Antarapata: ಆರಾಧನಾ ಎಂಗೇಜ್‌ಮೆಂಟ್: ಹುಡುಗ ಇವನೇನಾ ಎಂದ ಸುಶಾಂತ್..?!
ಆರಾಧನಾ ಎಂಗೇಜ್ಮೆಂಟ್‌ಗೆ ಸಕಲ ತಯಾರಿ ನಡೆದಿದೆ. ಹುಡುಗ ಬಂದು ಶಾಸ್ತ್ರಗಳು ಶುರುವಾಗಬೇಕಾಗಿದೆ. ವಠಾರದವರು ಬಂದು ಆರಾಧನಾಳನ್ನ ರೆಡಿ ಮಾಡಿದ್ದಾರೆ. ಇದೇ ವೇಳೆ ಸುಶಾಂತ್, ಆರಾಧನಾ ಅವರ ಎಂಗೇಜ್ಮೆಂಟ್ ದಿನ ಯಾಕೆ ತುಂಬಾ ಡಲ್ಲಾಗಿ ಇದ್ದಾರೆ ಎಂದು ಯೋಚನೆ ಮಾಡುತ್ತಿದ್ದಾನೆ. ಆರಾಧನಾಗೆ ಎಂಗೇಜ್ಮೆಂಟ್ ಏನಾದರೂ ಇಷ್ಟ ಇಲ್ವಾ ಎಂದುಕೊಂಡಿದ್ದಾನೆ. ಆದರೆ ಮಹೇಶ್ ಸುಶಾಂತ್‌ಗೆ ಕೆಲಸ ಹೇಳಿದ್ದಾನೆ.
ಇತ್ತ ಆರಾಧನಾ ಏನನ್ನು ಮಾತನಾಡದೆ ಮೌನವಾಗಿ ಇದ್ದಾಳೆ. ಮಹೇಶ್‌ಗೆ ಹುಡುಗನನ್ನು ಕರೆಯಿರಿ ಎಂದು ಪುರೋಹಿತರು ಹೇಳಿದ್ದಾರೆ. ಮಹೇಶ್, ಪುರುಷೋತ್ತಮನನ್ನು ಕರೆದಿದ್ದಾನೆ. ಪುರುಷೋತ್ತಮ ಮಾವನಿಗೆ ಥ್ಯಾಂಕ್ಸ್ ಹೇಳಿದ್ದಾನೆ. ಇದೇ ವೇಳೆ ಮಹೇಶ್ ಅಳಿಯನಿಗೆ ಏನು ಸ್ವರ್ಗದಲ್ಲಿ ತೇಲಾಡುತ್ತಾ ಇದ್ದೀರಾ ಎಂದೆಲ್ಲಾ ಕೇಳಿದ್ದಾನೆ. ನನ್ನ ಎಂಗೇಜ್‌ಮೆಂಟ್ ಅಲ್ವಾ ಮಾವ ಅದಕ್ಕಾಗಿ ಸ್ವರ್ಗದಲ್ಲಿ ತೇಲಾಡುತ್ತಾ ಇದ್ದೇನೆ ಎಂದು ಪುರುಷೋತ್ತಮ್ ಹೇಳಿದ್ದಾನೆ.

ಪುರೋಹಿತರು ಪುರುಷೋತ್ತಮ್ ಕುಡಿದುಕೊಂಡು ಬಂದಿರುವುದಕ್ಕೆ ಇವನೇನಾ ಗಂಡು ಪ್ರಾರಬ್ಧ ಎಂದಿದ್ದಾರೆ. ಈ ವೇಳೆ ಆರಾಧನಾಳನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆ. ಮಹೇಶ್, ರೇವತಿಯನ್ನ ಕರೆದು ಪುರೋಹಿತರು ಹೇಳಿದ್ದು ಅರ್ಥವಾಯಿತಾ ಎಂದು ಹೇಳಿದ್ದಾನೆ. ವಠಾರದ ಹೆಂಗಸರು ಆರಾಧನಾಳನ್ನ ಕರೆದುಕೊಂಡು ಬಂದು ಮಣೆಯ ಮೇಲೆ ಕೂರಿಸಿದ್ದಾರೆ.
ಮಹೇಶ್ ಕಾಲಿಗೆ ಬಿದ್ದ ಆರಾಧನಾ
ಪುರೋಹಿತರು ಆರಾಧನಾ ಬಂದು ಕುಳಿತುಕೊಂಡ ಮೇಲೆ ಶಾಸ್ತ್ರಗಳನ್ನೆಲ್ಲ ಶುರು ಮಾಡಿದ್ದಾರೆ. ಇದೇ ವೇಳೆ ತಂದೆ ತಾಯಿಯ ಕಾಲಿಗೆ ಬೀಳಲು ಹೇಳಿದ್ದಾರೆ. ಆರಾಧನಾ ಯಾವತ್ತೂ ಸಹ ಮಹೇಶನ ಕಾಲಿಗೆ ಬಿದ್ದಿರಲಿಲ್ಲ. ಈಗ ಆತನ ಕಾಲಿಗೆ ಬೀಳುವ ಪರಿಸ್ಥಿತಿ ಬಂದು ಒದಗಿದೆ. ಆರಾಧನಾ ಕೆಲಸಕ್ಕೆ ಎಂದು ಹೊರಟಾಗ ಬರೀ ರೇವತಿ ಆಶೀರ್ವಾದ ತೆಗೆದುಕೊಂಡು ಮಹೇಶನ ಆಶೀರ್ವಾದ ತೆಗೆದು ಕೊಂಡಿರಲಿಲ್ಲ. ಈ ವೇಳೆ ಮಹೇಶ ರಂಪ ರಾಮಾಯಣ ಮಾಡಿದ್ದನು. ಈಗ ಮಹೇಶ್ ಕಾಲಿಗೆ ಆರಾಧನಾ ಬಿದ್ದಿದ್ದಾಳೆ.

