Annayya ; ಸೀನಾ ಮನೆಗೆ ಬಂದ ಗುಂಡಮ್ಮ, ಅಯ್ಯೋ ದೇವರೇ ಪಿಂಕಿ ಗತಿಯೇನು?
ರಶ್ಮಿ ಮದುವೆ ಶ್ರೀನಿವಾಸನ ಜೊತೆ ನಡೆದೇ ಬಿಟ್ಟಿದೆ. ಶ್ರೀನಿವಾಸ್ ಗೆ ರಶ್ಮಿ ಜೊತೆಗೆ ಬದುಕಬೇಕು ಎನ್ನುವುದನ್ನು ದೇವರು ಈ ಮೊದಲೇ ಬರೆದು ಬಿಟ್ಟಿದ್ದಾನೆ ಎನ್ನಿಸುತ್ತದೆ. ಯಾಕೆಂದರೆ ರಶ್ಮಿ ಹಾಗು ಶ್ರೀನಿವಾಸ್ ಯಾವತ್ತೂ ಕೂಡ ಕಿತ್ತಾಡುತ್ತಾನೆ ಇರುತ್ತಾರೆ.ತಾವಿಬ್ಬರು ಮದುವೆಯಾಗುತ್ತೇವೆ ಎನ್ನುವ ಕನಸು ಕೂಡ ಕಂಡಿರುವುದಿಲ್ಲ ಪಿಂಕಿಯನ್ನು ಸೀನಾ ಬಹಳ ಪ್ರೀತಿ ಮಾಡುತ್ತಿರುತ್ತಾನೆ. ಪಿಂಕಿ ಎಂದರೆ ಸೀನಾಗೆ ಬಹಳ ಇಷ್ಟ. ಆತನ ಜೊತೆ ಮದುವೆಯಾಗುವುದಾಗಿ ಬಹಳ ಸಲ ಹೇಳಿರುತ್ತಾಳೆ. ಆದರೆ ಇದೀಗ ಎಲ್ಲವೂ ತಲೆ ಕೆಳಗಾಗಿಬಿಟ್ಟಿದೆ. ಸೀನಾ ರಶ್ಮಿಯನ್ನು ಮದುವೆಯಾಗಿದ್ದಾನೆ ಎಂದು ಪಿಂಕಿಗೆ ತಿಳಿದರೆ ಆಕೆಗೆ ಖಂಡಿತವಾಗಿಯೂ ಆಘಾತವಾಗುವುದಂತೂ ಸತ್ಯ.
ಜಿಮ್ ಸೀನಾ ಜೊತೆಗೆ ಮದುವೆಯಾಗಬೇಕೆಂದು ಪಿಂಕಿ ಸಾಕಷ್ಟು ಕನಸು ಕಂಡಿರುತ್ತಾಳೆ. ಆದರೆ ಆ ಕನಸೆಲ್ಲವು ಕಮರಿ ಹೋಗಿದೆ. ಸೀನಗೆ ರಶ್ಮಿಯ ಮೇಲೆ ಬಹಳಷ್ಟು ಸಿಟ್ಟು ಬಂದಿರುತ್ತದೆ. ರಶ್ಮಿಯ ಜೊತೆ ಮದುವೆಯಾಗಲು ಸೀನಾಗೆ ಸ್ವಲ್ಪವೂ ಇಷ್ಟವಿರುವುದಿಲ್ಲ. ಆದರೆ ತಂದೆ ಮಾದಪ್ಪನ ಮಾತನ್ನು ಮೀರಲು ಸೀನಾಗೆ ಭಯ ಆದ ಕಾರಣ ರಶ್ಮಿ ಕುತ್ತಿಗೆಗೆ ಸೀನಾ ತಾಳಿ ಕಟ್ಟುತ್ತಾನೆ. ಇದರಿಂದ ಸೀನಾ ತಾಯಿಗೆ ಬಹಳ ಆಘಾತವಾಗುತ್ತದೆ. ತನ್ನ ಮಗನ ಜೀವನ ಹಾಳಗಲು ತನ್ನ ಗಂಡನೇ ಕಾರಣ. ಆತನಿಂದಾಗಿಯೇ ನನ್ನ ಮಗನಿಗೆ ಈ ಸ್ಥಿತಿ ಬಂದಿದ್ದು ಎಂದು ಬಹಳ ಬೇಸರ ಪಡುತ್ತಾಳೆ. ಶ್ರೀನಿವಾಸ ಹಾಗೂ ರಶ್ಮಿ ಮನೆಯ ಹೊಸ್ತಿಲಿಗೆ ಬಂದು ನಿಂತಿರುವುದನ್ನು ನೋಡಿದ ಸೀನ ತಾಯಿಗೆ ಬಹಳಷ್ಟು ನೋವಾಗುತ್ತದೆ.

