Annayya ; ಗುಂಡಮ್ಮನಿಗೆ ಕೂಡಿ ಬಂತು ಕಂಕಣ ಭಾಗ್ಯ ,ಆತಂಕಗೊಂಡ ಶಿವು ಮುಂದೇನು ಮಾಡ್ತಾನೆ

By ಪೂರ್ವ

ಶಿವು ತಾಯಿ ಬಹಳ ಒಳ್ಳೆಯವರು. ಊರಿಗೆ ಉಪಕಾರಿಯಾಗಿದ್ದ ಶಿವು ತಾಯಿ ಎಲ್ಲಿ ಹೋಗಿದ್ದಾರೆ ಎನು ಮಾಡುತ್ತಿದ್ದಾರೆ ಎನ್ನುವುದು ಶಿವು ಗೆ ತಿಳಿದಿಲ್ಲ. ವೀರಭದ್ರ ಕಟ್ಟಿದ ಸುಳ್ಳನ್ನು ನಂಬಿಕೊಂಡು ಶಿವು ಅಮ್ಮನ ಮೇಲೆ ಹಗೆ ಸಾಧಿಸುತ್ತಿದ್ದಾನೆ. ಆದರೆ ಶಿವು ಅಮ್ಮ ದಿನವಿಡೀ ಜೈಲಿನಲ್ಲಿ ಕುಳಿತು ಮುದ್ದೆ ಮುರಿಯುತ್ತಿದ್ದಾರೆ. ಶಿವು ತಾಯಿಗೆ ತಾನು ಜೈಲಿ ಗೆ ಬಂದಿದ್ದೇನೆ ಎನ್ನುವ ಬೇಸರ ಇಲ್ಲ. ಆದರೆ ಪುಟ್ಟ ಪುಟ್ಟ ಹೆಣ್ಣು ಮಕ್ಕಳನ್ನು ನನ್ನ ಮಗನ ಕೈ ಗೆ ಒಪ್ಪಿಸಿದ್ದೆ. ಶಿವು ತನ್ನ ತಂಗಿಯರನ್ನು ಚೆನ್ನಾಗಿಯೇ ನೋಡಿಕೊಂಡು ಇರಬಹುದು ಎನ್ನುವುದು ಆಕೆಯ ನಂಬಿಕೆ.

ಆದರೆ ಶಿವು ತನ್ನ ತಾಯಿಯ ಬಗ್ಗೆ ತಪ್ಪು ಕಲ್ಪನೆಯನ್ನು ಹುಟ್ಟು ಹಾಕಿಕೊಂಡಿರುತ್ತಾನೆ. ಶಿವು ಹೆಸರಲ್ಲಿ ಸಾಕಷ್ಟು ಆಸ್ತಿಗಳು ಇದ್ದವು ಆದರೆ ಕೆಲವೊಂದನ್ನು ವೀರಭದ್ರಯ್ಯ ಶಿವು ಹಾಗೂ ಆತನ ತಂದೆಯ ಜೊತೆ ಬಹಳ ಉಪಾಯದಿಂದ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಿದ್ದ. ಆದರೆ ಈ ಬಾರಿ ಶಿವು ಹೆಸರಿನಲ್ಲಿರುವ ಆಸ್ತಿಯನ್ನು ಹೇಗಾದರೂ ಮಾಡಿ ನಾನು ಪಡೆಯ ಬೇಕು ಎಂದು ಕೊಂಡ ವೀರಭದ್ರಯ್ಯ ಎದೆ ನೋವು ಎನ್ನುವ ನಾಟಕ ಮಾಡುತ್ತಾನೆ. ಆದರೆ ತಂದೆಯ ಬಗ್ಗೆ ಪಾರುಗೆ ಈ ಮೊದಲೇ ಎಲ್ಲಾ ವಿಚಾರ ಗೊತ್ತಾಗಿದ್ದ ಕಾರಣ ವೀರಭದ್ರಯ್ಯ ಗೆ ಖಡಕ್ ಆಗಿಯೇ ಎಚ್ಚರಿಕೆ ನೀಡುತ್ತಾಳೆ ಪಾರು. ತನ್ನ ಅಣ್ಣ ಹಾಗೂ ಅಪ್ಪ ಮಾಡುತ್ತಿರುವ ಕೆಲಸ ಯಾವುದು ಸರಿಯಾಗಿ ಇಲ್ಲ ಎನ್ನುವುದು ಪಾರು ಗೆ ಸ್ಪಷ್ಟ ಆಗಿದೆ.

