Annayya ; ಅಮ್ಮನ ಮೇಲೆ ಕೋಪ ಮಾಡಿಕೊಂಡಿರುವ ಶಿವು, ತಾಯಿಯ ಮೇಲಿನ ಕೋಪಕ್ಕೆ ಕಾರಣವೇನು?
ಶಿವರುದ್ರಯ್ಯನ ಮಗ ಪಾರು ಹಾಗೂ ಶಿವು ಜೀವನವನ್ನು ಹಾಳು ಮಾಡಲು ಸಂಚು ರೂಪಿಸುತ್ತಿರುತ್ತಾನೆ. . ಶಿವು ಗೆ ಪಾರು ಎಂದರೆ ಪಂಚ ಪ್ರಾಣ ಆಕೆಯನ್ನು ಯಾರ ಎದುರಿಗೆ ಕೂಡ ಬಿಟ್ಟುಕೊಡುವುದಿಲ್ಲ. ಹಾಗೆಯೇ ಆತ ಹೇಳಿದ ಹಾಗೆ ಕೇಳುತ್ತಿರುತ್ತಾಳೆ. ಶಿವು ಅಂದರೆ ತಂಗಿಯರಿಗೆ ಬಹಳ ಗೌರವ. ತನ್ನ ಅಣ್ಣನಿಗೆ ತಮ್ಮಿಂದ ಎನು ಕಷ್ಟ ಆಗಬಾರದು ಎನ್ನುವುದು ತಂಗಿಯಂದಿರ ನಿಲುವು. ಕೆಲವೊಂದು ಬಾರಿ ಶಿವು ಗೆ ಪಾರು ಬುದ್ದಿ ಹೇಳಿರುತ್ತಾಳೆ.
ಆಕೆಗೆ ತನ್ನ ತಪ್ಪಿನ ಅರಿವು ಕೂಡ ಆಗುತ್ತದೆ.ಮುಂದೆ ಏನು ಮಾಡಬೇಕು ಏನು ಮಾಡಬಾರದು ಎನ್ನುವ ಅರಿವು ಆತನಿಗೆ ಮೂಡುತ್ತದೆ. ಆದರೆ ಇದೀಗ ಪಾರು ಹಾಗೂ ಶಿವು ಮೇಲೆ ವಕ್ರ ದೃಷ್ಟಿಯ ಕಣ್ಣು ಬಿದ್ದಿದೆ ಎಂದು ಹೇಳಿದರೆ ತಪ್ಪಾಗದು. ಪಾರುವನ್ನು ಹೇಗಾದರೂ ಮದುವೆ ಮಾಡಬೇಕು ಎಂದು ಆತನನ್ನು ಮದುವೆ ಆಗಬೇಕಾಗಿದ್ದ ಹುಡುಗ ಹೊಂಚು ಹಾಕುತ್ತಿದ್ದರೆ ಇತ್ತ ಪಾರು ಮಾತ್ರ ತಾನು ಪ್ರೀತಿಸಿದ ಹುಡುಗನ ಮೇಲೆ ಆಘಾದವಾದ ಪ್ರೇಮ ಹಾಗೆಯೇ ಆತನ ಮೇಲೆ ಬಹಳಷ್ಟು ನಂಬಿಕೆಯನ್ನು ಇಟ್ಟುಕೊಂಡು ಇರುತ್ತಾಳೆ. ಆದರೆ ಆಕೆಗೆ ಸಮರ್ಥ್ ಮಾತ್ರ ಸಿಗುವುದು ಡೌಟ್.

ಸಮರ್ಥ್ ನನ್ನು ಹುಡುಕಿಯಾದರು ಆತನನ್ನು ಮದುವೆ ಆಗಬೇಕು ಅಷ್ಟರವರೆಗೆ ಮಾವನ ಜೊತೆ ಇರಬೇಕು ಎಂದು ಪಾರು ಅಂದುಕೊಂಡು ಇರುತ್ತಾಳೆ. ಮಾಡದ ತಪ್ಪಿಗೆ ಪಾರು ಮಾತ್ರ ಬಹಳ ನೋವು ಅನುಭವಿಸುತ್ತಾ ಇದ್ದರೆ ಶಿವು ಮಾತ್ರ ತನಗೆ ಎಂಥ ಸ್ಥಿತಿ ಬಂತಪ್ಪ. ನನ್ನ ತಂಗಿಯಂದಿರ ಖುಷಿಗಾಗಿ ನಾನು ಇದೆಲ್ಲ ಮಾಡಲೇಬೇಕಾಗಿದೆ. ನನ್ನ ತಂಗಿಯಂದಿರಿಗೆ ಮದುವೆ ಆದರೆ ಅದುವೇ ನನಗೆ ಖುಷಿ ಎಂದು ಹೇಳುತ್ತಾನೆ. ಇನ್ನು ಶಿವರುದ್ರಯ್ಯನೀಗೆ ಪಾರು ಹಾಗೂ ಶಿವು ಮೇಲೆ ರೌಡಿಗಳು ಅಟ್ಯಾಕ್ ಮಾಡುವುದು ತಿಳಿಯುತ್ತದೆ. ಆಗ ಕೋಪಗೊಂಡ ವೀರಭದ್ರ ಇದೆಲ್ಲ ಯಾರ ಸಂಚು ಎನ್ನುವುದು ಮಾತ್ರ ನನಗೆ ತಿಳಿದಿದೆ ಎಂದು ಹೇಳಿ ತನ್ನ ಮಗನಿರುವ ಜಾಗಕ್ಕೆ ಆತ ಹೋಗುತ್ತಾನೆ.
