Annayya ; ಪಾರು ಮಾತಿಗೆ ಇಲ್ಲ ಎನ್ನದ ಶಿವು, ಮುದ್ದಿನ ಅತ್ತಿಗೆಯೇ ತಂಗಿಯರಿಗೆ ಮಹಾ ಅಸ್ತ್ರ..!
ಶಿವು ಹಾಗೂ ಪಾರ್ವತಿ ಮದುವೆ ನಡೆದ ಬಳಿಕ ಶಿವು ತಂಗಿಯರಿಗೆ ಬಹಳ ಹಬ್ಬವೋ ಹಬ್ಬ. ತಂಗಿಯರು ಏನೇ ಮಾಡಿದರು ಅವರ ಸಪೋರ್ಟ್ ಗೆ ಪಾರು ಬಂದೆ ಬರುತ್ತಾಳೆ. ಪಾರು ಪ್ರೀತಿಸಿದ ಹುಡುಗ ಆಕೆಗೆ ಕೈ ಕೊಟ್ಟು ಪರಾರಿ ಆಗಿದ್ದಾನೆ. ಆದರೆ ಇದುವರೆಗೆ ಕೂಡ ಆತನ ಸುಳಿವು ಮಾತ್ರ ಪತ್ತೆ ಆಗಲಿಲ್ಲ. ಶಿವು ಪಾರು ಜೊತೆ ಮದುವೆ ಆಗಿ ಬಹಳ ಖುಷಿಯಲ್ಲಿ ಇದ್ದರೆ, ಅದು ಕ್ಷಣಿಕ ಮಾತ್ರ ಅನ್ನುವುದು ಶಿವುಗೆ ಗೊತ್ತಿದೆ. ಆದರೆ ಶಿವು ತಂಗಿಯರು ಪಾರುವನ್ನು ಬಹಳ ಪ್ರೀತಿ ಮಾಡುತ್ತಿದ್ದಾರೆ ಆದರೆ ಅವರಿಗೆ ಪಾರು ಸ್ವಲ್ಪ ದಿನದ ಬಳಿಕ ನಮ್ಮ ಜೊತೆ ಇರುವುದು ಗೊತ್ತಿಲ್ಲ. ಪಾರುವನ್ನು ಚಿಕ್ಕ ವಯಸ್ಸಿನಿಂದಲೂ ಶಿವು ಮದುವೆ ಆಗಬೇಕು ಎಂದು ಅಂದುಕೊಂಡು ಇದ್ದ. ಆದರೆ ಆಕೆ ಬಹಳ ದೂರದ ನಕ್ಷತ್ರ ನನ್ನ ಕೈಗೆ ಎಟುಕುವುದು ಮಾತ್ರ ಇಲ್ಲ ಎನ್ನುವುದು ಆತ ಅಂದುಕೊಂಡು ಇರುತ್ತಾನೆ.
ಆದರೆ ಶಿವು ಅಂದುಕೊಂಡಿದ್ದು ಒಂದು ಅಲ್ಲಿ ಆಗಿದ್ದೆ ಇನ್ನೊಂದು. ಇನ್ನು ಶಿವು ಜೊತೆ ಪಾರು ಈಗಾಗಲೇ ನಾಟಕ ಮಾಡಲು ಶುರು ಮಾಡಿದ್ದಾಳೆ. ಶಿವು ತನ್ನ ತಂಗಿಯರ ಮದುವೆ ಮಾಡುವವರೆಗೆ ನನ್ನ ಜೊತೆ ನೀನು ನಟನೆ ಮಾಡು ಅದಾದ ಬಳಿಕ ನೀನು ನನ್ನನ್ನು ಬಿಟ್ಟು ಹೋಗಿ ಸಿದ್ದಾರ್ಥ್ ನ ಮದುವೆ ಆಗು ದಯವಿಟ್ಟು ಈ ಒಂದು ಮಾತನ್ನು ನಡೆಸಿಕೊಡು ಎಂದು ಪಾರು ಬಳಿ ರಿಕ್ವೆಸ್ಟ್ ಮಾಡಿಕೊಂಡಿರುವುದರಿಂದ ಪಾರು ಶಿವು ಜೊತೆ ಹೆಂಡತಿಯಾಗಿ ನಟನೆ ಮಾಡಲು ಒಪ್ಪಿಕೊಳ್ಳುತ್ತಾಳೆ. ಇನ್ನು ಶಿವುಗೆ ಆತನ ತಂಗಿಯ ಮೇಲೆ ಇದ್ದ ಪ್ರೀತಿ ಅವರನ್ನು ಕಟ್ಟಿ ಹಾಕಿದೆ. ತಂಗಿಯರನ್ನು ಬಹಳ ಚೆನ್ನಾಗಿ ಸಾಕಿದ್ದಾನೆ.

