Annayya ; ಶಿವುನ ವಿಪರೀತ ಪ್ರೀತಿಸುತ್ತಿರುವ ಪಾರು, ಪಾರು ಪ್ರೀತಿ ಶಿವುಗೆ ಅರ್ಥ ಆಗುತ್ತಾ?
ಸಿದ್ದಾರ್ಥ್ ನನ್ನು ಪಾರು ಬಹಳ ಪ್ರೀತಿ ಮಾಡುತ್ತಿದ್ದಳು. ಆದರೆ ಸಿದ್ದಾರ್ಥ್ ಹಣಕ್ಕಾಗಿ ಪಾರು ಪ್ರೀತಿಗೆ ಬೆಲೆಯೇ ಕೊಡದೆ ಹೊರಟು ಹೋಗುತ್ತಾನೆ. ಮದುವೆ ಮನೆಯಿಂದ ಓಡಿ ಬಂದ ಪಾರುಗೆ ಇದೀಗ ತಾನು ಎಂಥ ಹುಡುಗನನ್ನು ಪ್ರೀತಿ ಮಾಡಿದೆ ಎಂದು ಯೋಚನೆ ಬಾರದೆ ಇರದು. ಪಾರು ವಿದೇಶಕ್ಕೆ ಹೋಗುವ ವೇಳೆ ಶಿವು ತಂಗಿಯಂದಿರು ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದರು. ಆದರೆ ಪಾರು ಮನೆಗೆ ಬಂದಿರುವ ವಿಚಾರವನ್ನು ತಿಳಿದು ಶಿವು ತಂಗಿಯರ ಖುಷಿಗೆ ಪಾರವೇ ಇಲ್ಲ. ಪಾರು ಏನೇ ಮಾಡಲು ಹೊರಟರು ಶಿವು ಅದಕ್ಕೆ ಸಾಥ್ ನೀಡುತ್ತಾನೆ. ಇದೀಗ ಶಿವು ಪ್ರೀತಿ ಪಾರುವನ್ನು ಕಟ್ಟಿ ಹಾಕಿದೆ ಎಂದು ಹೇಳಿದರೆ ತಪ್ಪಾಗದು.
ಪಾರು ಮನೆಯನ್ನು ಕ್ಲೀನ್ ಮಾಡುವ ವೇಳೆ ಶಿವು ಪ್ರೀತಿ ಮಾಡುತ್ತಿದ್ದ ಹುಡುಗಿಯ ಎಲ್ಲಾ ವಸ್ತುಗಳು ಅದರಲ್ಲಿ ಇತ್ತು. ಇದನ್ನು ನೋಡಿದ ಪಾರುಗೆ ಶಾಕ್ ಆಗುತ್ತದೆ. ಅದರಲ್ಲಿ ಎಲ್ಲಾ ವಸ್ತುಗಳು ಪಾರುದ್ದೆ ಇತ್ತು. ಸಣ್ಣ ವಯಸ್ಸಿನಲ್ಲಿ ತಾನು ಆಡುತ್ತಿದ್ದ ಆಟಿಕೆಗಳು ಹಾಗೆಯೇ ಸ್ಟೇತಸ್ ಸ್ಕೋಪ್ಎಲ್ಲಾ ಅದರಲ್ಲಿ ಇದ್ದಿದ್ದನ್ನು ಕಂಡು ಪಾರು ಗೆ ತಿಳಿಯುತ್ತದೆ. ಮಾವ ನನ್ನನ್ನೇ ಪ್ರೀತಿ ಮಾಡುತ್ತಿದ್ದು ಎಂದು. ಅದೆಲ್ಲವನ್ನೂ ನೋಡಿದ ಪಾರು ಮನ ತುಂಬಿ ಬರುತ್ತದೆ. ಸಿದ್ದಾರ್ಥ್ ನನ್ನ ಜೀವನಕ್ಕೆ ಬಂದ ಆದರೆ ಆತನಿಗೆ ತನಗಿಂತ ಹಣವೇ ಹೆಚ್ಚಾಗಿ ಬಿಟ್ಟಿತು. ಆದರೆ ಮಾವ ತನ್ನನ್ನು ಬಹಳಷ್ಟು ಪ್ರೀತಿ ಮಾಡುತ್ತಾನೆ. ಆದರೆ ಆತ ತನ್ನಿಂದ ಏನನ್ನು ಕೂಡ ಬಯಸುತ್ತಿಲ್ಲ. ಆತನಿಗೆ ತಾನು ಎಂದರೆ ಪಂಚ ಪ್ರಾಣ.