annayya serial 30th November written update

ಆದರೆ ಪಾರು ಏನೇ ಕೇಳಲು ಹೋದರು ಪಾರು ತಾಯಿಯ ಕೆನ್ನೆಗೆ ಹೊಡೆಯುತ್ತಿದ್ದರು. ಅಮ್ಮನ ನೋವು ನೋಡಲು ಆಗದೆ ಯಾರ ಜೊತೆಯೂ ಹೇಳಲು ಆಗದೆ ನೋವನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾಳೆ. ಆದರೆ ಇದೀಗ ಪಾರು ಶಿವು ಹೆಂಡತಿ. ಆದ ಕಾರಣ ವೀರಭದ್ರಯ್ಯ ಒಂದು ಮಾತನಾಡದೆ ಸುಮ್ಮನೆ ಇದ್ದಾರೆ. ತನ್ನ ಮಗನ ಬಳಿ ವೀರಭದ್ರಯ್ಯ ಹೇಳುವುದು ಒಂದೇ ಮಾತು. ತನ್ನ ತಂಗಿ ಮುಂಚೆ ಊರಿಗೆ ಸಹಾಯ ಮಾಡುತ್ತಿದ್ದಳು. ಕಷ್ಟ ಆಂದೋರಿಗೆ ಸಹಾಯ ಮಾಡುವ ಗುಣದವಳು. ಅದೇ ಗುಣ ನಮ್ಮ ಪಾರುವಿನಲ್ಲಿದೆ ಆಕೆಗೆ ಕೂಡ ಏನಾದರು ಮಾಡಬೇಕು ಇಲ್ಲವಾದರೆ ನಮ್ಮ ಕೆಲಸಕ್ಕೆ ಅಡ್ಡಿ ಬರುತ್ತಾಳೆ ಎಂದು ಹೇಳುತ್ತಾರೆ.

ಜೋಯಿಸರ ಮಾತು ಕಿವಿಗೊಟ್ಟು ಕೇಳಿಸಿಕೊಂಡ ಶಿವು

ಇತ್ತ ಶಿವು ಮನೆಗೆ ಜೋಯಿಸರನ್ನು ಕರೆಸುತ್ತಾರೆ. ನಾಲ್ವರು ಹೆಣ್ಣು ಮಕ್ಕಳೊಡನೆ ಶಿವು ಹಾಗೂ ಪಾರ್ವತಿ ನಿಂತು ಜೋಯಿಸರು ಹೇಳುವ ಮಾತನ್ನು ಕೇಳುತ್ತಾರೆ. ಜೋಯಿಸರು ಗುಂಡಮ್ಮ ನಿಗೇ ಮದುವೆಯ ಯೋಗ ಇದೆ ಎಂದು ಹೇಳಿದಾಗ ಶಿವು ಗೆ ಬಹಳ ಆತಂಕ ಆಗುತ್ತದೆ. ಗುಂಡಮ್ಮನಿಗಿಂತ ಮೊದಲು ಇರುವ ತಂಗಿಗೆ ಮದುವೆ ಆಗದೆ ಎರಡನೆಯಳಿಗೆ ಮದುವೆ ಮಾಡುವುದು ಎನ್ನುವ ಯೋಚನೆ ಆತನಿಗೆ.

ಸಿದ್ಧಾರ್ಥ್ ವಿಚಾರ ಹೇಳಲಾಗದೆ ಒದ್ದಾಡುತ್ತಿರುವ ಶಿವು

ಇತ್ತ ಪಾರ್ವತಿ ಜೀವನಕ್ಕೆ ಏನಾದರು ಒಂದು ದಾರಿ ಮಾಡಬೇಕು ಎನ್ನುವುದು ಶಿವು ಯೋಚನೆ. ಅದಕ್ಕಾಗಿ ಸಿದ್ದಾರ್ಥ್ನ ತುಂಬಾ ಹುಡುಕಾಡಿದ್ದಾಯಿತು. ಆದರೆ ಶಿವುಗೆ ಸಿದ್ದಾರ್ಥ್ ಬಗ್ಗೆ ಎಲ್ಲಾ ತಿಳಿದು ಹೋಯಿತು. ಶಿವು ಗೆ ಬಹಳ ಆತಂಕ ಶುರು ಆಗುತ್ತದೆ. ಈ ವಿಚಾರ ಪಾರು ಜೊತೆ ಹೇಗೆ ಹೇಳಲಿ ಎನ್ನುವುದು ಶಿವ ಯೋಚನೆ. ಪಾರು ಆಗಾಗ ಸಿದ್ದಾರ್ಥ್ ಬಗ್ಗೆ ಶಿವು ಬಳಿ ಕೇಳುತ್ತಾಳೆ. ಆದರೆ ಶಿವು ಗೆ ಆಯಾ ಸಂದರ್ಭ ಎನು ಮಾತನಾಡಲು ಆಗದೆ ಸುಮ್ಮನೆ ಇರುತ್ತಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X