Annayya ; ಗುಂಡಮ್ಮಸ್ಥಿತಿ ಕಂಡು ಮರುಗಿದ ಶಿವು, ಹಳೆ ದಿನಗಳ ಮೆಲುಕು ಹಾಕುತ್ತಾಳಾ ಸೌಭಾಗ್ಯ?
ಪಾರುಗೆ ಶಿವು ಮೇಲೆ ಮನಸಾಗಿದೆ. ಮೊದಲೆಲ್ಲ ಶಿವು ನ ಕಂಡರೆ ಕೊಂಚ ಮುನಿಸಿತ್ತು ಪಾರು ಗೆ. ಇದೀಗ ಪಾರ್ವತಿಗೆ ಶಿವುವನ್ನು ಮನೆಯಲ್ಲಿ ಕಾಣದಿದ್ದರೆ ಆಕೆಗೆ ಬಹಳಷ್ಟು ಆತಂಕ. ಆತನನ್ನು ಕಾಣುವವರೆಗೆ ಕೂಡ ಪಾರು ಶಿವುಗಾಗಿ ಹಂಬಲಿಸುತ್ತಿರುತ್ತಾರೆ. ಶಿವು ಮಾಡುತ್ತಿರುವ ಸಹಾಯಗಳನ್ನು ನೆನೆದುಕೊಂಡು ಪಾರು ಖುಷಿಯಾಗಿದ್ದಾಳೆ. ದೂರದಲ್ಲಿರುವ ಊರಿನ ಜನರಿಗೆ ಶಿವು ಸಹಾಯ ಮಾಡುತ್ತಿರುತ್ತಾನೆ ಆದರೆ ಹತ್ತಿರವೇ ಇರುವ ನನ್ನ ಜೀವನ ಸರಿಪಡಿಸಲು ಮಾವ ಬಹಳ ಕಷ್ಟ ಪಟ್ಟಿರುವುದು ಪಡುತ್ತಿರುವುದು ಎಷ್ಟು ನಿಜ ಎಂದು ಮನದಲ್ಲಿ ಪಾರು ಯೋಚನೆ ಮಾಡುತ್ತಿರುತ್ತಾಳೆ.
ನಾನು ಮನೆಯಲ್ಲಿಯೇ ಬಹಳ ಸುಂದರವಾದ ಮಾಣಿಕ್ಯ ಇಟ್ಟುಕೊಂಡಿರುವಾಗ ಊರೂರು ಅಲೆದಾಡುತ್ತಿರುವುದು ಎಷ್ಟು ಸರಿ ಎಂದು ಪಾಲು ಆಲೋಚನೆ ಮಾಡುತ್ತಾಳೆ. ಆಕೆಗೆ ಶಿವು ಮೇಲೆ ಮನಸಾಗಿದೆ. ಶಿವುವಿನ ಒಳ್ಳೆಯ ಮನಸ್ಸಿಗೆ ಪಾರು ಕಳೆದೆ ಹೋಗಿದ್ದಾಳೆ. ಸಿದ್ದಾರ್ಥ್ ಪ್ರೀತಿಯಲ್ಲಿ ಬಿದ್ದಿದ್ದ ಪಾರುಗೆ ಆತನ ಪ್ರೀತಿಯೇ ಸುಳ್ಳು ಎನ್ನುವುದು ಬಹಳ ಚೆನ್ನಾಗಿಯೇ ತಿಳಿಯುತ್ತದೆ. ಶಿವು ಮನೆಗೆ ಬಂದ ಬಳಿಕ ಬಹಳ ಖುಷಿಯಿಂದ ಮನೆಗೆ ಬರುತ್ತಾನೆ.

ಆತನನ್ನು ನೋಡುವುದೇ ಪಾರುಗೆ ಬಹಳ ಖುಷಿ. ಪಾರು ಶಿವು ಬಳಿ ಏನೋ ಹೇಳಬೇಕು ಎಂದುಕೊಂಡು ಇರುತ್ತಾಳೆ ಆದರೆ ಗುಂಡಮ್ಮ ಮಾಡಿದ ಕೆಲಸದಿಂದ ಅದೆಲ್ಲ ಹಾಳಾಗಿದೆ. ಗುಂಡಮ್ಮ ತಾನು ತೆಳ್ಳಗೆ ಆಗಬೇಕು ಎಂದು ಅನ್ನ ನೀರು ಬಿಟ್ಟು ಕುಳಿತಿದ್ದಾಳೆ. ಆಕೆಗೆ ಎನು ಬೇಡ ತಾನು ತೆಳ್ಳಗೆ ಆಗುವುದೇ ನನ್ನ ಗುರಿ ಎಂದು ಆಕೆ ಹೇಳಿಕೊಳ್ಳುತ್ತಲೇ ಬಂದಿದ್ದಾಳೆ. ಬೇರೆ ಯಾರು ಏನೇ ಹೇಳಿದರೂ ಕೂಡ ಆಕೆ ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಶಿವು ಗೆ ಈ ವಿಚಾರ ತಿಳಿಯುತ್ತಿದ್ದಂತೆ ಬಹಳ ಬೇಸರ ಪಡುತ್ತಾನೆ. ಊಟದ ಮುಂದೆ ಕುಳಿತು ಊಟ ಮಾಡಲ್ಲ ಎನ್ನುವ ಹಠ ಮಾಡಬಾರದು ಎಂದು ಶಿವು ಬುದ್ದಿ ಮಾತು ಹೇಳುತ್ತಾನೆ. ಆದರೆ ಗುಂಡಮ್ಮ ಅಣ್ಣನ ಮಾತನ್ನು ಕೇಳುತ್ತಾಳ ಎಂಬುವುದನ್ನು ಕಾದು ನೋಡಬೇಕಿದೆ.
