Annayya Serial:ಶಿವು ತಂಗಿ ಮದುವೆ ನಿಲ್ಲುತ್ತಾ? ಸತ್ಯ ಹೇಳಲು ಯಶಸ್ವಿ ಆಗ್ತಾರಾ ಅತ್ತೆಯಂದಿರು!

By ಪೂರ್ವ

ಶಿವು ಹೆಂಡತಿ ಪಾರುಗೆ ಮನೆಯವರ ಮೇಲೆ ಅತಿಯಾದ ಕಾಳಜಿ ಬಂದು ಬಿಟ್ಟಿದೆ. ಶಿವುಗೆ ಪಾರು ಎಂದರೆ ಸಣ್ಣ ವಯಸ್ಸಿನಿಂದಲೂ ಬಹಳ ಇಷ್ಟ. ಆದರೆ ಪಾರುಗೆ ಗಂಡ ಶಿವುವನ್ನು ನೋಡಿ ಇತ್ತೀಚಿಗೆ ಸಿಕ್ಕಾಪಟ್ಟೆ ಪ್ರೀತಿ ಬಂದು ಬಿಟ್ಟಿದೆ. ಇಷ್ಟು ಒಳ್ಳೆಯ ಮಾವನನ್ನು ಬಿಟ್ಟು ನಾನು ಬೇರೆ ಗಂಡಸಿನ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದೆನಲ್ಲ ಎನ್ನುವ ಬೇಸರ ಆಕೆಯನ್ನು ಕಾಡುತ್ತಿದೆ. ಆದರೂ ಪಾರು ಶಿವು ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವುದಿಲ್ಲ. ಒಳಗಿಂದೊಳಗೆ ತನ್ನ ಗಂಡನನ್ನು ಬಹಳ ಪ್ರೀತಿ ಮಾಡುತ್ತಿದ್ದಾಳೆ.

ಶಿವು ತಂಗಿ ಪ್ಲಾನ್ ಮಾಡಿ ಹೇಗಾದರೂ ಮಾಡಿ ಅಣ್ಣ ಹಾಗೂ ಅತ್ತಿಗೆಯನ್ನು ಒಂದು ಮಾಡಲೇಬೇಕು ಎಂದು ಆಲೋಚನೆ ಮಾಡುತ್ತಿದ್ದಾಳೆ. ಆದರೆ ಅತ್ತಿಗೆಗೆ ಅಣ್ಣನ ಮೇಲೆ ಪ್ರೀತಿ ಇದೆ ಎಂದು ತಿಳಿದ ಬಳಿಕ ಶಿವು ತಂಗಿಯಂದಿರು ಬಹಳ ಖುಷಿ ಪಡುತ್ತಾರೆ. ತನ್ನ ಅಣ್ಣ ಸಣ್ಣ ವಯಸ್ಸಿನಿಂದಲೂ ತನ್ನನ್ನೇ ಪ್ರೀತಿ ಮಾಡುತ್ತಿದ್ದದ್ದು ಎಂದು ತಿಳಿದ ಪಾರುಗೆ ಬಹಳ ಖುಷಿಯಾಗುತ್ತೆ. ಇದೀಗ ಪಾರುಗೆ ಶಿವು ಮೇಲೆ ಮನಸಾಗಿದೆ. ಶಿವು ಜೊತೆ ಜೀವನವನ್ನು ನಡೆಸಬೇಕು ಎನ್ನುವ ಆಸೆ ಪಾರುಗೆ ಶುರುವಾಗಿದೆ. ಪಾರು ತನ್ನ ಗಂಡನಿಗೆ ಎನೆಲ್ಲ ಸಹಾಯ ಮಾಡಬೇಕೋ ಅದೆಲ್ಲಾ ಸಹಾಯವನ್ನು ಮಾಡುತ್ತಿದ್ದಾಳೆ. ಇತ್ತ ಶಿವು ತಂದೆ ತನ್ನ ಹೆಂಡತಿಯ ನೆನಪಿನಲ್ಲಿ ಕಾಲ ಕಳೆಯುತ್ತಿದ್ದಾನೆ. ಆತನಿಗೆ ತನ್ನ ಹೆಂಡತಿ ಸುಶೀಲಾ ಎಂದರೆ ಬಹಳ ಪ್ರೀತಿ.

