'ಅಣ್ಣಯ್ಯ'ನ ಅರಗಿಣಿ ನಿಶಾ ರವಿಕೃಷ್ಣ ಶ್ವಾನ ಪ್ರಿಯೆ; ಇವರು ಸಾಕಿರುವ ನಾಯಿ ಯಾವುದು ಗೊತ್ತೆ?

By ಎಸ್ ಸುಮಂತ್

ನಾಯಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇತ್ತೀಚೆಗಂತೂ ನಾಯಿ ಪ್ರೇಮಿಗಳು ಕೊಂಚ ಜಾಸ್ತಿಯೇ ಆಗಿದ್ದಾರೆ. ಅದರಲ್ಲೂ ಕಡಿಮೆ ಬೆಲೆಯ ನಾಯಿಗಳನ್ನೇನು ಸಾಕಲ್ಲ. ದುಬಾರಿ ಬೆಲೆಯ ನಾಯಿಗಳನ್ನೇ ಸಾಕುತ್ತಾರೆ. ಸೆಲೆಬ್ರೆಟಿಗಳಲ್ಲಂತೂ ಡಾಗ್ ಲವರ್ಸ್ ಸಿಕ್ಕಾಪಟ್ಟೆ ಮಂದಿ ಇದ್ದಾರೆ. ನಾಯಿಗಳನ್ನ ಇಷ್ಟ ಪಡುವುದಕ್ಕೂ ಒಂದು ಕಾರಣವಿದೆ. ಮನೆಯಲ್ಲಿ ಸಾಕಿದ ನಾಯಿ ಇದ್ದರೆ ಬೇರೆ ಸ್ನೇಹಿತರ ಅವಶ್ಯಕತೆಯೇ ಇರುವುದಿಲ್ಲ. ಅಷ್ಟು ಕ್ಲೋಸ್ ಆಗಿ ಇರುತ್ತವೆ. ಮಾತು ಬಾರದೆ ಹೋದರೂ, ಸನ್ನೆಯಲ್ಲಿಯೇ ಮನಸ್ಸನ್ನ ಗೆಲ್ಲುತ್ತವೆ. ಅಷ್ಟಕ್ಕೂ ನಾವೀವತ್ತು ಯಾವ ಸೆಲೆಬ್ರೆಟಿಯ ಸಾಕು ನಾಯಿಯ ಬಗ್ಗೆ ಹೇಳ್ತಾ ಇದ್ದೀವಿ ಗೊತ್ತಾ.

'ಅಣ್ಣಯ್ಯ' ಧಾರಾವಾಹಿಯ ನಟಿ ನಿಶಾ ರವಿಕೃಷ್ಣ ಕೂಡ ಸಿಕ್ಕಾಪಟ್ಟೆ ಶ್ವಾನ ಪ್ರೇಮಿ. ಅವರ ಸೋಷಿಯಲ್ ಮೀಡಿಯಾ ನೋಡಿದರೇನೆ ಅದು ಅರ್ಥವಾಗುತ್ತದೆ. ಅವರ ಬಳಿ ಇರುವುದು ಒಂದೇ ನಾಯಿ. ಅದರ ಜೊತೆಗೆ ಹೆಚ್ಚು ಒಡನಾಟ ಹೊಂದಿದ್ದಾರೆ. ಅದರ ಜೊತೆಗೆ ನಗುತ್ತಾರೆ, ಮಾತಾಡುತ್ತಾರೆ, ಆಟವಾಡುತ್ತಾರೆ. ನಾಯಿಯೊಂದಿಗೆ ಕಳೆದ ಕೆಲವು ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಆ ಫೋಟೋವನ್ನು ಹಂಚಿಕೊಂಡಿದ್ದಾರೆ. ಯಾವ ನಾಯಿ, ಅದರ ಬೆಲೆ ಏನು ಎಂಬುದೆಲ್ಲವನ್ನು ಹೇಳ್ತೀವಿ ಮುಂದೆ ಓದಿ.