ಮಗನ ಕೆನ್ನೆಗೆ ಹೊಡೆದ ಶಿವರುದ್ರಯ್ಯ
ಆತ ಮಗನ ಮುಖ ನೋಡಿ ಕೆನ್ನೆಗೆ ಹೊಡೆಯುತ್ತಾನೆ. ನನಗೆ ತಿಳಿದಿದೆ. ಪಾರು ಶಿವು ನನ್ನು ಕೊಲ್ಲಲು ನೀನೇ ಏನೋ ಸಂಚು ರೂಪಿಸಿದ್ದಿಯಾ ನೀನು ಇಷ್ಟು ಸಣ್ಣ ಬುದ್ದಿ ಯಾಕೆ ತೋರಿಸುತ್ತಿದ್ದಿಯಾ ಗೊತ್ತಿಲ್ಲ. ಆದರೆ ನಾನು ಮಾತ್ರ ನಿನ್ನ ಸುಮ್ಮನೆ ಬಿಡುವುದಿಲ್ಲ ಎಂದು ಜೋರಾಗಿ ಶಿವರುದ್ರಯ್ಯ ಹೇಳುತ್ತಾನೆ. ಆ ಬಳಿಕ ಮಗನ ಬಳಿ ಶಿವು ಹಾಗೂ ಪಾರು ನರಳಿ ನರಳಿ ಸಾಯಬೇಕು ಇದಕ್ಕೆ ಇರುವುದು ಒಂದೇ ಅಸ್ತ್ರ ಅದು ಆತನ ತಂಗಿಯಂದಿರು. ಅವರಿಂದಲೇ ಶಿವುವನ್ನು ನಾವು ಇಂಚಿಂಚಾಗಿ ಸಾಯಿಸಬೇಕು ಎಂದು ಹೇಳುತ್ತಾನೆ
ಶಿವು ಕೋಪದ ಮೂಲ ಹುಡುಕುತ್ತಾಳ ಪಾರು?
ಇನ್ನು ಒಂದು ಮರದ ಬಳಿಗೆ ಬಂದು ತನ್ನ ತಾಯಿಯ ಮೇಲೆ ಶಿವು ಗೆ ಇರುವ ಕೋಪವನ್ನು ತೋಡಿಕೊಳ್ಳುತ್ತಾನೆ. ಆತನಿಗೆ ತಾಯಿಯ ಮೇಲೆ ಬಹಳ ಕೋಪ ಯಾಕೆಂದರೆ ತನ್ನ ತಾಯಿಯಿಂದಾಗಿಯೇ ನಮಗೆ ಈ ರೀತಿ ಆಗಿದ್ದು ಎನ್ನುವ ಭಾವನೆ. ಆತ ತನ್ನ ತಾಯಿಯನ್ನು ಕರೆದು ನನ್ನ ತಂಗಿಯಂದಿರನ್ನು ನಾನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ ಇದೀಗ ಅವರಿಗೆ ಇಷ್ಟವಿರುವ ಅತ್ತಿಗೆ ಕೂಡ ಬಂದಿದ್ದಾಳೆ. ಪಾರು ನಮ್ಮ ಜೊತೆ ಇರುವವರೆಗೆ ನಾವು ಬಹಳ ಚೆನ್ನಾಗಿ ಜೀವನ ಸಾಗಿಸುತ್ತೇವೆ. ಇದಕ್ಕೆ ಯಾರೆ ಅಡ್ಡ ಬಂದರೂ ಕೂಡ ನಾನು ಸಹಿಸುವುದಿಲ್ಲ ಎಂದೆಲ್ಲ ಒಂದು ಮರದ ಬಳಿ ಬಂದು ಹೇಳುತ್ತಿರುವುದನ್ನು ನೋಡಿದ ಪಾರು ಗೆ ಮಾತ್ರ ಒಂದು ಅರ್ಥ ಆಗಲಿಲ್ಲ.
ಮಾವನ ನೋವಿಗೆ ಹೆಗಲು ನೀಡುತ್ತಾಳ ಪಾರು..?
ಮಾವನಿಗೆ ಯಾಕೆ ಅವರ ತಾಯಿಯ ಮೇಲೆ ಅಷ್ಟೊಂದು ಕೋಪ ಎನ್ನುವ ವಿಚಾರ ತಿಳಿಯಬೇಕಿದೆ. ಇನ್ನು ಶಿವು ಬಳಿ ಆತನ ತಾಯಿಯ ಬಗ್ಗೆ ಇರುವ ಕೋಪ ಯಾಕಾಗಿ ಎನ್ನುವುದು ತಿಳಿಯಬೇಕಾಗಿದೆ. ಪಾರು ಗೆ ತಿಳಿದಿಲ್ಲ, ಶಿವು ಪಾರುವನ್ನು ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡುವುದು ಪಾರು ಗೆ ತಿಳಿಯಬೇಕಿದೆ


Click it and Unblock the Notifications











