Annayya Serial:ಸಿದ್ಧಾರ್ಥ್ ಸಿಕ್ಕ ಎಂಬ ಖುಷಿಯಲ್ಲಿರುವ ಶಿವುಗೆ ಸಿಕ್ಕಿದೆ ಶಾಕಿಂಗ್; ಅದೇನು ಗೊತ್ತೇ?

By ಪೂರ್ವ

ಪಾರುಗೆ ಹೇಗಾದರೂ ಆಕೆ ಪ್ರೀತಿ ಮಾಡುತ್ತಿದ್ದ ಸಿದ್ದಾರ್ಥನ ಜೊತೆ ಮದುವೆ ಮಾಡಿದರೆ ಆಕೆ ಖಂಡಿತವಾಗಿ ಜೀವನದಲ್ಲಿ ಸಂತೋಷವಾಗಿ ಇರುತ್ತಾಳೆ. ಇಲ್ಲವಾದರೆ ಆಕೆ ಯಾವತ್ತೂ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯ ಇಲ್ಲ. ಇದಕ್ಕೆಲ್ಲ ಏನಾದರೂ ಒಂದು ಮಾಡಬೇಕು ಎಂದು ಆಕೆ ಅಂದುಕೊಂಡಿರುತ್ತಾಳೆ. ಆಕೆಗೆ ತನ್ನ ಗಂಡನಾಗಿ ಸಿದ್ದಾರ್ಥ್‌ ಮಾತ್ರ ಬರಲು ಸಾಧ್ಯ. ಇಲ್ಲವಾದರೆ, ತನಗೆ ಯಾರು ಬೇಡ ಎಂದು ಪಾರು ಮನೆಬಿಟ್ಟು ಬಂದಾಕೆ. ಇದಕ್ಕೆಲ್ಲ ಆಕೆಯ ಮಾವ ಸಾಥ್ ನೀಡುತ್ತಾನೆ. ಸಿದ್ಧಾರ್ಥ್ ಜೊತೆ ನಾನು ನಿನಗೆ ಖಂಡಿತವಾಗಿಯೂ ಮದುವೆ ಮಾಡಿಸಿಯೇ ಮಾಡಿಸುತ್ತೇನೆ ಎನ್ನುವ ಭರವಸೆಯನ್ನು ನೀಡಿದ್ದಾನೆ.

ಆತನಿಗೆ ತನ್ನ ತಂಗಿಯರ ಖುಷಿಗಾಗಿ ಪಾರು ಏನೇನೆಲ್ಲ ಮಾಡಿಲ್ಲ. ಇದೀಗ ಆಕೆ ಕೂಡ ಖುಷಿಯಾಗಿ ಜೀವನವನ್ನು ನಡೆಸಬೇಕು. ಆಕೆ ಜೀವನದಲ್ಲಿ ಬಹಳ ಖುಷಿಯಾಗಿ ಇರಬೇಕು. ಆ ರೀತಿ ಮಾಡುವ ಜವಾಬ್ದಾರಿ ನನ್ನದು ಎನ್ನುವ ಆಲೋಚನೆ ಶಿವನಿಗೆ. ಇನ್ನೂ ಶಿವು ಪಟ್ಟಣಕ್ಕೆ ಹೋಗುತ್ತಾನೆ. ಅಚಾನಕ್ ಆಗಿ ಶಿವು ಗೆಳೆಯನಿಗೆ ಆಕ್ಷಿಡೆಂಟ್ ಆಗುತ್ತದೆ. ಆ ವೇಳೆ ಆತನನ್ನು ಶಿವು ಆಸ್ಪತ್ರೆಗೆ ಕರೆದುಕೊಂಡು ಬರುತ್ತಾನೆ. ಆ ವೇಳೆ ಶಿವು ಸಿದ್ದಾರ್ಥ್ ಫೋಟೋ ನೋಡುತ್ತಾನೆ. ಶಿವುಗೆ ಬಹಳ ಖುಷಿ ಆಗುತ್ತದೆ. ಏನೇ ಆದರೂ ಸಿದ್ದಾರ್ಥ್ ಪಾರುಗೆ ಸಿಕ್ಕೆ ಬಿಟ್ಟ ಎನ್ನುವ ಖುಷಿ ಆತನಿಗೆ ಬಹಳಷ್ಟು ಸಿಗುತ್ತದೆ. ಆತ ಅದೆಲ್ಲವನ್ನೂ ಮನದಲ್ಲಿ ಇಟ್ಟುಕೊಂಡು ಸಿದ್ದಾರ್ಥ್ ಫೋಟೋ ತೋರಿಸಿ ಡಾಕ್ಟರ್ ಬಳಿ ಕೇಳುತ್ತಾನೆ. ಡಾಕ್ಟರ್ ಇವರು ನಿಮಗೆ ಪರಿಚಯ ಇದ್ದಾರಾ ಎಂದು ಕೇಳುತ್ತಾನೆ.