Annayya serial actress Nisha Ravikrishna is dog lover

ನಿಶಾ ರವಿಕೃಷ್ಣ ಸದ್ಯ 'ಅಣ್ಣಯ್ಯ' ಧಾರಾವಾಹಿಯಲ್ಲಿ ನಟಿಸ್ತಾ ಇದ್ದಾರೆ. ಪಾರು ಪಾತ್ರದಲ್ಲಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ನಿಶಾ ತಾವೂ ಯಾವುದೇ ಪಾತ್ರ ಮಾಡಿದರೂ ಆ ಪಾತ್ರದ ಮೂಲಕ ಕ್ರೇಜ್ ಹುಟ್ಟು ಹಾಕುತ್ತಾರೆ‌. 'ಅಣ್ಣಯ್ಯ‌' ಧಾರಾವಾಹಿಗೂ ಮೊದಲು 'ಗಟ್ಟಿಮೇಳ' ಧಾರಾವಾಹಿಯಲ್ಲೂ ಅದೇ ರೀತಿ ಕ್ರೇಜ್ ಹುಟ್ಟು ಹಾಕಿದ್ದರು. ಅಮ್ಮು ಆಗಿ, ರೌಡಿ ಬೇಬಿಯಾಗಿ ಕಾಡಿದ್ದರು. ಅಲ್ಲಿಯೂ ಅಮ್ಮು-ವೇದಾಂತ್ ಜೋಡಿ ಮೋಡಿ ಮಾಡಿತ್ತು. ಈಗ 'ಅಣ್ಣಯ್ಯ' ಧಾರಾವಾಹಿಯಲ್ಲಿ ಶಿವು-ಪಾರು ಜೋಡಿ ಅಷ್ಟೇ ಇಷ್ಟವಾಗುತ್ತಿದೆ. ಅಂದ್ರೆ ನಿಶಾ ಆ ಪಾತ್ರಗಳನ್ನ ಎಷ್ಟರ ಮಟ್ಟಕ್ಕೆ ಜೀವಿಸ್ತಾರೆ ಅನ್ನೋದು ಇದರಲ್ಲಿಯೇ ತಿಳಿಯುತ್ತದೆ. ಓಕೆ ಇದು ಸೀರಿಯಲ್ ಕಥೆ. ಆಗಲೆ ಅವರ ಬಳಿ ಇರುವ ಶ್ವಾನದ ಬಗ್ಗೆ ಹೇಳಿದ್ವಿ. ಅದರ‌ ಮುಂದುವರೆದ ಕಂಪ್ಲೀಟ್ ಡಿಟೈಲ್ ಇಲ್ಲಿದೆ ನೋಡಿ.

ನಿಶಾ ರವಿಕೃಷ್ಣ ತಮ್ಮ ಬಳಿ ಇರುವ ಶ್ವಾನವನ್ನ ಎಲ್ಲಿಯೂ ಬಿಟ್ಟು ಹೋಗಲ್ಲ. ಜೊತೆ ಜೊತೆಯಾಗಿಯೇ ಕರೆದುಕೊಂಡು ಹೋಗ್ತಾರೆ. ಕಾರಿನಲ್ಲೂ ಅದೇ ಶ್ವಾನ, ಮನೆಯಲ್ಲಿ ಒಳ್ಳೆಯ ಜೊತೆಗಾರನಾಗಿಯೂ ಅದೇ ಇರುತ್ತದೆ. ಅದಕ್ಕೆ ಪ್ರೀತಿಯಿಂದ ಇಟ್ಟಿರುವ ಹೆಸರು ಬನ್ನಿ. ಈ ಬನ್ನಿಯ ಫೋಟೋಗಳನ್ನೆಲ್ಲ ನೋಡಿದರೆ ಇದು ಲ್ಯಾಬ್ರಡಾರ್ ತಳಿಯ ಶ್ವಾನ ಅನ್ನೋದು ಮೇಲ್ನೋಟಕ್ಕೆ ತಿಳಿಯುತ್ತೆ. ಇದರ ಬೆಲೆ ಆಲ್ಮೋಸ್ಟ್ ಈಗ ಎಲ್ಲರಿಗೂ ಗೊತ್ತೆ ಇರುತ್ತದೆ. ಇದರ ಬೆಲೆ ಒಂದೊಂದು ವಯಸ್ಸಿನ ಮರಿಗಳ ಮೇಲೆ ಡಿಪೆಂಡ್ ಆಗುತ್ತದೆ.

ಈ ಶ್ವಾನದ ಗುಣ ಎಂದರೆ ಫ್ರೆಂಡ್ಲಿ ನೇಚರ್, ನಿಯತ್ತು ಜಾಸ್ತಿ. ಮಾಲೀಕನ ಜೊತೆಗೆ ಪ್ರೀತಿ ಬೆಳೆಸಿಕೊಂಡರೆ ಅವರನ್ನ ಬಿಟ್ಟು ಹೋಗಲ್ಲ. ಈ ಶ್ವಾನವನ್ನ ಮಾಮೂಲಿ ಶ್ವಾನದಂತೆ ನೋಡಿಕೊಳ್ಳುವಂತಿಲ್ಲ. ನಾನ್ ವೆಜ್ ಪ್ರಿಯವಾದ ಈ ಶ್ವಾನಕ್ಕೆ ಅಭ್ಯಾಸ ಮಾಡಿಸಿದಂತೆ ಫುಡ್ ಅಭ್ಯಾಸವಾಗಲಿದೆ. ವಿಶೇಷ ಅಂದ್ರೆ ಈ ಶ್ವಾನಕ್ಕೆ ಹಾಲನ್ನ ಹಾಕುವುದಿಲ್ಲ. ಇದಕ್ಕೆ ಹಾಲು ಜೀರ್ಣಿಸುವುದಿಲ್ಲ. ಹೀಗಾಗಿ ಫುಡ್ ವಿಚಾರದಲ್ಲಿ ನೋಡಿಕೊಂಡು ಅಭ್ಯಾಸ ಮಾಡಬೇಕು. ಫ್ರೆಂಡ್ಲಿ ನೇಚರ್ ಇರುವ ಕಾರಣ ಆಲ್ಮೋಸ್ಟ್ ಸೆಲೆಬ್ರೆಟಿಗಳ ಫೇವರಿಟ್ ಶ್ವಾನ ಇದಾಗಿದೆ.

More from Filmibeat

English summary
Annayya serial actress Nisha Ravikrishna is dog lover. Here is the details about her favorite dog;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X