ಮುದ್ದಿನ ಶ್ವಾನವನ್ನು ಕಳೆದುಕೊಂಡ ಅನುಶ್ರೀಯ ಭಾವನಾತ್ಮಕ ಬರಹ!

ಅನುಶ್ರೀ ಅನ್ನೋದಕ್ಕಿಂತ ಆಂಕರ್ ಆನುಶ್ರೀ ಎಂದರೇ ಎಲ್ಲರಿಗೂ ನೆನಪಾಗಿ ಬಿಡ್ತಾರೆ. ಪಟಾ ಪಟಾ ಅಂತ ಮಾತನಾಡೋ ನಿರೂಪಕಿ ಅನೂಶ್ರೀ. ಕಷ್ಟದಿಂದ ಬೆಳೆದುಬಂದು ಇಂದು ಸ್ಟಾರ್ ಆಂಕರ್ ಆಗಿ ಬೆಳೆದು ನಿಂತಿರುವ ಅನುಶ್ರೀ ಈಗ ಸಾಲು ಸಾಲು ಕಾರ್ಯಕ್ರಮ ನಿರೂಪಣೆಯ ಆಫರ್‌ ಅನ್ನು ಪಡೆದುಕೊಳ್ಳುತ್ತಿದ್ದಾರೆ. ಕನ್ನಡದ ಟಾಪ್ ಆಂಕರ್ ಆಗಿರುವ ಅನುಶ್ರೀ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ, ಇತ್ತೀಚೆಗೆ ಕೂಡ ಒಂದು ಸಿನಿಮಾದ ಮೂಹೂರ್ತ ಮುಗಿಸಿಕೊಂಡಿದ್ದಾರೆ. ಹೀಗೆ ನಿರೂಪಣೆ, ಹಾಡು, ಡ್ಯಾನ್ಸ್ , ಆಕ್ಟಿಂಗ್ ಅಂತ ಬ್ಯುಸಿ ಇರುವ ಅನುಶ್ರೀ ಭಾವನಾತ್ಮಕ ಜೀವಿ ಕೂಡ ಹೌದು.

ಹೌದು ಕನ್ನಡದ ನಿರೂಪಕಿಯರಲ್ಲಿ ಎಲ್ಲರಿಗಿಂತ ಹೆಚ್ಚು ಬೇಡಿಕೆ ಮತ್ತು ಫ್ಯಾನ್ ಬೇಸ್ ಹೊಂದಿರುವ ನಿರೂಪಕಿ ಅನುಶ್ರೀ. ಅನುಶ್ರೀ ಅವರು ಇಂದು ಅತಿಹೆಚ್ಚು ಸಂಭಾವನೆ ಪಡೆಯುವ ನಿರೂಪಕಿಯಾಗಿ ಬೆಳೆದು ನಿಂತಿದ್ದಾರೆ. ಯಾವುದೇ ಕಾರ್ಯಾಕ್ರಮ ಆಗಲಿ ಅನುಶ್ರೀ ಅವರು ನಿರೂಪಣೆ ಮಾಡಿದರೆ ಅದು ಸೂಪರ್ ಹಿಟ್ ಆಗುವುದು ಗ್ಯಾರಂಟಿ ಅನ್ನುವ ಮನೋಭಾವವೂ ಇದೇ. ಆದರೆ ಈಗ ಅನುಶ್ರೀ ಬೇರಸದಲ್ಲಿ ಇದ್ದಾರೆ. ಇದಕ್ಕೆ ಕಾರಣ ಅನುಶ್ರೀ ಅವರ ಮುದ್ದಿನ ಶ್ವಾನವನ್ನು ಕಳೆದುಕೊಂಡಿರೋದು.

ಸ್ವತಃ ಅನುಶ್ರೀ ಅವರೇ ತಮ್ಮ ಮುದ್ದಿನ ನಾಯಿಯನ್ನು ಕಳೆದುಕೊಂಡ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅನುಶ್ರೀ ಅವರು ದುಃಖದ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಮುದ್ದಿನ ಶ್ವಾನದ ಹೆಸರು ಚಿನ್ನು, ಅದರ ಜೊತೆ ಕ್ಲಿಕ್ಕಿಸಿರುವ ಕೊನೆಯ ಫೋಟೋ ಶೇರ್ ಮಾಡಿ, ಅವನ ಅಗಲಿಕೆ ಬಗ್ಗೆ ನಿಮಗೆ ಹೇಳಿರಲಿಲ್ಲ ಎಂದು ನೋವಿನಲ್ಲಿ ಪೋಸ್ಟ್ ಮಾಡಿದ್ದಾರೆ ಅನುಶ್ರೀ. ಕೆಲವೊಮ್ಮೆ ನೋವನ್ನು ಮುಚ್ಚಿಡುವ ಸ್ವಾಮಿತ್ವ ನಮ್ಮನ್ನು ಆವರಿಸುತ್ತೆ ಎಂದು ಬರೆದುಕೊಂಡಿದ್ದಾರೆ.

