Antarapata: ಮಗು ಚಿವುಟಿ ತೊಟ್ಟಿಲು ತೂಗಿದ ಅಮಲಾ: ಮಾತಾಡದ ಆರಾಧನಾ ಕಂಡು ಫ್ಯಾನ್ಸ್ ಬೇಸರ!
ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಅಂತರಪಟ' ಧಾರಾವಾಹಿಯಲ್ಲಿ ಸದ್ಯಕ್ಕೆ ಮನಸ್ತಾಪಗಳು ಜಾಸ್ತಿಯಾಗಿದೆ. ಸುಶಾಂತ್ ಹೇಳದೇ ಕೇಳದೆ ಮದುವೆ ಆಗಿ ಬಂದಿದ್ದು, ಮನೆಯಲ್ಲಿ ಎಲ್ಲರಿಗೂ ಇಷ್ಟವಿಲ್ಲ. ಅದರಲ್ಲೂ ತನ್ನ ಮಗಳಿಗೆ ಸುಶಾಂತ್ ಜೊತೆಗೆ ಎಂಗೇಜ್‌ಮೆಂಟ್ ಸಿದ್ಧತೆ ನಡೆಸಿದ್ದಂತ ಅತ್ತೆಯಂತೂ ಕೆಂಡಕಾರುತ್ತಿದ್ದಾಳೆ. ಇನ್ನು ಅಮ್ಮನಂತೂ ಸುಶಾಂತ್‌ನನ್ನು ಕ್ಷಮಿಸುತ್ತಿಲ್ಲ, ಸೊಸೆಯನ್ನಂತು ಒಪ್ಪಿಕೊಳ್ಳುವಂತೆ ಕಾಣುತ್ತಿಲ್ಲ.
ಅಮಲಾ ಮೊದಲಿನಿಂದಾನೂ ಸ್ವಾರ್ಥದ ಬದುಕನ್ನೇ ಬದುಕುತ್ತಿದ್ದಾಳೆ. ಆಸ್ತಿ-ಅಧಿಕಾರಕ್ಕಾಗಿ ಯಾರನ್ನು ಬೇಕಾದರೂ ಯಾಮಾರಿಸುತ್ತಾಳೆ. ಅಂತಸ್ತಿನ ಆಸೆಗಾಗಿಯೇ ಆರಾಧನಾಳ ತಂದೆ ಸಾಯುವಂತೆ ಮಾಡಿದಳು. ಆಸ್ತಿಯ ಆಸೆಗಾಗಿಯೇ ಸುಶಾಂತ್ ಮನೆ ಬಿಟ್ಟು ಹೋಗುವಂತೆ ಮಾಡಿದ್ದಳು. ಇದೀಗ ಆರಾಧನಾಗೆ ಹಿಂಸೆ ಕೊಡುವುದಕ್ಕೆ ಶುರು ಮಾಡಿದ್ದಾಳೆ.

ಸೊಸೆ ಇರುವುದನ್ನು ಕಂಡು ಸೈಲೆಂಟ್
ಸುಶಾಂತ್ ತಾಯಿಗೆ ಮಗನೆಂದರೆ ಪಂಚ ಪ್ರಾಣ. ಅವನನ್ನು ಕಾಳಜಿ ಮಾಡುವುದೆಂದರೆ ಖುಷಿ. ಅವನು ಮನೆಗೆ ಬಂದಾಗ ತಾಯಿಗೆ ಹಬ್ಬ. ಸುಶಾಂತ್ ಇಷ್ಟೊಂದು ಬದಲಾಗವುದಕ್ಕೆ ಕಾರಣ ಆರಾಧನಾ ಎಂದು ತಿಳಿದಾಗ ಸಂತಗೊಂಡಿದ್ದ ಅಮ್ಮ. ಆದರೆ ಈಗ ಸೊಸೆಯಾದಾಗ ಕ್ಷಮಿಸುವ ಮನಸ್ಸು ಮಾಡುತ್ತಿಲ್ಲ. ಹಾಗಂತ ಮಗನ ಮೇಲೆ ಪ್ರೀತಿ ತೋರುವುದನ್ನು ನಿಲ್ಲಿಸುತ್ತಿಲ್ಲ. ಪ್ರತಿ ದಿನದಂತೆ ಮಗನಿಗೆ ಟೀ ಕೊಡಲು ಬಂದು, ಏನು ಮಾಡುವುದೆಂದು ತಿಳಿಯದೇ ಗೊಂದಲಗೊಂಡಿದ್ದಾಳೆ.
