Amruthadhare:'ಅಮೃತಧಾರೆ' ಧಾರಾವಾಹಿಯಿಂದ ಹೊರ ಬರುತ್ತಾರಾ ಮತ್ತೋರ್ವ ನಟ? ಯಾಕೆ ಹೀಗೆ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' ಧಾರಾವಾಹಿ ಇದೀಗ ಬಹಳಷ್ಟು ಟ್ವಿಸ್ಟ್‌ಗಳೊಂದಿಗೆ ಮುಂದೆ ಸಾಗುತ್ತಿದೆ. ಈ ಧಾರಾವಾಹಿಯಿಂದ ಈಗಾಗಲೇ ಮೂರು ನಟರು ಹೊರಬಂದಿದ್ದು, ಇದೀಗ ಮತ್ತೋರ್ವ ನಟ ಧಾರಾವಾಹಿಯಿಂದ ಹೊರ ನಡೆಯುವ ಸೂಚನೆ ಇದ್ದಂತಿದೆ.

ಹೌದು, ದೊಡ್ಡ ತಾರಾಗಣವನ್ನು ಹೊಂದಿರುವ 'ಅಮೃತಧಾರೆ' ವಿಭಿನ್ನವಾದ ಕಥಾಹಂದರದೊಂದಿಗೆ ಮುಂದುವರೆಯುತ್ತಿದೆ. ಆದರೆ, ಈ ಧಾರಾವಾಹಿಯಿಂದ ಈಗಾಗಲೇ ನಟರಾದ ಸಾರಾ ಅಣ್ಣಯ್ಯ, ರಾಧಾ ಭಗವತಿ ಹಾಗೂ ಶಶಿ ಹೆಗಡೆ ಅವರು ಹೊರಬಂದಿದ್ದು, ಇದೀಗ ಯಶ್ವಂತ್ ಕೂಡ ಧಾರಾವಾಹಿಯಿಂದ ಹೊರ ನಡೆಯುವ ಸೂಚನೆ ಇದ್ದಂತಿದೆ.

Another actor Yashwanth playing the role of Jeeva come will come out of the Amruthadhare serial

ಜೀವ ಎಂಬ ಪಾತ್ರದಲ್ಲಿ ನಟ ಶಶಿ ಹೆಗಡೆ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಈ ಪಾತ್ರ ಬಹಳ ವಿರಳವಾಗಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾರಣ ಶಶಿ ಈ ಧಾರಾವಾಹಿಯಿಂದ ಹೊರ ಬಂದರು. ಜೀವ ಹೆಂಡತಿಯ ಪಾತ್ರವನ್ನು ನಿರ್ವಹಿಸುತ್ತಿದ್ದ ನಟಿ ಸಾರಾ ಅಣ್ಣಯ್ಯ ಕೂಡ ಧಾರಾವಾಹಿಯಿಂದ ಹೊರ ಬಂದರು. ಕ್ರಮೇಣ ಮಲ್ಲಿಯ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ರಾಧಾ ಭಗವತಿ ಕೂಡ 'ಅಮೃತಧಾರೆ'ಯಿಂದ ಹೊರ ಬಂದು ಇದೀಗ ಹೊಸದೊಂದು ಧಾರವಾಹಿಯಲ್ಲಿ ನಾಯಕ ನಟಿಯಾಗಿ ಮಿಂಚುತ್ತಿದ್ದಾರೆ.

ಹೀಗಿರುವಾಗ ಜೀವ ಪಾತ್ರಕ್ಕೆ ಜೀವ ತುಂಬಿದ್ದ ನಟ ಯಶ್ವಂತ್ ಕೂಡ ಮತ್ತೆ ಪಾತ್ರದಿಂದ ಹೊರ ಬರುವ ಸೂಚನೆಗಳು ಇದೆ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಚಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ನಂದಗೋಕುಲ'ದಲ್ಲಿ ನಟ ಯಶ್ವಂತ್ ಅವರಿಗೆ ಪ್ರಮುಖ ಪಾತ್ರವೊಂದು ಸಿಕ್ಕಿದೆ.

