Antarapata: ಅಮ್ಮನ ಆಶೀರ್ವಾದ ಪಡೆದ ಸುಶಾಂತ್: ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಆರಾಧನಾ
ಆರಾಧನೆಗೆ ದಿನದಿಂದ ದಿನಕ್ಕೆ ಮಹೇಶ್ ಕಷ್ಟವನ್ನೇ ಕೊಡುತ್ತಿದ್ದಾನೆ. ತನ್ನ ಮಗಳು ಸಿರಿಗೆ ಮಾತ್ರ ಒಳ್ಳೆಯದು ಆಗಬೇಕು, ಆರಾಧನಾ ಕುಡುಕ ಗಂಡನನ್ನು ಕಟ್ಟಿಕೊಳ್ಳಬೇಕು ಎಂದುಕೊಂಡಿದ್ದಾನೆ. ಇದಕ್ಕಾಗಿ ತನ್ನ ಅಕ್ಕನ ಮಗ ಕುಡುಕ ಪುರುಷೋತ್ತಮ್‌ನ ಜೊತೆ ಮದುವೆ ಮಾಡಿಕೊಡಲು ಮಾತುಕತೆಯನ್ನು ನಡೆಸಿದ್ದಾನೆ.
ಇನ್ನು ಆರಾಧನಾ ಗಾರ್ಮೆಂಟ್ಸ್‌ಗೆ ಹೋದ ಸಮಯದಲ್ಲಿ ಪುರುಷೋತ್ತಮ ಮಹೇಶ್ ಮನೆಗೆ ಬಂದು ಹೆಣ್ಣು ಕೇಳುವ ಶಾಸ್ತ್ರ ಮಾಡಿದ್ದಾನೆ. ಈ ಮೊದಲು ಮಹೇಶ್, ಆರಾಧನಾಗೆ ಷರತ್ತುಗಳನ್ನು ಹಾಕಿದ್ದನು. ನೀನು ಗಾರ್ಮೆಂಟ್ಸ್‌ಗೆ ಹೋದರೆ ನಾನು ಈಗಲೇ ಮದುವೆ ಮಾಡುವುದಿಲ್ಲ ಎಂದು ಹೇಳಿದ್ದನು. ಆದರೆ ಈಗ ಮಹೇಶ್ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಆರಾಧನೆಗೆ ಹಿಂಸೆ ನೀಡುತ್ತಿದ್ದಾನೆ.

ಮನೆಯಲ್ಲಿ ಆರಾಧನಾ ಏನಾದರೂ ಮಾತನಾಡಲು ಹೋದರೆ ಮಹೇಶ್ ಪತ್ನಿ ರೇವತಿಗೆ ಹೊಡೆಯಲು ಹೋಗುತ್ತಾನೆ. ತನ್ನ ಅಮ್ಮ ನೋವು ತಿನ್ನಬಾರದು ಎಂದು ಪುರುಷೋತ್ತಮನ ಜೊತೆ ಮದುವೆಯಾಗಲು ಒಪ್ಪಿಕೊಂಡಿದ್ದಾಳೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಹೇಶ್, ಪುರುಷೋತ್ತಮನ ಜೊತೆ ಮದುವೆ ಮಾಡಿ ಮೊದಲು ಆರಾಧನಾಳನ್ನ ಮನೆಯಿಂದ ಸಾಗ ಹಾಕಬೇಕು ಎಂದು ಪ್ಲ್ಯಾನ್ ಮಾಡಿದ್ದಾನೆ.
ತಾಯಿ ಮುಖ ನೋಡಿದ ಸುಶಾಂತ್
ಸುಶಾಂತ್‌ಗೆ ತನ್ನ ಅಮ್ಮನನ್ನು ನೋಡಬೇಕು ಎಂದು ತುಂಬಾ ಅನಿಸಿದೆ. ಇದಕ್ಕಾಗಿ ಹೇಗೋ ಡೆಲಿವರಿ ಬಾಯ್‌ಯಾಗಿ ಕೆಲಸ ಮಾಡುತ್ತಿದ್ದೇನೆ. ಸ್ವಲ್ಪ ಹಣ್ಣುಗಳನ್ನ ತೆಗೆದುಕೊಂಡು ನೀವೇ ನನಗೆ ಆರ್ಡರ್ ಮಾಡಿದ್ದೀರಿ ಎಂದು ಹೇಳಿದರೆ ಮುಗಿತು ಎಂದು ಕೊಂಡು. ತನ್ನ ಮನೆಗೆ ಅಪರಿಚಿತ ವ್ಯಕ್ತಿಯಂತೆ ಬಂದು ಡೋರ್ ಬೆಲ್ ಮಾಡಿದ್ದಾನೆ. ಇನ್ನು ಮನೆ ಕೆಲಸದವಳು ಬಂದು ಬಾಗಿಲು ತೆಗೆದು ಸುಶಾಂತ್ ಬಳಿ ವಿಚಾರಿಸಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ಸಾವಿತ್ರಿ ಬಂದಿದ್ದಾಳೆ.

