ಅಣ್ಣಯ್ಯ ಹೀರೋ ವಿಕಾಸ್ ಬದುಕೇ ರೋಚಕ, ಲಾಯರ್ ಆಗಬೇಕಿದ್ದ ವ್ಯಕ್ತಿ ನಟನಾಗಿದ್ಹೇಗೆ..?
ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಅಣ್ಣಯ್ಯ ಕೂಡ ಒಂದು . ಈ ಧಾರವಾಹಿ ಇದೀಗ ಸಾಕಷ್ಟು ಜನರ ಮನಸ್ಸನ್ನು ಗೆದ್ದಿದೆ ನಾಲ್ವರು ತಂಗಿಯರ ಮುದ್ದಿನ ಅಣ್ಣ ಎಲ್ಲರ ಅಚ್ಚುಮೆಚ್ಚಿನ ಅಣ್ಣ ಶಿವು ಪಾತ್ರಧಾರಿಯ ನಿಜವಾದ ಹೆಸರು ಅವರು ಎಲ್ಲಿಯವರು ಎಂಬುವುದು ಬಹುತೇಕರಿಗೆ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಅವರ ಬಗ್ಗೆ ಅವರ ಬಗ್ಗೆ ತಿಳಿದುಕೊಳ್ಳುವ ಒಂದು ಪ್ರಯತ್ನ ಇಲ್ಲಿದೆ.
ಎಲ್ಲರ ಅಚ್ಚುಮೆಚ್ಚಿನ ಧಾರವಾಹಿ ಅಣ್ಣಯ್ಯ ಧಾರಾವಾಹಿಗೆ ಜನರಿಂದ ಸಾಕಷ್ಟು ರೆಸ್ಪಾನ್ಸ್ ಸಿಗುತ್ತಿದೆ. ಹಾಗೆಯೇ ಸಾಕಷ್ಟು ಜನರು ಬಹಳ ಕುತೂಹಲದಿಂದ ಇದ್ದಾರೆ. ಅಣ್ಣಯ್ಯನ ಮದುವೆ ಈಗಾಗಲೆ ಪಾರು ಜೊತೆ ನಡೆದು ಹೋಗಿದೆ ಆದರೆ ಪಾರು ಸಿದ್ದಾರ್ಥ್ ಎಂಬ ಹುಡುಗನನ್ನು ಬಹಳ ಪ್ರೀತಿ ಮಾಡುತ್ತಿದ್ದಳು. ಆದರೆ ಆಕೆಗೆ ಇದೀಗ ಸಿದ್ಧಾರ್ಥ್ ಕೈ ಕೊಟ್ಟು ಪರಾರಿ ಆಗಿದ್ದಾನೆ. ಆದರೆ ಮರಳಿ ಬಂದ ಪಾರ್ವತಿಯನ್ನು ಶಿವು ಗೆ ಕೊಟ್ಟು ಮದುವೆ ಮಾಡಿದ್ದಾರೆ. ಇನ್ನು ಪಾರು ಬಹಳ ಬೇಸರದಿಂದ ಕೋಪದಿಂದ ಶಿವು ಮನೆಗೆ ಕಾಲಿಡುತ್ತಿದ್ದಾಳೆ. ಇನ್ನು ಶಿವು ಜೊತೆ ಫಸ್ಟ್ ನೈಟ್ ಗೆ ಮನೆ ಮಂದಿ ಆರೆಂಜ್ ಮಾಡಿದ್ದಾರೆ. ಇನ್ನು ಶಿವು ರೂಮ್ ಗೆ ಹೋದ ಪಾರ್ವತಿ ಬಹಳ ಕೋಪಗೊಂಡಿದ್ದಾಳೆ. ಶಿವುಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿ ತಾಳಿ ಕಿತ್ತು ಹಾಕಲು ನೋಡಿದ್ದಾಳೆ . ಶಿವು ನಟನೆ ಬಹಳ ಮನೋಜ್ಞವಾಗಿ ಮೂಡಿ ಬಂದಿದೆ.
ಅನೇಕರು ಈ ಧಾರಾವಾಹಿಯ ಸ್ಟೋರಿ ನೋಡಿ ಇದು ಮಿಲನ ಸಿನಿಮಾದ ರೀಮೇಕ್ ಎಂದು ಹೇಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅಣ್ಣಯ್ಯನಾಗಿ ವಿಕಾಸ್ ಉತ್ತಯ್ಯನವರು ಅಭಿನಯ ಮಾಡುತ್ತಿದ್ದಾರೆ. ಮೂಲತಃ ಇವರು ಕೊಡಗಿನವರು. ಆದರೆ ವಿಕಾಸ್ ಹುಟ್ಟಿ ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿಯೇ ಚಿಕ್ಕ ವಯಸ್ಸಿನಲ್ಲಿ ನಟನಾಗಬೇಕು ಎನ್ನುವ ಕನಸನ್ನು ಹೊತ್ತುಕೊಂಡು ಬಂದ ನಟ ಇವರು. ಇವರು ವೃತ್ತಿಯಲ್ಲಿ ಅಡ್ವೊಕೇಟ್ ಕೆಲಸವನ್ನು ಮಾಡುತ್ತಿದ್ದರು.
