Annayya Serial:ರಶ್ಮಿ ಮದುವೆಗೆ ಅಮ್ಮಂದಿರು ಬರಲಿಲ್ಲ; ಪಾರುಗ್ಯಾಕೋ ಅನುಮಾನ?
ಶಿವು ಮನೆಯಲ್ಲಿ ಮದುವೆ ಸಂಭ್ರಮ ಕಳೆ ಗಟ್ಟಿದೆ. ಪಾರು ಹಾಗೆಯೇ ಶಿವು ತಂಗಿಯಂದಿರು ಅತ್ತಿಂದಿತ್ತ ಓಡಾಟ ಮಾಡುತ್ತಿದ್ದಾರೆ. ರಶ್ಮಿಯ ಮದುವೆಯ ಸಂಭ್ರಮದಲ್ಲಿ ಮನೆ ಮಂದಿ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ದೊಡ್ಡ ತಂಗಿಯ ಮದುವೆಯಂತೂ ಆಗಲಿಲ್ಲ. ಆದರೆ ಇದೀಗ 2ನೇ ತಂಗಿಯ ಮದುವೆ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಗಂಡಿನ ಕಡೆಯವರು ಅದೆಷ್ಟೇ ಹಣವನ್ನು ಕೇಳಿದರು ಅದೆಲ್ಲವನ್ನೂ ಶಿವು ಆರೆಂಜ್ ಮಾಡುತ್ತಾನೆ. ತನ್ನ ತಂಗಿ ಖುಷಿಯಾಗಿದ್ದರೆ ನಮಗೆ ಅಷ್ಟು ಸಾಕು ಅಂದುಕೊಂಡಿರುತ್ತಾನೆ.
ಇತ್ತ ಸಾಲ ಮಾಡಿ ತನ್ನ ತಂಗಿಯ ಮದುವೆ ಮಾಡಲು ಶಿವು ನಿರ್ಧಾರ ಮಾಡುತ್ತಾನೆ. ಶಿವು ಈ ವಿಚಾರವನ್ನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಆತನಿಗೆ ಈ ವಿಚಾರವನ್ನು ಹೇಳಬೇಕು ಎಂದು ಅನ್ನಿಸುವುದಿಲ್ಲ. ಆದರೆ ಪಾರು ಮಾತ್ರ ಶಿವು ಏನೋ ತಲೆ ಬಿಸಿಯಲ್ಲಿದ್ದಾನೆ. ಆದರೆ ಯಾವ ವಿಚಾರ ನಮ್ಮ ಬಳಿ ಹೇಳುತ್ತಿಲ್ಲ ಎನ್ನುವ ಬೇಸರದಲ್ಲಿ ಪಾರು ಇರುತ್ತಾಳೆ. ಇತ್ತ ವೀರಭದ್ರ ಬಹಳಷ್ಟು ಸಂಚು ಮಾಡಿದ್ದಾನೆ. ಹೇಗಾದರೂ ಮಾಡಿ ಮದುವೆ ನಿಲ್ಲಿಸಬೇಕು ಎನ್ನುವುದು ವೀರಭದ್ರಯ್ಯನ ಆಲೋಚನೆ. ಶಿವು ಅತ್ತೆಯಂದಿರು ಇಬ್ಬರು ಕೂಡ ನಾವು ಅರಸಿನ ಶಾಸ್ತ್ರಕ್ಕೆ ಬರುತ್ತೇವೆ ಮದುವೆಗೆ ನಾವು ಇಬ್ಬರು ಬರಲಾಗುವುದಿಲ್ಲ ರಶ್ಮಿಯ ಅರಶಿನ ಶಾಸ್ತ್ರವನ್ನಾದರೂ ನಾವಿಬ್ಬರು ಕಣ್ತುಂಬಿಸಿಕೊಳ್ಳುತ್ತೇವೆ.