ಗಂಡನ ಮಾತು ಕೇಳಿ ಕೋಪಗೊಂಡ ಸೌಭಾಗ್ಯ
ಇತ್ತ ಸೌಭಾಗ್ಯಗೆ ಗಂಡ ವೀರಭದ್ರಯ್ಯ ಮಾತನಾಡಿದ್ದನ್ನು ಕಂಡು ಬಹಳಷ್ಟು ಕೋಪ ಉಕ್ಕಿ ಬರುತ್ತದೆ. ನಿನ್ನ ಅಪ್ಪನ ಮನೆಯಿಂದ ನೀನು ಎನು ತಂದಿದ್ದಿಯಾ ಎನ್ನುವ ಮಾತು ಕೇಳಿ ಸೌಭಾಗ್ಯ ಬಹಳಷ್ಟು ಕೋಪದಲ್ಲಿರುತ್ತಾಳೆ. ಆಕೆಯ ಕೋಪ ನೋಡಿ ವೀರಭದ್ರಯ್ಯ ಅಲ್ಲಿಂದ ಕಾಲು ಕೀಳುತ್ತಾನೆ. ವೀರಭದ್ರಯ್ಯಗೆ ತಿಳಿದಿದೆ. ತನ್ನ ಗಂಡ ಎಷ್ಟು ಮನೆಯನ್ನು ಹಾಳು ಮಾಡಿದ್ದಾನೆ ಹಾಗೆಯೇ ತನ್ನ ತವರು ಮನೆಯನ್ನು ಎಷ್ಟು ಕೆಡವಿದ್ದಾನೆ ಎನ್ನುವುದು ಕೂಡ ಆಕೆಗೆ ತಿಳಿದಿದೆ. ಆದರೆ ತನ್ನ ಗಂಡ ಎನ್ನುವ ಕಾರಣಕ್ಕೆ ಯಾವ ವಿಚಾರವನ್ನು ಯಾರ ಬಳಿಯೂ ಹೇಳದೆ ಸೌಭಾಗ್ಯ ನರಕ ಅನುಭವಿಸುತ್ತಿದ್ದಾಳೆ. ಈ ವಿಚಾರ ಸುಶೀಲ ಗೆ ತಿಳಿದಿಲ್ಲ. ಸುಶೀಲ ಗೆ ಸೌಭಾಗ್ಯ ಅಕ್ಕ ಅವರಿಬ್ಬರನ್ನು ವೀರಭದ್ರಯ್ಯ ಮದುವೆ ಆಗಿದ್ದಾನೆ.
ಅಕ್ಕನಿಗೆ ಸಮಾಧಾನ ಹೇಳಿದ ಸುಶೀಲ್
ಅವರಿಬ್ಬರೂ ಸ್ವಂತ ಅಕ್ಕ ತಂಗಿಯರ ಹಾಗೆ ಇದುವರೆಗೆ ಬೆಳೆದಿದ್ದಾರೆ. ಸೌಭಾಗ್ಯ ಎಲ್ಲಾ ವಿಚಾರವನ್ನು ತಂಗಿಯ ಬಳಿ ಹೇಳುತ್ತಾ ಬಂದಿದ್ದಾರೆ. ಆದರೆ ಗಂಡನ ಮುಂದೆ ಯಾವತ್ತೂ ತಲೆ ಎತ್ತದೆ ಸೌಭಾಗ್ಯ ಇಂದು ಗಂಡ ಮಾತನಾಡುತ್ತಿದ್ದಾಗಲೇ ತಲೆ ಎತ್ತಿ ನಿಂತು ಆತನಿಗೆ ಕಣ್ಣಲ್ಲಿಯೇ ಉತ್ತರ ಕೊಟ್ಟಿದ್ದಾಳೆ. ಶಿವು ಗುಂಡಮ್ಮ ನ ಮದುವೆ ಮಾಡಲು ಬಹಳಷ್ಟು ಕಷ್ಟ ಪಡುವ ಹಾಗಾಗುತ್ತದೆ. ಎಲ್ಲರೆದುರು ಗಂಡಿನ ಕಡೆಯವರು ಒಂದು ಬಿಡಿಗಾಸು ಬೇಡ ಎಂದಿದ್ದರು ಆದರೆ ಇದೀಗ ಹಣ ಬೇಕು ಎಂದು ಹೇಳುತ್ತಿದ್ದಾರೆ ಇದನ್ನೆಲ್ಲ ನೋಡಿದ ಶಿವು ಗೆ ಬಹಳಷ್ಟು ಅಳುಕು ಉಂಟಾಗುತ್ತಿದೆ ಹಾಗೆಯೇ ವರದಕ್ಷಿಣೆ ಕೊಡುವ ಎಲ್ಲಾ ಏರ್ಪಾಡು ಮಾಡುತ್ತಿದ್ದಾನೆ.


Click it and Unblock the Notifications