ಸಿನಿಮಾದಲ್ಲಿ ನಟನೆ ಮಾಡಿದ್ದ ವಿಕಾಸ್
ಆದರೆ ಇವರನ್ನು ಅದಾಗಲೇ ಬಣ್ಣದ ಲೋಕ ಕೈ ಬೀಸಿ ಕರೆಯತೊಡಗಿತು. ಇವರು ಮೊದಲಿಗೆ ಕನ್ನಡ ಸಿನಿಮಾದಲ್ಲಿ ನಟನೆಯನ್ನು ಮಾಡಿದ್ದರು. ಆನೆ , ದ್ವಂದ್ವ ದ್ವಯಂ, ಮೇರಿ ಸಿನಿಮಾದಲ್ಲಿ ಇವರು ನಟನೆಯನ್ನು ಮಾಡಿದ್ದಾರೆ. ಆದರೆ ಸಿನಿಮಾದಲ್ಲಿ ವಿಕಾಸ್ ಅವರಿಗೆ ಅಷ್ಟಾಗಿ ಸಕ್ಸಸ್ ಸಿಗಲೇ ಇಲ್ಲ. ಅದಾದ ಬಳಿಕ ಅವರು ಕಿರುತೆರೆಯತ್ತ ಕಾಲಿಟ್ಟಿದ್ದಾರೆ. ಅಣ್ಣಯ್ಯ ಧಾರಾವಾಹಿಯ ಮೂಲಕ ಎಲ್ಲರ ಮನಸ್ಸನ್ನೂ ಗೆದ್ದಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಇನ್ನು ಇವರಿಗೆ ಜೋಡಿಯಾಗಿ ಗಟ್ಟಿಮೇಳ ಧಾರಾವಾಹಿಯ ನಾಯಕಿ ನಿಶಾ ರವಿಕೃಷ್ಣನ್ ಅವರು ಜೋಡಿಯಾಗಿ ನಟನೆ ಮಾಡಿದ್ದಾರೆ.
ನಾಲ್ವರು ತಂಗಿಯರ ಮುದ್ದಿನ ಅತ್ತಿಗೆ ಪಾರು
ನಾಲ್ವರು ತಂಗಿಯರ ಮುದ್ದಿನ ಅತ್ತಿಗೆಯಾಗಿ ನಟನೆ ಮಾಡುತ್ತಿದ್ದಾರೆ. ವಿಕಾಸ್ ಸೀರಿಯಲ್ ಪ್ರೇಮಿಗಳ ಮನಸನ್ನು ಕದ್ದಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಹಿರಿತೆರೆಯಲ್ಲಿ ವಿಕಾಸ್ ಗೆ ಅಷ್ಟಾಗಿ ಜನಪ್ರಿಯ ಸಿಗಲಿಲ್ಲ. ಆದರೆ ಕಿರುತೆರೆಯಲ್ಲಿ ಮಾತ್ರ ಅಣ್ಣಯ್ಯ ಧಾರಾವಾಹಿಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ಇನ್ನು ಈ ಧಾರಾವಾಹಿಯನ್ನು ಪ್ರಮೋದ್ ಶೆಟ್ಟಿ ನಿರ್ಮಾಣದ, ಉತ್ತಮ್ ಮಧು ನಿರ್ದೇಶನದ ಈ ಧಾರಾವಾಹಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಎಂದು ಹೇಳಿದರೆ ತಪ್ಪಾಗದು. ಇನ್ನು ಅಣ್ಣಯ್ಯ ಧಾರಾವಾಹಿಯಲ್ಲಿ ನಟನೆ ಮಾಡಲು ಸುಮಾರು 500 ಕಲಾವಿದರಿಂಗಿತ ಹೆಚ್ಚು ಜನರನ್ನು ಆಡಿಶನ್ ಮಾಡಲಾಗಿತ್ತು . ಆದರೆ ವಿಕಾಸ್ ಉತ್ತಯ್ಯ ಅವರಿಗೆ ಕೊನೆಗೆ ಈ ಧಾರಾವಾಹಿಯಲ್ಲಿ ನಟನೆ ಮಾಡುವ ಅದೃಷ್ಟ ಸಿಕ್ಕಿತು ಎಂದು ಹೇಳಿದರೆ ತಪ್ಪಾಗದು. ಇನ್ನು ವಿಕಾಸ್ ಅವರು ಶಾರ್ಟ್ ಫಿಲಂ ನಲ್ಲಿ ನಟನೆ ಮಾಡುತ್ತಿದ್ದರು. ಅಣ್ಣಯ್ಯ ಧಾರಾವಾಹಿಯನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.


Click it and Unblock the Notifications











