Annayya ; ಪಾರು ಇಲ್ಲದ ಜೀವನ ನೆನಪಿಸಿಕೊಂಡು ಅತ್ತ ಶಿವು, ಪಾರು ಮೇಲೆ ಶಿವುಗೆ ಇದ್ದ ಪ್ರೀತಿ ಗೊತ್ತಾಯ್ತಾ?
ಶಿವುಗೆ ಪಾರು ಎಂದರೆ ಬಹಳ ಪ್ರೀತಿ. ಪಾರು ಇಲ್ಲದೆ ಜೀವನನೇ ಇಲ್ಲ ಎಂದುಕೊಂಡು ಇದ್ದ ಶಿವು ಗೆ ಇದೀಗ ಆಘಾತವೊಂದು ಎದುರಾಗಿದೆ. ಪಾರು ಅಮೇರಿಕಾಗೆ ಹೋಗುತ್ತಾಳೆ ಎಂದು ತಿಳಿದು ಬಹಳಷ್ಟು ಬೇಸರ ಪಡುತ್ತಾನೆ. ತನ್ನ ತಂಗಿಯಂದೀರು ಪಾರುವನ್ನೂ ಅಮ್ಮನ ಸ್ಥಾನ ಕೊಟ್ಟು ಪೂಜೆ ಮಾಡುತ್ತಿದ್ದರು ಆದರೆ ಇದೀಗ ಸಡನ್ ಆಗಿ ಪಾರು ತೆಗೆದುಕೊಂಡ ನಿರ್ಧಾರದಿಂದ ತನ್ನ ತಂಗಿಯರಿಗೆ ಬಹಳಷ್ಟು ನೋವಾಗಿದೆ ಎಂದು ಶಿವು ತನ್ನ ಮನದಲ್ಲಿ ಅಂದುಕೊಳ್ಳುತ್ತಾನೆ .
ಸಿದ್ದಾರ್ಥ್ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ಪಾರು ತಾನು ಅಮೇರಿಕಾ ಗೆ ಹೋಗಿ ಹೈಯರ್ ಸ್ಟಡಿ ಮಾಡಬೇಕು. ನನ್ನ ಜೀವನವನ್ನು ನಾನು ನೋಡಿಕೊಳ್ಳಬೇಕು. ಇಲ್ಲೇ ಇದ್ದರೆ ಖಂಡಿತವಾಗಿಯೂ ನಾನು ಸಿದ್ದಾರ್ಥ್ ನ ಮರೆಯಲು ಸಾಧ್ಯ ಇಲ್ಲ ಎನ್ನುವುದು ಪಾರು ಅಂದುಕೊಳ್ಳುತ್ತಾಳೆ. ಪಾರು ಏನೇ ಹೇಳಿದರೂ ಕೂಡ ಶಿವು ಆಕೆಯ ಮಾತನ್ನು ತೆಗೆದು ಹಾಕುವುದು ಇಲ್ಲ. ಅಮೇರಿಕಾ ಗೆ ನಾನು ಹೋಗುತ್ತೇನೆ ಮಾವ ಇಲ್ಲಿ ನನಗೆ ಎನು ಮಾಡಲು ಕೂಡ ಸಾಧ್ಯ ಆಗುತ್ತಿಲ್ಲ ಎಂದು ಬಹಳ ಬೇಸರದಿಂದ ಶಿವು ಜೊತೆ ಪರಿ ಪರಿಯಾಗಿ ಬೇಡಿಕೊಳ್ಳುತ್ತಾಳೆ. ಆಕೆಯ ಮಾತಿಗೆ ಸ್ಪಂದಿಸಿದ ಶಿವು ಆಕೆಯನ್ನು ಅಮೇರಿಕಾಗೆ ಹೋಗಲು ಒಪ್ಪಿಗೆ ಸೂಚಿಸಿ ಬಿಡುತ್ತಾನೆ.

