Annayya ; ಸೀನಾ ಜೊತೆ ಗುಂಡಮ್ಮನ ಮದುವೆ? ಮೌನಿಯಾಗಿ ಕುಳಿತ ಮದುಮಗಳು..!

By ಪೂರ್ವ

ಗುಂಡಮ್ಮ ನ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡಬೇಕು ಎಂದು ಶಿವು ಅಂದುಕೊಂಡಿರುತ್ತಾನೇ. ಆ ರೀತಿ ಮದುವೆ ಗೆ ಸಿದ್ಧತೆ ಮಾಡಿಕೊಂಡಿರುತ್ತಾನೆ. ತನ್ನ ತಂಗಿ ಗುಂಡಮ್ಮ ನ ಮದುವೆ ಗೆ ಹೆತ್ತವರನ್ನು ಕರೆಯಬೇಕು ಎಂದೆಲ್ಲ ಅಂದುಕೊಂಡ ಶಿವು ಮದುವೆಯನ್ನು ತಾನು ಅಂದುಕೊಂಡ ಹಾಗೆ ಏರ್ಪಾಡು ಮಾಡುತ್ತಾನೆ. ಗಂಡಿನ ಕಡೆಯವರು ವರದಕ್ಷಿಣೆಯನ್ನು ಬಹಳಷ್ಟು ಡಿಮ್ಯಾಂಡ್ ಮಾಡಿರುತ್ತಾರೆ. ವಧು ದಕ್ಷಿಣೆ ನೀಡಿದರೆ ಮಾತ್ರ ಮದುವೆ ಆಗುವುದು ಎಂದು ಕೂಡ ಹೇಳುತ್ತಾರೆ. ಆ ಪ್ರಕಾರವಾಗಿ ವರದಕ್ಷಿಣೆ ಹಣವನ್ನು ಕೂಡ ಶಿವು ಆರೆಂಜ್ ಮಾಡಿರುತ್ತಾನೆ.

ತನ್ನ ತಂಗಿಯ ಮದುವೆ ಅದ್ದೂರಿಯಾಗಿ ಮಾಡಿ ಏನೋ ಕೊಡುತ್ತೇನೆ ಆದರೆ ಮತ್ತೆ ನಮ್ಮ ಜೊತೆ ಆಕೆ ಇರಲು ಸಾಧ್ಯ ಇಲ್ಲ ಎಂಬ ಬೇಸರ ಕಾಡುತ್ತಿದೆ. ಇನ್ನೊಂದು ಕಡೆ ತನ್ನ ತಂಗಿಯ ಮದುವೆ ಬಹಳ ಜೋರಾಗಿಯೇ ಮಾಡುತ್ತಿದ್ದೇನೆ ಎನ್ನುವ ಹೆಮ್ಮೆ ಆತನಿಗೆ. ಇತ್ತ ಪಾರು ಕೂಡ ಬಹಳ ಸಂಭ್ರಮದಿಂದ ಮದುವೆ ಮನೆಯಲ್ಲಿ ಒಡಾಡುತ್ತಿರುತ್ತಾಳೆ. ಶಿವು ತಾಯಿಗೆ ಗಂಡಿನ ಕಡೆಯವರು ರಶ್ಮಿಯನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಆಕೆಗೆ ಜೀವನ ಖಂಡಿತವಾಗಿಯೂ ಹಾಳಾಗಿ ಹೋಗುತ್ತದೆ ಎಂದು ಗೊತ್ತಾಗುತ್ತದೆ. ಇದರಿಂದ ಶಿವು ತಾಯಿ ಶಿವ ತೆಗೆದಿಟ್ಟಿದ್ದ ಹತ್ತು ಲಕ್ಷ ರೂಪಾಯಿ ಹಣವನ್ನು ಮೆತ್ತಗೆ ಎಸ್ಕೇಪ್ ಮಾಡುತ್ತಾಳೆ. ಇತ್ತ ಮದುವೆಯ ಎಲ್ಲಾ ಶಾಸ್ತ್ರಗಳು ಮಾಡಿ ಆಗುತ್ತದೆ.

annayya serial 21th February written update

ಹಾಗೆಯೇ ಗಂಡು ಹೆಣ್ಣು ಇಬ್ಬರೂ ಪೂಜೆ ಬಳಿ ಕುಳಿತಿರುತ್ತಾರೆ. ಆ ವೇಳೆ ಗಂಡಿನ ಕಡೆಯವರು ಶಿವು ಬಳಿಗೆ ಬಂದು ವರದಕ್ಷಿಣೆ ಹಣ ಕೇಳುತ್ತಾರೆ. ಹುಡುಗನ ತಂದೆಗೆ ಹಣದ ಮೇಲೆ ಬಹಳ ವ್ಯಾಮೋಹ ಹಾಗೆಯೇ ರಶ್ಮಿ ಮದುವೆ ಆದ ಬಳಿಕ ಶಿವು ಬಳಿಯಿಂದ ಬಹಳಷ್ಟು ಹಣವನ್ನು ತೆಗೆದುಕೊಳ್ಳಬೇಕು ಎನ್ನುವ ಆಲೋಚನೆ ಗಂಡಿನ ತಂದೆಗೆ ಮೂಡಿರುತ್ತದೆ. ಆದರೆ ಪಾಪ ಶಿವು ಗೆ ಅದ್ಯಾವುದೂ ತಿಳಿಯುವುದಿಲ್ಲ. ವೀರಭದ್ರಯ್ಯ ಶಿವು ತಂಗಿಯ ಬಾಳಲ್ಲೇ ಆಟವಾಡಲು ಶುರು ಮಾಡಿರುತ್ತಾನೆ. ಇತ್ತ ಶಿವು ತಾಯಿ ಮದುವೆ ಮನೆಯಲ್ಲೆಲ್ಲಾ ಮುಖ ಮುಚ್ಚಿಕೊಂಡೆ ಓಡಾಡುತ್ತಿರುತ್ತಾಳೆ. ಆಕೆಗೆ ಮಗಳ ಮದುವೆ ಸಂಭ್ರಮ ನೋಡುವಾಸೆ.

