Annayya Serial: ಭಾರವಾದ ಮನದಲ್ಲಿ ಮನೆ ಬಿಟ್ಟು ಹೊರಟ ಪಾರು; ಹೋಗಿದ್ದಾದರೂ ಎಲ್ಲಿಗೆ ?
ಜೀವನದಲ್ಲಿ ಪ್ರೀತಿ ಪಾತ್ರರನ್ನು ಕಳೆದುಕೊಂಡ ಪಾರು ಮನಸ್ಸು ಇದೀಗ ಛಿದ್ರ ಆಗೋಗಿದೆ. ಪಾರುಗೆ ಸಿದ್ದಾರ್ಥ್ ಮೇಲೆ ಅಪಾರವಾದ ಪ್ರೀತಿ. ಹಾಗೆಯೇ ತಾನು ಸಿದ್ದಾರ್ಥ್ ಜೊತೆ ಖುಷಿಯಾಗಿ ಬಾಳಿ ಬದುಕಬೇಕು ಎಂದುಕೊಂಡು ಇರುವಾಗಲೇ ಸಿದ್ದಾರ್ಥ್ ಮೋಸ ಮಾಡಿಬಿಡುತ್ತಾನೆ. ಪಾರುಗೆ ಈ ವಿಚಾರ ಬಿಸಿ ತುಪ್ಪದ ಹಾಗೆ ಅದನ್ನು ನುಂಗಲು ಆಗದೆ ಉಗಿಯಲು ಆಗದೆ ತೊಳಲಾಡುವಂತಾಗಿದೆ. ಇತ್ತ ಪಾರುಗೆ ಶಿವು ಕಣ್ಗಾವಲಾಗಿ ನಿಂತಿದ್ದಾನೆ. ಅದರೆ, ಶಿವು ಪಾರುವನ್ನು ಸಣ್ಣ ವಯಸ್ಸಿನಿಂದಲೂ ಪ್ರೀತಿ ಮಾಡುತ್ತಿದ್ದದ್ದು ಈಗ ಗೊತ್ತಾಗಿದೆ.
ಆತನಿಗೆ ಪಾರು ಎಂದರೆ ಪ್ರಾಣ. ಆದರೆ, ಶಿವುವನ್ನು ಅಚಾನಕ್ ಆಗಿ ಕೈ ಹಿಡಿಯುತ್ತಾಳೆ ಪಾರು. ಶಿವು ಮೇಲೆ ಭರವಸೆ ಇಟ್ಟಿದ್ದ ಪಾರುಗೆ ಇದೀಗ ಮದುವೆಯ ಬಂಧವನ್ನೇ ಕಳಚಿಕೊಂಡು ದೂರ ಸರಿಯುತ್ತಿರುವುದು ವಿಪರ್ಯಾಸ. ಪಾರು ಪ್ರೀತಿಸುತ್ತಿದ್ದ ಹುಡುಗ ಬಹಳ ನೀಚ ಎಂದು ಗೊತ್ತಾದ ಕೂಡಲೇ ಯಾರ ಬಗ್ಗೆ ಪಾರು ನೆನಪಿಸಿಕೊಳ್ಳದೆ ತಾನು ವಿದೇಶಕ್ಕೆ ಹೋಗಬೇಕು ಎಂದುಕೊಂಡಿದ್ದೇನೆ ಎಂದು ಶಿವು ಬಳಿ ಹೇಳಿಕೊಳ್ಳುತ್ತಾಳೆ. ಪಾಪ ಶಿವು ಮನದಲ್ಲಿ ಎಷ್ಟೇ ಪ್ರೀತಿ ಇದ್ದರೂ ಅದನ್ನು ಪಾರು ಬಳಿ ತೋರಿಸಿಕೊಳ್ಳಲು ಆಗದೆ ಬಹಳ ನೋವು ಪಡುತ್ತಾನೆ.

ಇದೀಗ ಪಾರು ವಿದೇಶಕ್ಕೆ ಹೋಗುವ ದಿನ ಬಂದೆ ಬಿಟ್ಟಿದೆ. ಪಾರು ಮನೆಯಿಂದ ಹೊರ ಹೋಗುವ ಸನ್ನಿವೇಶ ನೋಡಿದ ವೀಕ್ಷಕರಿಗೆ ಬಹಳಷ್ಟು ನೋವು ಆಗಿರುವುದು ಖಂಡಿತ. ಶಿವುವನ್ನು ತಬ್ಬಿ ಹಿಡಿದುಕೊಂಡ ತಂಗಿಯಂದಿರು ಜೋರಾಗಿ ಅಳುತ್ತಾರೆ. ಅವರನ್ನು ನೋಡಿದ ಶಿವು ಸಮಾಧಾನ ಮಾಡುತ್ತಾನೆ. ಪಾರು ದೇವರ ಬಳಿ ಬಂದು ಆಕೆಯ ಕೊರಳಲ್ಲಿರುವ ಮಂಗಳ ಸೂತ್ರವನ್ನೊಮ್ಮೆ ನೋಡುತ್ತಾಳೆ. ಆ ಕೂಡಲೇ ಶಿವು ಬಂದು ಪಾರುವನ್ನು "ಬಸ್ ಬರುವ ಸಮಯ ಆಯಿತು ಬಾ ಪಾರು" ಎಂದು ಕರೆದುಕೊಂಡು ಹೋಗುತ್ತಾನೆ.
