Annayya ; ಸೋಮೇಗೌಡಗೆ ಚಳಿ ಬಿಡಿಸಿದ ಪಾರು, ಅಕ್ಕಂಗೆ ಲವ್ವಾಯ್ತಾ ?

By ಪೂರ್ವ

ಸೋಮೆಗೌಡ ಅಚಾನಕ್ ಆಗಿ ಒಂದು ಅಂಗಡಿ ಬಳಿ ಸಿಗರೇಟ್ ಕೇಳಲು ಬರುತ್ತಾನೆ. ಆದರೆ ಅಂಗಡಿಯಲ್ಲಿ ಸಿಗರೇಟ್ ಹಾಗೆಯೇ ಯಾವುದೇ ಅಂತಹ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ. ಸೋಮೇಗೌಡಗೆ ಮೊದಲು ಇದು ಶಿವು ಅಂಗಡಿ ಎಂದು ತಿಳಿದಿರುವುದಿಲ್ಲ. ಅದಾದ ಬಳಿಕ ಅಂಗಡಿಗೆ ಶಿವು ಬರುತ್ತಾನೆ. ಆತನನ್ನು ನೋಡಿದ ಸೋಮೇಗೌಡಗೆ ಕೋಪ ಉಕ್ಕಿ ಹರಿಯುತ್ತದೆ. ತನ್ನ ಕುತ್ತಿಗೆ ಸರಿ ಮಾಡುತ್ತೇನೆ ಎಂದು ಹೇಳಿ ಕುತ್ತಿಗೆಯ ಕೀಲನ್ನೇ ಮುರಿದು ಹಾಕಿರುತ್ತಾನೆ.

ಇದೆಲ್ಲವನ್ನೂ ಮನದಲ್ಲಿಟ್ಟುಕೊಂಡೇ ಸೋಮೇಗೌಡ ಕೊಂಚ ಜೋರಾಗಿಯೇ ಶಿವು ಬಳಿ ಮಾತನಾಡಿದಾಗ ಮುರಿದ ಕುತ್ತಿಗೆಯನ್ನು ಸರಿಪಡಿಸಲೇ ಎಂದು ಇನ್ನಷ್ಟು ಕೋಪಕ್ಕೆ ತುಪ್ಪ ಸುರಿಯುತ್ತಾನೆ. ಸೋಮಗೌಡರು ಶಿವುವನ್ನು ಬಹಳ ಕೋಪದಿಂದ ತಳ್ಳುತ್ತಾರೆ. ಆ ಕೂಡಲೇ ಅಲ್ಲಿಗೆ ಬಂದ ಪಾರುವನ್ನು ನೋಡಿ ಇಂತಹ ಹುಡುಗಿಯನ್ನು ನಾನು ಮದುವೆಯಾಗದೆ ಬಿಟ್ಟೆನಲ್ಲ ಎಂದು ಬಹಳ ಬೇಸರ ಪಡುತ್ತಾನೆ ಸೋಮೇಗೌಡ.

annayya-serial-24th-january-written-update

ಅದಾದ ಬಳಿಕ ಪಾರು ಹಾಗೂ ಶಿವುವನ್ನು ನೋಡಿ ಇದೆಂತಹ ಸಂಬಂಧವಯ್ಯಾ. ಹುಡುಗಿ ನೋಡಲು ಬಹಳ ಅಂದವಾಗಿದ್ದಾಳೆ. ಆದರೆ ಆಕೆಗೂ ಶಿವುಗೆ ಯಾವುದೇ ರೀತಿಯಲ್ಲಿ ಮ್ಯಾಚ್ ಆಗುತ್ತಿಲ್ಲ ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ. ಪಾರು ಹತ್ತಿರ ಬಂದು ಸೋಮೇಗೌಡ, ಪಾರು ಜೊತೆ ಏನೇನೋ ಮಾತನಾಡಲು ಶುರು ಮಾಡುತ್ತಾನೆ ಆದರೆ ಪಾರು ಗೆ ಸಿಟ್ಟು ಬಂದು ಪೊರಕೆ ಕೇಳುತ್ತಾಳೆ. ಆ ಕೂಡಲೇ ಅಲ್ಲಿಯೇ ಇದ್ದ ಹುಡುಗರು ಪೊರಕೆಯನ್ನು ಪಾರು ಕೈ ಗೆ ನೀಡುತ್ತಾರೆ.