ನೀನು ಅಮೇರಿಕಾ ಗೆ ಹೋಗಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಹೇಳಿ ಆಕೆಗೆ ಬೇಕಾಗುವ ಹಣ ಹಾಗೆಯೇ ತಿಂಡಿ ತಿನಸುಗಳನ್ನು ಮಾಡಿಕೊಂಡು ಪಾರು ಗೆ ತಂದು ಕೊಡುತ್ತಾನೆ. ಶಿವುಗೆ ತನ್ನ ತಂಗಿಯರ ಮದುವೆ ಮಾಡಬೇಕು ಎನ್ನುವ ಆಸೆ ಇರುತ್ತದೆ. ತಂಗಿಯರ ಮದುವೆಗೆ ತೆಗೆದಿಟ್ಟ ಹಣವನ್ನು ಪಾರು ಗೆ ಕೊಡುತ್ತಾನೆ ಶಿವು. ಶಿವು ಮುಗ್ಧ ಮನಸ್ಸಿಗೆ ಆಕೆಯ ತಂಗಿಯರು ಬಹಳ ನೋವು ಪಡುತ್ತಾರೆ. ಪಾರು ಒಬ್ಬ ತಂಗಿಗೆ ಸಿದ್ದಾರ್ಥ್ ಬಗ್ಗೆ ತಿಳಿದಿರುತ್ತದೆ. ಅತ್ತಿಗೆಯ ಜೊತೆ ಮಾತನಾಡಬೇಕು ಎಂದು ಹೇಳಿ ಶಿವು ತಂಗಿ ಹೊಲದ ಬಳಿ ಕರೆದುಕೊಂಡು ಹೋಗಿ ಸಿದ್ದಾರ್ಥ್ ಬಗ್ಗೆ ಕೇಳಿದಾಗ ಪಾರು ಗೆ ಶಾಕ್ ಆಗುತ್ತದೆ.
ಪಾರು ಬಳಿ ತಾಯಿ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಿದ್ದ ಶಿವು
ಶಿವು ತಂಗಿ ಅಣ್ಣನ ಪ್ರೀತಿಯನ್ನು ಪಾರು ಜೊತೆ ಹೇಳಬೇಕು ಎಂದಾಗ ಅಲ್ಲಿಗೆ ಶಿವು ಬರುತ್ತಾನೆ. ಮಾತು ಅರ್ಧದಲ್ಲಿಯೇ ನಿಂತು ಹೋಗುತ್ತದೆ. ಆದರೆ ಶಿವು ಕೂಡ ಒಂದು ಹುಡುಗಿಯನ್ನು ಪ್ರೀತಿ ಮಾಡಿದ್ದ ಎನ್ನುವ ವಿಚಾರ ಪಾರುಗೆ ತಿಳಿಯುತ್ತದೆ. ತಾಯಿಯನ್ನು ಕಳೆದುಕೊಂಡಿದ್ದ ಶಿವು, ತಾಯಿ ಪ್ರೀತಿಯನ್ನು ತನ್ನ ಹೆಂಡತಿಯ ಬಳಿಯಲ್ಲಿ ಕಾಣುತ್ತಿದ್ದ. ಆದರೆ ಇದೀಗ ಆಕೆ ಮತ್ತೆ ಅಮೇರಿಕಾಗೆ ತೆರಳಿದರೆ ತನ್ನ ತಂಗಿಯರೂ ಆ ನೋವನ್ನು ಖಂಡಿತವಾಗಿಯೂ ತಡೆದುಕೊಳ್ಳುವುದಿಲ್ಲ ಆದರೆ ಏನು ಮಾಡುವುದು ಅಮೆರಿಕಕ್ಕೆ ಪಾರು ಹೋಗಲೇಬೇಕು ಎಂದು ಶಿವು ಮನದಲ್ಲಿಯೇ ನೋವು ಪಡುತ್ತಾನೆ. ಶಿವುಗೆ ಏನಾದರೂ ಒಂದು ಬೇಜಾರಾದರೆ ಮನೆಯ ಹಿತ್ತಿಲಿನಲ್ಲಿರುವ ಮರದ ಬಳಿ ಮಾತನಾಡುತ್ತಾನೆ.
ಶಿವು ಮಾತು ಕೇಳಿಸಿಕೊಂಡು ಬಿಟ್ಟಳ ಪಾರು
ಶಿವು ತನ್ನ ಮನದಲ್ಲಿರುವ ನೋವನ್ನು ಹೇಳುತ್ತಿರುತ್ತಾನೆ. ತನ್ನ ತಂಗಿಯಂದೀರು ಅತ್ತಿಗೆ ಬಂದಳು ಎಂದು ಖುಷಿ ಆಗಿರುವ ವೇಳೆಯೇ ಅವರಿಗೆ ಇಷ್ಟೊಂದು ನೋವು ಕೊಟ್ಟು ಬಿಟ್ಟೆಯಲ್ಲ ಇದು ನ್ಯಾಯವೇ ಎಂದು ಕೇಳುತ್ತಿರುಗಾಗ ಪಾರು ಬರುತ್ತಾಳೆ. ಪಾರುಗೆ ಶಿವು ಪ್ರೀತಿ ಬಗ್ಗೆ ತಿಳಿದಿರುತ್ತದೆ ಆದರೆ ಶಿವು ಯಾರನ್ನು ಪ್ರೀತಿ ಮಾಡುತ್ತಿದ್ದಾನೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.


Click it and Unblock the Notifications











