Annayya:'ಅಣ್ಣಯ್ಯ' ಧಾರಾವಾಹಿಯ ಮಹಾ ಟ್ವಿಸ್ಟ್; ಪಾರುವನ್ನು ಮದುವೆಯಾದ ಶಿವು.. ಹೇಗೆ ಸಾಗುತ್ತೆ ಸೀರಿಯಲ್?
ಅಮ್ಮನಿಗಿಂತ ಇವನೇ ಮಿಗಿಲು , ತಂಗಿಯರ ಪಾಲಿಗೆ ಅಣ್ಣನೇ ಮುಗಿಲು ಹೀಗೆ ಟ್ಯಾಗ್ ಲೈನ್ ಹೊತ್ತುಕೊಂಡು ಬಂದ ಧಾರಾವಾಹಿ 'ಅಣ್ಣಯ್ಯ'. ಈ ಧಾರಾವಾಹಿ ಕಿರುತೆರೆ ವೀಕ್ಷಕರ ಅಚ್ಚು ಮೆಚ್ಚಿನ ಧಾರವಾಹಿಯಾಗಿದೆ. ನಾಲ್ವರು ತಂಗಿಯರ ಮುದ್ದಿನ ಅಣ್ಣನಾಗಿ ಎಲ್ಲರ ಖುಷಿಯನ್ನು ಬಯಸುವ ವ್ಯಕ್ತಿಯಾಗಿ ಶಿವು ಎನ್ನುವ ಪಾತ್ರದಲ್ಲಿ ವೀಕ್ಷಕರ ಮನಸ್ಸು ಗೆಲ್ಲುತ್ತಿದೆ.
ತಾನು ಏನಾದರೂ ಸಾಧನೆ ಮಾಡಬೇಕು. ಊರಿಗೆ ಒಳ್ಳೆಯ ಹೆಸರನ್ನು ತಂದುಕೊಡಬೇಕು ಎಂದೆಲ್ಲ ಅಂದುಕೊಂಡಿದ್ದವಳು ಪಾರು. ಆಕೆ ಒಬ್ಬ ಡಾಕ್ಟರ್‌ನನ್ನ ಪ್ರೇಮಿಸುತ್ತಿದ್ದಳು. ಈ ವಿಚಾರ ಶಿವುಗೆ ಬಿಟ್ಟರೆ ಬೇರೆ ಯಾರಿಗೆ ಕೂಡ ತಿಳಿದಿಲ್ಲ. ಪಾರುಗೆ ಆಕೆಯ ತಂದೆಯನ್ನು ನೋಡಿದರೆ ಬಹಳ ಭಯ. ಪಾರು ಏನಾದರು ಎದುರು ಉತ್ತರ ಕೊಟ್ಟರೆ, ಪಾರುವಿನ ತಾಯಿಗೆ ಹೊಡೆಯುತ್ತಿದ್ದ ವೀರಭದ್ರಯ್ಯ. ತನ್ನ ತಂದೆಯಿಂದಲೇ ತನ್ನ ಜೀವನ ಹಾಳಾಗುತ್ತದೆ ಎನ್ನುವ ಸತ್ಯವನ್ನು ಪಾರು ಅರಿತುಕೊಂಡು ಬಿಡುತ್ತಾಳೆ. ಪಾರುಗೆ ಆಕೆ ಪ್ರೀತಿ ಮಾಡುತ್ತಿದ್ದ ಹುಡುಗನ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಇತ್ತು.

