Annayya ; ಶಿವು ವಿರುದ್ಧ ಕುತಂತ್ರ ಮಾಡುತ್ತಿರುವ ವೀರಭದ್ರ? ವೀರಭದ್ರನ ಮೋಸದಾಟಕ್ಕೆ ತೆರೆ ಎಳೆಯುತ್ತಾಳ ಪಾರು?
ತನ್ನ ತಂದೆಗೆ ಬುದ್ಧಿ ಕಲಿಸಲು ಪಾರು ಕಷ್ಟ ಪಡುತ್ತಿದ್ದಾಳೆ. ಹೇಗಾದರೂ ಮಾಡಿ ತನ್ನ ತಂದೆಗೆ ಬುದ್ಧಿಯನ್ನು ಕಲಿಸಬೇಕು ಇಲ್ಲವಾದರೆ ಶಿವನನ್ನು ಅವರ ಪಾದದಡಿಗೆ ಇಟ್ಟು ತುಳಿದುಬಿಡುತ್ತಾರೆ ಎಂದು ಪಾರುಗೆ ತಿಳಿದಿದೆ. ತನ್ನ ತಂದೆ ಬಹಳ ಸ್ವಾರ್ಥಿ. ಅವರ ಸ್ವಾರ್ಥಕ್ಕೆ ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ ಎನ್ನುವುದು ಪಾರುಗೆ ಗೊತ್ತಿದೆ. ಇನ್ನು ಶಿವುನ ವೀರಭದ್ರಯ್ಯನವರು ದಿನಸಿ ತೆಗೆದುಕೊಂಡು ಬಾ ಎಂದು ಕರೆ ಮಾಡಿ ಹೇಳುತ್ತಾರೆ. ಶಿವು ತನ್ನ ಮಾವನ ಮಾತನ್ನು ಯಾವತ್ತು ಮೀರುವುದಿಲ್ಲ. ತನ್ನ ಮಾವ ಎದುರಲ್ಲಿ ಮಾತ್ರ ಕಠೋರ ಆದರೆ ಮನದಲ್ಲಿ ಬಹಳ ಮೃದು ಸ್ವಭಾವದವರು ಎಂದುಕೊಂಡಿರುತ್ತಾನೆ ಶಿವು.
ಆದರೆ ವೀರಭದ್ರಯ್ಯ ಮನದಲ್ಲಿ ಸಾಕಷ್ಟು ಲೆಕ್ಕಚಾರ ಹಾಕಿಕೊಂಡು ಕೆಲಸ ಮಾಡುವ ವ್ಯಕ್ತಿ ಎನ್ನುವ ವಿಚಾರ ಪಾರುಗೆ ಈಗೀಗ ಬಹಳ ಅರ್ಥ ಆಗುತ್ತಿದೆ. ಪಾರು ಅಂದುಕೊಂಡ ಹಾಗೆ ಶಿವು ಬಡವನಲ್ಲ ಆತನ ಬಳಿ ಬೇಕಾದಷ್ಟು ಆಸ್ತಿ ಪಾಸ್ತಿಗಳಿದೆ. ಅದೆಲ್ಲವನ್ನ ಬಳಸಿಕೊಂಡು ತನ್ನ ತಂದೆ ಮೆರೆದಾಡುತ್ತಿದ್ದಾರೆ. ಇದೀಗ ಶಿವು ಹೆಸರಿನಲ್ಲಿ ಇರುವ 150 ಎಕರೆ ಜಮೀನನ್ನು ವೀರಭದ್ರಯ್ಯನವರು ಹೇಗಾದರೂ ಮಾಡಿ ಕಬಳಿಕೊಳ್ಳಬೇಕು ಎಂದು ಅಂದುಕೊಂಡು ಇರುತ್ತಾರೆ ಆದರೆ ಇದಕ್ಕೆ ಶಿವು ಹೆಂಡತಿ ಪಾರು ಬಿಡಬೇಕಲ್ಲಾ..?

ವೀರಭದ್ರ ಏನು ಎನ್ನುವುದನ್ನು ಚಿಕ್ಕ ವಯಸ್ಸಿನಿಂದಲೂ ಪಾರು ಅರಿತುಕೊಂಡು ಇರುತ್ತಾಳೆ. ತನ್ನ ಮಾವನಿಗೆ ತಂದೆ ಅದೆಷ್ಟು ಮೋಸ ಮಾಡಿದ್ದಾರೆ ಎನ್ನುವುದನ್ನು ನಾನು ಕಾಣೆ. ಆದರೆ ಇನ್ನೂ ಮೇಲೆ ನನ್ನ ಮಾವ ಯಾರ ಕಾಲಿನ ಬಳಿಯೂ ಕುಳಿತುಕೊಳ್ಳುವುದು ಇಷ್ಟವಿಲ್ಲ. ಹಾಗೆಯೇ ಯಾರ ಜೊತೆ ಹೇಗಿರಬೇಕು ಎಂಬುವುದನ್ನು ಪಾರು ಹೇಳಿಕೊಡುತ್ತಿದ್ದಾಳೆ. ವೀರಭದ್ರ ಗೆ ಇದೀಗ ಹೇಗಾದರೂ ಮಾಡಿ ಶಿವು ಜೊತೆ ಖಾಲಿ ಪೇಪರ್ ಗೆ ಸಹಿ ಮಾಡಿಸಬೇಕು ಎನ್ನುವ ಆಲೋಚನೆಯಲ್ಲಿ ಇರುತ್ತಾನೆ. ಪಾರುಗೆ ಮಾತ್ರ ತನ್ನ ತಂದೆ ಶಿವುವನ್ನು ಕರೆದಿದ್ದೇ ಬೇರೆ ವಿಚಾರಕ್ಕೆ ಎನ್ನುವುದು ಆಕೆಗೆ ತಿಳಿದಿದೆ.
