Annayya ; ಹೆಣ್ಣಿನ ಮಹತ್ವ ಜಗತ್ತಿಗೆ ಸಾರಿದ ಅಣ್ಣಯ್ಯ, ಶಿವು ಮಾತಿಗೆ ಬಿದ್ದ ಪಾರು..!
ಹೆಣ್ಣನ್ನು ಹಗುರವಾಗಿ ಕಂಡವರಿಗೆ ತನ್ನ ಮಾತಿನಿಂದಲೇ ಚಾಟಿ ಏಟು ಕೊಟ್ಟಿದ್ದಾನೆ ಶಿವು. ಶಿವು ಬಳಿಗೆ ಬಂದ ಹೆಣ್ಣು ಮಗಳು ತನ್ನ ಗಂಡ ಕೊಡುವ ಶಿಕ್ಷೆಯ ಬಗ್ಗೆ ಬಹಳಷ್ಟು ನೋವಿನಲ್ಲಿ ಹೇಳಿಕೊಳ್ಳುತ್ತಾಳೆ. ಇದಕ್ಕೆ ತಕ್ಕ ಹಾಗೆ ವೀರಭದ್ರಯ್ಯ ಇಡೀ ಹೆಣ್ಣು ಕುಲವೇ ನಾಚಿಕೆ ಪಡುವ ತೀರ್ಪು ನೀಡಿರುತ್ತಾನೆ. ಇದನ್ನು ಕೇಳಿದ ಶಿವು ಹಾಗೂ ಪಾರ್ವತಿಗೆ ಬಹಳಷ್ಟು ಕೋಪ ಬರುತ್ತದೆ. ಹೆಣ್ಣಿಗೆ ಇಷ್ಟೆಲ್ಲ ಅವಮಾನ ಆದರೂ ಗಂಡಿನ ಕಡೆಯೇ ನ್ಯಾಯ ಕೊಟ್ಟಿರುವುದು ಸರಿಯಲ್ಲ ಎಂದು ಎಲ್ಲರ ಬಳಿ ಹೇಳಿದ ಶಿವು ಪಂಚಾಯಿತಿಯನ್ನು ಕರೆಯುತ್ತಾನೆ. ವೀರಭದ್ರಯ್ಯನವರಿಗೆ ಮೊದಲೇ ಸಿಟ್ಟು ಏರಿರುತ್ತದೆ. ಈ ಮೊದಲೇ ಪಂಚಾಯಿತಿಯಲ್ಲಿ ಮಾತುಕತೆ ಆಗಿದೆ ಆದರೆ ಇದೀಗ ಮತ್ತೊಮ್ಮೆ ಪಂಚಾಯಿತಿ ಕರೆಯುತ್ತಿದ್ದಾರಲ್ಲ ಎಂದು ಬಹಳ ಕೋಪ ಬರುತ್ತದೆ.
ಆದರೆ ಅದ್ಯಾವುದನ್ನೂ ಯಾರ ಎದುರು ತೋರಿಸುವುದಿಲ್ಲ. ಪರಶು ಗೆ ಕೂಡ ಶಿವು ವರ್ತನೆ ಕೋಪ ತರಿಸುತ್ತದೆ. ಶಿವು ಬಳಿ ಪಾರು ಹೇಳುತ್ತಾಳೆ. ಇವತ್ತು ನೀನೇ ಇವರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದಾಗ ಪಾರು ಮಾತಿಗೆ ಮರು ಮಾತನಾಡದೆ ಒಪ್ಪಿಗೆ ಸೂಚಿಸುತ್ತಾನೆ. ಪಂಚಾಯಿತಿಯಲ್ಲಿ ಎಲ್ಲರೂ ಕೂಡ ಸೇರುತ್ತಾರೆ. ಹೆಣ್ಣಿನ ಕಡೆಯವರು ಬಹಳ ಅಳುಕಿನಿಂದ ಪಂಚಾಯಿತಿ ಕಡೆಗೆ ಬರುತ್ತಾರೆ. ಆದರೆ ಗಂಡಿನ ಕಡೆ ಅವರು ಮಾತ್ರ ಬಹಳ ಗತ್ತಿನಿಂದ ಬರುತ್ತಾರೆ ಕಟ್ಟಿಕೊಂಡ ಹೆಂಡತಿಯನ್ನು ಸರಿಯಾಗಿ ಬಾಳಿಸಲು ಆಗದೆ ಇರುವ ಗಂಡನನ್ನು ನೋಡಿ ಶಿವುಗೆ ಬಹಳಷ್ಟು ಕೋಪ ಬರುತ್ತದೆ.