ತನ್ನ ಮಕ್ಕಳನ್ನು ಹೀರೋ ಮಾಡಲು ಕಷ್ಟಪಡುವ ತಂದೆಯ ಕಥೆ ಇದಾಗಿದ್ದು, ಇದರಲ್ಲಿ ನಟ ಯಶವಂತ್ ಕುಮಾರ್ ಅವರಿಗೆ ಪ್ರಮುಖ ಪಾತ್ರ ಒಂದು ದೊರಕಿದೆ. ಈ ಕಾರಣಕ್ಕೆ 'ಅಮೃತಧಾರೆ' ಧಾರಾವಾಹಿಯಲ್ಲಿ ಜೀವ ಪಾತ್ರದಿಂದ ನಟ ಯಶ್ವಂತ್ ಹೊರ ನಡೆಯುವ ಸಾಧ್ಯತೆ ಇದೆ.

ಅಂದಹಾಗೆ ಸದ್ಯಕ್ಕಂತೂ 'ಅಮೃತದಾರೆ' ಧಾರಾವಾಹಿ ಬಹಳ ಇಂಟರೆಸ್ಟಿಂಗ್ ಆಗಿ ಸಾಗುತ್ತಿದ್ದು, ಭೂಮಿಕಾ ಅವರು ತಾಯಿಯಾಗುತ್ತಿದ್ದಾರೆ. ಈ ಖುಷಿಗೆ ಗೌತಮ್ ದಿವಾನ್ ಭೂಮಿಕಾಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುವ ಪಣ ತೊಟ್ಟಂತಿದೆ. ಇತ್ತ ಗೌತಮ್‌ಗೆ ನನ್ನ ಮಲತಾಯಿ ಶಕುಂತಲಾಳ ಕುತಂತ್ರವು ಅವನಿಗಿನ್ನು ತಿಳಿದಿಲ್ಲ. ಅತ್ತ ಜಯದೇವ್ ಮಲ್ಲಿಯನ್ನು ಬಿಟ್ಟು ಹೊಸ ಹುಡುಗಿಯನ್ನು ಮದುವೆಯಾಗುವ ಭರದಲ್ಲಿದ್ದಾನೆ.

ಗೌತಮ್ ದೇವಾ ನನ್ನ ಸ್ವಂತ ತಾಯಿ ಸಿಕ್ಕಿರುವ ಖುಷಿಯಲ್ಲಿ ಇರುವ ಮನೆಯವರಿಗೆ, ಜೀವ ಹಾಗೂ ಭೂಪತಿಯಿಂದ ಬಹಳಷ್ಟು ಸಂಕಷ್ಟಗಳು ಕಾದಿವೆ. ಇತ್ತ ಭೂಮಿಕಾಳ ತಂಗಿ ಅಪ್ಪಿ ಬಹಳ ಒಳ್ಳೆಯವಳಂತೆ ನಟಿಸುತ್ತಿದ್ದಾಳೆ. ಗರ್ಭಿಣಿ ಭೂಮಿಕಾಳಿಗೆ ಜೀವ ಬೆದರಿಕೆ ಇದ್ದು, ಅದು ಯಾರಿಂದ ಎಂಬ ಸಂಕಷ್ಟದಲ್ಲಿ ಸಿಲುಕಿದ್ದಾಳೆ ಭೂಮಿಕಾ. ಹೀಗೆಲ್ಲ ಬಹಳಷ್ಟು ಟ್ವಿಸ್ಟ್ಗಳೊಂದಿಗೆ 'ಅಮೃತಧಾರೆ' ಧಾರಾವಾಹಿ ಬಹಳ ವಿಭಿನ್ನವಾಗಿ ಮುಂದುವರೆಯುತ್ತಿದೆ.

More from Filmibeat

English summary
Another actor Yashwanth playing the role of Jeeva come will come out of the Amruthadhare serial?
Read more about: actor tv show serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X