ಅಮಲಾಳಿಂದ ಮಗು ಚೀವುಟುವ ಕೆಲಸ
ಅಮಲಾ ಮನೆಯಲ್ಲಿ ಜಗಳವಾಗವಂತ, ಮನಸ್ತಾಪಗಳು ಉಂಟಾಗುವಂತ ಪರಿಸ್ಥಿತಿಗಳು ಸೃಷ್ಟಿಯಾಗಲಿ ಎಂದು ಕಾಯುತ್ತಿರುತ್ತಾಳೆ. ಆ ಪರಿಸ್ಥಿತಿ ಈಗ ಅಮಲಾ ಕಣ್ಣಿಗೆ ಕಂಡಿದೆ. ಅಮ್ಮ ಟೀ ಹಿಡಿದು ನಿಂತಿದ್ದನ್ನು ಕಂಡು ಅಲ್ಲಿಗೆ ಬಂದಿದ್ದಾಳೆ. ತಕ್ಷಣ ಆರಾಧನಾಳ ರೂಮಿನ ಕದ ತಟ್ಟಿದ್ದಾಳೆ. ಬಾಗಿಲು ತೆಗೆದ ಆರಾಧನಾಳಿಗೆ ಟೀ ಕೊಡುವುದಕ್ಕೆಂದು ಮುಂದೆ ಬಂದಿದ್ದಾಳೆ. ಅಮ್ಮನ ಕಣ್ಣಲ್ಲಿ ಆರಾಧನಾಳನ್ನು ಕೆಟ್ಟವಳನ್ನಾಗಿ ಮಾಡುವ ಪ್ರಯತ್ನ ಮಾಡಿದ್ದಾಳೆ. ಆರಾಧನಾಳಿಂದ ಒಂದು ಮಾತು ಬಾರದಂತೆ ಪರಿಸ್ಥಿತಿ ಸೃಷ್ಟಿ ಮಾಡಿ, ತಾನೇ ಸವಾರಿ ಮಾಡಿದ್ದಾಳೆ.

ಆರಾಧನಾಗೂ ಮಾನಸಿಕ ಹಿಂಸೆ
ಅಮ್ಮನ ಮುಂದೆ 'ಅಮ್ಮ ನಿನಗೆ ಟೀ ಕೊಡಲು ಬಂದಿದ್ದರು. ಸುಶಾಂತ್ ಎಲ್ಲಿ ಹೋದ. ಅವನೊಬ್ಬನೇ ಇದ್ದಿದ್ದರೆ ಒಳಗೆ ಧೈರ್ಯವಾಗಿ ಬರುತ್ತಿದ್ದಳು. ಈಗ ನೀನು ಇದ್ದೀಯಲ್ಲ ಅದಕ್ಕೆ ಹಿಂಜರಿಕೆ' ಎಂದು ಕೇಳಿ ಇಕ್ಕಟ್ಟಿಗೆ ಸಿಲುಕಿಸಿದ್ದಾಳೆ. ಆರಾಧನಾಗೆ ಏನು ಮಾಡಬೇಕೆಂಬುದು ತಿಳಿಯದೆ ಅತ್ತೆಯನ್ನು ಬನ್ನಿ ಒಳಗೆ ಎಂದು ಕರೆದಿದ್ದಾಳೆ. ಇದಕ್ಕೆ ಕೋಪಗೊಂಡ ಸುಶಾಂತ್ ತಾಯಿ, 'ನನ್ನ ಮನೆಗೆ ನನ್ನನ್ನೇ ಕರೆಯುವಂತೆ ಆಗೋಗಿದ್ದೀಯಾ' ಎಂದು ಆರಾಧನಾಳ ಮಾತನ್ನು ತಪ್ಪಾಗಿ ಅರ್ಥೈಸಿ ಅಲ್ಲಿಂದ ಹೊರಟು ಹೋಗಿದ್ದಾಳೆ. ಟೀ ಕೊಡುವ ನೆಪದಲ್ಲಿ ಒಳಗೆ ಬಂದ ಅಮಲಾ, ಟೀ ಕಪ್ ಅನ್ನು ಕೆಳಗೆ ಬೀಳಿಸಿದ್ದಾಳೆ. ದೊಡ್ಡ ಮನೆಗೆ ಸೊಸೆಯಾಗಬೇಕೆಂಬ ದುರಾಸೆಯಿಂದ ನನ್ನ ತಮ್ಮನನ್ನು ಮದುವೆಯಾದೆಯಾ ಎಂದು ಮಾನಸಿಕವಾಗಿ ಕೆಣಕಿದ್ದಾಳೆ.
ಆರಾಧನಾಗೆ ಡೈಲಾಗ್ ಕೊಡಿ ಎಂದ ಪ್ರೇಕ್ಷಕರು
ಅಮಲಾ ಬಂದ ದಿನದಿಂದಾನೂ ಆರಾಧನಾಳನ್ನು ಕೆಣಕುತ್ತಿದ್ದಾಳೆ. ಆರಾಧನಾಗೆ ಕೊಂಕು ಮಾತು ಆಡಿದ್ದಾಳೆ. ಮೂರ್ತಿಯಿಂದ ಸತ್ಯ ಹೊರ ಬಿದ್ದಿದೆ. ತನ್ನ ತಂದೆಯ ಸಾವಿಗೆ ಅಮಲಾಳೆ ಕಾರಣ ಎಂಬ ನಿಜವೂ ಆರಾಧನಾಗೆ ತಿಳಿದಿದೆ. ಹೀಗಿರುವಾಗ ಆರಾಧನಾ ಈಗ ಸೈಲೆಂಟ್ ಆಗಿದ್ದು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಒಂದು ಡೈಲಾಗ್ ಇಲ್ಲದೇ ಅಮಲಾಳನ್ನು ನೋಡುತ್ತಾ ನಿಂತದ್ದು ಇಷ್ಟವಾಗಿಲ್ಲ. ಅದಕ್ಕೆ ಆರಾಧನಾಗೆ ಡೈಲಾಗ್ ಕೊಡ್ರಪ್ಪ ಎಂದು ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











