Antarapata: ವಠಾರದಲ್ಲಿ ಆರಾಧನಾ ಎಂಗೇಜ್ಮೆಂಟ್‌ಗೆ ತಯಾರಿ: ಹಣ ಸಂಪಾದನೆಯೇ ಸುಶಾಂತ್ ಗುರಿ!

By ಶೃತಿ ಹರೀಶ್ ಗೌಡ

ಆರಾಧನಾಗೆ ತಾನು ಕಂಡ ಕನಸು ಪದೇ ಪದೇ ಕಾಡುತ್ತಿದೆ. ತಾನು ಒಂದು ಸ್ವಂತ ಕಂಪನಿಯನ್ನು ಕಟ್ಟಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಅದಕ್ಕಾಗಿ ಸಹ ಹೋರಾಡುತ್ತಾ ಬಂದೆ. ಕೊನೆಗೆ ಏನಾಯಿತು ಎಂಬುದರ ಬಗ್ಗೆ ಯೋಚಿಸುತ್ತಿದ್ದಾಳೆ. ನನ್ನ ಜೀವನ ಇಲ್ಲಿಗೆ ಮುಗಿಯಿತು ನಾನು ಏನನ್ನು ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದೇನೆ ಎಂದು ಆರಾಧನಾ ಕಣ್ಣೀರು ಹಾಕುತ್ತಿದ್ದಾಳೆ.

ಸುಶಾಂತ್ ಒದ್ದೆಯಾದ ನೋಟುಗಳನ್ನು ಬಾಣಲೆ ಸಹಾಯದಿಂದ ಒಣಗಿಸುತ್ತಿದ್ದಾನೆ. ಇದೇ ವೇಳೆ ರೂಮನಲ್ಲಿರುವ ಹುಡುಗ ಈ ರೀತಿಯಲ್ಲ ಒಣಗಿಸುತ್ತಾ ಇದ್ದೀರಲ್ಲ ಎಂದು ಕೇಳಿದ್ದಕ್ಕೆ. ಇದು ನಾನು ಸಂಪಾದನೆ ಮಾಡಿರುವ ಹಣ ನನ್ನ ಅಮ್ಮ ಕೊಟ್ಟ ಹಣ ಎಂದು ಹೇಳಿದ್ದಾನೆ. ಇದಕ್ಕೂ ಮೊದಲು ನಾನು ಇಂತಹ ಹಣವನ್ನು ಟಿಪ್ಸ್‌ ಆಗಿ ಕೊಟ್ಟು ಬರುತ್ತಿದ್ದೆ. ನಾನೇ ಸಂಪಾದನೆ ಮಾಡಲು ನಿಂತ ಮೇಲೆ ಹಣದ ಮಹತ್ವ ನನಗೆ ತಿಳಿದಿದೆ ಎಂದಿದ್ದಾನೆ.

Antarapata-serial

ಇದೇ ವೇಳೆ ಸುಶಾಂತ್ ಜೊತೆಯಲ್ಲಿರುವ ಹುಡುಗ ನಿಮ್ಮ ತಂದೆ ಯಾರು ಎಂದು ಕೇಳಿದ್ದಾನೆ. ಸುಶಾಂತ್‌ಗೆ ಧರ್ಮೇಂದ್ರ ಪ್ರಧಾನ್ ನನ್ನ ಹೆಸರನ್ನು ಎಲ್ಲೂ ಬಳಸಿಕೊಳ್ಳದೆ ನೀನೇ ಹಣವನ್ನು ಸಂಪಾದನೆ ಮಾಡಬೇಕು ಎಂದು ಹೇಳಿರುತ್ತಾರೆ. ಈ ಮಾತನ್ನು ಸುಶಾಂತ್ ನೆನಪಿಸಿಕೊಂಡು ಈಗ ನನ್ನ ತಂದೆಯ ಹೆಸರನ್ನು ಹೇಳೋಕೆ ಆಗೋದಿಲ್ಲ ಮುಂದೊಂದು ದಿನ ನಾನು ಒಂದು ಲಕ್ಷ ರೂಪಾಯಿ ಸಂಪಾದನೆ ಮಾಡಿದ ಮೇಲೆ ತಂದೆಯ ಹೆಸರು ಹೇಳುವುದಾಗಿ ರೂಮಿನಲ್ಲಿರುವ ಹುಡುಗನಿಗೆ ಹೇಳಿದ್ದಾನೆ.

ಸುಶಾಂತ್ ಸಾಮರ್ಥ್ಯದ ಬಗ್ಗೆ ಅಜ್ಜಿ ಪ್ರಶ್ನೆ

ಅಜ್ಜಿ, ಸುಶಾಂತ್‌ನನ್ನು ಕೂರಿಸಿಕೊಂಡು ಅಷ್ಟು ಜನಕ್ಕೂ ನೀನೊಬ್ಬನೇ ಹೊಡೆದುಬಿಟ್ಯಾ? ಎಂದು ಕೇಳುತ್ತಿದ್ದಾರೆ. ಹೌದು ಅಜ್ಜಿ ನಾನೊಬ್ಬನೇ ಅಷ್ಟು ಜನಕ್ಕೂ ಹೊಡೆದೆ ಎಂದು ಸುಶಾಂತ್ ತನ್ನ ಸಾಮರ್ಥ್ಯದ ಬಗ್ಗೆ ಹೇಳುತ್ತಿದ್ದಾನೆ. ಅದರಲ್ಲಿ ಅಮ್ಮ ಕೊಟ್ಟ ದುಡ್ಡು ಇದ್ದಿದ್ದರಿಂದ ನಾನು ಅವರ ಮೇಲೆ ಕೈ ಮಾಡಿದೆ. ಅದು ಅಲ್ಲದೆ ನಾನು ಹಣವನ್ನು ಮೊದಲ ಬಾರಿ ಸಂಪಾದನೆ ಮಾಡಿದ್ದೆ. ‌ಅದು ಕಳ್ಳರ ಪಾಲಾದರೆ ಹೇಗೆ ಬಿಟ್ಟು ಕೊಡಬೇಕು ಎಂದು ಹೇಳಿದ್ದಾನೆ.