ನನ್ನನ್ನು ಆತ ಮದುವೆ ಆಗಿಯೇ ಆಗುತ್ತಾನೆ ಎನ್ನುವ ನಂಬಿಕೆ ಇತ್ತು. ಆದರೆ ಅಲ್ಲಿ ಆಗಿದ್ದೆ ಬೇರೆ. ಪಾರುಗೆ ಮದುವೆ ಗೊತ್ತು ಮಾಡಿರುತ್ತಾನೆ ವೀರಭದ್ರಯ್ಯ. ಆದರೆ ಪಾರುಗೆ ಆ ಮದುವೆ ಸ್ವಲ್ಪ ಕೂಡ ಇಷ್ಟ ಇರುವುದಿಲ್ಲ. ಇದನ್ನು ಅದೆಷ್ಟೇ ಬಾರಿ ತನ್ನ ತಂದೆಯ ಬಳಿ ಹೇಳಿದರು ಅವರು ಅದ್ಯಾವುದನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಬಳಿಕ ತನ್ನ ಮಾವ ಶಿವು ಬಳಿ ತಾನು ಪ್ರೀತಿ ಮಾಡುತ್ತಿರುವ ವಿಚಾರವನ್ನು ಹೇಳುತ್ತಾಳೆ. ಇದನ್ನು ಕೇಳಿ ಶಿವುಗೆ ಬಹಳ ಬೇಸರ ಆಗುತ್ತೆ.
ಪಾರುವನ್ನು ಚಿಕ್ಕ ವಯಸ್ಸಿನಿಂದಲೂ ಶಿವು ಪ್ರೀತಿ ಮಾಡುತ್ತಿರುತ್ತಾನೆ. ಆದರೆ ಪಾರ್ವತಿ ಬೇರೆಯವನನ್ನು ಪ್ರೀತಿ ಮಾಡುತ್ತಿದ್ದಾಳೆ ಎಂದು ಗೊತ್ತಾದರೂ ಆತ ಪಾತುವಿನ ಖುಷಿಗಾಗಿ ಮದುವೆಯ ದಿನವೇ ಆಕೆಯನ್ನು ಆತನ ಪ್ರಿಯಕರನ ಬಳಿಗೆ ಕರೆದುಕೊಂಡು ಹೋಗುತ್ತಾನೆ. ಆದರೆ ಆತನನ್ನು ಎಲ್ಲಿ ಹುಡುಕಿದರೂ ಕೈಗೆ ಮಾತ್ರ ಸಿಗುವುದಿಲ್ಲ. ಪಾರ್ವತಿ ತನ್ನ ಪ್ರಿಯಕರನ ಮನೆಗೆ ಹಾಗೆಯೇ ಕ್ಲಿನಿಕ್‌ಗೆ ಎಲ್ಲಾ ಕಡೆ ಹೋಗಿ ನೋಡುತ್ತಾಳೆ. ಆದರೆ ಆತ ಮಾತ್ರ ಮನೆ ಕ್ಲಿನಿಕ್ ಇದೆಲ್ಲವನ್ನೂ ಖಾಲಿ ಮಾಡಿ ರಾತ್ರೋ ರಾತ್ರಿ ಅಲ್ಲಿಂದ ಹೊರಟು ಹೋಗಿರುತ್ತಾನೆ.
ಅಳುತ್ತಿರುವ ಪಾರುವನ್ನು ಸಂತೈಸಿದ ಶಿವು
ಶಿವು ಮೆತ್ತಗೆ ಅಳುತ್ತಿರುವ ಪಾರುವನ್ನು ಸಮಾಧಾನ ಮಾಡುತ್ತಾನೆ ಹಾಗೆಯೇ ಮದುವೆ ಮನೆಯಿಂದ ಹೇಳದೆ ಕೇಳದೆ ಬಂದಿದ್ದೇವೆ. ಬಾ ನಾವು ಅಲ್ಲಿಗೆ ಹೋಗೋಣ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪಾರು ಮರು ಮಾತನಾಡದೇ ಶಿವು ಜೊತೆ ಹೋಗುತ್ತಾಳೆ. ಇನ್ನು ಮದುವೆ ಮನೆಯಲ್ಲಿ ಪಾರು ಶಿವು ಜೊತೆ ಓಡಿ ಹೋಗಿದ್ದಾಳೆ ಎನ್ನುವ ಗುಲ್ ಎದ್ದಿರುತ್ತದೆ. ಪಾರುವನ್ನು ಮದುವೆ ಆಗಬೇಕಿದ್ದ ಹುಡುಗ ಮಾತ್ರ ಬಹಳ ಕೋಪದಲ್ಲಿ ಇರುತ್ತಾನೆ. ಇನ್ನು ಶಿವು ಜೊತೆ ಪಾರುವನ್ನು ನೋಡಿ ವೀರಭದ್ರಯ್ಯನ ಕೋಪ ನೆತ್ತಿಗೆ ಏರುತ್ತೆ.

ತಂದೆಯ ಮಾತಿಗೆ ಕಟ್ಟುಬಿದ್ದು ಶಿವು
ಪಾರುವನ್ನು ಹಸೆ ಮಣೆಗೆ ಹೋಗಿ ಕೂರಲು ಹೇಳುತ್ತಾನೆ ಆಕೆಯ ತಂದೆ ವೀರಭದ್ರಯ್ಯ. ತಂದೆಯ ಆದೇಶದಂತೆ ಪಾರು ಹಸೆಮನೆಗೆ ಹೋಗಿ ಕೂರುತ್ತಾಳೆ. ಪಾರುಗೆ ತಾಳಿ ಕಟ್ಟಲು ಶಿವುಗೆ ವೀರಭದ್ರಯ್ಯ ಆದೇಶ ಕೊಡುತ್ತಾನೆ. ಇದು 'ಅಣ್ಣಯ್ಯ' ಸಂಚಿಕೆಯೆ ಬಿಗ್ ಟ್ವಿಸ್ಟ್ ಆಗಿರುತ್ತೆ. ಪಾರುಗೆ ಶಿವು ತಾಳಿ ಕಟ್ಟುತ್ತಾನೋ ಇಲ್ಲವೋ? ಅನ್ನೋ ಕುತೂಹಲಕ್ಕೆ ಈ ಸಂಚಿಕೆಯಲ್ಲಿ ತೆರೆಬಿದ್ದಿದೆ. ಕೊನೆಗೂ ಪಾರುಗೆ ಶಿವು ತಾಳಿ ಕಟ್ಟಿದ್ದಾನೆ. ಅದಾದ ಬಳಿಕ ಪಾರುವನ್ನೂ ತನ್ನ ಮನೆಯ ಸೊಸೆ ಎಂದು ಮನೆ ತುಂಬಿಸಿಕೊಳ್ಳುತ್ತಾರೆ. ಇದೆಲ್ಲವನ್ನೂ ನೋಡಿದ ಮನೆ ಮಂದಿ ಬಹಳ ಖುಷಿ ಆಗಿರುತ್ತಾರೆ. ಆದರೆ ಮುಂದೆ ಪಾರು ಯಾವ ರೀತಿ ನಡೆದುಕೊಳ್ಳುತ್ತಾಳೆ ಅನ್ನೋದೇ ಟ್ವಿಸ್ಟ್.


Click it and Unblock the Notifications