ಹಾಗೆಯೇ ಸಾಕಷ್ಟು ಶಿಸ್ತಿನ ಜೊತೆಗೆ ಬಹಳ ಅದ್ಭುತವಾಗಿ ಸಾಕಿರುತ್ತಾನೆ. ಈಗಾಗಲೇ ತನ್ನ ನಾಲ್ವರ ತಂಗಿಯರ ಸಿನಿಮಾ ಹುಚ್ಚು ಶಿವುಗೆ ಗೊತ್ತಾಗಿದ್ದು, ಆತ ತನ್ನ ತಂಗಿಯರಿಗೆ ಮಾತಿನೇಟನ್ನು ಕೊಟ್ಟಿರುತ್ತಾನೆ. ಆದರೆ ಶಿವು ಗೆ ಮಾತ್ರ ಮದುವೆ ಆದ ಬಳಿಕ ತನ್ನ ತಂಗಿಯರದ್ದೆ ದರ್ಬಾರು. ತಂಗಿಯರು ಮೊಬೈಲ್ ಫೋನ್ ಬಳಕೆ ಮಾಡುವುದು ಶಿವು ಗೆ ತಿಳಿದಿರಲಿಲ್ಲ ಆದರೆ ಈಗ ಅದು ಕೂಡ ಆತನಿಗೆ ತಿಳಿದಿದೆ. ಇದೆಲ್ಲವನ್ನೂ ನೋಡಿದ ಪಾರು ಮಾತ್ರ ತನ್ನ ಗಂಡ ಶಿವುಗೆ ಬುದ್ದಿ ಮಾತನ್ನು ಹೇಳುತ್ತಾಳೆ. ವಯಸ್ಸಿಗೆ ಬಂದ ತಂಗಿಯರ ಬಗ್ಗೆ ನೀನೆಷ್ಟು ಕಾಳಜಿ ಮಾಡುತ್ತಿಯೋ ಆದೆ ರೀತಿ ಅವರ ಸೇಫ್ಟಿ ನೆಸ್ ಅನ್ನು ನೀನು ನೋಡಿಲ್ಲ. ಏನಾದರು ಎಮರ್ಜೆನ್ಸಿ ಆದರೆ ನಿನಗೆ ಕರೆ ಮಾಡಲು ಅವರಿಗೆ ಫೋನ್ ಬೇಕೆ ಬೇಕಾಗುತ್ತದೆ ಎಂದೆಲ್ಲ ಹೇಳಿ ಪಾರು ಶಿವು ಮನ ಒಲಿಸುತ್ತಾಳೆ
ಮನೆಯವರ ಜೊತೆ ಸಿನಿಮಾಗೆ ಹೊರಟ ಶಿವು
ಇನ್ನು ತನ್ನ ಅತ್ತಿಗೆಯ ಬಳಿ ಗುಂಡಮ್ಮ ಸಿನಿಮಾಗೆ ಹೋಗೋಣ ಅತ್ತಿಗೆ ಎಂದಾಗ ಮೊದಲಿಗೆ ಪಾರು ಸುಮ್ಮನೆ ಇದ್ದಳು. ಆ ಬಳಿಕ ಆಯಿತು ಎಂದು ಖುಷಿಯಿಂದ ಒಪ್ಪಿಗೆ ನೀಡುತ್ತಾಳೆ. ಹಾಗೆಯೇ ಶಿವು ಮನವನ್ನು ಒಲಿಸುತ್ತಾಳೆ. ಎಲ್ಲರೂ ಸೇರಿ ಸಿನಿಮಾಗೆ ಹೋಗುತ್ತಾರೆ. ಸಿನಿಮಾವನ್ನು ನೋಡಿದ ಶಿವು ತಂಗಿ ಗುಂಡಮ್ಮ ಮಾತ್ರ ಶಿಳ್ಳೆ ಹೊಡೆದು ಸಂಭ್ರಮಿಸುತ್ತಾರೆ.ಇದೆಲ್ಲವನ್ನೂ ನೋಡಿದ ಶಿವು ಗೆ ಮಾತ್ರ ಕೊಂಚ ಆಶ್ಚರ್ಯ ಆಗುತ್ತದೆ. ಹೀಗೆಲ್ಲ ಆಡುತ್ತಿರುವುದು ತನ್ನ ತಂಗಿಯ ಎಂದು ಬಾಯಿ ಬಾಯಿ ಬಿಟ್ಟು ನೋಡುತ್ತಾನೆ.
ತಂಗಿಯ ವರ್ತನೆ ಕಂಡು ಸಮಜಾಯಿಷಿ ನೀಡಿದ ಪಾರು
ಇನ್ನು ಪಾರು ಇದಕ್ಕೆ ಕೂಡ ಏನಾದರು ಸಮಜಾಯಿಷಿ ಕೊಟ್ಟು ಶಿವು ಕೋಪವನ್ನು ಖಂಡಿತವಾಗಿ ತಣ್ಣಗೆ ಮಾಡುತ್ತಾರೆ ಎಂದು ಫ್ಯಾನ್ಸ್ ಈಗಲೇ ಹೇಳುತ್ತಿದ್ದಾರೆ. ಫ್ಯಾನ್ಸ್ ಗೆ ಪಾರು ಹಾಗೂ ಶಿವು ಜೋಡಿ ಬಹಳ ಇಷ್ಟ ಆಗಿದ್ದಾರೆ . ನಾಲ್ವರು ತಂಗಿಯರ ಮುದ್ದಿನ ಅಕ್ಕನಾಗಿ ಎಲ್ಲರ ಜೊತೆಗೆ ಖುಷಿಯಾಗಿಯೇ ಪಾರು ಜೊತೆ ಕಾಲ ಕಳೆಯುತ್ತಾ ಇದ್ದಾರೆ. ಆದರೆ ಪಾರು ನಮ್ಮ ಜೊತೆ ಇರುವುದು ಕ್ಷಣಿಕ ಎನ್ನುವುದು ಮಾತ್ರ ಎಲ್ಲರಿಗೂ ತಿಳಿಯಬೇಕಾಗಿದೆ.


Click it and Unblock the Notifications