ಆ ಸಿದ್ದಾರ್ಥ್ ಗಿಂತ ಹತ್ತು ಪಟ್ಟು ಮೇಲು ನನ್ನ ಮಾವ ಎಂದುಕೊಂಡು ಖುಷಿಯಲ್ಲಿ ಇರುತ್ತಾಳೆ. ಮಾವ ತನ್ನ ಹೆಸರಿನ ಹುಂಡಿಗೆ ಹಣ ಹಾಕುತ್ತಿರುವುದನ್ನು ನೋಡಿ ಪಾರುಗೆ ಕಣ್ಣಂಚಲಿ ನೀರು ಬರುತ್ತದೆ. ಶಿವು ಫ್ಯಾಮಿಲಿ ಎಲ್ಲಾ ಬೆಟ್ಟದ ಮೇಲಿನ ದೇವಾಲಯಕ್ಕೆ ಹೋಗುವ ವೇಳೆ ಶಿವು ತಂಗಿ ಪಾರೂವನ್ನು ಬಂಡೆಯ ಬಳಿ ಕರೆದುಕೊಂಡು ಬಂದು ಒಂದು ಜಾಗವನ್ನು ತೋರಿಸುತ್ತಾಳೆ. ಅಲ್ಲಿರುವ ಚಿತ್ರಣವನ್ನು ನೋಡಿ ಪಾರು ಮೂಕ ವಿಸ್ಮಯಗೊಳ್ಳುತ್ತಾಳೆ. ಹಾರ್ಟ್ ಚಿತ್ರ ಬರೆದು ಅದರ ಮಧ್ಯೆ ಶಿವು ಪಾರು ಎಂದು ಬರೆದಿದ್ದ ಶಿವು ಪಾರು ಹೆಸರನ್ನು ಅಳಿಸಿ ಹಾಕುವ ಪ್ರಯತ್ನ ಮಾಡಿರುತ್ತಾನೆ
ಪಾರು ಮನದಲ್ಲಿ ಅರಳಿದ ಪ್ರೀತಿ
ಇದನ್ನು ನೋಡಿದ ಪಾರು ತಾನೇ ಕಲ್ಲಿನಲ್ಲಿ ಪಾರು ಎಂದು ಬರೆಯುತ್ತಾಳೆ. ಇದೆಲ್ಲವನ್ನೂ ನೋಡಿದರೆ ಪಾರು ಮನದಲ್ಲಿ ಬಹಳಷ್ಟು ಖುಷಿ ಮೂಡುತ್ತಿದೆ. ಹಾಗೆಯೇ ತಾನು ನಿಷ್ಕಲ್ಮಷ ಪ್ರೀತಿ ಮಾಡುವವನ ಜೊತೆ ಬೆರೆಯಬೇಕು ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ಇತ್ತ ಶಿವು ಮನೆಗೆ ತಂಗಿಯನ್ನು ನೋಡಲು ಗಂಡಿನ ಕಡೆಯವರು ಬರುತ್ತಾರೆ . ಮನೆಯವರೆಲ್ಲ ರತ್ನನನ್ನು ರೆಡಿ ಮಾಡಿ ಕರೆದುಕೊಂಡು ಬರುತ್ತಾರೆ. ರತ್ನಗೆ ಭಯ ತನ್ನನ್ನು ನೋಡಿದ ಅದೆಷ್ಟೋ ಗಂಡುಗಳು ಬೇಡ ಎಂದು ರಿಜೆಕ್ಟ್ ಮಾಡಿ ಹೋಗಿದ್ದಾರೆ. ಇದೀಗ ಇವರು ಹೀಗೆ ಮಾಡಿದರೆ ನಾನು ಏನು ಮಾಡಲಿ ಎಂಬ ಯೋಚನೆ ಆಕೆಗೆ ಮೂಡುತ್ತದೆ.
ರತ್ನನನ್ನ ರಿಜೆಕ್ಟ್ ಮಾಡಿದ ಗಂಡಿನ ಕಡೆಯವರು
ಇತ್ತ ಗಂಡಿನ ಕಡೆಯವರು ಶಿವು ಮನೆಗೆ ಬರುತ್ತಾರೆ. ಮುದ್ದಾಗಿ ರತ್ನ ರೆಡಿ ಆಗಿರುತ್ತಾಳೆ. ರತ್ನ ನನ್ನು ನೋಡಿದ ಕೂಡಲೇ ಗಂಡಿನ ಕಡೆಯವರು ಹೇಳುತ್ತಾರೆ ನಿಮ್ಮ ದೊಡ್ಡ ತಂಗಿ ನನಗೆ ಬೇಡ ಎರಡನೆಯವಳು ನಮಗೆ ಒಪ್ಪಿಗೆ ಎಂದು ಹೇಳಿ ಬಿಡುತ್ತಾರೆ ಇದನ್ನು ಕೇಳಿದ ಶಿವು ಗೆ ಬಹಳ ಬೇಸರ ಆಗುತ್ತದೆ. ರತ್ನ ತಾನು ತಯಾರಾಗಿದ್ದು ವೇಸ್ಟ್ ಎನ್ನುವ ಹಾಗೆಯೇ ಅಣ್ಣನ ಮುಖವನ್ನೊಮ್ಮೆ ನೋಡುತ್ತಾಳೆ


Click it and Unblock the Notifications