ಶಿವು ತಾಯಿಯನ್ನು ನೋಡಿ ಗಾಬರಿಯಾದ ವೀರಭದ್ರಯ್ಯ

ಆದರೆ ಆಕೆಗೆ ಅದು ಹೇಗೋ ವೀರಭದ್ರಯ್ಯನ ಪಿತೂರಿ ಅರ್ಥವಾಯಿತು. ವೀರಭದ್ರಯ್ಯ ನ ಬಳಿಗೆ ಬಂದ ಶಿವು ತಾಯಿ ಮುಖದ ಮೇಲೆ ಹಾಕಿದ್ದ ಸೀರೆಯನ್ನು ಒಮ್ಮೆಲೆ ತೆಗೆಯುತ್ತಲೇ ಲೇಯ್ ವೀರಭದ್ರಯ್ಯ ಎಂದು ಕರೆಯುತ್ತಾಳೆ. ಶಿವು ತಾಯಿಯ ಮುಖವನ್ನು ನೋಡಿ ವೀರಭದ್ರಯ್ಯ ನಡುಗುತ್ತಾನೆ ಆತನಿಗೆ ಸುಮಿತ್ರ ದೇವಿಯನ್ನು ಕಂಡು ಬಹಳಷ್ಟು ಭಯವಾಗುತ್ತದೆ ಇತ್ತ ಶಿವು ತೆಗೆದಿಟ್ಟ ಹಣ ಕಾಣೆಯಾಗಿದೆ ಇದಕ್ಕೆಲ್ಲಾ ಕಾರಣ ಸೀನ ಎಂದು ಹಲವರು ಹೇಳಿದಾಗ ಸೀನ ಮಾತ್ರ ಭಯದಲ್ಲಿ ಕಂಗಾಲಾಗುತ್ತಾನೆ. ತಾನು ಆ ತಪ್ಪು ಮಾಡಿಲ್ಲ ಎಂದು ಸಾರಿ ಸಾರಿ ಹೇಳುತ್ತಾನೆ ಆದರೆ ಸೀನಾನನ್ನು ಮಾತನಾಡಿಸಲು ಆತನ ತಂದೆ ಬಿಡುವುದೇ ಇಲ್ಲ.

ಮದುವೆ ಮನೆಯಿಂದ ಹೊರಟು ಹೋದ ಮದುಮಗ

ಮದುವೆ ಮನೆಯಲ್ಲಿ ಬಹಳ ದೊಡ್ಡ ಕೋಲಾಹಲ ಏರ್ಪಡುತ್ತದೆ. ಏನು ಮಾಡುವುದು ಎಂದು ಭಯವೇ ಆಗಿಬಿಡುತ್ತದೆ. ಇತ್ತ ಶಿವು ಗಂಡಿನ ಕಡೆಯವರಿಗೆ ಹಣ ಕಾಣೆಯಾಗಿರುವುದನ್ನು ಶಿವು ತಿಳಿಸುತ್ತಾನೆ. ಈ ವಿಚಾರ ಕೇಳಿದ ಗಂಡಿನ ಕಡೆಯವರಿಗೆ ಬಹಳ ಕೋಪ ಬರುತ್ತದೆ. ಶಿವುವನ್ನು ಬಾಯಿಗೆ ಬಂದ ಹಾಗೆ ನಿಂದಿಸಿ ಮದುವೆಯನ್ನು ಅರ್ಧಕ್ಕೆ ನಿಲ್ಲಿಸಿ ಅಲ್ಲಿಂದ ಸೀದಾ ಹೊರಟು ಹೋಗುತ್ತಾರೆ. ಶಿವು ಗಂಡಿನ ತಂದೆಯ ಕಾಲು ಹಿಡಿಯುತ್ತಾನೆ ಆದರೂ ಕೂಡಾ ಯಾರ ಮನಸ್ಸು ಕರಗುವುದೇ ಇಲ್ಲ. ಮದುವೆಯ ಮನೆಯಿಂದ ಗಂಡಿನ ಕಡೆಯವರು ಹೊರ ನಡೆದಾಗ ಶಿವು ಆಕ್ರಂದನ ಮುಗಿಲು ಮುಟ್ಟುತ್ತದೆ. ಇದೆಲ್ಲವನ್ನೂ ನೋಡಿದ ಸೀನಾ ತಂದೆ ಇದಕ್ಕೆಲ್ಲ ನೀನೇ ಕಾರಣ , ನೀನೇ ಆಕೆಯನ್ನು ಮದುವೆಯಾಗ ಬೇಕು ಎಂದು ಬಹಳ ಕೋಪದಿಂದ ಹೇಳುತ್ತಾಳೆ. ಇದೆಲ್ಲವನ್ನೂ ಕೇಳಿದ ಶಿವು ಮಾತ್ರ ಮೌನಿ ಆಗುತ್ತಾನೆ. ಇತ್ತ ಸೀನಾ ಇಷ್ಟವಿಲ್ಲದ ಮದುವೆಯಾಗಲು ಸಜ್ಜಾದರೆ ರಶ್ಮಿ ಮಾತ್ರ ಮೌನವಾಗಿ ಕುಳಿತು ಬಿಡುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X