Annayya Serial:ಪಾರುಗೆ ಸಿದ್ದಾರ್ಥ್ ಕಾಣಿಸಿಬಿಟ್ಟ; ಶಿವು ಬಿಟ್ಟು ಹೋಗುತ್ತಾಳಾ ಪಾರು?

By ಪೂರ್ವ

ಪಾರು ಹಾಗೂ ಶಿವು ಪಟ್ಟಣಕ್ಕೆ ಬರುತ್ತಾರೆ. ಸಿದ್ಧಾರ್ಥ್ ಸಿಕ್ಕೆ ಸಿಗುತ್ತಾನೆ ಎನ್ನುವ ಭರವಸೆಯಲ್ಲಿ ಪಾರು ಇದ್ದರೆ, ಶಿವುಗೆ ಅದ್ಯಾಕೋ ಬಹಳ ಭಯ. ಪಾರುಗೆ ಸಿದ್ದಾರ್ಥ್ ಬಗ್ಗೆ ಎಲ್ಲಾ ತಿಳಿದರೆ ಖಂಡಿತವಾಗಿಯೂ ಆಕೆ ತಡೆದುಕೊಳ್ಳುವುದಿಲ್ಲ. ಆಕೆಗೆ ಯಾವ ವಿಚಾರವೂ ಗೊತ್ತಾಗದೆ ಹಾಗೆ ನೋಡಿಕೊಳ್ಳಿ ದೇವರೆ ಎಂದು ಕೇಳಿಕೊಳ್ಳುತ್ತಾನೆ.

ಶಿವು ಮಗು ಮನಸ್ಸು ತನ್ನ ತಾಯಿಯ ಬಗ್ಗೆ ವೀರಭದ್ರಯ್ಯ ಹೇಳಿದ ಮಾತನ್ನೇ ನಂಬಿಕೊಂಡು ಆಕೆಯ ಮೇಲೆ ದ್ವೇಷ ಸಾಧಿಸುತ್ತಾನೆ. ಆದರೆ ಆತನಿಗೆ ಗೊತ್ತಿಲ್ಲ ತನ್ನ ತಾಯಿ ಬಹಳ ಒಳ್ಳೆಯವಳು. ಊರಿನ ಜನರಿಗೆ ತನ್ನಿಂದ ಆದ ಸಹಾಯವನ್ನು ಆಕೆ ಮಾಡುತ್ತಿದ್ದಳು ಎನ್ನುವ ವಿಚಾರ ತಿಳಿದಿಲ್ಲ. ಶಿವು ತನ್ನ ತಾಯಿ ಕೆಟ್ಟವಳು ಅಂದುಕೊಂಡಿದ್ದಾನೆ. ಆದರೆ ವೀರಭದ್ರಯ್ಯನ ಒಳಸಂಚಿನಿಂದಾಗಿ ಆಕೆ ಜೈಲು ಸೇರಿರುತ್ತಾಳೆ.

Annayya kannada serial December 6th episode update

ಶಿವು ತಾಯಿ ಜೈಲಿನಲ್ಲಿ ಇರುವುದು ವೀರಭದ್ರಯ್ಯನಿಗೆ ಮಾತ್ರ ತಿಳಿದಿದೆ. ಆದರೆ ಉಳಿದವರಿಗೆ ಯಾರಿಗೂ ಕೂಡ ಈ ಬಗ್ಗೆ ತಿಳಿದಿಲ್ಲ. ವೀರಭದ್ರ ಈ ವಿಚಾರವನ್ನು ಗೌಪ್ಯವಾಗಿ ಇಟ್ಟಿದ್ದಾನೆ. ಇದೀಗ ಶಿವು ತಾಯಿ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಹೋಗುವ ಖುಷಿಯಲ್ಲಿ ಇರುತ್ತಾಳೆ. ಅಂತಹ ಸಂದರ್ಭದಲ್ಲಿ ಆಕೆಯ ಮೇಲೆ ಇನ್ನೊಂದು ಆರೋಪ ಬರುವ ಹಾಗೆ ವೀರಭದ್ರಯ್ಯ ಮಾಡಿದ್ದಾರೆ.