ಸುಶಾಂತ್ ಅಮ್ಮನನ್ನು ನೋಡಿದ ಕೂಡಲೇ ಸ್ವಲ್ಪ ಖುಷಿಯಾಗಿದ್ದಾನೆ. ಆದರೆ ಸಾವಿತ್ರಿಗೆ ಸುಶಾಂತ್ ಮುಖ ನೋಡುತ್ತಲೇ ತಾಯಿಯ ಪ್ರೀತಿ ಉಕ್ಕಿ ಬಂದಿದೆ. ಇನ್ನು ನೀವು ಹಣ್ಣುಗಳನ್ನು ಆರ್ಡರ್ ಮಾಡಿದ್ದೀರಿ ಎಂದು ಸುಶಾಂತ್ ಹೇಳಿದ್ದಾನೆ. ಇದಕ್ಕೆ ಸಾವಿತ್ರಿ ನಾನು ಆರ್ಡರ್ ಮಾಡಿಲ್ಲ ಎಂದಿದ್ದಾಳೆ. ಇಲ್ಲ ಮೇಡಂ ತೆಗೆದುಕೊಳ್ಳಿ ಎಂದು ಸುಶಾಂತ್ ಅಮ್ಮನ ಕೈಗೆ ಹಣ್ಣುಗಳನ್ನು ಕೊಡಲು ಹೋಗುವಂತೆ ಮಾಡಿ ಹಣ್ಣುಗಳನ್ನೆಲ್ಲ ಕೆಳಗೆ ಬೀಳಿಸಿದ್ದಾನೆ.
ಅಮ್ಮನ ಆಶೀರ್ವಾದ ಪಡೆದ ಸುಶಾಂತ್
ಸುಶಾಂತ್ ಹಣ್ಣುಗಳನ್ನು ಕೆಳಗೆ ಬೀಳಿಸಿ ಅಮ್ಮನ ಆಶೀರ್ವಾದ ಪಡೆದುಕೊಂಡಿದ್ದಾನೆ. ನಂತರ ಸಾರಿ ಅಮ್ಮ ರಾಂಗ್ ಡೆಲಿವರಿ ಅನಿಸುತ್ತದೆ ಎಂದು ಹಣ್ಣನ್ನು ತೆಗೆದುಕೊಂಡು ವಾಪಸ್ ಬರಲು ಹೋಗುವಾಗ ಸಾವಿತ್ರಿ, ಸುಶಾಂತ್‌ನನ್ನು ಕೂಗಿದ್ದಾಳೆ. ಸುಶಾಂತ್ ನಿಂತುಕೊಂಡ ವೇಳೆ ಇರಪ್ಪ ಎಂದು ಹೇಳಿ ಸ್ವಲ್ಪ ಹಣ ಕೊಟ್ಟಿದ್ದಾಳೆ. ಸುಶಾಂತ್ ಹಣವನ್ನು ಬೇಡ ಎಂದು ಹೇಳಿದಾಗ ನಿನ್ನ ಅಮ್ಮ ಕೊಟ್ಟಿದ್ದರೆ ನೀನು ಹೀಗೆ ಹೇಳುತ್ತಿದ್ದ ತಗೋ ಎಂದಾಗ ತೆಗೆದುಕೊಂಡಿದ್ದಾನೆ. ನಂತರ ಸುಶಾಂತ್ ಹಣ್ಣುಗಳನ್ನು ಅಮ್ಮನಿಗೆ ಕೊಟ್ಟು ವಾಪಸ್ ಬಂದಿದ್ದಾನೆ.
ಕಣ್ಣೀರು ಹಾಕಿ ಬೇಡಿಕೊಂಡ ಆರಾಧನಾ
ಮದುವೆ ಫಿಕ್ಸ್ ಆಗಿದೆ ಎಂದುಕೊಂಡ ಪುರುಷೋತ್ತಮ್, ಆರಾಧನಾ ಕೆಲಸ ಮಾಡುವ ಗಾರ್ಮೆಂಟ್ಸ್ ಬಳಿ ಬಂದಿದ್ದಾನೆ. ಇದೆ ವೇಳೆ ಹೊರಗೆ ಬಂದಂತಹ ಆರಾಧನಾಗೆ ಸ್ವೀಟ್ಸ್ ತೆಗೆದುಕೊಳ್ಳಿ. ಖುಷಿಗಾಗಿ ಸ್ವೀಟ್ ಕೊಡುತ್ತಿದ್ದೇನೆ, ನಮ್ಮಿಬ್ಬರ ಮದುವೆ ಫಿಕ್ಸ್ ಆಗಿದೆ ಎಂದು ಹೇಳಿದ್ದಾನೆ. ಇದಕ್ಕೆ ಆರಾಧನಾ ದಯವಿಟ್ಟು ನೀವು ಈ ರೀತಿಯಲ್ಲ ಬಂದು ನನಗೆ ಹಿಂಸೆ ಕೊಡಬೇಡಿ, ನಾನು ಈ ಭೂಮಿಯ ಮೇಲೆ ಹುಟ್ಟಿದ್ದೇ ತಪ್ಪಾ ಎಂದು ಕಣ್ಣೀರು ಹಾಕಿದ್ದಾಳೆ.


Click it and Unblock the Notifications