ಶಿವು ಬಗ್ಗೆ ತುಚ್ಛವಾಗಿ ಮಾತನಾಡಿದ ಸೋಮೇಗೌಡ

ಪಾರು ಬಹಳ ಕೋಪದಿಂದ ಸೋಮೇಗೌಡರಿಗೆ ಪೊರಕೆ ಸೇವೆ ಮಾಡುತ್ತಾಳೆ. ಇದೆಲ್ಲವನ್ನೂ ನೋಡಿದ ಊರ ಮಂದಿಗೆ ಬಹಳಷ್ಟು ಖುಷಿ ಆಗುತ್ತದೆ. ಮನೆಗೆ ಬಂದ ಪಾರು ಗೆ ಶಿವು ತಂಗಿಯರು ಆರತಿ ಎತ್ತಿ ಮನೆಯೊಳಗೆ ಕರೆದುಕೊಳ್ಳುತ್ತಾರೆ. ಅದರಲ್ಲೂ ಶಿವು ಚಿಕ್ಕ ತಂಗಿ ಬಹಳಷ್ಟು ಖುಷಿಗೊಂಡು ನಾವು ನೀರು ತೆಗೆದುಕೊಂಡು ಬರಲು ಹೋದಾಗ ನೀವು ಬನ್ನಿ ನಿಮ್ಮನ್ನು ನೋಡಿ ಊರಿನ ಹೆಂಗಸರು ಭಯದಿಂದ ನಮಗೆ ಬೇಗ ನೀರು ಕೊಡುತ್ತಾರೆ ಎಂದು ಹೇಳಿ ಕಿಚಾಯಿಸುತ್ತಾಳೆ .

ಶಿವು ಮೇಲೆ ಪಾರು ಗೆ ಪ್ರೀತಿ ಆಯಿತಾ?

ಯಾರು ಏನೇ ಹೇಳಿದರೂ ಪಾರು ಮನಸ್ಸಿಗೆ ಅಷ್ಟಾಗಿ ಯಾವುದೇ ನಾಟುವುದಿಲ್ಲ ಆದರೆ ಕೊನೆಗೆ ರಾಣಿ ಹೇಳಿದ ಮಾತುಗಳು ಪಾರ್ವತಿ ಮನದಲ್ಲಿ ಶಿವು ಮೇಲಿರುವ ಆಸೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ನನ್ನ ಅಣ್ಣ ನಿನಗೆ ತಾಳಿ ಕಟ್ಟಿದ್ದಾನೆ. ಆದ ಕಾರಣ ನೀನು ಅಣ್ಣನಿಗೆ ಯಾರಾದರೂ ಅವಮಾನ ಮಾಡಿದರೆ ನಿನಗೆ ತುಂಬಾ ಸಿಟ್ಟು ಬರುತ್ತದೆ. ನನಗೆ ಅದೆಲ್ಲ ತಿಳಿದಿದೆ ನಿನ್ನ ಮನದಲ್ಲಿ ಅಣ್ಣನಿಗೆ ಸ್ಥಾನ ನೀಡುವ ಭರವಸೆ ನನಗಿದೆ ಎನ್ನುವ ಹಾಗೆ ತನ್ನ ಅತ್ತಿಗೆಯ ಬಳಿ ಮಾತನಾಡಿ ಹೋಗುತ್ತಾಳೆ. ಇದೆಲ್ಲವನ್ನೂ ಕೇಳಿದ ಪಾರು ಗೆ ತಾನು ಮಾವನ ಪ್ರೀತಿಯಲ್ಲಿ ಬಿದ್ದಿದ್ದೇನೆಯೇ ಎನ್ನುವ ಅನುಮಾನ ಕಾಡುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X