ಎಲ್ಲಾ ಮರೆತು ಖುಷಿಯಾಗಿರು ಎಂದ ಶಿವು
ಬಸ್ ಸ್ಟ್ಯಾಂಡ್‌ಗೆ ಬಂದ ಬಳಿಕ ಶಿವು ಒಂದು ಮಾತು ಪಾರು ಬಳಿ ಹೇಳುತ್ತಾನೆ. ನಡೆದಿದ್ದ ಕಹಿ ಘಟನೆಗಳನ್ನು ಎಲ್ಲವನ್ನೂ ನೀನು ಮರೆತು ಬಿಡು. ನಾನು ನನ್ನ ತಂದಿಯಂದಿರು ನಿನ್ನ ಜೀವನದಲ್ಲಿ ಇದ್ದಿದ್ದು ಸ್ವಲ್ಪ ದಿನ ಅಷ್ಟೇ. ನೀನು ಎಲ್ಲವನ್ನೂ ಮರೆತು ಹಾಯಾಗಿ ಇರು ಎಂದು ಹೇಳಿದಾಗ ಬಸ್ ಬರುತ್ತದೆ. ಬಸ್ ಹತ್ತಿ ಪಾರು ಅಲ್ಲಿಂದ ಹೊರಟು ಹೋಗುತ್ತಾಳೆ. ಶಿವು ವಾಪಸ್ ಬಹಳ ಬೇಸರದಿಂದ ಮನೆಗೆ ಬರುತ್ತಾನೆ. ಮನೆಯಲ್ಲಿ ಪಾರು ಬ್ಯಾಗ್ ಕಾಣಿಸಿದ್ದರಿಂದ ಪಾರು ಬ್ಯಾಗ್ ಬಿಟ್ಟು ಹೋಗಿದ್ದಾಳೆ ಎಂದು ಬಹಳ ಅರ್ಜೆಂಟ್ ಆಗಿ ಪಾರು ಹತ್ತಿದ ಬಸ್ ಅನ್ನು ಚೇಸ್ ಮಾಡಿಕೊಂಡು ಹೋಗುತ್ತಾನೆ.

ಪಾರುವನ್ನು ಕಾಣದೆ ಕಂಗಾಲಾದ ಶಿವು
ಪಾರು ಹತ್ತಿದ ಬಸ್ ಸಿಕ್ಕರೂ ಪಾರು ಆ ಬಸ್ ನಲ್ಲಿ ಇರುವುದು ಇಲ್ಲ. ಇದನ್ನು ನೋಡಿದ ಶಿವು ಬಹಳ ಶಾಕ್ ಆಗುತ್ತಾನೆ. ಕೂಡ ಕಂಡೆಕ್ಟರ್ ಬಳಿ ಕೇಳಿದಾಗ ಕೆರೆ ಬಳಿ ಇಳಿದುಕೊಂಡರು ಎಂದು ಹೇಳುತ್ತಾನೆ. ಇದನ್ನು ಕೇಳಿದ ಶಿವುಗೆ ಟೆನ್ಶನ್ ಶುರು ಆಗುತ್ತದೆ. ಪಾರು ಏನಾದರು ಅಪಾಯ ಮಾಡಿಕೊಂಡು ಬಿಡಬಹುದು ಎಂದು ಭಯ ಪಟ್ಟುಕೊಂಡು ಶಿವು ಕೆರೆ ಬಳಿ ಹೋದಾಗ ಪಾರು ಆಲೋಚನೆ ಮಾಡುತ್ತಾ ನಿಂತಿರುತ್ತಾಳೆ. ಇತ್ತ ಅನೇಕ ಸೀರಿಯಲ್ ಪ್ರೇಮಿಗಳು ಧಾರಾವಾಹಿ ನೋಡಿ 'ಮಿಲನ' ಸಿನಿಮಾ ರೀಮೇಕ್ ಮಾಡಿದ್ದೀರಾ ಎಂದು ಖಡಕ್ ಆಗಿ ಹೇಳಿದ್ದಾರೆ. ಇನ್ನೂ ಮುಂದೆ ಪಾರು ತೆಗೆದುಕೊಳ್ಳುವ ನಿರ್ಧಾರ ಎನು ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