ಮೂರು ಬಾರಿ ಹೆಣ್ಣು ಹೆತ್ತವಳು ಎನ್ನುವ ಕಾರಣಕ್ಕೆ ಕೋಪ ಮಾಡಿಕೊಂಡ ಗಂಡ ತನ್ನ ಹೆಂಡತಿ ಹಾಗೂ ಮಕ್ಕಳು ನನಗೆ ಬೇಡವೇ ಬೇಡ ಎಂದು ಖಡಾ ಖಂಡಿತವಾಗಿ ಹೇಳಿ ಬಿಡುತ್ತಾನೆ. ಇದನ್ನು ಕೇಳಿದ ಶಿವುಗೆ ಬಹಳಷ್ಟು ಕೋಪ ಬರುತ್ತದೆ. ನಮ್ಮನ್ನೆಲ್ಲ ಹೆತ್ತು, ಸಾಕಿ ಸಲಹಿದ್ದು ಅಮ್ಮ. ಅಮ್ಮ ಇಲ್ಲದಿದ್ದರೆ ನೀನು ಭೂಮಿ ಮೇಲೆ ಇರಲು ಸಾಧ್ಯವೇ ಆಗುತ್ತಿರಲಿಲ್ಲ, ಹೆತ್ತ ಅಮ್ಮ ಹೆಣ್ಣು ಹಾಗೆಯೇ ನೀನು ಮಾತನಾಡುತ್ತಿರುವ ಕನ್ನಡದಲ್ಲಿ ಕನ್ನಡಾಂಬೆ ಇದ್ದಾರೆ. ಆಕೆ ಕೂಡ ಹೆಣ್ಣು ಎಂದೆಲ್ಲ ಬಹಳಷ್ಟು ಉದಾಹರಣೆ ಕೊಡುತ್ತಾನೆ. ಎಲ್ಲದಕ್ಕೂ ಯಾವುದೇ ಉತ್ತರವನ್ನು ನೀಡದೆ ಕಲ್ಲುಬಂಡೆಯ ಹಾಗೆ ನಿಂತು ನೋಡುತ್ತಿರುತ್ತಾನೆ.
ಹೆಣ್ಣನ್ನು ನಿಂದಿಸಿದವನ ಕಣ್ಣು ತೆರೆಸಿದ ಶಿವು
ಶಿವು ಕೊನೆಗೆ ಒಂದು ಬಂಡೆ ಕಲ್ಲನ್ನು ಎತ್ತಲು ಹೇಳಿ ಪಂಚಾಯತ್ ಗೆ ಮೂರು ಸುತ್ತು ಬರಲು ಹೇಳುತ್ತಾನೆ. ಆ ಪ್ರಕಾರವಾಗಿ ಹೆಣ್ಣನ್ನು ನಿಂದಿಸಿದಾತ ಕಲ್ಲನ್ನು ಬಹಳ ಕಷ್ಟದಿಂದ ಎತ್ತಿಕೊಂಡು ನಡೆದಾಡಲು ಸಾಧ್ಯವಾಗದೆ ಕಲ್ಲನ್ನು ಬೀಳಿಸಿ ಬಿಡುತ್ತಾನೆ. ಆ ಕೂಡಲೇ ಶಿವು ಆತನ ಬಳಿಗೆ ಬಂದು ಹೆಂಡತಿ ನಿನ್ನ ಮಕ್ಕಳನ್ನು 9 ತಿಂಗಳು ಹೊತ್ತು ಜನ್ಮ ನೀಡುತ್ತಾಳೆ. ನಿನ್ನ ಮೂರು ಮಕ್ಕಳ ತಾಯಿ ಆಗಲು ಆಕೆ ಬಹಳಷ್ಟು ಕಷ್ಟ ಪಟ್ಟಿರುತ್ತಾಳೆ. ಪ್ರತಿ ಒಂದು ಮಗುವಿಗೆ ಜನ್ಮ ನೀಡಿದಾಗ ಆಕೆ ಸತ್ತು ಬದುಕಿ ಇರುತ್ತಾಳೆ. ನಿನ್ನ ಹೆಂಡತಿ ಮೂರು ಸಲ ಸತ್ತು ಬದುಕಿದ್ದಾಳೇ ಎಂದು ಹೇಳಿದಾಗ ಮಾತ್ರ ಹೆಣ್ಣಿಗೆ ಕಿರುಕುಳ ನೋಡಿದಾಗ ಅಳುತ್ತಾ ಶಿವು ಕಾಲು ಹಿಡಿದುಕೊಳ್ಳುತ್ತಾನೆ.
ಮಾವನ ಗುಣಕ್ಕೆ ಮೆಚ್ಚುಗೆ ಸೂಚಿಸಿದ ಪಾರು
ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ಹೆಂಡತಿ ಮಕ್ಕಳನ್ನು ಕರೆದುಕೊಂಡು ಮನೆಗೆ ಹೋಗುತ್ತಾನೆ. ವೀರಭದ್ರಯ್ಯ ಪಂಚಾಯತಿಯಲ್ಲಿ ಇದ್ದು ಇಲ್ಲದ ಹಾಗೆ ಇರುತ್ತಾನೆ. ಇದನ್ನೆಲ್ಲ ನೋಡಿದ ಪಾರುಗೆ ಶಿವು ಬಗ್ಗೆ ಇದ್ದ ಪ್ರೀತಿ ಕೊಂಚ ಜಾಸ್ತಿ ಆಗುತ್ತದೆ. ಪಾರು ಹಾಗೂ ಶಿವು ಬೈಕ್ ನಲ್ಲಿ ಕುಳಿತು ಬರುತ್ತಿರುವಾಗ ಪಾರು ಶಿವು ಗುಣಗನ್ನು ಗುಣಗಾನ ಮಾಡುತ್ತಾಳೆ ಹಾಗೆಯೇ ಸರಿಯಾದ ನ್ಯಾಯವನ್ನು ನೀನು ಕೊಟ್ಟಿದ್ದಿಯಾ ಎಂದು ಪಾರು ಗಂಡನ ಬಗ್ಗೆ ಖುಷಿ ಪಡುತ್ತಾಳೆ.


Click it and Unblock the Notifications