Annayya Kannada Serial November 19th episode update

ಈ ಮಾತನ್ನು ಕೇಳಿ ಡಾಕ್ಟರ್ ಮೇಲಿನ ಮಹಡಿಯಲ್ಲಿ ಒಬ್ಬರು ಇದ್ದಾರೆ ಅವರಿಗೆ ಪರಿಚಯ ಇದೆ ಎಂದು ಕಾಣಿಸುತ್ತದೆ ಎಂದು ಹೇಳುತ್ತಾರೆ. ಆಗ ಶಿವು ಮೇಲಿನ ಮಹಡಿಗೆ ಓಡಿಕೊಂಡು ಹೋಗುತ್ತಾನೆ. ಬಳಿಕ ಅಲ್ಲಿ ಇರುವ ಡಾಕ್ಟರ್ ಬಳಿ ಸಿದ್ದಾರ್ಥ್ ಬಗ್ಗೆ ಕೇಳಿದಾಗ, ಸಿದ್ದಾರ್ಥ್‌ ಹಾಗೂ ಆ ಡಾಕ್ಟರ್ ಒಂದೇ ಕಾಲೇಜಿನಲ್ಲಿ ಓದಿರುವ ಬಗ್ಗೆ ಹೇಳುತ್ತಾರೆ. ಹಾಗೆಯೇ ಪಾರು ಬಗ್ಗೆಯೂ ಆಕೆಗೆ ತಿಳಿದಿರುತ್ತದೆ. ಶಿವು ಆ ವೇಳೆ ಪಾರು ಹಾಗೂ ಸಿದ್ದಾರ್ಥ್ ಬಗ್ಗೆ ಅವರ ಬಳಿ ಕೇಳಿದಾಗ ಆಕೆಗೆ ಅವರಿಬ್ಬರ ಪ್ರೀತಿ ಬಗ್ಗೆ ಗೊತ್ತಿತ್ತು. ಆದರೆ ಅವರಿಬ್ಬರೂ ಒಬ್ಬರನ್ನೊಬ್ಬರು ಖಂಡಿತವಾಗಿಯೂ ಒಂದಾಗಲು ಸಾಧ್ಯವಿಲ್ಲ ಎಂದು ಹೇಳುತ್ತಾಳೆ.