Annayya serial February 5th 2025 episode Shivu sister wedding issue

ಸುಶೀಲಾ ಕೂಡ ಒಬ್ಬರಿಗೆ ಒಳ್ಳೆಯದನ್ನು ಬಯಸುತ್ತಾಳೆ ಹೊರತು ಕೆಟ್ಟದನ್ನಲ್ಲ. ಆದರೆ ಇದೀಗ ಸುಶೀಲಾನನ್ನು ನೆನಪಿಸಿಕೊಂಡು ದಿನ ನಿತ್ಯ ಮದ್ಯ ಸೇವನೆಯನ್ನು ಮಾಡುತ್ತಿದ್ದಾನೆ ಶಿವು ತಂದೆ. ಶಿವು ತಂದೆಗೆ ಯಾರೇ ಬುದ್ಧಿ ಹೇಳಿದರೂ ಕೂಡ ಆತ ಯಾರ ಮಾತನ್ನು ಕೇಳುವ ಜಾಯಮಾನದವನಲ್ಲ. ಆದರೆ, ಇದೀಗ ಪಾರು ತನ್ನ ಮಾವನನ್ನು ಹತ್ತಿರ ಕೂರಿಸಿಕೊಂಡು ತನ್ನ ಮಾವನಿಗೆ ಬುದ್ಧಿವಾದ ಹೇಳುತ್ತಾಳೆ. ತನ್ನ ಮಾವನ ಬಳಿ "ಮಾವ ನೀವು ಮಾಡುತ್ತಿರುವುದು ಸರಿಯಲ್ಲ. ನಿಮ್ಮ ಮಕ್ಕಳು ನಿಮ್ಮ ಮೇಲೆ ಬಹಳಷ್ಟು ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಆದರೆ ನೀವು ಈ ರೀತಿ ಕುಡಿದು ರಸ್ತೆ ಮಧ್ಯದಲ್ಲಿ ಬೀಳುವುದು ನನಗೆ ಸರಿ ಕಾಣಿಸುತ್ತಿಲ್ಲ. ದಯವಿಟ್ಟು ನೀವು ಮನೆಯ ಹೊರಗೆ ಮಾಡುತ್ತಿರುವುದನ್ನು ಮನೆಯ ಒಳಗೆ ಮಾಡಿ" ಎಂದು ಬಹಳ ಬೇಸರದಿಂದ ತನ್ನ ಮಾವನ ಬಳಿ ತನ್ನ ದುಃಖವನ್ನು ತೋಡಿಕೊಳ್ಳುತ್ತಾಳೆ.

ಪಾರು ಮಾತಿಗೆ ಖುಷಿ ಪಟ್ಟ ಶಿವು ತಂದೆ

ಆಕೆಯ ಮಾತನ್ನು ಕೇಳಿದ ಪಾರುವಿನ ಮಾವ "ಪಾರು ನಿನ್ನ ಮಾತಿಗೆ ಬೆಲೆಕೊಟ್ಟು ನಾನು ಇಂದಿನಿಂದ ಆದಷ್ಟು ಮಟ್ಟಿಗೆ ಕುಡಿತದ ಚಟದಿಂದ ಹೊರಬರಲು ಪ್ರಯತ್ನಿಸುತ್ತೇನೆ" ಎಂದು ತನ್ನ ಸೊಸೆಗೆ ಭರವಸೆಯನ್ನು ನೀಡುತ್ತಾನೆ. ಇದೆಲ್ಲವನ್ನು ನೋಡಿ ಶಿವು ತಂಗಿಯಂದಿರು ಸಿಕ್ಕಾಪಟ್ಟೆ ಖುಷಿ ಪಡುತ್ತಾರೆ. "ಅತ್ತಿಗೆ ನಿನ್ನಿಂದಾಗಿ ಇವತ್ತು ಈ ಮನೆಯಲ್ಲಿ ಕಳೆ ಬಂದಿದೆ. ನೀನು ಈ ಮನೆಯ ಸೊಸೆಯಾಗಿ ಬಂದಿರುವುದು ನಮಗೆಲ್ಲ ಬಹಳ ಖುಷಿಯನ್ನು ನೀಡಿದೆ. ನಿನಗೋಸ್ಕರ ನಾವು ಏನು ಬೇಕಾದರೂ ಮಾಡಲು ರೆಡಿ ಇದ್ದೇವೆ" ಎಂದು ಶಿವು ತಂಗಿಯರು ಹೇಳಿದಾಗ "ನನಗೋಸ್ಕರ ನೀವು ಏನು ಮಾಡುವುದು ಬೇಕಾಗಿಲ್ಲ. ನೀವು ಮದುವೆಯಾದ ಬಳಿಕ ನಿಮ್ಮ ಗಂಡನ ಮನೆಯಲ್ಲಿ ನಿಮ್ಮ ಅಣ್ಣನಿಗೆ ಮರ್ಯಾದೆ ಸಿಗುವ ಹಾಗೆ ಮಾಡಿ ಸಾಕು" ಎಂದು ಹೇಳುತ್ತಾಳೆ.