ಶಿವು ತಾಯಿ ಮಲಗುವ ದಿಂಬಿನ ಅಡಿ ಗಾಂಜಾ ಸಿಗುವಂತೆ ಮಾಡಿದ್ದಾನೆ. ಇದರಿಂದ ಶಿವು ತಾಯಿ ಮೇಲೆ ಆರೋಪ ಬಂದಿದೆ. ಆ ಆರೋಪ ಸಾಬೀತಾದರೆ ಶಿವು ತಾಯಿಗೆ ಶಿಕ್ಷೆ ಮಾತ್ರ ಖಚಿತ. ಇತ್ತ ಪಾರು ಬಹಳ ಖುಷಿಯಲ್ಲಿ ಇರುತ್ತಾಳೆ. ಈಗಲಾದರೂ ಸಿದ್ದಾರ್ಥ್ ನನಗೆ ಸಿಕ್ಕರೆ ಅದುವೇ ನನಗೆ ಬಹಳ ದೊಡ್ಡ ಉಡುಗೊರೆ ಅಂದುಕೊಳ್ಳುತ್ತಾಳೆ. ಸಿಟಿಯಲ್ಲಿ ಪಾರು ಹಾಗೂ ಶಿವು ಮೆಡಿಕಲ್ ಕ್ಯಾಂಪ್ ನಡೆಯುವ ಸ್ಥಳಕ್ಕೆ ಬರುತ್ತಾರೆ.

Annayya kannada serial December 6th episode update

ಮೆಡಿಕಲ್ ಕ್ಯಾಂಪ್ ಬಗ್ಗೆ ವಿಚಾರಿಸಲು ಹೋದ ಶಿವು

ಮೆಡಿಕಲ್ ಕ್ಯಾಂಪ್ ನಡೆಯಬೇಕಿತ್ತು. ಆದರೆ ಯಾಕೆ ನಡೆಯುತ್ತಿಲ್ಲ ಎನ್ನುವುದನ್ನು ವಿಚಾರಣೆ ಮಾಡಬೇಕು ಎಂದು ಶಿವು ಪಾರುನ ಒಂದು ಸ್ಥಳದಲ್ಲಿ ನಿಲ್ಲಿಸಿ ಮೆಡಿಕಲ್ ಕ್ಯಾಂಪ್ ಆಗುವಲ್ಲಿಗೆ ಬಂದು ವಿಚಾರಣೆ ಮಾಡುತ್ತಾನೆ. ಆಗ ಪಾರುಗೆ ಬಹಳ ಖುಷಿ ಆಗುತ್ತದೆ. ಆದರೆ ಪಾರು ರಸ್ತೆ ಬದಿ ನಿಂತಿರುವಾಗಲೇ ಸಿದ್ದಾರ್ಥ್ ಕಾರಿನಲ್ಲಿ ಪಾಸ್ ಆಗುತ್ತಾನೆ. ಸಿದ್ದಾರ್ಥ್‌ನನ್ನು ನೋಡಿದ ಪಾರು ಸಿದ್ದಾರ್ಥ್‌ ಕರೆದುಕೊಂಡು ಓಡಿ ಹೋಗುತ್ತಾಳೆ. ಎಷ್ಟೇ ಕೂಗಿ ಸಿದ್ದಾರ್ಥ್‌ನನ್ನು ಕರೆದರು ಕೂಡ ಆತ ಪಾರು ನೋಡದೆ ಹೋಗುತ್ತಾನೆ.

ಸಿದ್ಧಾರ್ಥ್ ಹಿಂದೆ ಓಡಿದ ಪಾರು

ಪಾರುಗಿಂತ ಸಿದ್ದಾರ್ಥ್‌ಗೆ ಹಣವೇ ಹೆಚ್ಚು. ಹಣದ ವ್ಯಾಮೋಹಕ್ಕೆ ಬಿದ್ದ ಆತ ಏನು ಬೇಕಾದರೂ ಮಾಡಲು ರೆಡಿ ಆಗಿರುತ್ತಾನೆ. ಆದರೆ ಈ ವಿಚಾರಗಳು ಪಾರುಗೆ ತಿಳಿದಿಲ್ಲ. ಮುಖವಾಡ ಧರಿಸಿದ್ದ ಸಿದ್ದಾರ್ಥ್ ಇನ್ನೊಂದು ಮುಖ ಪಾರುಗೆ ತಿಳಿಯಬೇಕಾಗಿದೆ. ಇತ್ತ ಶಿವು ಪಾರುವನ್ನು ಕಾಣದೆ ಕಂಗಾಲಾಗಿ ಹೋಗಿದ್ದಾನೆ. ಶಿವುಗೆ ಪಾರು ಎಂದರೆ ಚಿಕ್ಕ ವಯಸ್ಸಿನಿಂದಲೂ ಬಹಳ ಇಷ್ಟ. ಸಿದ್ದಾರ್ಥ್ ಬಗ್ಗೆ ಶಿವುಗೆ ಎಲ್ಲಾ ವಿಚಾರಗಳು ತಿಳಿದಿದೆ. ಆದರೆ ಇನ್ನಾದರೂ ಶಿವು ಪ್ರೀತಿಯನ್ನು ಅರ್ಥ ಮಾಡಿಕೊಳ್ಳುತ್ತಾಳಾ ಎನ್ನುವುದನ್ನು ನೋಡಬೇಕಿದೆ.

More from Filmibeat

English summary
Annayya kannada serial December 6th episode update;
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X