ಈ ಶ್ವಾನವನ್ನು ಅನುಶ್ರೀ ಮುದ್ದಾಗಿ ಚಿನ್ನು ಅಂತ ಕರೆಯುತ್ತಿದ್ದರು. ಅನೇಕ ಬಾರಿ ಚಿನ್ನುವಿನ ಬಗ್ಗೆ ಖಾಸಗೀ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ ಕೂಡ. ಚಿನ್ನು ಕೇವಲ ಶ್ವಾನ ಅಲ್ಲ. ಅಲ್ಲ ನಮ್ಮ ಮನೆಯ ಒಬ್ಬ ಸದಸ್ಯನೂ ಹೌದು, ನಾವು ಮಾತನಾಡುವುದನ್ನು ಅರ್ಥಮಾಡಿಕೊಳ್ಳುತ್ತಾನೆ, ಹೇಳಿದಂತೆ ಕೇಳುತ್ತಾನೆ ಎಂಬೆಲ್ಲ ಬಗ್ಗೆ ಅನುಶ್ರೀ ಹೇಳಿಕೊಂಡಿದ್ದಾರೆ.

Anshree shares last pic with her pet in instagram

ಅಷ್ಟೇ ಅಲ್ಲದೇ ಸುಮಾರು ಹತ್ತು ವರ್ಷಗಳಿಂದಲೂ ಅನುಶ್ರೀ ಅವರ ಕುಟುಂಬ ಸದಸ್ಯನಾಗಿದ್ದು ಚಿನ್ನುವನ್ನು ಕಳೆದುಕೊಂಡಿರೋದು ಕುಟುಂಬ ಸದಸ್ಯರಿಗೂ ನೋವುಂಟಾಗಿದೆ. ಚಿನ್ನುವಿನ ನೆನಪು ಸದಾ ನಮ್ಮೊಂದಿಗೆ ಇರಲಿದೆ ಎಂದು ಅನುಶ್ರೀ ಹೇಳಿಕೊಂಡಿದ್ದಾರೆ.

ಅನುಶ್ರೀ ಒಮ್ಮೆ ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದರು. ಈಗ ಸೆಕೆಂಡ್ ಇನಿಂಗ್ಸ್ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಬೆಂಕಿ ಪಟ್ಣ, ರಿಂಗ್ ಮಾಸ್ಟರ್ ಸಿನಿಮಾದಲ್ಲಿ ನಟಿಸಿದ್ದ ಅನುಶ್ರೀ ಈಗ ಮತ್ತೊಂದು ಪ್ರಾಜೆಕ್ಟ್ ಓಕೆ ಮಾಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಂಡಿದ್ದ ಮಮ್ಮಿ ಮತ್ತು ದೇವಕಿ ಚಿತ್ರಗಳ ನಿರ್ದೇಶಕ ಲೋಹಿತ್ ಗರಡಿಯಲ್ಲಿ ಪಳಗಿರುವ ಪ್ರಭಾಕರನ್ ನಿರ್ದೇಶನದ ಸಿನಿಮಾದಲ್ಲಿ ಅನುಶ್ರೀ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಹಾರರ್, ಡ್ರಾಮಾ ಮತ್ತು ಥ್ರಿಲ್ಲಿಂಗ್ ಅಂಶಗಳನ್ನು ಹೊಂದಿರಲಿದೆ. ಭಾರತೀಯ ಚಿತ್ರರಂಗದಲ್ಲೇ ವಿಶಿಷ್ಟ ಯತ್ನ ಸಿನಿಮಾದಲ್ಲಿ ಆಗಲಿದೆಯೆಂದು ಚಿತ್ರತಂಡ ಹೇಳಿಕೊಂಡಿತ್ತು, ಈ ಸಿನಿಮಾಗಾಗಿ ನಟಿ ಅನುಶ್ರೀ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ.

More from Filmibeat

English summary
kannada anchor Anshree shares last pic with pet chinnu in instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X