ಆಕೆಗೆ ಏನು ಮಾತು ಹೇಳಬೇಕೆಂದು ದಿಕ್ಕೇ ತೋಚದಂತಾಗಿತ್ತು. ಕೂಡಲೇ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಅಳುತ್ತಾಳೆ. ರಶ್ಮಿ ಮೇಲೆ ಸೀನ ತಾಯಿಗೆ ಬಹಳ ಕೋಪ ಬರುತ್ತದೆ ಈಕೆಯಿಂದ ಗೆ ತನ್ನ ಮಗನ ಬಾಳು ಹಾಳಾಗಿ ಹೋಯಿತು ಎಂದು ಬಹಳ ನೊಂದುಕೊಳ್ಳುತ್ತಾಳೆ, ತನ್ನ ಮಗನ ಜೀವನವನ್ನು ನಾಶ ಮಾಡಿ ಬಿಟ್ಟರು. ಹೇಗಪ್ಪಾ ನನ್ನ ಮಗ ಆತ ಪಿಂಕಿ ಜೊತೆ ಇದೆಲ್ಲವನ್ನೂ ಹೇಳುತ್ತಾನೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಾಳೆ. ಶ್ರೀನಿವಾಸ ಬಹಳ ಕೋಪದಿಂದಲೇ ಮನೆಯೊಳಗೆ ಹೋಗುತ್ತಾನೆ. ರಶ್ಮಿ ಸೇರೂ ಒದ್ದು ಶ್ರೀನಿವಾಸನ ಮನೆಗೆ ಬರುತ್ತಾಳೆ. ಇದೆಲ್ಲವನ್ನೂ ನೋಡಿದ ಶಿವು ಗೆ ಬಹಳ ಖುಷಿ ಆಗುತ್ತದೆ.
ಖುಷಿಯಲ್ಲಿರುವ ಶಿವು ನೋಡಿ ಸಂತಸಪಟ್ಟ ಪಾರು
ತನ್ನ ತಂಗಿಯ ಜೀವನ ಹಾಳಾಗುತ್ತದೆ ಎಂದು ಅಂದುಕೊಂಡಿದ್ದೆ ಆದರೆ ಇದೀಗ ನನ್ನ ತಂಗಿಯ ಪಾಲಿಗೆ ಶ್ರೀನಿವಾಸ ಗಂಡನಾಗಿ ಬರಬೇಕಾಗಿತ್ತು ಹಾಗೆಯೇ ಆಗಿದೆ ಇದಕ್ಕಿಂತ ಸಂತೋಷ ನನಗೆ ಏನಿದೆ ಎಂದು ಬಹಳ ಖುಷಿಯಿಂದ ಇರುತ್ತಾನೆ. ರಶ್ಮಿ ದೇವರ ಮನೆಗೆ ಹೋಗಿ ದೀಪ ಹಚ್ಚುತ್ತಾಳೆ. ಇದರಿಂದ ಮನೆ ಮಂದಿಗೆ ಕೂಡ ಬಹಳ ಖುಷಿ ಆಗುತ್ತದೆ. ಸೀನಾ ತಾಯಿಗೆ ಮಾತ್ರ ಬಹಳಷ್ಟು ಸಂಕಟವಾಗುತ್ತದೆ ಗಂಡನ ಮಾತಿಗೆ ಅಡ್ಡಿ ಬರಬಾರದೆಂದು ಸೀನಾನ ಅಮ್ಮ ಸುಮ್ಮನೆ ಇರುತ್ತಾರೆ ಅಡಿಗೆ ಕೊನೆಗೆ ಹೋಗಿ ಹಾಲು ಉಕ್ಕಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ. ಆದರೆ ಗುಂಡಮ್ಮ ಗೆ ಆಕೆಯ ಅತ್ತೆ ಶತ್ರುವಾಗಿಯೇ ಕಾಡುತ್ತಿದ್ದಾಳೆ.
ಸೀನ ತಾಯಿ ವರ್ತನೆ ಕಂಡು ಕಂಗಾಲಾದ ಗುಂಡಮ್ಮ
ಗುಂಡಮ್ಮನ ಹಿಂದೆಯಿಂದ ಬಂದ ಸೀನಾ ತಾಯಿ ಇಲ್ಲಿಯೇ ಇದೆ ಬೆಂಕಿ ಪೊಟ್ಟಣ ಎಂದು ಹೇಳುತ್ತಾಳೆ ಇದನ್ನು ಕೇಳಿದ ಗುಂಡಮ್ಮ ಬೆಂಕಿ ಪೊಟ್ಟಣವನ್ನು ಕೈಯಲ್ಲಿ ಹಿಡಿದು ಕಟ್ಟಿ ಗೀರಿದರೆ ಹಿಂದೆಯಿಂದ ಬಂದ ಸೀನಾ ತಾಯಿ ಜೋರಾಗಿ ಬಾಯಲ್ಲಿ ಗಾಳಿ ಇಡುತ್ತಾಳೆ. ಇದರಿಂದಾಗಿ ಸ್ಟೌವ್ ಗೆ ಬೆಂಕಿ ಹಚ್ಚಲು ಗುಂಡಮ್ಮ ಗೆ ಸಾಧ್ಯವಾಗುವುದಿಲ್ಲ. ಅಷ್ಟರಲ್ಲಿ ಅಲ್ಲಿಗೆ ಪಾರು ಬರುತ್ತಾಳೆ. ಸೀನಾ ತಾಯಿ ಪಾರುವನ್ನೂ ನೋಡಿ ಕೊಂಚ ಗಾಂಭೀರ್ಯದಿಂದ ಇರುತ್ತಾಳೆ. ಎಲ್ಲಾದರೂ ರಶ್ಮಿ ಗೆ ತೊಂದರೆ ಕೊಡುತ್ತೇನೆ ಎಂದು ತಿಳಿದರೆ ಖಂಡಿತವಾಗಿಯೂ ಪಾರು ಸುಮ್ಮನೆ ಬಿಡುವುದಿಲ್ಲ ಎನ್ನುವುದು ಆಕೆಗೆ ಕೂಡ ತಿಳಿದಿದೆ.


Click it and Unblock the Notifications