ಮಹೇಶನ ಅಕ್ಕ ಕೊಂಕು
ಆರಾಧನಾಳಿಗೆ ಮಹೇಶ್ ಆಶೀರ್ವಾದ ಮಾಡಿಲ್ಲ. ಬದಲಾಗಿ ನೀನು ನನ್ನ ಕಾಲಿಗೆ ಬಿದ್ದಿದ್ದರೆ ಇಂತಹ ವಿಷಯಗಳ್ಯಾವುವು ಸಹ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾನೆ. ಈಗ ನನ್ನಿಂದ ನಿನಗೆ ಆಶೀರ್ವಾದವು ಸಹ ಸಿಗುವುದಿಲ್ಲ ಎಂದಿದ್ದಾನೆ. ಮಹೇಶ್‌ನ ಅಕ್ಕ ಇನ್ಮುಂದೆ ಆರಾಧನಾ ಕೆಲಸಕ್ಕೆ ಹೋಗುವ ಹಾಗಿಲ್ಲ ಮನೆಯಲ್ಲಿಯೇ ಇರಬೇಕು ಎಂದು ಕೊಂಕು ಮಾತುಗಳನ್ನ ಆಡಿದ್ದಾಳೆ.
ಚಳ್ಳೆಹಣ್ಣು ತಿನ್ನಿಸಿದ ಮೂರ್ತಿ
ಅಮಲಾಗೆ ಸುಶಾಂತ್ ಎಲ್ಲಿ ಸೇರಿದ್ದಾನೆ ಎಂಬ ಬಗ್ಗೆ ಚಿಂತೆ ಹೆಚ್ಚಾಗಿದೆ. ಅವನನ್ನು ಹೇಗಾದರೂ ಮಾಡಿ ಕಂಡುಹಿಡಿದು ಜೈಲಿಗೆ ಕಳಿಸಬೇಕು ಎಂದು ಅಂದುಕೊಂಡಿದ್ದಾಳೆ . ಇದಕ್ಕಾಗಿ ಮೂರ್ತಿ ಎಲ್ಲಿ ಹೋಗುತ್ತಿದ್ದಾನೆ ಎಂಬುದನ್ನು ಕಂಡು ಹಿಡಿಯಲು ಕಾರಿನಲ್ಲಿ ಫಾಲೋ ಮಾಡುತ್ತಿದ್ದಾಳೆ. ಅಮಲಾ ಫಾಲೋ ಮಾಡುತ್ತಿರುವುದನ್ನ ಮೂರ್ತಿ ತನ್ನ ಗಾಡಿಯ ಕನ್ನಡಿಯಲ್ಲಿ ನೋಡಿದ್ದಾನೆ. ಇವಳಿಗೆ ಬೆಂಗಳೂರಿನ ದರ್ಶನ ಮಾಡಿಸುತ್ತೇನೆ ಎಂದುಕೊಂಡು ಗಲ್ಲಿ ಗಲ್ಲಿಯನ್ನು ಸುತ್ತಾಡಿಸಿದ್ದಾನೆ.
ಟೀ ಕುಡಿಯಲು ಬರಲ್ವಾ?
ಕೊನೆಗೆ ಎಲ್ಲೋ ಒಂದು ಕಡೆ ಗಾಡಿ ನಿಲ್ಲಿಸಿಕೊಂಡು ಟೀ ಕುಡಿಯಲು ಮೂರ್ತಿ ಪ್ರಾರಂಭಿಸಿದ್ದಾನೆ. ಅಮಲಾಗೆ ಫೋನ್ ಮಾಡಿ ನೀನು ಟೀ ಕುಡಿಯಲು ಬರಲ್ವಾ ಎಂದು ಕೇಳಿದ್ದಾನೆ. ಅಮಲಾ ಕಥೆ ಕಟ್ಟಲು ಶುರು ಮಾಡಿದಾಗ ಪೊಲೀಸರಿಗೆ ಸುಶಾಂತ್ ಕರಾವಳಿಯಲ್ಲಿ ಇದ್ದಾನೆ ಎಂದು ನಾನು ಹೇಳಿದೆ ಎಂದು ಮೂರ್ತಿ ಶಾಕ್ ಕೊಟ್ಟಿದ್ದಾನೆ.
ಪುರುಷೋತ್ತಮನನ್ನು ನೋಡಿದ ಸುಶಾಂತ್
ಹಾರ ಹಿಡಿದುಕೊಂಡು ಬಂದ ಸುಶಾಂತ್‌ನ ನೋಡಿ ತಕ್ಷಣವೇ ಪುರುಷೋತ್ತಮ್ ಮುಖ ಮುಚ್ಚಿಕೊಂಡಿದ್ದಾನೆ. ನಾನು ಬರುವ ಮೊದಲೇ ಎಂಗೇಜ್ಮೆಂಟ್ ಕಾರ್ಯವನ್ನ ಮಾಡುತ್ತಿದ್ದೀರಾ ಎಂದು ಸುಶಾಂತ್ ಕೇಳಿದ್ದಕ್ಕೆ ಮಹೇಶ್ ಇಲ್ಲ ಶಾಸ್ತ್ರಿಗಳು ಪೂಜೆ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದಾನೆ. ಇದೇ ವೇಳೆ ಪುರುಷೋತ್ತಮ್‌ನನ್ನು ನೋಡಿ ಇವನೇನಾ ಗಂಡು ಎಂದು ಸುಶಾಂತ್ ಕೇಳಿದ್ದಾನೆ.


Click it and Unblock the Notifications