Annayya serial February 5th 2025 episode Shivu sister wedding issue

ಅತ್ತಿಗೆಯ ಮಾತಿಗೆ ಖುಷಿ ಪಟ್ಟ ಮನೆ ಮಕ್ಕಳು

ಈ ಮಾತನ್ನು ಕೇಳಿ ಶಿವು ತಂದೆಗೆ ಆತನ ಹೆಂಡತಿಯ ಸುಶೀಲಾನೇ ನೆನಪಿಗೆ ಬರುತ್ತಾಳೆ. ಪಾರುಗೆ ಸುಶೀಲಾನ ಗುಣ ಬಂದಿದೆ ಎಂದು ಬಹಳ ಖುಷಿಯಲ್ಲಿ ಕಣ್ಣೀರು ಸುರಿಸುತ್ತಾರೆ. ಹಾಗೆ ಹೇಳಿದಾಗ ಪಾರುಗೆ ಸುಶೀಲಾ ಎಂದರೆ ಯಾರು ಎಂದು ಮೊದಲಿಗೆ ತಿಳಿಯುವುದಿಲ್ಲ. ಬಳಿಕ ಯೋಚಿಸಿದ ಪಾರು, ಮಾವಯ್ಯ ಅತ್ತೆಯ ಬಗ್ಗೆ ಏನಾದರೂ ಹೇಳಿರಬಹುದಾ? ಎಂದು ಯೋಚಿಸುತ್ತಾಳೆ. ಇತ್ತ ಶಿವು ಮದುವೆಯ ಕಾರ್ಡನ್ನು ಕೊಡಲು ವೀರಭದ್ರಯ್ಯನ ಮನೆಗೆ ಹೋಗುತ್ತಾನೆ. ಆತನನ್ನು ನೋಡಿದ ಕೂಡಲೇ ಶಿವು ಅತ್ತೆ ಹೇಗಾದರೂ ಮಾಡಿ ಶಿವುಗೆ ನಿಜ ವಿಚಾರವನ್ನು ಹೇಳಬೇಕು. ಇಲ್ಲವಾದರೆ ಖಂಡಿತವಾಗಿಯೂ ಶಿವು ತಂಗಿಯ ಬಾಳು ಹಾಳಾಗುತ್ತದೆ ಎಂದು ಅಂದುಕೊಳ್ಳುತ್ತಾಳೆ.

ಶಿವು ಅಸಲಿ ವಿಷಯ ಮುಟ್ಟಿಸಿದ ಅತ್ತೆ

ಶಿವು ಜೊತೆ ಮೆತ್ತೆಗೆ ಮಾತನಾಡಿದ ಆತನ ಅತ್ತೆ ಹುಡುಗನ ಕಡೆಯವರ ಬಗ್ಗೆ ಮಾಹಿತಿಯನ್ನು ನೀಡುತ್ತಾಳೆ. ಗುಂಡಮ್ಮನನ್ನು ಮದುವೆಯಾಗುವ ಹುಡುಗ ಅಷ್ಟು ಒಳ್ಳೆಯವನಲ್ಲ ಎನ್ನುವ ವಿಚಾರವನ್ನು ಶಿವು ಬಳಿ ಆತನ ಅತ್ತೆ ಹೇಳುತ್ತಾರೆ.

More from Filmibeat

English summary
Annayya serial February 5th 2025 episode Shivu sister wedding issue:
Read more about: tv serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X