ಮನೆಗೆ ದಿನಸಿ ತರಲು ಹೇಳಿದ ವೀರಭದ್ರ
ವೀರಭದ್ರಯ್ಯ ನವರು ಶಿವು ಬಳಿ ದಿನಸಿ ತೆಗೆದುಕೊಂಡು ಬಾ ಎಂದು ಹೇಳುವ ನೆಪದಲ್ಲಿ ಖಾಲಿ ಪತ್ರಕ್ಕೆ ರುಜು ಹಾಕಿಸಿಕೊಂಡು ಬಿಡಬಹುದು ಎನ್ನುವ ಆಲೋಚನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅಂಗಡಿಯ ಬಳಿ ಬಂದ ಪಾರು ತನ್ನ ಗಂಡನ ಬಳಿತನ್ನ ತಂದೆಯ ಮನೆಗೆ ನೀನು ಹೋದರೆ ಅವರ ಕಾಲ ಕೆಳಗೆ ಕುಳಿತುಕೊಳ್ಳಬೇಡ ಇದೆಲ್ಲ ನನಗೆ ಇಷ್ಟ ಆಗುವುದು ಇಲ್ಲ ಹಾಗೆಯೇ ನೀನು ಹಾಗೆಲ್ಲ ಮಾಡುವುದು ಇಲ್ಲ ಎಂದು ನನಗೆ ಮಾತು ಬೇರೆ ಕೊಟ್ಟಿದ್ಧಿಯಾ. ದಿನಸಿ ಐಟಂ ಅನ್ನು ಅವರ ಮನೆಗೆ ನಿನ್ನ ಅಂಗಡಿಯ ಹುಡುಗರ ಜೊತೆ ಕಳುಹಿಸಿಕೊಡು. ನೀನು ಖುದ್ದಾಗಿ ಅಲ್ಲಿಗೆ ಹೋಗುವುದು ಬೇಡ ಎಂದಾಗ ಶಿವು ಮಾತ್ರ ಪಾರು ಎಂದು ಹೇಳುತ್ತಾನೆ.
ಮನೆಗೆ ಹೋಗದಂತೆ ಶಿವನನ್ನು ತಡೆದ ಪಾರು
ಆದರೆ ಪಾರು ಮಾತ್ರ ಶಿವು ಮಾತುಗಳನ್ನು ಕೇಳಿಸಿಕೊಳ್ಳದೆ ಸುಮ್ಮನೆ ಇರುತ್ತಾಳೆ. ಇತ್ತ ಪಾರು ಮಾತು ಕೇಳಲಾಗದೆ ಅತ್ತ ಮಾವನ ಮಾತು ಕೇಳಲಾಗದೆ ಶಿವು ಅಡ್ಡ ಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡ ಪರಿಸ್ಥಿತಿ ಆಗುತ್ತದೆ. ಪಾರು ಮನದಲ್ಲಿ ತನ್ನ ತಂದೆ ಕೊಟ್ಟ ಖಾಲಿ ಪೇಪರ್ ಗೆ ಶಿವು ಹಾಗೂ ಆತನ ತಂದೆ ಯಾಕೆ ಸಹಿ ಹಾಕಬೇಕು ಎಂದು ಯೋಚನೆ ಮಾಡುತ್ತಾಳೆ . ಶಿವು ತಂದೆಗೆ ಕುಡಿತದ ಚಟ ಇದ್ದು ನಾನು ಅದೆಷ್ಟು ಸಲ ನಿನ್ನ ತಂದೆ ಕೊಟ್ಟ ಖಾಲಿ ಪೇಪರ್ ಗೆ ಹೆಬ್ಬೆಟ್ಟು ಒತ್ತಿದ್ದೇನೆ ಎನ್ನುವುದು ನನಗೆ ಗೊತ್ತಿಲ್ಲ ಎಂದಾಗ ಪಾರು ಗೆ ತನ್ನ ತಂದೆಯ ಮೇಲೆ ಅನುಮಾನ ಇನ್ನೂ ಹೆಚ್ಚಾಗುತ್ತೆ.


Click it and Unblock the Notifications