ನಾವಿಬ್ಬರು ಯಾವುದೇ ವಿಚಾರವನ್ನು ಯಾರ ಬಳಿಯೂ ಕೂಡ ಹೇಳುವುದಿಲ್ಲ ದಯವಿಟ್ಟು ನಮಗೆ ಅವಕಾಶವನ್ನ ಕೊಡಿ ಎಂದು ಇಬ್ಬರೂ ಕೂಡ ಬೇಡಿಕೊಳ್ಳುತ್ತಾರೆ ಇದನ್ನು ನೋಡಿದ ವೀರಭದ್ರಯ್ಯನಿಗೆ ಮನಸ್ಸು ಕರಗುವುದಿಲ್ಲ. ವೀರಭದ್ರಯ್ಯ ಪರಶುನ ಜೊತೆ ಕೇಳುತ್ತಾರೆ ಏನೋ ನಿನ್ನ ಅಮ್ಮಂದಿರನ್ನ ನಾವು ಕರೆದುಕೊಂಡು ಹೋಗೋಣ ಎಂದು ಪರಿಶು ಜೊತೆ ಕೇಳಿದಾಗ ಆತನ ಮನಸ್ಸು ಕರಗುತ್ತದೆ. ಅಮ್ಮಂದಿರನ್ನು ಕರೆದುಕೊಂಡು ಹೋಗಲು ಒಪ್ಪಿಕೊಳ್ಳುತ್ತಾನೆ. ಆ ಬಳಿಕ ವೀರಭದ್ರಯ್ಯ ಅಯ್ಯೋ ಪರಶು ನಿನ್ನ ಅಮ್ಮಂದಿರ ತಂದೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಈ ವೇಳೆ ಅವರು ತವರುಮನೆಗೆ ಹೋಗಿದ್ದಾರೆ ಅಲ್ವೇ ಎಂದು ಹೇಳಿದಾಗ ಶಿವು ಅತ್ತೆಯಂದಿರಿಗೆ ಬಹಳ ನೋವಾಗುತ್ತೆ.
ಹೆಂಡತಿಯರನ್ನು ಮನೆಯಲ್ಲಿ ಕೂಡಿ ಹಾಕಿದ ವೀರಭದ್ರ
ವೀರಭದ್ರನ ಮಾತಿನಲ್ಲಿ ಹೆಂಡತಿಯರಿಗೆ ಗೊತ್ತಾಗುತ್ತದೆ ಅರಿಶಿನ ಶಾಸ್ತ್ರಕ್ಕೂ ನಮ್ಮನ್ನು ಕರೆದುಕೊಂಡು ಹೋಗುವುದಿಲ್ಲ. ವೀರಭದ್ರಯ್ಯ ಮನೆಗೆ ಬೀಗ ಹಾಕಿಕೊಂಡು ಶಿವು ಮನೆಗೆ ಹೊರಡುತ್ತಾರೆ. ಇದ್ದ ಪಾರು ಬಹಳ ಖುಷಿಯಲ್ಲಿ ಓಡಾಡುತ್ತಿರುತ್ತಾಳೆ. ತನ್ನ ನಾದಿನಿಯ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡಿಸುವ ಖುಷಿಯಲ್ಲಿರುತ್ತಾಳೆ. ಮನೆಗೆ ವೀರಭದ್ರಯ್ಯ ಹಾಗೂ ಪರಶು ಬರುತ್ತಾನೆ. ಇದನ್ನು ನೋಡಿದ ಪಾರು ಅಮ್ಮಂದಿರು ಯಾಕೆ ಬಂದಿಲ್ಲ ಎಂದು ಕೇಳುತ್ತಾಳೆ. ಆಗ ವೀರಭದ್ರಯ್ಯ ತಾತನಿಗೆ ಹುಷಾರಿಲ್ಲದ ವಿಚಾರವನ್ನು ಪಾರು ಮುಂದೆ ಹೇಳುತ್ತಾರೆ. ಹಾಗೆಯೇ ಅಮ್ಮಂದಿರು ತವರು ಮನೆಗೆ ಹೋಗಿದ್ದಾರೆ ಎಂದಾಗ ಪಾರು ತನ್ನ ತಾಯಂದಿರಿಗೆ ಫೋನ್ ಮಾಡಲು ನೋಡುತ್ತಾಳೆ. ಆದರೆ ಫೋನ್ ಪರಶು ಬಳಿ ಇರುವುದು ಪಾರುಗೆ ತಿಳಿಯುತ್ತದೆ.

ರಶ್ಮಿಗೆ ಅರಶಿನ ಹಚ್ಚಿದ ಪಾರು
ತಾಯಂದಿರು ಬರುವುದಿಲ್ಲ ಅರಶಿನ ಯಾರು ಹಚ್ಚುವುದು ಎಂದು ಯೋಚನೆ ಮಾಡುತ್ತಿರುವಾಗ ಅಲ್ಲಿ ಹೇಳುತ್ತಾರೆ. ಪಾರು ಮೊದಲು ಅರಶಿನ ಹಚ್ಚಲಿ. ಯಾಕೆಂದರೆ ಪಾರು ಇದೀಗ ಶಿವು ತಂಗಿಯರ ತಾಯಿಯಾಗಿದ್ದಾಳೆ. ಇದರಿಂದ ಆಕೆಯ ಅರಿಶಿನವನ್ನು ಹಚ್ಚುವುದು ಸೂಕ್ತ ಎಂದು ಅಜ್ಜಿ ಹೇಳುತ್ತಾರೆ. ಆಗ ಊರಿನ ಮಂದಿ ಕೂಡ ಹೌದು ಎಂದು ಒಪ್ಪಿಗೆ ಸೂಚಿಸುತ್ತಾರೆ. ಪಾರು ಅರಶಿನವನ್ನು ರಶ್ಮಿಗೆ ಹಚ್ಚುತ್ತಾಳೆ. ಇದೆಲ್ಲವನ್ನು ನೋಡಿದ ಊರಿನ ಮಂದಿಗೆ ಬಹಳ ಖುಷಿಯಾಗುತ್ತದೆ. ಶಿವು ಮದುವೆ ಓಡಾಟದಲ್ಲಿ ಬಹಳಷ್ಟು ಬ್ಯುಸಿಯಾಗಿರುತ್ತಾನೆ. ಆತನಿಗೆ ಮದುವೆ ಕಾರ್ಯಕ್ರಮಗಳು ಮುಗಿಯುವವರೆಗೂ ಆತಂಕ ಮಾಡಿರುತ್ತೆ.


Click it and Unblock the Notifications