Antarapata-serial

ಎಂಗೇಜ್ಮೆಂಟ್ ವಿಚಾರ ತಿಳಿದ ಸುಶಾಂತ್

ಇದೇ ವೇಳೆ ಸುಶಾಂತ್ ಇದ್ದ ಸ್ಥಳಕ್ಕೆ ಮಹೇಶ್ ಬಂದಿದ್ದಾನೆ. ನಾಳೆ ವಠಾರದಲ್ಲಿ ನನ್ನ ಮಗಳ ಎಂಗೇಜ್ಮೆಂಟ್ ಇದೆ ಎಂದು ಹೇಳಿದ್ದಾನೆ. ಈ ವೇಳೆ ಸುಶಾಂತ್‌, ಸಿರಿಗೆ ಇಷ್ಟು ಬೇಗ ಎಂಗೇಜ್ಮೆಂಟ್ ಮಾಡುತ್ತಿದ್ದೀರಾ ಎಂದು ಹೇಳಿದ್ದಾನೆ.‌ಇದಕ್ಕೆ ನನ್ನ ಮಗಳು ಸಿರಿಗಲ್ಲ, ಆರಾಧನಾಗೆ ಎಂಗೇಜ್ಮೆಂಟ್ ಮಾಡುತ್ತಿದ್ದೇನೆ. ನೀನು ಎಲ್ಲೂ ಹೋಗಬೇಡ ಎಂದು ಹೇಳಿದ್ದಾನೆ. ಆರಾಧನಾ ತನಗೆ ಎಂಗೇಜ್ಮೆಂಟ್ ಆಗುತ್ತಿರುವ ವಿಷಯವನ್ನು ನನ್ನ ಬಳಿ ಹೇಳಿಲ್ಲ ಎಂದು ಸುಶಾಂತ್ ಬೇಸರ ಮಾಡಿಕೊಂಡು ಅಜ್ಜಿಯ ಬಳಿ ಹೇಳಿದ್ದಾನೆ.

ಅಜ್ಜಿ ಮಾತಿಗೆ ರೇವತಿ ಕಣ್ಣೀರು

ಆರಾಧನಾ ಎಂಗೇಜ್ಮೆಂಟ್‌ಗೆ ತಯಾರಿ ಮಾಡಲಾಗುತ್ತಿದೆ. ಆಕೆಗೆ ಸೀರೆ ಉಡಿಸಿ ಅಲಂಕಾರವನ್ನು ಮಾಡಲಾಗುತ್ತಿದೆ. ಆರಾಧನಾ ಯಾವುದೇ ಭಾವನೆ ಇಲ್ಲದೆ ಸುಮ್ಮನೆ ಗೊಂಬೆಯ ರೀತಿ ಕುಳಿತುಕೊಂಡು ಅಲಂಕಾರ ಮಾಡಿಸಿಕೊಳ್ಳುತ್ತಿದ್ದಾಳೆ. ಇನ್ನು ವಠಾರದಲ್ಲಿರುವ ಅಜ್ಜಿ, ರೇವತಿಗೆ ಈ ಮಗುವಿನ ಜೀವನವನ್ನು ಹಾಳು ಮಾಡಬೇಡ, ಅವನ ಬಗ್ಗೆ ನನಗೆ ಗೊತ್ತಿದೆ ದಯವಿಟ್ಟು ನೀನು ಏನಾದರೂ ಮಾತನಾಡು ಎಂದು ಹೇಳಿದ್ದಾರೆ.

ಅಜ್ಜಿಗೆ ಬೈದ ಮಹೇಶ್

ಈ ಮನೆಯಲ್ಲಿ ಆರಾಧನಾ ಒಂದು ದಿಕ್ಕಾದರೆ ಮಹೇಶ್ ಇನ್ನೊಂದು ದಿಕ್ಕು. ನಾನು ಇಬ್ಬರಿಗೂ ಯಾವ ರೀತಿ ಹೇಳಲಿ ಇವರಿಬ್ಬರ ಮಧ್ಯೆ ಸಿಲುಕಿಕೊಂಡು ನಾನು ಸಂಕಟ ಅನುಭವಿಸುತ್ತಿದ್ದೇನೆ ಎಂದು ರೇವತಿ ಕಣ್ಣೀರು ಹಾಕಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ಬಂದ ಮಹೇಶ್, ಅಜ್ಜಿಗೆ ಬೈದಿದ್ದಾನೆ. ಇಂತಹ ಮನೆಹಾಳು ಮಾಡುವ ಕೆಲಸ ಸ್ವಲ್ಪ ಕಮ್ಮಿ ಮಾಡಿ ಎಂದಿದ್ದಾನೆ. ಇದೆಲ್ಲವನ್ನು ಕೇಳಿ ಅಜ್ಜಿ ಸುಮ್ಮನಾಗಿದ್ದಾರೆ.

More from Filmibeat

English summary
Antarapata Kannada serial today Episode. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X