ಪಾರು ಮನದಲ್ಲಿ ಸಾಕಷ್ಟು ದುಃಖ

ಇದನ್ನು ಕೇಳಿದ ಆತನ ಮನಸ್ಸಿಗೆ ಬಹಳಷ್ಟು ನೋವು ಆಗುತ್ತದೆ. ಸಿದ್ಧಾರ್ಥ್‌ಗಾಗಿ ಪಾರು ಕಾಯುತ್ತಿರುತ್ತಾಳೆ. ಆಕೆಗೆ ಸಿದ್ದಾರ್ಥ್ ಎಂದರೆ ಬಹಳ ಪ್ರೀತಿ. ಇದೀಗ ಸಿದ್ದಾರ್ಥ್ ಯಾವತ್ತೂ ಸಿಗುವುದೇ ಇಲ್ಲ ಎಂದು ತಿಳಿದರೆ ಖಂಡಿತವಾಗಿಯೂ ಆಕೆಗೆ ಬಹಳ ನೋವು ಆಗುತ್ತೆ. ಇನ್ನೂ ಶಿವು ತಂಗಿಯರ ಜೊತೆ ಪಾರು ಭಾಂದವ್ಯ ಬಹಳಷ್ಟು ಗಟ್ಟಿ ಆಗಿದೆ. ಅತ್ತಿಗೆಯ ಜೊತೆ ಶಿವು ತಂಗಿಯರು ಮನದಲ್ಲಿರುವ ಖುಷಿ ನೋವು ಇದೆಲ್ಲವನ್ನೂ ಹೇಳಿಕೊಂಡಿದ್ದಾರೆ.

Annayya Kannada Serial November 19th episode update

ಶಿವು ತಂಗಿಯರ ಜೊತೆಯಾದ ಪಾರು

ಪಾರು ಮಾತ್ರ ಶಿವು ತಂಗಿಯರ ಮದುವೆ ಮಾಡುವವರೆಗೆ ಆ ಮನೆಯಲ್ಲಿ ಉಳಿಯುತ್ತೇನೆ ಎನ್ನುವ ಮಾತನ್ನು ಕೊಟ್ಟಿರುತ್ತಾರೆ. ಇನ್ನೂ ಪಾರು ತಂದೆ ಮಾತ್ರ ಬಹಳ ಸೊಕ್ಕಿನ ಮನುಷ್ಯ. ಆತನಿಗೆ ಶಿವು ಆಸ್ತಿ ಬೇಕು. ಆದರೆ ಶಿವುನನ್ನು ಮನೆಯ ಅಳಿಯ ಎನ್ನುವುದಕ್ಕಿಂತ ಆತನನ್ನು ಮನೆಯ ಜವಾನನ ನೋಡುತ್ತಾರೆ. ಆದರೆ, ತಂದೆಯ ಕುತಂತ್ರಕ್ಕೆ ಪಾರು ಪ್ರತಿ ತಂತ್ರವನ್ನು ಹೂಡುತ್ತಾಳೆ.

ನೋವಿನಲ್ಲಿ ಸಿದ್ದಾರ್ಥ್ ಗೆ ಸಿಗುತ್ತಾ ಸಾಂತ್ವನ

ಸಿದ್ದಾರ್ಥ್ ಇನ್ಮೇಲೆ ಪಾರುಗೆ ಸಿಗೋದೇ ಇಲ್ವಾ ಎನ್ನುವ ನೋವಲ್ಲಿ ಇರುತ್ತಾನೆ ಶಿವು. ಹೇಗಾದರೂ ಮಾಡಿ ಸಿದ್ದಾರ್ಥ್‌ ಅನ್ನು ಭೇಟಿ ಆಗಬೇಕು ಎಂದು ಅಂದುಕೊಂಡು ಇರುತ್ತಾಳೆ. ಆದರೆ, ಆತ ಸಿಗುತ್ತಾನಾ ಇಲ್ವಾ ಎನ್ನುವುದೇ ನೋಡಬೇಕಿದೆ. ಒಟ್ಟಿನಲ್ಲಿ ಪಾರುಗೆ ಶಿವನೇ ಜೋಡಿ ಎನ್ನುವುದನ್ನು ಆ ದೇವರು ಕೂಡ ಸಾರಿ ಸಾರಿ ಹೇಳುತ್ತಿರುವುದು ಮಾತ್ರ ನಿಜ.

More from Filmibeat

English summary
Annayya Kannada Serial November 19th episode update;
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X