಾದ ಸತ್ಯವನ್ನು ಪಾರು ಬಳಿ ಹೇಳಿದಾಗ ಪಾರುಗೆ ನಿಂತ ನೆಲ ಕುಸಿದ ಹಾಗೆ ಆಗುತ್ತದೆ.

Annayya Kannada serial December 10th episode update

ಪಾರು ಸ್ಥಿತಿ ಕಂಡು ಬೇಸರಗೊಂಡ ಶಿವು

ಆಗ ಕೂಡಲೇ ಪಾರು ಬಳಿಗೆ ಬಂದ ಶಿವು ಆಕೆಗೆ ಸಮಾಧಾನ ಮಾಡಲು ಪ್ರಯತ್ನ ಮಾಡುತ್ತಾನೆ. ಪಾರುಗೆ ತಾನು ಮೋಸ ಹೋಗಿ ಬಿಟ್ಟೆನಲ್ಲ ಎನ್ನುವ ದು:ಖ ಉಮ್ಮಳಿಸಿ ಬರುತ್ತೆ. ಶಿವುಗೆ ಪಾರು ಪರಿಸ್ಥಿತಿ ನೋಡಿ ಮನಸ್ಸಿಗೆ ಬಹಳಷ್ಟು ನೋವು ಆಗುತ್ತೆ. ಹೇಗಿದ್ದ ಪಾರು ಹೇಗೆ ಆಗಿ ಬಿಟ್ಟಳು. ವೀರಭದ್ರಯ್ಯನಿಗೆ ಮಗಳು ಒಳ್ಳೆಯ ಮನೆತನಕ್ಕೆ ಸೊಸೆ ಆಗಿ ಹೋಗಬೇಕು ಎಂದಿತ್ತು. ಆದರೆ ಆಕೆ ಪ್ರೀತಿಸಿದ ಹುಡುಗನಿಗಾಗಿ ಮನೆಬಿಟ್ಟು ಹೋದಾಗ ಆತನಿಗೆ ಬಂದ ಕೋಪ ಅಷ್ಟಿಷ್ಟಲ್ಲ. ಆದರೆ ಇದೀಗ ಕೊನೆಗೆ ಬಲಿಪಶು ಆಗಿದ್ದು ಮಾತ್ರ ಶಿವು.

ಮಗಳ ಜೀವನ ಅಲ್ಲೋಲ ಕಲ್ಲೋಲ

ಪಾರು ಮದುವೆ ಮಾಡಲು ಹೋಗಿ ಕೊನೆಗೆ ಪಾರುವನ್ನೇ ಶಿವು ಮದುವೆ ಆಗುವಂತಾಗಿದೆ. ಇನ್ನಾದರೂ ಶಿವು ಮೇಲೆ ಪಾರುಗೆ ಪ್ರೀತಿ ಮೂಡುತ್ತಾ? ವೀರ ಭದ್ರಯ್ಯನ ಅಟ್ಟಹಾಸಕ್ಕೆ ಮಗಳ ಜೀವನ ಅಲ್ಲೋಲ ಕಲ್ಲೋಲ ಆಗಿದೆ. ನಿಜ ತಿಳಿದ ಪಾರುಗೆ ತನ್ನ ಮೇಲೆ ತನಗೆ ಹೇಸಿಗೆ ಬಂದು ಬಿಡುತ್ತೆ. ಎಂತವನನ್ನು ಪ್ರೀತಿ ಮಾಡಿಬಿಟ್ಟೆ ಎನ್ನುವ ನೋವು ಆಕೆಗೆ ಮೂಡುವುದಂತೂ ಸತ್ಯ. ಆದರೆ ಶಿವುಗೆ ಪಾರುವಿನ ದುಃಖಕ್ಕೆ ಸಾಂತ್ವನ ಹೇಳಲು ಆಗದೆ ಪರದಾಡುತ್ತಿದ್ದಾರೆ. ಯಾವ ವಿಚಾರ ಪಾರುಗೆ ತಿಳಿಯಬಾರದು ಎಂದುಕೊಂಡು ಇದ್ದನೋ. ಅದೇ ವಿಚಾರ ಇದೀಗ ಪಾರುಗೆ ತಿಳಿದಿದೆ.

More from Filmibeat

English summary
Annayya Kannada serial December 10th episode update
Read more about: tv serial poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X